ಒಟ್ಟು 20 ಕಡೆಗಳಲ್ಲಿ , 3 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಕೃಪೆಯಿಂದ ದಯದಿಂದ ನೀಗಿದೆ ನಾ ಭವಬಂಧ 1 ಘನದಯದೊಲವಿಂದ ಒಲವಿಂದ ತಾನೆ ತಾನಾದ ಮುಕುಂದ 2 ಮಹಿಪತಿಗಾಯಿತಾನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ ತತ್ವೋಪದೇಶ ತಿಳಿಯಿತು ನಿಧಾನ ಭಕ್ತರಿಗಿದರಿಡುವದು ಅನುದಿನ ಮುಕ್ತಿಯ ಫಲ ಮುನಿಜನರಾಭಣ 1 ಮಳೆಗರಿಯಿತು ಮಹಾಗುರುದಯ ಕರುಣ ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ ತಿಳಿಯಿತು ಬರವಿದು ಭವಬಂಧನ ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2 ಮನೋಹರವಾಯಿತು ಗುರುಕೃಪೆಯಿಂದ ಜನವನದೊಳು ಕಾಣಿಸಿದ ಗೋವಿಂದ ಅನುಭವ ಸುಖವಿದು ಬ್ರಹ್ಮಾನಂದ ಘನಸುಖಪಡೆದ ಮಹಿಪತಿ ಇದರಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಧ್ರುವ ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ ಕಣ್ದೆರದು ಕೊಂಡವರು ಧನ್ಯ ಧನ್ಯರೊ 1 ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ ಚೆನ್ನಾಗಿ ಉನ್ಮನವಾಗಿ ಹಣ್ಣ 2 ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ ಸಣ್ಣ ದೊಡ್ಡರೊಳಗಿಹ್ಯ ಹಣ್ಣ 3 ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು 4 ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ ಚಿತ್ತದೊಳಗ್ಹತ್ತಿಲಿಹ ಹಣ್ಣು 5 ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ 6 ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು