ಒಟ್ಟು 24 ಕಡೆಗಳಲ್ಲಿ , 20 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ಪ ಭವ ಭಂಗವ ಪಡುವವನು ಅ ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು 1 ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ 2 ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ3 ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ4 ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು 5 ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ6 ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿಶ್ರೀಲೋಲನ ಗುಣ ಪೊಗಳಿ ನಟಿಸದಲೆ 7 ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ 8 ಭಾಗವತ ಕೇಳದೆ 9 ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ-ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು 10 ನೇಮದಿ ಉಪವಾಸ ಆ ಮಹಾ ಏಕಾದಶಿಕಾಮಜನಕನನು ಪ್ರೇಮದಿ ಸ್ಮರಿಸಿದೆ11 ಏಸುದಿನ ಬದುಕಿದರು ಸೂಸುವ ಪಾಪವಈಸಿ ದಾಟದೆ ಕಾಸುವೀಸಕೆ ಬಾಳಿದವ 12 ಮೂರ್ತಿ ಪಾದಂಗಳ ಮನದಲಿ ಹಿಂಗದೆ ಭಜಿಸದೆ 13 ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆಅತ್ತರೆ ಬಹುದೇನೊ ಉತ್ತಮ ಫಲ ಸೂಸಿ14 ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯಬೇಡಿದರೆ ಕೊಟ್ಟು ಕೂಡಿ ಆಡದವನು ನೀ 15 ಶೃಂಗಾರ ಬಯಸುತ ಬಂಗಾರದೊಡವೆಯಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ 16 ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿಚಿತ್ತಜನಯ್ಯನು ದೊರೆವ ಬಗೆ ಕಾಣದೆ 17 ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆಹಂಬಲಿಸಿದರಿನ್ನು ಬೆಂಬಲಕಾರುಂಟು 18 ದುಂಡು ನಾಮವ ಬಳಿದು ಭಂಡತನದಲಿ ಜಗದಿದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ 19 ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ 20 ಪಾದ ರಾಗದಿ ಭಜಿಸದೆಕಾಗಿನೆಲೆಯಾದಿಕೇಶವರಾಯನೆನದೆ21
--------------
ಕನಕದಾಸ
ಕ್ಷಣಕೆಲವಕೆ ನೆನೆ ಹರಿಯ ಮನವೆಕ್ಷಣಕೆ ಲವಕೆ ಹರಿಯ ಪ.ಮನಕೆ ಶ್ರುತಿಗಳಿಗೆ ದೊರೆಯಶಶಿದಿನಕರವಂಶಕೆ ಹಿರಿಯಘನಕಲುಷದೊಳವತಾರಿಯ ಪೆತ್ತಜನಕ ತಿರುಮಲೆಯ ದೊರೆಯ 1ಕನಕಾಂಗಿಯಳ ಸಿರಿಯಭವಕನಕೋದರರಿಗೆ ವರಿಯಮುನಿಕುಲಕಾಂತಿ ಅತಿಪರಿಯ ತನ್ನಜನಕನ ವರಕುಪಕಾರಿಯ 2ಜನಕನಳಿಯ ಖಳರರಿಯದಿನದಿನಕೆ ಲಾವಣ್ಯದ ತೆರೆಯಸನಕಾದ್ಯರ ಮನೋಹರಿಯವೈರಿನಿಕರದ ಕದಳಿಗೆ ಕರಿಯ 3ಮೀನ ಕಮಠಾದ್ಯವತಾರಿಯ ಭುವನಕೊಬ್ಬನೆ ಸುಖಕಾರಿಯಧನು ಕರದಿ ಮುರಿದ ಶೌರಿಯಮಾವನಕೆಡಹಿದ ಹೊಂತಕಾರಿಯ4ತನ್ನ ಕರುಣಕೆನಿತ್ಯಗುರಿಯಾಗಿಹನ ಕಾಯುವನು ಪರಂಪರೆಯಎನ್ನ ಕುಲದೈವ ಮೇಲ್ಗಿರಿಯ ಪ್ರಸನ್ನವೆಂಕಟಕೃಷ್ಣ ನಮ್ಮ ಮರೆಯ 5
--------------
ಪ್ರಸನ್ನವೆಂಕಟದಾಸರು
ದಮ್ಮಯ್ಯ ಸೆರಗ ಬಿಡೊ | ಶ್ರೀಕೃಷ್ಣಯ್ಯ | ಕರಮುಗಿವೆ |ಸಮ್ಮತವಲ್ಲಿದು ನಿನಗೆ | ನಿನ್ನಮ್ಮನೊಳ್ ಪೇಳುವೆ ಹೀಗೆ ||ಧರ್ಮವೆ ಪತಿವ್ರತ ಕರ್ಮಕೆ ಎನ್ನಯ |ಅಮ್ಮನು ಕೇಳಿದರ್ ಸುಮ್ಮನೆ ಇರುವಳೆ 1ಸುಮನಸರು | ತೋಷಿಪರೆ |ನಿನ್ನ ರಮಣಿಯು ತಾನ್ ಕೋಪಿಸಳೇ ||ಸಮವೆಂದೂ ಪೇಳುವನೇ | ಎನ್ನ ರಮಣನಿದ ತಾಳುವನೇ |ಭ್ರಮಿತ ಕೋಪದಿ ಎನ್ನ | ಯಮನೆಡೆಗಟ್ಟನೇ |ಸಮಯವಲ್ಲಿದು ಕೇಳ್ | ಕಮಲದಳಾಕ್ಷನೆ 2ಇಂದೆನ್ನ ಕುಲವೆರಡೂ |ತಾವ್ ಹೊಂದದೆ ದುರ್ಗತಿ ಜರದೂ |ನಿಂದೆಗೆ ನಾ ಗುರಿಯಾಗಿ |ಯಮಬಂಧಕೇ ಸಿಲುಕೆನೆ ಪೋಗಿ |ಇಂದೆನ್ನಯ ವ್ರತ ಕುಂದದ ತೆರದಲೀಚಂದದಿ ಪೊgÉ UÉೂೀವಿಂದದಾಸನ ಪ್ರಿಯಾ3
--------------
ಗೋವಿಂದದಾಸ
ಪ್ರಜೋತ್ಪತ್ತಿ ಸಂವತ್ಸರ ಸ್ತೋತ್ರ148ರಾಜ ರಾಜೇಶ್ವರಗೆ ರಾಜರಾಜೇಶ್ವರಿ ಪತಿಗೆರಾಜೀವಭವಪಿತಗೆ ಶರಣು ನಮೋ ಶ್ರೀಪದ್ಮನಾಭನಿಗೆಪಪ್ರಭವಾದಿ ಷಷ್ಠಿ ಸಂವತ್ಸರದಿ ಪ್ರಾಬಲ್ಯ ಪೆಚ್ಚಿವುದು ಈ ವರುಷಸುಪ್ರಜೋತ್ಪತ್ತಿ sಸಾಧು ಕ್ಷೇಮಕರ ಯೋಜನೆಗಳಿಗೆ ಸುಸಂಸ್ಕøತರುಪ್ರಾರಂಭಿಸುವುದಕೆ ಅನುಕೂಲ ಅಧಿಕಾರವರ್ಗವುಈ ರೀತಿ ತಿಳಿವುದು 1ಸಂವತ್ಸರ ರಾಜ ಸೂರ್ಯ ಮಂತ್ರಿಯೂ ಸಹ ತಂದತರ್ಯಾಮಿಸೂರಿಪ್ರಾಪ್ಯಘೃಣಿಯುಸರ್ವವಿಧದಲ್ಲು ದಯೆ ಪಾಲಿಸುವನವನಾಯಕರೊಳು ಸಹ ಇದ್ದುಸರ್ವೇಶ ಶ್ರೀಪ ಪದ್ಮನಾಭನು ಸ್ಮರಿಸುವವರ ಸುರಧೇನುವು 2ಸುಖಪೂರ್ಣ ಚಿನ್ಮಯನು ನಿತ್ಯತೃಪ್ತನುಪಜÕನ್ಯನೊಳುಇದ್ದು ಮಳೆಗರೆವಶ್ರೀಹರಿ ಅರ್ಕವಿಧು ಗ್ರಹನಕ್ಷತ್ರಗಳೊಳ್ಇದ್ದು ಜ್ಯೋತಿಹರಿಬೆಳಕುಕೊಡುವ ಮಕ್ಕಳು ಮೊಮ್ಮಕ್ಕಳು ಸುಖವೀವ ಶ್ರೀರಮೇಶನುವೇದನಾಯಕಿ ಎಂಬ ಉಮೆಯರಸನ ಸಂಗಮೇಶ್ವರೊಳಿದ್ದು 3ಸರ್ವವಾಂಛಿತವೀವ ಸರ್ವಸ್ಥ ಲಕ್ಷ್ಮೀರಮಣ ಸರ್ವೋತ್ತಮನುಸರ್ವಕಲ್ಯಾಣ ಸುಗುಣಾರ್ಣವನು ನಿದÉರ್ೂೀಷನುವಾಂಛಿüಸುವವರು ಪರವಿತ್ತಸ್ಥೇಯಪರನಿಂದಾ ವ್ಯಭಿಚಾರರೇತಸ್ಸÀ್ಸಂಗಮ ತ್ಯಜಿಸಲೇಬೇಕು 4ಬಾಲ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ದೈವಭಕ್ತಿಮತ್ತು ಸಾಧುನೀತಿಗಳಪಾಠಗಳ ಬೋಧಿಸುವುದು ಅಧಿಕಾರವರ್ಗದವರು ಮಾಡಲೇಬೇಕುಇಳೆಯಲ್ಲಿ ಪ್ರಜಾಕ್ಷೇಮ ಅಭಿವೃದ್ಧಿ ಆಗಲಿಕ್ಕೆ ಇದುಉಪಾಯ ಹರಿದಯದಿ 5ವಸುಂಧರೆಯಲ್ಲಿ ಇನ್ನು ಬೆಳೆಯುವುದು ಪ್ರಜಾ ಉಪಯೋಗಆಗಿ ಮಿಕ್ಕದ್ದೇ ಪರದೇಶಕೆ ಕೊಡಬಹುದುಆಸುರೀ ಸಂಪತ್ತು ಬೆಳಸದೆ ದೈವಿ ಸಂಪತ್ತೇ ಗುರಿಯಾಗಿ ಸರ್ವರುತಮ್ಮ ತಮ್ಮ ಸಮಯಗಳ ನೀತಿಗಳ ಆಚರಿಸಲುರಾಷ್ಟ್ರ ಲೋಕಗಳಿಗೆ ಲಾಭ 6ಎನ್ನ ಮಾತುಗಳಲ್ಲ ಇವು ಕ್ಷೇಮಕರ ಪ್ರಜೋತ್ಪತ್ತಿಸ್ವಾಮಿಶ್ರೀಪದ್ಮನಾಭ ಶ್ರೀನಿವಾಸ ನುಡಿಸಿದವುಎನ್ನನ್ನು ಎನ್ನವರನ್ನು ಸರ್ವಲೋಕಜನರನ್ನುರಕ್ಷಿಸಲಿ ಶ್ರೀಹರಿ ಸರ್ವದಾ 7
--------------
ಪ್ರಸನ್ನ ಶ್ರೀನಿವಾಸದಾಸರು
ಯಮ ತನ್ನ ಪುರದಿ ಸಾರಿದನು ನಮ್ಮಕಮಲನಾಭನ ದಾಸರ ಮುಟ್ಟದಿರಿ ಎಂದು ಪ.ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತನಿಜ ದ್ವಾದಶನಾಮ ಧರಿಸಿಪ್ಪರ ||ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು 1ತಾಳದಂಡಿಗೆ ಗೀತವಾದ್ಯ ಸಮ್ಮೇಳದಿಊಳಿಗವನು ಮಾಳ್ಪ ಹರಿದಾಸರ ||ಕೇಳಿದೊಡನೆ ಕರವೆತ್ತಿ ಮುಗಿದು ಯಮನಾಳುಗಳೆಂದು ಹೇಳದೆ ಬನ್ನಿರೊ ಎಂದು 2ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟುಚಿಮ್ಮುತ ಚೀರುತ ಬೊಬ್ಬೆಯಿಟ್ಟುಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ಪಬ್ರಹ್ಮೇತಿಕಾರನೆಳತನ್ನಿರೋ ಎಂದು 3ಮಾತಾಪಿತರ ದುರ್ಮತಿಯಿಂದ ಬೈವರಪಾತಕಿಗಳ ಪರದ್ರೋಹಿಗಳನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳುಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು 4ನರರ ಹಾಡಿ ಪಾಡಿ ನರರ ಕೊಂಡಾಡುವನರಕಿಗಳ ಕೀಳುನಾಯ್ಗಳ ಮನ್ನಿಸುವದುರುಳ ಜಾÕನಿಜನರನೆಳೆತಂದು ಬಾಯೊಳುಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು 5ಕೇಶವಹರಿ ಎಂಬ ದಾಸರ ಹೃದಯದಿವಾಸವಾಗಿಹಸಿರಿ ತಿರುಮಲೇಶದಾಸರ ದಾಸರ ದಾಸನೆನಿಪಹರಿದಾಸರನ್ನು ಕೆಣಕದೆ ಬನ್ನಿರೋ ಎಂದು 6ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿಪನ್ನಗಶಯನನೆ ಗತಿಯೆನ್ನುತತನ್ನ ಭಕ್ತರ ಕಾಯ್ವ ಪುರಂದರವಿಠಲನಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು 7
--------------
ಪುರಂದರದಾಸರು
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು