ಒಟ್ಟು 253 ಕಡೆಗಳಲ್ಲಿ , 4 ದಾಸರು , 252 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಧಾರ ನೀನೆ ಶ್ರೀಹರಿ ಕಾಯೊ ದೊರೆ ಪ ಚಾರು ಚರಿತ ಮೂರುಲೋಕಕಾಧಾರ ನೀನೇ ಅ.ಪ ಸ್ವಾರಸ್ಯನೋಡಿ ನಿರಾಶೆಯಿಂದ ದೂರಾಗುವರು 1 ಧನಜನವು ಮನವು ಇಲ್ಲದವರೆಲ್ಲಾವನಜಾಕ್ಷ ನಿನ್ನ ನೆನಪು ಮಾಡದೆ ತೃಣಕೂ ಬಾರರು 2 ಜಾಗುಮಾಡದೆ ಬೇಗಾ ಬಾರಯ್ಯ 3 ಚನ್ನಕೇಶವ ಮನ್ನಿಸೊದೇವ ನಿನ್ನವನಿವ 4 ಪೊರೆಯುವನೀನಲ ಶರಣಜನರ ಪಾಲಕರುಣಾಲವಾಲ ಗುರುರಾಮ ವಿಠಲ ಸಿರಿಲೋಲ 5
--------------
ಗುರುರಾಮವಿಠಲ
ಆಭರಣಗಳರ್ಪಿಸುವೆನು ಶೋಭನ ಚರಿತಾ ಪ ಮಹಾಭಾಗ್ಯಪ್ರದೆ ನಿನ್ನರಸಿ ಯುಗುಣಭರಿತಾ ಅ.ಪ ಪದನೂಪುರಗಳು ಘಂಟೆ ನಿನದದುಡಿದಾರಾ ಪರಿಯಂತ ವಿಧವಿಧಕರ ಕಂಕಣ ಹತ್ತು ಬೆರಳಿಗುಂಗೂರಾ ಕೌಸ್ತುಭ ಶ್ರೀ ವತ್ಸದ ಶೃಂಗಾರಾ 1 ಕುಂಡಲ ಕರ್ಣದಲ್ಲಿ ತುಳಸಿಯ ವನಮಾಲೆ ಶೋಭಿಪುದು ಕಂಠದಲೀ ಥಳಥಳಿಪುದು ರವಿಯಂತೆ ಕಿರೀಟಶಿರದಲ್ಲಿ ಬೆಳಗುವ ತೇಜೋಮಯ ಗಾನಾವದು ಕೊಡಲಿ 2 ಸ್ಮರ ಶತ ಸುಂದರ ವಿಗ್ರಹ ಕರುಣಾಕರನೇ ಸರಸಿಜಭವ ಜನಕ ಪರಾತ್ಪರ ಮಾಧವನೆ ಶರದಿಂದುನಿಭಾನನ ಸರ್ವತ್ಪ್ರಕಾಶನೇ ಗುರುರಾಮ ವಿಠಲ ಹರಿ ಸರ್ವೋತ್ತಮನೇ 3
--------------
ಗುರುರಾಮವಿಠಲ
ಆರತಿಯೆತ್ತಿದರು ನಾರಿಯರು ಕೃಷ್ಣಗೆ ಪ ನೀರೆ ರುಕ್ಮಣಿ ಸತ್ಯಭಾಮ ಸಮೇತಗೆ ಅ.ಪ ಭವ ಮುಕ್ತರ ಪೊರೆವಗೆ ಮುನಿಜನ ವಂದ್ಯಗೆ 1 ವಾರಿಜಾಕ್ಷಿ ದ್ರೌಪದಿಗೆ ಸೀರೆಗಳಕ್ಷಯ ಮಾಡಿ ಕ್ರೂರರ ಮುಖಗರ್ವ ಕುಂದಿಸಿದ ಮಹಿಮಗೆ 2 ಕುಂಡಲಿಶಯನ ಶ್ರೀ ಗುರುರಾಮವಿಠಲಗೆ 3
--------------
ಗುರುರಾಮವಿಠಲ
ಆರತಿಯೆತ್ತುವೆ ಆತ್ಮೇಶ್ವರಗೆ ಪ ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ ಅನುದಿನ ಬೇಡಿದಿಷ್ಟಾರ್ಥವನೀವಗೆ 1 ಶುಭದಾಯಕನಾಗಿ ಶೋಭಿಸುತಿರ್ಪಗೆ2 ಗುರುರಾಮವಿಠ್ಠಲ ಕರುಣಾನಿಧಿಗೇ 3
--------------
ಗುರುರಾಮವಿಠಲ
ಇಂದಿರೆ ಮನೋಹರನ ಪ ಒಂದು ಕ್ಷಣ ತಾಳಲಾರೆ ವಂದಿಸುವೆನೆಲೆ ನೀರೆ ಅ.ಪ ಚಂದ್ರಕಿರಣಗಳುರಿಯಂದದಿ ತೋರುತಲಿದೆ ಮಂದ ಮಾರುತಗೆ ಕಡು ಕುಂದಿದೆನೆ ಮಂದಯಾನೆ 1 ಸೇರಿದ ಸುಖವ ಮರೆಯಲಾರೆನೆ ಸರೋರುಹಾಕ್ಷಿ 2 ಭೂತಳಕಧಿಕವಾದ ನೂತನಾವರಣಪುರಿ ದಾತ ಗುರುರಾಮವಿಠಲ ಯಾತಕೆ ನಿರ್ದಯಗೈದ 3
--------------
ಗುರುರಾಮವಿಠಲ
ಇದು ಮುಖ್ಯಸಾರ ಮನುಜರಿಗೆ ಪ ಇದು ಮುಖ್ಯಸಾರವೆಂದೊದರುತಿಹುದು ವೇದ ಸದುಮಲಾತ್ಮಕನಾದ ಪದುಮಾಕ್ಷನಲಿ ಭಕ್ತಿ ಅ.ಪ ಕೇಳಿಪೇಳುತಮನದಿ ತಾಳಿ ಸೇವಿಸಿ ಪೂಜಿ- ಸೋಲಾಡುತೊಂದಿಸಿ ಕಾಲವ ಕಳೆಯುವ 1 ದಾಸ್ಯಸಖ್ಯಾತ್ಮನಿವೇದನಗಳಿಂದ ಆ- ಲಸ್ಯವಿಲ್ಲದೆ ಪರಮಾತ್ಮನ ತಿಳಿಯುವ 2 ತೃಟಿಕಾಲವಾದರು ನಟಿಸದೆ ಮಾಯದಿಹಟದಿ ಶ್ರೀಗುರುರಾಮವಿಠಲನ ಭಜಿಸುವ 3
--------------
ಗುರುರಾಮವಿಠಲ
ಇಂದ್ರಾದಿಸುರರಾರಾಧಿತ ಇನವಂಶಸಂಜಾತಾ ಚಂದ್ರಧರ ಪ್ರಿಯ ಶ್ರೀರಾಮಚಂದ್ರಾ ಎಚ್ಚರಿಕೆ 1 ಅರುಣಾತ್ಮಜ ಮುಕ್ತಿಪ್ರದ ಕರುಣಾಸಮುದ್ರಾ ಭರತಾಗ್ರಜ ಭವಹರರಾಮಭದ್ರಾ ಎಚ್ಚರಿಕೆ 2 ಘಟಸಂಭವಮಖಸಮ್ಯಮಿ ಕಟಕಾರ್ಚಿತ ಚರಣಾ ಕುಟಲಾರಿ ಶ್ರೀ ಗುರುರಾಮವಿಠಲಾ ಎಚ್ಚರಿಕೆ 3
--------------
ಗುರುರಾಮವಿಠಲ
ಇನ್ನು ಏನು ತಿಳಿಯದು ಹರಿ ಪ ಪನ್ನಗಾದ್ರಿನಿಲಯ ಪರಮ ಪಾವನ್ನ ಜಗನ್ಮೋಹನ ಅ.ಪ ಎಲ್ಲಾ ಜಗನಿನ್ನೊಳಗಿಹುದು ಎಲ್ಲರೊಳಗೆ ನೀನಿರುವೈ ಬಲ್ಲಿದನು ನೀನು ನಿನಗೆ ಸಮ ಬ್ರಹ್ಮಾದಿಸುರರೊಳಗ್ಯಾರು 1 ದೀನರು ಮಾಡಿದ ಕರ್ಮವ ನೀನು ಕಳೆಯಲಾರೆಯಾ ನಾನಿದಕೆ ಭಾಗಿಯೋ ನೀನಿದ್ದು ಮಾಡಿಸಲಿಲ್ಲವೆ 2 ಎಂದೂ ನಿನ್ನ ಆಜ್ಞೆಯಿಲ್ಲದೆ ಒಂದಾದರು ಚಲಿಸುವುದೆ ತಂದೆ ತಾಯಿ ಗುರುದೈವ ನೀನೆಂದು ನಂಬಿದೆ ಇಂದಿರೇಶ3 ಶೃತಿತತಿ ಶಾಸ್ತ್ರ ಪುರಾಣಗಳತಿಶಯದಲಿ ಪೊಗಳುವುದು ಗತಿ ನೀನೆ ಎಂದನವರತವು ಕಥೆಗಳ ಕೇಳುವುದೇಕೆ 4 ಅಗಣಿತ ಗುಣನಿಧಿ ಗುರುರಾಮವಿಠಲ 5
--------------
ಗುರುರಾಮವಿಠಲ
ಇವರೇ ನಮ್ಮವರೂ ಇದು ಭಾಗ್ಯವುನಮಗ್ಹಗಲಿರಳೂ ಪ ಭವ ಸಮುದ್ರದಲಿ ಮುಳುಗಿಸಿ ಕಡೆಯಲಿ ಜವನಾಳ್ಗಳ ಕೈಗೊಪ್ಪಿಸಿ ಕೊಡುವ ಅ.ಪ ಧನಯೌವನ ಬಲವು | ದೇಹದ ಅನುಬಂಧಗಳಿರುವು ಮನೆಮಕ್ಕಳುವನಿತಾದಿಗಳೊಲಿವರೊ 1 ಕೇಳಿದ್ದಿಲ್ಲೆನಲೂ | ಇವನ ಹೀ- ಯಾಳಿಪರ್ ಸ್ವಜನಗಳೂ ಕಾಲಕಾಲದಿ ಬಾಡಿಗೆ ಎತ್ತಿನ ಪರಿ ಆಳಾಗಿದ್ದರೆ ಹಾ ಎಂದು ನಗುವ 2 ಇವರಾಸೆಯ ಮಾಡೀ | ನಾವುನ- ಮ್ಮವರನು ಹೋಗಾಡಿ ಕವಳಕೆ ಗತಿಯಿಲ್ಲದೆ ಪರಿಯಾಯಿತು ಕಡೆಹಾಯಿಸು ಗುರುರಾಮವಿಠ್ಠಲನೆ 3
--------------
ಗುರುರಾಮವಿಠಲ
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ ನಿಸ್ಪøಹರಾಗದ ಜನರಿಗೆ ಕಡೆಯಲಿ ಸಸೆÀ್ಪಂಟಾದೀತೆಂದು ತಿಳಿದು ಅ.ಪ ಆಸೆಂಬುವದಾತ್ಮ | ರಾಜಾ ತಾಸಗುಣ ಬ್ರಹ್ಮ ಲೇಸಾಗಿ ರಾಣಿಯು ಮೂಲ ಪ್ರಕೃತಿ ಗುಲಾಮನೆಂಬುದು ಚತುರ್ಮಖನೆನ್ನುತ 1 ದಹಿಲವೆಯಿಂದ್ರಿಯಗಳು | ದ್ವಾರವು ನಹಿಲವಿದು ಭುವಿಯೋಳು ಅಹಹಾ ಅಟ್ಟವು ಮದಗಳು ನೋಡಲು ವಿಹಿತವೇಳನೆ ಬಂದು ವೆಸನಗಳು 2 ನಿಜವಿದು ಮೂರನೆ ಬಂದು ತ್ರಿಕಾಲಗಳ್ 3 ಯಿಲ್ಲದಿಹದು ಮರ್ಮ ತುರುಫೆಗುಣರಾಶಿಗಳೆಂದೀಪರಿ ಅರಿತಾಡಲದೆ ಪರಮಾರ್ಥವಹದು 4 ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್ ಈ ವಿಧ ಪೆಸರಿರಲೇನ್ ಭಕ್ತರ ಗುರುರಾಮ ವಿಠಲ ಕೈಬಿಡ 5
--------------
ಗುರುರಾಮವಿಠಲ
ಇಸ್ಪೀಟಾಡಬೇಕು ನಮ್ಮಯ ತಸ್ಪೀರ್ ನೋಡಬೇಕು ಪ ನಿಸ್ಪøಹರಾಗದ ಜನರಿಗೆ ಕಡೆಯಲಿ ಸಸೆÀ್ಪಂಟಾದೀತೆಂದು ತಿಳಿದು ಅ.ಪ ಆಸೆಂಬುವದಾತ್ಮ | ರಾಜಾ ತಾಸಗುಣ ಬ್ರಹ್ಮ ಲೇಸಾಗಿ ರಾಣಿಯು ಮೂಲ ಪ್ರಕೃತಿ ಗುಲಾಮನೆಂಬುದು ಚತುರ್ಮಖನೆನ್ನುತ 1 ದಹಿಲವೆಯಿಂದ್ರಿಯಗಳು | ದ್ವಾರವು ನಹಿಲವಿದು ಭುವಿಯೋಳು ಅಹಹಾ ಅಟ್ಟವು ಮದಗಳು ನೋಡಲು ವಿಹಿತವೇಳನೆ ಬಂದು ವೆಸನಗಳು 2 ನಿಜವಿದು ಮೂರನೆ ಬಂದು ತ್ರಿಕಾಲಗಳ್ 3 ಯಿಲ್ಲದಿಹದು ಮರ್ಮ ತುರುಫೆಗುಣರಾಶಿಗಳೆಂದೀಪರಿ ಅರಿತಾಡಲದೆ ಪರಮಾರ್ಥವಹದು 4 ಕ್ಳಾವ್ರಿಸ್ಪೀಟಾಟೀನ್ | ಡೈಮಂಡ್ ಈ ವಿಧ ಪೆಸರಿರಲೇನ್ ಭಕ್ತರ ಗುರುರಾಮ ವಿಠಲ ಕೈಬಿಡ 5
--------------
ಗುರುರಾಮವಿಠಲ
ಇಹಸುಖ ಮೊದಲೇಯಿಲ್ಲ | ಕೃಷ್ಣ ಅಹಹ ಪರಸುಖವಾಗುವುದ್ಹ್ಯಾಗೊ ಪ ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ ಶ್ರವಣ ಮನನ ನಿಧಿ ಧ್ಯಾಸನ ವೊಂ- ದೆವೆ ಮಾತ್ರವು ನಿಜವಾಗಿ ಕಾಣೆನುನಾ ಬವನಾಶಿ ಧರಿಸಿ ದಾಸನೆಂದು ನಾ ಬರಿದೆ ದೇಶಗಳ ತಿರುಗಿ ಬೆಂಡಾದೆನು 1 ಯಮನಿಯಮಾಸನ ಯೋಗ | ಗಳ ಭ್ರಮೆಯ ಪಡುತ ಬಳಲುವೆಯಾವಾಗ ಮಮಯೆಂಬುದರಿಂ ಬಂದಿತು ರೋಗ 2 ಶಂಕರ ಮುಖ ಸುರವಂದ್ಯ | ಅರಿ ಶಂಖ ಗದಾಧರ ಶ್ರೀಶ ಮುಕುಂದ ಸಂಕಟ ಬಂದಾಗ ವೆಂಕಟರಮಣೆಂದು ಮಂಕುಜನರು ಪೇಳ್ವಗಾದೆಯಂತಾಯಿತು 3 ಕಾಸಿಗೆ ತಿರುಗಿದೆನಲ್ಲದೆ | ದಿವ್ಯ ಕಾಶಿಗಯಾಯಾತ್ರೆಯ ಮಾಡಿದೆನೇ ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4 ಕೊಟ್ಟದ್ದರೆ ಹರಿಕೊಡುವ | ಯಂ ಕೊಟ್ಟರುವದಕು ಕೊಡದಿರುವದಕೂ ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5 ಕಣ್ಣಿಲ್ಲದ ಚಿಂತೆವಂದು | ಸದಾ ಬನ್ನ ಬಡುವದು ಯೋಚನೆಯೆರಡು ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ- ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6 ಛಳಿ ಜ್ವರದ ಯಾತನೆ ಪಡುವೆ | ನಿನ್ನ ಕರೆಕರೆ ಪಡಿಸುವುದು ನಿನಗೆ ತರವೇ 7 ಆರು ಜನರ ಸೇವೆ ಕೊಡಿಸೋ | ಯೀ ಆರು ಜನರ ಸಂಘವ ಪರಿಹರಿಸೋ ಮೂರು ಜನದ ಕೂಟ ಮೊದಲೇ ಬಿಡಿಸೋ ತಾಳಲಾರೆಯಿವರು ಬಲು ಕ್ರೂರಾತ್ಮರು 8 ಆಸೆಯ ಪರಿಹರಿಸಯ್ಯಾ | ನಿಜ ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ ಈಸಲಾರೆ ಗುರುರಾಮ ವಿಠ್ಠಲ ಜೀಯಾ 9
--------------
ಗುರುರಾಮವಿಠಲ
ಈ ಊರೋಳ್ಳೇದು ಪ ದೇವರ ಕೃಪೆ ಒಂದಾದರೆ ಸಾಕು ಅ.ಪ ತಂಟೆ ಮಾಳ್ಪ ಭಂಟರೈವರ ಗೆದ್ದರೆ ತಾನೆಲ್ಲಿದ್ದರು ಭಯವಿಲ್ಲಣ್ಣ 1 ಜಲತೃಣ ಕಾಷ್ಠಕೆ ವಸತಿ ಈ ಊರು ಬಲು ಸಜ್ಜನಗಳ ನೆರೆ ಈ ಊರು ಫಲಗಳುಂಟು ಮಾಡುವುದೀ ಊರು ಹೊಲಗದ್ದೆ ತೋಟಗಳಿಹ ಊರು 2 ಕೇಳಿದ ಪದಾರ್ಥ ದೊರೆಯುವ ಊರು ವೇಳೆಗೆ ಅನುಕೂಲವು ಈ ಊರು ತಾಳ ಮೇಳ ವಾದ್ಯಗಳಿಹ ಊರು ಸೂಳೆ ಬೋಕರಿಗೆ ಕಷ್ಟದ ಊರು 3 ಕಷ್ಟಪಡುವ ನರ ಭ್ರಷ್ಟನಲ್ಲವೇ ಮೂರು ಬಿಟ್ಟು ತಿರುಗುವ ಜನರಿಗೆ 4 ನರಜನ್ಮವೆಂಬ ಊರಿಗೆ ಬಂದು ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ 5
--------------
ಗುರುರಾಮವಿಠಲ
ಉಡಿಯ ತುಂಬಿದರು ಮೋದದಿ ಮಡದಿಯರು ಜನಕನ ಸುಕುಮಾರಿಗೆ ಪ ಸಡಗರದಲಿ ಹುರಿಗಡಲೆ ಕುಬುಸ ಕ- ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ಅ.ಪ ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ- ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ 1 ಮುತ್ತು ಮಾಣಿಕ ನವರತ್ನಗಳನು ಬಹು ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ 2 ಪರಿಪರಿ ವಸ್ತುಗಳನು ಮಾನಿನಿಯರು ಗುರುರಾಮವಿಠಲನರಿಸಿಯಾದ-ಜನಕನ ಸುಕುಮಾರಿಗೆ 3
--------------
ಗುರುರಾಮವಿಠಲ
ಉಪಾಯಗಾರತ್ತಿಗೆಯ ಮಹಾತ್ಮೆಯು ಶಿಪಾಯಿಗಳೆಲ್ಲಾ ತಿಳಿದಿಹರು ಪ ಅಪಾಯವು ಜನರೆ ಬಲ್ಲರು ಅ.ಪ ಮನೆಗೊಬ್ಬರಿಗೂಟಕೆ ಹೇಳಿ | ಭೋ- ಜನ ಸಹಾಯ ನಮಗಿಲ್ಲವೆಂದು ಉಪಚಿರಸುತ ಆಡುತಿಹಳು ಕಾಂತೆ 1 ನುಚ್ಚಕ್ಕಿ ಅನ್ನ ಗೊಡ್ಡುಸಾರೇಸಾಕು ನೂರಾರು ಜನರು ಬರಲಿ ಜೋಕೆ 2 ಅಳಿಯಗೆ ದೀಪಾವಳಿಗೆ ಕೊಡೋಣ ಮಗುಟ ಪಾತ್ರೆಗಳಿಹುದು ಕೆಲಸವಾದರೇಸಾಕು ಗುರುರಾಮ ವಿ ಠಲನೆ ಬಲ್ಲ ಬಿಡಿ ಎಂತೆಂದು 3
--------------
ಗುರುರಾಮವಿಠಲ