ಒಟ್ಟು 133 ಕಡೆಗಳಲ್ಲಿ , 10 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಸಾಗರ ವರಮುನಿಗಳ ಪ್ರಾಣ ಶರಣಜನರಾಭರಣ ನಮ್ಮ ಶ್ರೀ ಗುರುನಾಥ 1 ಮೂರುಮೂರುತಿನೀತ ಮೂರು ಲೋಕ ವಂದಿತ ಮೂರುಗುಣರಹಿತ ನಮ್ಮ ಶ್ರೀಗುರುನಾಥ 2 ನಂಬಿದವರ ಕಾವ ಹಂಬಲಿಸುವ ಜೀವ ಅಂಬುಜಾಕ್ಷನೆ ಶ್ರೀದೇವ ನಮ್ಮ ಶ್ರೀ ಗುರುನಾಥ 3 ಭಕ್ತವತ್ಸಲನೀತ ಭಕ್ತರ ಭಾವಪೂರಿತ ಶಕ್ತನಹುದಯ್ಯನೀತ ನಮ್ಮ ಶ್ರೀ ಗುರುನಾಥ4 ಇಹಪರ ನಮಗೀತ, ಸಾಹ್ಯದಲಿ ಸಮರ್ಥ ಮಹಿಪತಿ ಪ್ರಾಣನಾಥ ನಮ್ಮ ಶ್ರೀ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರ್ಮ ಬೇರೆ | ಬ್ರಹ್ಮದೊಳಗೆ ಕ್ರಿಯಾಕರ್ಮವಿಲ್ಲ |ಕರ್ಮ ಬ್ರಹ್ಮವಲ್ಲ ಪ ಶಿವನೊಳು ನೋಡಲು ಜಗವೇ ಇಲ್ಲ | ಜಗ ಶಿವನಲ್ಲ. ಶಿವನೂ ಜಗವೂಎಂಬೊ ಮಾತು ಸಲ್ಲ | ಅರಿದಾತನೆ ಬಲ್ಲ 1 ಬೀಜದಿ ನೋಡಲು ವೃಕ್ಷವೆ ಇಲ್ಲ | ವೃಕ್ಷಬೀಜವಲ್ಲ | ವೃಕ್ಷ ಬೀಜದಿ ಫಲಸ್ವಾದವಿಲ್ಲ |ತಿಂದಾತನು ಬಲ್ಲ 2 ಪಾಮರ ನರರೆಲ್ಲ ಭವತಾರಕನ ಭಕ್ತರಲ್ಲ | ಭವತಾರಕನ ಭಕ್ತನು ನರನಲ್ಲ | ಗುರುನಾಥನೆ ಬಲ್ಲ 3
--------------
ಭಾವತರಕರು
ಕವಿ ಮಾತುಗಳ ಕೇಳಿ ಕೆಟ್ಹೋಗಬೇಡಿರಿಕವಿ ನಾಶ ತನವೆಂದು ಹೇಳಲಿಲ್ಲಶಿವನ ತಿಳಿದು ನಿಮ್ಮಶಿವನೆಂದು ಕಂಡರೆ ಸಾಕ್ಷಾತ್ ಬ್ರಹ್ಮನೆ ನೀವೆಯೆಲ್ಲಾ ಪ ಸೋಗೆಗಣ್ಣುಗಳೆಂದು ಹೇಳಿದನಲ್ಲವೇಸೋಗೆಗಣ್ಣಿನ ಸೀಳ ಹೇಳಲಿಲ್ಲಮೂಗನು ಸಂಪಿಗೆ ನನೆಯೆಂದನಲ್ಲವೆಮೂಗಿನ ಸಿಂಬಳ ಹೇಳಲಿಲ್ಲ 1 ಬಾಯಿ ಕರ್ಪೂರದ ಕರಡಿಗೆ ಎಂದನಲ್ಲವೆಬಾಯೊಳಗಣ ಲೊಟ್ಟೆ ಹೇಳಲಿಲ್ಲಕಾಯವು ಕನಕದ ಬಾಳ ಎಂದನಲ್ಲವೆಕಾಯ ದುರ್ಗಂಧವ ಹೇಳಲಿಲ್ಲ 2 ಮಂದಗಮನೆ ಎಂದು ನಡೆಗಂದನಲ್ಲವೆಹಂದಿದುಟಿಯನದ ಹೇಳಲಿಲ್ಲಸುಂದರ ಸರ್ಪವೇಣಿ ಎಂದನಲ್ಲವೆಸಂದಿ ಸಂದಿಯ ಹೇನ ಹೇಳಲಿಲ್ಲ3 ನರದೇಹವನು ಕೊಂಡಾಡಿದನಲ್ಲವೆನರದೇಹ ನರಕವೆಂದ್ಹೇಳಲಿಲ್ಲಗುರು ಚಿದಾನಂದ ಸದ್ಗುರುನಾಥನ ನಂಬಿಶರೀರವ ಕಳೆ ಎಂದು ಹೇಳಲಿಲ್ಲ4
--------------
ಚಿದಾನಂದ ಅವಧೂತರು
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ ಭಾನುಕೋಟಿ ಸುಪ್ರಭೆಯ ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ 1 ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ 2 ಬಾಹ್ಯಾಂತ್ರ ನೀ ಸದೋದಿತ ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳಿರೋ ಈ ಮಾತ ಈ ಮಾತ ತಿಳಿದು ಕೋಳ್ಳಿರೊ ಸ್ವಹಿತ ಹೇಳುತಿಹ್ಯದು ವೇದಾಂತ ವೇದಾಂತ ಇಳಿಯೋಳಿದುವೆ ಸಿದ್ಧಾಂತ ಸಿದ್ಧಾಂತ 1 ಹಿಡಿಯಬ್ಯಾಡಿರೊ ಕಾಮ ಕ್ರೋಧ ಕ್ರೋಧ ಮಾಡಬ್ಯಾಡಿರೋ ಭೇದ ಭೇದಾ ಭೇದ ಈ ಡ್ಯಾಡಿರೊ ವಿವೇದ ವಿವೇದ ಬೋಧ ಸುಬೋಧ 2 ದೋರುತದೆ ತಾ ಸುಪಥ ತಾ ಸುಪಥ ಸುರ ಜನರ ಸನ್ಮತ ಸನ್ಮತ ದೋರುತಿಹ್ಯ ಗುರುನಾಥ ಶ್ರೀ ಗುರುನಾಥ ಪರಮಾನಂದ ಭರಿತ ಭರಿತ 3 ನೋಡಿರೊ ಈ ಖೂನ ಈ ಖೂನ ಮಾಡಿ ಸದ್ಗತಿ ಸಾಧನ ಸಾಧನ ಗುಹ್ಯ ನಿಜಧನ ನಿಜಧನ ದೃಢ ಭಕ್ತರ ಜೀವನ ಜೀವನ 4 ಈಹ್ಯ ಪರಿಪೂರ್ಣ ಪರಿಪೂರ್ಣ ಮಹಾಗುರು ಶ್ರೀ ಚರಣ ಶ್ರೀ ಚರಣ ಸಾಹ್ಯದೋರುವ ಸುಗುಣ ಸುಗುಣಮಹಿಪತಿ ಜೀವ ಪ್ರಾಣ ಸುಪ್ರಾಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈವಲ್ಯ ಕೃಪೆಯ ಸುಜ್ಞಾನ ಸಾಧುಜನರ ನಿಜಸ್ಥಾನ ಅನುದಿನ 1 ವರ್ಣದೋರುವದನೇಕ ತುಂಬಿ ವರಮುನಿಗಳಿಗೆ ಕೌತುಕ ಪರಿಪೂರ್ಣಗಿಹ್ಯ ಮೂರು ಲೋಕ ದೋರುತಿಹದು ಬ್ರಹ್ಮಸುಖ 2 ಎನ್ನೊಳಗಾನಂದ ಭರಿತ ಜನವನದೊಳು ತಾ ಸಾಕ್ಷಾತ ತನ್ನೊಳಗದೆ ತಾ ಸ್ವಹಿತ ಕೈವಲ್ಯನಿಧಿ ಗುರುನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕ್ಲೇಶ ಕಷ್ಟದಿ ಮುಳುಗಿ ಬಳಲಬೇಡ ಪ ಹಿಂದೆ ನಾನಾ ಯೋನಿಯಲ್ಲಿ ಹಡಿಕೆಯೊಳು ಜನಿಸಿ ಜನಿಸಿತಂದೆ ತಾಯಿ ಹೆಂಡಿರೇಸು ಲೆಕ್ಕವಾಯ್ತು ನೋಡಮುಂದೆ ಬಹ ದುಃಖಕೆ ಮುಳುಗಿ ಮುಳುಗಿ ಧೈರ್ಯ ಪಡೆದುಮಂದ ಮತಿಯಾಗಿ ಗುರುವ ಮರೆಯಲಿ ಬೇಡ 1 ದುರ್ಜನರ ಸಂಗ ಮಾಡಿ ದುಷ್ಟ ನಡತೆಯಲ್ಲಿ ನಡೆದುಸಜ್ಜನರ ಸಂಗ ನೀ ಮರೆಯಲಿ ಬೇಡಜಜ್ಜುಗಟ್ಟಿ ಪಾಪಕರ್ಮ ಜರಿದು ಜರಿದುಜೋಕೆಯಲ್ಲಿ ಸದ್ಗುರುನಾಥ ಸ್ಮರಣೆ ಮಾಡು2 ಮನೆಯು ಮಕ್ಕಳೆಂಬ ಧನವು ಪಶುಗಳಲ್ಲಿ ಆಸೆಯಿಟ್ಟುನೆನೆಸಿ ನೆನೆಸಿ ಬಿಕ್ಕಿ ಬಿಕ್ಕಿ ಅಳಲು ಬೇಡಚಿನ್ಮಯ ಚಿದಾನಂದಾವಧೂತನೊಳು ಬೆರೆತುಘನವನೈದಿ ಸದ್ಗುಣಾದಿ ತಿಳಿದು ನೋಡ 3
--------------
ಚಿದಾನಂದ ಅವಧೂತರು
ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1 ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2 ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ3
--------------
ಚಿದಾನಂದ ಅವಧೂತರು
ಚರಣ ಕಮಲಕರ್ಪಿಸುವೆ ಗುರುನಾಥಾ ಈ ಸೇವೆಯು ಕರುಣನಿಧಿಯೆ ಜ್ಞಾನರೂಪ ರಾಜವಿದ್ಯೆ ರಾಜಗುಹ್ಯ ಆತ್ಮತತ್ವ ಬೋಧಿಸಿ ನೀ ಮೂಢತನದ ತಮವ ಕಳೆದು ತೇಜದಿಂದ ಮೆರೆವ ನಿನ್ನ 1 ಬಾಲನ ತೊದಲಾದ ನುಡಿಯ ಕೇಳಿ ಜನನಿ ನಲಿವ ತೆರದಿ ಲೀಲೆಯಿಂದ ಆಲಿಸುತಲಿ ಪಾಲಿಸು ಗುರುಶಂಕರನೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಧ್ರುವ ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಜ್ಯೋತಿರ್ಮಯಾನಂದ ಶ್ರೀನಾಥಗೆ ಜಯ ಜಯಾನಂದ ಸದೋದಿತಗೆ ಧ್ರುವ ಭೋಕ್ತ ಸದ್ಗುರುನಾಥಗೆ ಸದ್ಗೈಸುವ ಸದಾ ಸುಶ್ಯಾಂತಿಗೆ 1 ಸದ್ಗೈಸುವ ಸದಾ ಶ್ಯಾಂತ ಶ್ರೀನಿಧಿಗೆ ಸದ್ಭಕ್ತಿಲಿ ಎನ್ನಿ ಸನ್ನಿಧಿಗೆ 2 ಸ್ವಾನುಭವದ ಕಂದ ಅನಂದೋ ಬ್ರಹ್ಮಗೆ ಜ್ಞಾನÀ ಜ್ಞಾನಕನುಪಮಗೆ 3 ಜ್ಞಾನ ವಿಜ್ಞಾನÀಕನುಪಮಾಗಿಹಗೆ ಜಯ ಜಯವೆನ್ನಿ ಶ್ರೀ ಮಹಿಪತಿಸ್ವಾಮಿಗೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಶ್ರೀ ಸದ್ಗುರುನಾಥ ದಯಗುಣದಲಿ ನಿಸ್ಸೀಮ ನೀ ಪ್ರಖ್ಯಾತ ಧ್ರುವ ಸ್ವಯಂಭು ಸ್ವತಂತ್ರ ಸ್ವಪ್ರಕಾಶ ಸ್ವಯಂಜ್ಯೋತಿಸ್ವರೂಪ ಸ್ವವಿಕಾಸ ದ್ವೈತಾದ್ವೈತಕೆ ಸಹಿತ ಸ್ವವಿಲಾಸ ಶ್ರೇಯ ಸುಖದಾಯಕನಹುದೋ ನೀ ಪರೇಶ 1 ಸ್ವಭಾವ ಸ್ವಸಿದ್ಧ ಸರ್ವಾಧಾರ ಸ್ವಭಾಸ ಸ್ವತೇಜ ಸಹಜ ನಿರ್ಧಾರ ಸ್ವಬೋಧ ಸ್ವಬ್ರಹ್ಮ ಸಾಕ್ಷಾತಾರ ಸ್ವಭಕ್ತಜನರಿಗೆ ನೀನೆ ಸಹಕಾರ 2 ಸ್ವಾನಂದ ಸದೋದಿತ ಸ್ವಯಂ ಭಾನು ಸ್ವಾನಭವಲಾದಯ್ಯ ತಾನೆ ತಾನು ಅನುದಿನ ಭೋರ್ಗರೆವ ನೀ ಕಾಮಧೇನು ದೀನಮಹಿಪತಿ ಸ್ವಾಮಿ ನೀನೆ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯತು ಜಯತು ಜಯತು ಸತ್ಯ ಸನಾಥ ಜಯತು ನಿಜ ನಿರ್ಭೀತಜಯತು ಸದ್ಗುರುನಾಥ ಜಯತು ಅವಧೂತ ಜಯತು ಜಯತು ಪ ನಿತ್ಯ ನಿರ್ವಿಕಾರ1 ಪಾಲಿಸಗಣಿತ ಮಹಿಮ ಪಾಲಿಸಕ್ಷಯ ರೂಪಪಾಲಿಸೈ ನಿಷ್ಕಾಮ ನಿರ್ವಿಕಲ್ಪಪಾಲಿಸನಂತ ಪರಮಾತ್ಮ ಹರ ನಿರ್ಲೇಪಪಾಲಿಸೈ ಚಿದ್ರೂಪ ಸತ್ಯ ಸಂಕಲ್ಪ 2 ದುರಿತ ದಾವಾಗ್ನಿ ನಿಜ ಬಾಧಶರಣು ಭಕುತರ ವಂದ್ಯ ರಾಜಯೋಗೀಂದ್ರ3 ವಂದಿಪೆ ಚಿದಂಬರ ನಿರಾಮಯ ನಿರಪೇಕ್ಷಾವಂದಿಸುವೆ ಆರೂಢ ಪರಮ ಆಧ್ಯಕ್ಷವಂದಿಸುವೆ ನಿಶ್ಚಲ ಪರಬ್ರಹ್ಮ ಘನರಕ್ಷಾವಂದಿಸುವೆ ಗುಣಾತೀತ ದಕ್ಷ ನಿಜ ಮೋಕ್ಷ 4 ನಿರಂಜನ ನಿರಾಧಾರ ನಿರ್ಲಿಪ್ತಗುರು ಚಿದಾನಂದ ಅವಧೂತ ಪ್ರಖ್ಯಾತ 5
--------------
ಚಿದಾನಂದ ಅವಧೂತರು