ಒಟ್ಟು 25 ಕಡೆಗಳಲ್ಲಿ , 16 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಖ್ಯಪ್ರಾಣನೀತಾ | ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ 1 ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ 2 ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ 3 ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4 ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
--------------
ವಿಜಯದಾಸ
ವಧು ವರರ ಯದ್ಧರಿಸೊ ಉದಧಿಶಯನ ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ ಯತಿಪೂಜೆ ಕ್ಷಿತಿದೇವ ತತಿಸೇವೆ ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ ಕಥೆಗಳನು ಕೇಳ್ವದಕೆÉ ರತಿಯಿತ್ತು ಪ್ರತಿದಿನದಿ 1 ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ ಮರುತ ಸಚ್ಛ್ಯಾಸ್ತ್ರದಔಯಾಸವ ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ 2 ಸಾಮಗಾನವಿಲೋಲ ಶಾಮಸುಂದರವಿಠಲ ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ ಯಾಮಯಾಮಕೆ ನಾಮಸುಧೆಯನು ಸವಿಪ ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು 3
--------------
ಶಾಮಸುಂದರ ವಿಠಲ
ಶ್ರೀ ಲಕ್ಷ್ಮೀನಾರಾಯಣ ಪ ಕಾಲ ಕಾಲ ಗಾನವಿಲೋಲ ಜಯ ಜಯ ಅ.ಪ ವಿರಿಂಚಿ ಸ್ತೋತ್ರ ಪಡೆದ ಮಹಾತ್ಮ ಜಯ ಜಯ 1 ಗಿರಿಯು ನೀರೊಳ್ ಮುಳುಗಲಾಕ್ಷಣ | ಗೆರೆದೆಯಮೃತವ ಪೊರೆದೆ ಕರುಣದಿ2 ಶೇಷಗಿರಿಯ ವರಾಹರೂಪನೆ 3 ಭರದೊಳಿರಲೊಡೆದ್ವಜ್ರ ಕಂಭದಿ | ಶರಣನು ಪೊರೆದಾ ನೃಸಿಂಹನೆ 4 ಳೊದಗಿರುವ ತ್ರಿವಿಕ್ರಮನೆ ಜಯ ಜಯ 5 ಸಮಗೊಳಿಸಿ ಪೊರೆದಮಲ ಭಾರ್ಗವ 6 ಕುಶಲವರ ಪಿತ ರಾಮಚಂದ್ರನೆ 7 ಕುವರಿಯರಸ ಗೋಪಾಲಕೃಷ್ಣನೆ 8 ದತಿಕುಶಲ ಬುದ್ಧಾವತಾರನೆ 9 ಲಟ್ಟಹಾಸದಿ ಮೆರೆವ ಕಲ್ಕಿಯೆ 10 ಮಾಧವ ಗತಿ ಜಗದ್ಗುರು ಸಚ್ಚಿದಾನಂದ 11
--------------
ಸದಾನಂದರು
