ಒಟ್ಟು 21 ಕಡೆಗಳಲ್ಲಿ , 9 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
(ಬಪ್ಪನಾಡಿನ ದೇವಿಯನ್ನು ಕುರಿತು)ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆ ಪ.ದಯಮಾಡೆ ಕೇವಲ ಭಯವಿಹ್ವಲನಲ್ಲಿದಯಸಾಗರೆ ಸೌಭಾಗ್ಯಸಂಪದವನ್ನು ಅ.ಪ.ವೇದಾಂತವೇದ್ಯೆ ನಿಖಿಳಜಗದಾದಿವಿನೋದೆಭೂಧರಾತ್ಮಜೆ ಸರ್ವಾಧಾರಶಕ್ತಿ ಕಲಾಧರೆಮಧುರಬಿಂಬಾಧರೆ ನಿನ್ನಯಪಾದವನು ಮರೆಹೊಕ್ಕೆ ಮನಸಿನ ಭೇದವನುಪರಿಹರಿಸಿ ಸರ್ವಾಪ-ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ 1ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆಗಂಭೀರೆ ಮೇರು ನಿತಂಬೆಸಿಂಹಮಧ್ಯೆಲಂಬೋದರಪರಿರಂಭಕರಾಂಬುಜೆಕುಂಭಿಕುಂಭಪಯೋಜೆ ಶೋಭಿಪ ಕಂಬುಕಂಠಿಮುಖೇಂದುಪದ್ಮ ದ-ಳಾಂಬಕಿ ಎನಗಿಂಬುದೋರೆರೋಲಂಬಕುಂತಳೆಶುಂಭಮರ್ದಿನಿ2ಸಿಂಧೂರನಯನೆ ನಿಖಿಲಾಮರವಂದಿತಚರಣೆಸುಂದರಾಂಗಿ ಸುಮಗಂಧಿವಿಬುಧಮುನಿವೃಂದಸೇವಿತೆನಿತ್ಯಾನಂದಪ್ರಕಾಶಿನಿಅಂಧಕಾಸುರವೈರಿಹೃದಯಾನಂದಪಾರಾವಾರಪೂರ್ಣಮಿ-ಚಂದ್ರೆ ಸದ್ಗುಣಸಾಂದ್ರೆಸುರಥನರೇಂದ್ರವರದೆ ಮೃಗೇಂದ್ರವಾಹಿನಿ 3ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆನಿಜದಿ ನಿನ್ನಯ ಪಾದಂಬುಜವ ನಂಬಿದೆ ತ್ರಿಜಗವಂದಿತೆಮಹಾಗಜಗೌರಿ ಶಂಕರಿತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-ವ್ರಜವಿದಾರಿ ಮುನೀಂದ್ರ ಮನನೀರಜದಿವಾಕರೆ ಮಾನಿತೋದ್ಧರೆ 4ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರಸರ್ಪಶಯನ ಲಕ್ಷ್ಮೀನಾರಾಯಣಪ್ರೀತಿಯಪ್ಪಂತೆ ದಯೆ ಗೈಯೆಜಗದಾದಿಮಾಯೆಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜನನಿರುದ್ರಾಣಿ ರಕ್ಷಿಸು ಎನ್ನಜಗದೀಶನ ರಾಣಿ ಪ.ವನಜಭವಸುರಮುನಿಕುಲಾರ್ಚಿತೆಕನಕವರ್ಣಶರೀರೆ ಕಮಲಾ-ನನೆ ಕರುಣಾಸಾಗರೆ ನಮಜ್ಜನ-ಮನಮುದಾಕರೆ ಮಾನಿತೋದ್ಧರೆ ಅ.ಪ.ಆದಿಕೃತಾಯುಗದಿ ಪ್ರತಿಷ್ಠಿತ-ಳಾದೆ ಧರಾತಳದಿಆದಿತೇಯರ ಬಾಧಿಸುವ ದಿತಿ-ಜಾಧಮರ ಭೇದಿಸಿದೆ ಸಜ್ಜನ-ರಾದವರ ಮನ್ನಿಸಿದೆ ತ್ರೈಜಗ-ದಾದಿಮಾಯೆ ವಿನೋದರೂಪಿಣಿ 1ಖಂಡ ಪರಶುಪ್ರೀತೆ ನಿಖಿಲಬ್ರ-ಹ್ಮಾಂಡೋದರಭರಿತೆಚಂಡಮುಂಡವೇತಂಡದಳನೋ-ದ್ದಂಡಸಿಂಹೆ ಅಖಂಡಲಾರ್ಚಿತೆಪಾಂಡುತನುಜಕೋದಂಡವಿತರಣೆಚಂಡಿಕೇ ಕರದಂಡಲೋಚನಿ 2ಸಿಂಧೂರಸಮಯಾನೆ ಸರಸ ಗುಣ-ವೃಂದೆ ಕೋಕಿಲಗಾನೆಸುಂದರಾಂಗಿ ಮೃಗೇಂದ್ರವಾಹಿನಿಚಂದ್ರಚೂಡಮನೋಜೆÕ ಸತತಾ-ನಂದಪೂರ್ಣೆ ಮುನೀಂದ್ರನುತೆ ಸುಮ-ಗಂಧಿ ಗೌರಿ ಶಿವೇ ಭವಾನಿ 3ಲಂಬೋದರಮಾತೆ ಲಲಿತ ಜಗ-ದಂಬಿಕೆ ಗಿರಿಜಾತೆಕಂಬುಕಂಠಿ ಕಾದಂಬನೀಕು-ರುಂಬಜಿತಧಮ್ಮಿಲ್ಲೆ ತವ ಪಾ-ದಾಂಬುಜವ ನಾ ನಂಬಿದೆನು ಎನ-ಗಿಂಬು ಪಾಲಿಸೆ ಶುಂಭಮರ್ದಿನಿ 4ಘನವೇಣುಪುರವಾಸೆ ಸರ್ವಾರ್ಥದಾ-ಯಿನಿ ತ್ರೈಜಗದೀಶೆಸನಕನುತೆ ಶ್ರೀಲಕ್ಷುಮಿನಾರಾ-ಯಣಭಗಿನಿ ಶ್ರೀಮಹಿಷಮರ್ದಿನಿಮನಮಥಾಮಿತರೂಪೆ ಕಾತ್ಯಾ-ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಡೆ ನಿನ್ನ ಚರಣವಉಡುಪಿಕೃಷ್ಣನೆಭವಕಡಲ ದಾಟಿಸು ಕೈಯವಿಡಿದು ಪಾಲಿಸು ತಂದೆ ಪ.ಧÀ್ರುವಶುಕಪ್ರÀಹ್ಲಾದಬಲಿಅಜಾಮಿಳನುದ್ಧವ ಅಂಬರೀಷ ವಿದುರ ಮುಖ್ಯರುತವ ಪಾದವಿಡಿಯಲವರಿಗಿಂಬು ನೀಡ್ದಹವಣವ ಬಲ್ಲೆ ನಾನೇನ ಮಾಡಿದರೇನ 1ಪಾಂಚಾಲಿಮಾನವಕಾಯ್ದೆ ಪೆರರಿಗಂದುಅಚ್ಯುತನಿನ್ನಂಗುಟವು ಸೋಂಕಲುನಿಚ್ಚಳ ಸತಿಯಾದಳೆಂಬ ಸಾಹಸಕೇಳಿಮುಚ್ಚು ಮರೆಯ ಮಾಡಿದರೆ ನಿಮ್ಮ ಮರೆಯೆನು 2ನಿನ್ನ ಪಾದಾಂಬುಜ ಧ್ಯಾನ ಮರೆಯದಂತೆಎನ್ನ ಮನದ ವಕ್ರಗತಿಯ ತಿರ್ದುಮನ್ನಿಸು ತಂದೆ ಪ್ರಸನ್ನವೆಂಕಟ ಕೃಷ್ಣಪೂರ್ಣಪ್ರಜ್ಞಾರ್ಚಿತ ಚರಣಕಮಲನೆ 3
--------------
ಪ್ರಸನ್ನವೆಂಕಟದಾಸರು