ಶ್ರೀ ಸರಸ್ವತೀದೇವಿ ವಾಣಿಯೆ ವೀಣಾಪಾಣಿಯೆ ಪಾಲಿಸು ಸದಾ ಸ್ಥಾಣು ಜನನಿ ಚತುರಾನನ ರಾಣಿ ಶ್ರೀ ಪ ಕೃತಿ | ಸುತೆ ಸರಸ್ವತಿ ದೇವಿ ಹಿತದಿಂದಲೆನ್ನನು | ಸುತನೆಂದು ಭಾವಿಸೆ 1 ಬುದ್ಧ್ಯಾಭಿಮಾನಿ ಸದ್ವಿದ್ಯಾ ಪ್ರದಾಯಿನಿ ಶುದ್ಧ ಸುಮತಿ ಕೊಟ್ಟು | ಉದ್ಧರಿಸನುದಿನ 2 ಶಾರದೆ ದಯವ್ಯಾಕೆ | ಬಾರದೆ ಎನ್ನೊಳು ನಾರದ ಸೇವಿತೆ | ಸೇರಿದೆ ತ್ವತ್ಪಾದ 3 ಪವನಾಂತರ್ಗತ ಮಾಧವನ ಸನ್ಮಹಿಮೆಯ ಕವನದಿಂದಲಿ ಸುಸ್ತವನ ಮಾಡಿಸೆ 4 ಸಾಮಗಾನವಿಲೋಲ | ಶಾಮಸುಂದರನ ಸೊಸೆ ಪ್ರೇಮದಿ ಮನ್ಮುಖ ಧಾಮದಿ ವಾನಿಸೆ5
--------------
ಶಾಮಸುಂದರ ವಿಠಲ
ಶ್ರೀನಿವಾಸ ನಿನಗೆ ನಾ ಮಣಿದು ಫಲವೇನೊ ಕಾಣಿಸದೊ ನಿನಗೆನ್ನ ಕಷ್ಟ ಪ. ಜಾಣತನವಿದನೆಲ್ಲಿ ಮಾನನಿಧಿ ಕಲಿತೆಯೊ ಗಾನವಿಲೋಲ ಸ್ವಾಮಿ ಪ್ರೇಮಿ ಅ.ಪ. ಎಷ್ಟು ಕೂಗಲು ದಯವು ಪುಟ್ಟಲಿಲ್ಲವೊ ನಿನಗೆ ಕೃಷ್ಣಮೂರುತಿಯೆ ಕೇಳೊ ಕಷ್ಟಪಡಿಸುವುದೀಗ ದಿಟ್ಟತನವೇ ನಿನಗೆ ಶ್ರೇಷ್ಠ ನೀನೆನಿಸಿಕೊಂಡು ಪಟ್ಟವ್ಯಾತಕೆ ನಿನಗೆ ಮೂರು ಲೋಕದ ರಾಜ್ಯ ಬಿಟ್ಟು ಬಿಡು ನೀನೀಗಲೆ ದೃಷ್ಟಿಯಿಂದಲಿ ನೋಡಿ ನಿನ್ನ ತೋರೆಂದೆನಲು ಸೊಟ್ಟ ತಿರುಹಿರುವೆ ಮುಖವ ದೇವ 1 ತೋರೊ ಮೋರೆಯನೆನಲು ನೀರ ಪೋಗುವೆ ಬೆನ್ನು ಭಾರ ಪೊತ್ತು ಕೋರೆ ತೆರೆವೆ ಘೋರ ರೂಪವ ತೋರಿ ಈ ರೀತಿ ಬೆದರಿಸುವೆ ದಾರಿ ಎನಗಿನ್ನಾವುದೊ ನಾರಿಯನೆ ಪೆತ್ತು ನೀ ನಾರಿಯನೆ ಕೊಂದು ನಿನ್ನ ನಾರಿ ಚೋರನ ವಧಿಸಿದೆ ನಾರೆರೋಸ್ತ್ರವ ಕದ್ದು ನಾರಿಯರ ವ್ರತ ಕೆಡಿಸಿ ಏರಿ ಓಡಿದೆ ಕುದುರೆಯ ಜೀಯಾ 2 ಈ ಪರಿಗೈದರೆ ಕಾಪಾಡುವವರ್ಯಾರೊ ಭೂಪರೈವರ ಪೊರೆದನೆ ತಾಪಪಡುವುದು ನಿನಗೆ ತೋರ್ಪುದಿಲ್ಲವೆ ದೇವ ಪಾಪಿ ಎಂದೆನಬೇಡವೊ ನೀ ಪಾರುಗೊಳಿಸಬೇಕೀಪರಿಯ ಬವಣೆಗಳ ಶ್ರೀಪತಿಯೆ ಶ್ರೀನಿವಾಸ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದೆಕಾಪಾಡುವವರನರಿಯೆ ದೊರೆಯೆ 3
--------------
ಅಂಬಾಬಾಯಿ
ಸರಸ್ವತಿ ದೇವಿ ವಾರಿಜನೇತ್ರೆಯ ಶಾರದೆ ಶ್ರೀಮುಖ ತೋರುವದೆನ್ನಯ ಪಾರ ಪರಾತ್ಪರೆ ಪ ಮಯೂರ ವಾಹಿನಿ ಕಾಯುವುದೆನ್ನ ತಾಯೆ ಚಿದ್ಛನ ನಿಜದಾಯುವ ನೀಯುವ 1 ಬಾಲೆಯ ಭಾಗ್ಯವಿಶಾಲೆಯ ನವಕುಸುಮ ಮಾಲೆಯ ಗಾನವಿಲೋಲೆ ವಾಗೇಶ್ವರಿ 2 ಛಂಧದೊಳೆನ್ನ ಸಾನಂದವ ಪಾಲಿಪ ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3 ನಂಬಿಕೆ ಹೊಂದಿಹನೆಂಬುವ ಭಕ್ತರ ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4 ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ ಶಾಂತಿ ಸದ್ಗುರುಪದ ಸಂತಸಕಾರಿಣಿ 5
--------------
ಶಾಂತಿಬಾಯಿ
ಸರಿಯೇನು ನಿನಗಿದು ಸರಸಿಜನಯನನೆ ಚರಣ ಭಜಿಪರೊಳು ಕರುಣಿಸದಿರುವಿ ಪ ದೀನಜನರ ಬಂಧು ನೀನೆ ನಿರ್ದಯನಾದರಿ ನ್ನೇನು ಗತಿಯು ಎನಗೆ ಪ್ರಾಣಾಂತರ್ಗತನೆ ಹೀನ ನಿನಗಲ್ಲೇನೈ ಗಾನವಿಲೋಲ 1 ಇಂದಿರೇಶಾನಾಥಬಂಧುವೇ ನೀ ದಯಾ ಸಿಂಧು ನೀ ಸಲಹೆಂದು ಬಂದು ಮರೆಯ ಬಿದ್ದೆ ಬಂದ ಸಂಕಟದೊಳಗಿಂದ ಸಲಹದಿರೆ ಕುಂದು ನಿನಗಲ್ಲೇನೈ ಮಂದರನಿಲಯ 2 ನಂಬಿದ ಭಕ್ತರ ಇಂಬುದಾಯಕನು ನೀ ನೆಂಬ ಬಿರುದ್ಹೊತ್ತಿರುವಿ ಅಂಬುಜನಯನ ನಂಬಿದೆನು ನಿನ್ನ ಪಾದಾಂಬುಜ ದೃಢವಾಗಿ ಬೆಂಬಲಿ (ರ್ಪೊ) ರೆಯೆನ್ನ ಸಂಭ್ರಮದಿ ಶ್ರೀರಾಮ 3
--------------
ರಾಮದಾಸರು
ಸುಖಪರವಯ್ಯಾ ಶ್ರೀಹರಿಲೀಲೆ ವೈಜಯಂತಿ ಕೌಸ್ತುಭ ವನಮಾಲಾ ಶ್ರೀವತ್ಸಾಂಕನ ದಾವನಕೊರಳೊಳು ಕೇವಲ ಗುಂಜಾಮಾಲಾ ತ್ರಿಜಗಜ್ಜನ್ಮಾದಿಗಳಿಗೆ ಮೂಲಾ ಜನಾರಿಗೆನಿಸುವ ಕಾಲಾ ಭಜಿಪರ ಭಾಗ್ಯೋದಯಕಾನಂದ ವ್ರಜದೊಳೀಗೋಪಿಯ ಕಂದಾ ಶ್ರೀದವಿಠಲ ಕೇಳು ಸುರತಸುಶೀಲಾ ರಾಧಾಮನೋನುಕೂಲಾ ಸಾಧಿಸಿ ವೃಂದಾವನದಲ್ಲಿ ಪೊಂಗೊಳಲೂದುವ ಗಾನವಿಲೋಲ
--------------
ಶ್ರೀದವಿಠಲರು
ನಿನ್ನ ಭಕುತಿಯನು ಬೀರೊ ಎನ್ನಮನ್ನಿಸಿ ಸಲಹುವರಾರೋ ಪಸನ್ನುತಸನ್ಮಾರ್ಗ ತೋರೋ ಆಪನ್ನರಕ್ಷಕ ಬೇಗ ಬಾರೋ ಅ.ಪಪನ್ನಗಶಯನ ಲಕ್ಷ್ಮೀಶಾ ವೇದಸನ್ನುತಪಾದಸರ್ವೇಶಾಇನ್ನು ಬಿಡಿಸು ಭವಪಾಶಾ ಪ್ರಸನ್ನ ರಕ್ಷಿಸೊ ಶ್ರೀನಿವಾಸಾ 1ನಾರದ ಗಾನವಿಲೋಲಾ ಸ್ವಾಮಿಭೂರಿಭಕ್ತರ ಪರಿಪಾಲಾಶ್ರೀ ರಮಣಕರುಣಾಲವಾಲ- ದೇವನೀರದಶ್ಯಾಮ ಗೋಪಾಲಾ2ಕರಿರಾಜವರದ ಪ್ರಮೇಯಾ ಎನ್ನನರಿತು ನಡೆಸೊ ಯೋಗಿಧ್ಯೇಯ ||ಸುರಮುನಿ ಹೃದಯನಿಕಾಯ-ನಮ್ಮಪುರಂದರವಿಠಲರಾಯಾ3
--------------
ಪುರಂದರದಾಸರು
ಪಾದಪ್ರೇಮ ಪಾಲಿಸು ಪಾದಪ್ರೇಮ ಪಪಾಪವಿರಾಮ ಪಾವನನಾಮ ಅ.ಪಸ್ಮರಿಪರ ಪ್ರೇಮ ವರಬಲಭೀಮವರನೀಲಶ್ಯಾಮ ರಘುಕುಲಸೋಮಶರಣರಸುರತರುಜಗದೋದ್ಧಾಮ1ಗೋವುಗಳ ಪಾಲ ಗೋಕುಲಬಾಲಪಾವನಮಾಲ ಗಾನವಿಲೋಲಸಾವಿರನಾಮಕ ಸುಜ್ಞಾನಸಪಾಲ 2ಸಾಗರ ಕನ್ನಿಕಾ ಪ್ರಾಣರಮಣನಾಗಾರಿಗಮನ ನಾಗಶಯನಆಗಮನುತ ಮಮಪ್ರಾಣ ಶ್ರೀರಾಮ ನಿನ್ನ 3
--------------
ರಾಮದಾಸರು