ಒಟ್ಟು 92 ಕಡೆಗಳಲ್ಲಿ , 29 ದಾಸರು , 92 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿಂದಲಿ ಪ್ರಕಾಶ ದೇವನ ಪ ಹೇಮ ಮುಕುಟ- ಮಾಣಿಕ್ಯಯುಕ್ತವಾಗಿರೆ ಇರುವ ಶಂಖಚಕ್ರವು ಮುತ್ತಿನಹಾರ ಮೋಹನನೆ ಮತ್ತೆ ಅಂದಿಗೆ ಗೆಜ್ಜೆಯುಕ್ತದಿ ವಸ್ತುಗಳು ಅಕೋ ಭೂಷಣವು ಪ್ರತಿರೂಪ-----ಭಾವನಾ 1 ದಿವಿಜ ಪೋಷಕನಾದ ಶ್ರೀಹರಿ ಜ್ಞಾನಿಗಳ ಬಿಡದಿನ್ನು ಸಲಹುವಾ---- ನ ವಾಧಿಪನೊಳಾದನು ? ಗಾನಲೋಲನಾಗಿ ಕನಸು ಮನಸಿನಲ್ಲಿ ಕರುಣರಸದಲ್ಲಿ ಸಾನುರಾಗದಿ ನಾಟ್ಯವಾಡುತ ಸಾರಿ ಸಾರಿಗೆ ಬಂದ ಕೃಷ್ಣನ 2 ಕಟಿ ಸುದರ್ಶನ----ಡುವಣಿ ಬಂದು ಎನ್ನ ಹೃದಯ ಪರಿ ಪರಿಯಿಂದ ತೋರುವ ನಿರುತ ದೃಷ್ಟಿಯಿಂದ ನಾನು 3
--------------
ಹೆನ್ನೆರಂಗದಾಸರು
ಕರುಣೆ ತೋರಿಸೊ ದೇವಾ ಕರಿವರದನೆ ಪ. ಕರುಣ ತೋರಿಸೊ ದೇವ ಗರುಡಗಮನ ನಿನ್ನ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ. ವೇದಾಂತ ವೇದ್ಯ ನೀನೆ ಆದಿನಾರಾಯಣ ಸಾಧುವಂದಿತನು ನೀನೆ ದೇವೇಶನೆ ವೇದವ್ಯಾಸನು ನೀನೆ ಬಾದರಾಯಣ ನೀನೆ ಭವ ಭಯಹರ ನೀನೆ 1 ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ ಅಂತಕ ದೂತರಿಂದೆಳೆಸುವ ನೀನೆ ಸರ್ವ ಅಂತರ್ಯಾಮಿ ಅಂತÀರಂಗದಿ ನಿಂತು ಪ್ರೇರಿಸಿ ನಿನ ಪಾದ ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ2 ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ ಗಾನಲೋಲನೆ ಭಕ್ತರ ಸಲಹುವೆನೆಂಬುವ ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ 3
--------------
ಸರಸ್ವತಿ ಬಾಯಿ
ಕಾಯಬೇಕೆನ್ನ ಕೇಶವನೇ ಬಂದು ಪಾಯವನರಿಯೆನು ಹರಿಯೇ ಮಾಧವನೇ ಪ ಭವಸಾಗರವÀ ದಾಟಿ ಬಂದೇ ಇನ್ನು ಭವವನ್ನು ಬಂಬಿದೆ ಹರಿಯೇ ಶರಣೆಂದೆ ಅ.ಪ. ಜವನ ಬಾಧೆಗೆ ಅಂಜಿ ಬಂದೇ ಭವರೋಗ ವ್ಯೆದ್ಯನೇ ರಕ್ಷಿಸೋ ತಂದೇ 1 ಯೋನಿಗೆ ಬರಲಾರೆ ಹರಿಯೇ ಬಂದು ಮೌನದಿ ವೇಳೆಯನನ್ಯರೊಳ್ತಳೆಯೇ 2 ಜನ್ಮವ ಕಳದೆನು ಬರಿದೇ ಗಾನಲೋಲನೆ ಎನ್ನ ರಕ್ಷಿಸೋ ತಂದೇ 3
--------------
ಕರ್ಕಿ ಕೇಶವದಾಸ
ಕೇಶಿದನುಜನ ನಾಶಗೊಳಿಸಿದ ಕೇಶವನೆ | ಕಾಯೋ ಶ್ರೀಧರ ಪ ನಾಶರಹಿತ ಪರೇಶ ದಿನಪಸಂಕಾಶ | ಕ್ಲೇಶವಿನಾಶ ಭೂಧರ ಅ.ಪ ದೀನಪಾಲನೆ ಗಾನಲೋಲನೆ ಧೇನುಕಾಸುರ ಸೂದನೆ ಸಾನುರಾಗ ವಿನೋದನೆ 1 ರಥಾಂಗ ವೈರಿ ಗೋಪಾಲನೆ ಮಂಗಳಾಂಗ ಶುಭಾಂಗ ಮಾಂಗಿರಿ ರಂಗ ಗೋಪೀ ಬಾಲನೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ 1 ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ ನೀಲಮೇಘ ಲಕುಮೀಲೋಲನಾ ವಿಶಾಲನಾ 2 ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ 3 ಆನಂದನಾ ದಯಾವೃಂದನಾ ಮುಕುಂದನಾ ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ 4 ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ 5
--------------
ಹನುಮೇಶವಿಠಲ
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ಗೋಕುಲ ಆನಂದ ಲೀಲಾ | ಘನ ಸುಂದರ ರುಕ್ಮಿಣಿಲೋಲ ಶ್ರೀಕರ ಶುಭದಾಯಕ ವರ | ಗೋಪಾಲ ಬಾಲ ಪ ಮಣಿರಂಜಿತ ಭೋಗರಾಗವಿಮಲ ಶೃಂಗಾರಶೀಲ ಸುರಪಾಲ ಸಂಸೇವ್ಯ ಗಾನಲೋಲ ಅ.ಪ ಪದ್ಮಲೋಚನ ಪರಿವೃತ ಶರಣವತ್ಸಲ ಸರ್ವಜ್ಞ ಸುಭಾಷಿತ ಸದ್ಭಾವ ವಿನಯಾದಿ ಭೂಷಿತ ಚಿತ್ರ ವಿಚಿತ್ರ ಕರ್ಷಿತ ಸೂತ್ರಾ ಮನಸಿಜ ಗಾತ್ರಾ | ಸುವಿನೀತ ಗೋಪೀನಂದನ 1 ಮಣಿಪೀಠ ಮಂಡಿತಾ | ಕಿರೀಟ ಮಣಿಮಯ ರಾರಾಜಿತ | ಗೋಪಿಕಾನತ ಪಾಂಡವಪಕ್ಷ ದನುಜವಿಪಕ್ಷ |ಕಮಲದಳಾಕ್ಷ ದಾನವಶಿಕ್ಷ ಶ್ರೀವನಮಾಲಿಕಾವಕ್ಷ | ಮಾಂಗಿರಿನಾಥಾ ದೀನರಕ್ಷ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚನ್ನಾಗಿ ಸ್ತುತಿಸುವ ರಾ ಆಶ್ರಿತ ಜನರಾಧಾರಾ ಪ ನಾರದವರದನ ಯೋಗಿಗಳ ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ 1 ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ ಮನುಜರ ಪೋಷಕನಾ 2 ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ ಕಮಲಸಂಭವ ವಪಿತನ ಮಾನಾಭಿಮಾನ ಮಹಾನುಭಾವ---------------- ಆದ ಅವನಾ 3
--------------
ಹೆನ್ನೆರಂಗದಾಸರು
ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ ಆರುಮೂರು ಮೀರಿ ನೋಡೆಲೈ ಅಲ್ಲಿರುವ ತಾರಕದಾರಿ ಪ್ರಣವ ಸಾರುತಿದೆ ನೋಡೈ ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ 1 ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ ಗಾನಲೋಲನನ್ನು ಕಾಣೆಲೈ ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ 2
--------------
ಚನ್ನಪಟ್ಟಣದ ಅಹೋಬಲದಾಸರು
ಜಯ ಜಯ ಶ್ರೀ ನರಕೇಸರಿ ಜಯ ಜಯ ಲೋಕೋಪಕಾರಿ ಜಯಜಯ ದೈತೇಯ ವೈರಿ ಜಯ ಜಯ ನೃಹರೀ ಪ ಜಯ ಜಯ ಜಯತು ಹರಿಶೌರೀ ಜಯ ಜಯ ಜಯತು ಚಕ್ರಧಾರಿ ಕಶಿಪು ಸಂಹಾರಿ ಜಯ ಕಾರುಣ್ಯ ಲಹರೀ ಅ.ಪ ಯಾದವಾದ್ರಿ ನಿಲಯ ನೃಹರೀ ಖಾದ್ರಿನಗರವಾಸ ನೃಹರೀ ವೇದರೂಪ ನೃಹರೀ ಸಾವ ನಾದುರ್ಗವಾಸ ಧೀರ ನೃಹರೀ 1 ಭಾನುಕೋಟಿ ತೇಜ ನೃಹರೀ ದೀನ ಭಕ್ತಪಾಲ ನೃಹರೀ ದಾನವಾರಿ ಯೋಗ ನೃಹರೀ [ಗಾನಲೋಲ ಹಂಪೀ ನೃಹರೀ] 2 ಸ್ಥಂಭಜಾತ ನಾರಸಿಂಹ [ಕನ್ನ ಡಾಂಬೆಯೂರೂರನಾರಸಿಂಹ ತುಂಬುರನುತ ನಾರಸಿಂಹ] ಶಂಭುವಿನುತ ನಾರಸಿಂಹ 3 ಶೀಬಿನಗರ ನಾರಸಿಂಹ ನಾಭಿಕಮಲ ನಾರಸಿಂಹ ಅಭಯಂಕರ ನಾರಸಿಂಹ ಪ್ರಭುಮಾಂಗಿರಿ ನಾರಸಿಂಹ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಾನವಕುಲ ದಮನಾ ಕೇಶವ ದೀನಪಾಲ ಗಾನಲೋಲ ಶ್ರೀಜನಾರ್ದನ ಪ ವಾನರಪತಿಸದನಾ ಸನಕಾದಿ ಸೇವಿತ [ದೀನ] ಶರಣ್ಯ ಸಾರಸಾಕ್ಷ ಲೋಕ ಮೋಹನ ಅ.ಪ ಶ್ರೀ ರಮಣೀ ಸೇವಿತ ಚರಣಾಬ್ಜ ವಾರಿಧಿ ಶಯನಾ ನಾರದನುತ ಚರಣಾ | ಸುರರಾಜ ಪೂಜಿತ ನೀರಜಾಕ್ಷ ಮಾಂಗಿರೀಶ ವಾರಿಜಾಸನಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದೀನ ಪಾಲನೆ ಗಾನಲೋಲನೆ ಸುಜನ ಪ್ರಿಯನೇ ಪ ಈ ನರಜನ್ಮದ ಕಾನನದಲಿ ಬಲು ದೀನನಾಗಿ ಗುಣಗಾನ ಮಾಡುವೆನೊ ಅ.ಪ ದುಷ್ಟಭೋಗಗಳನುಭವಿಸುತ ಸದಾ ಭ್ರಷ್ಟನಾದೆ ನಾನು ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ 1 ಜಪವ ಮಾಡಲಿಲ್ಲ ತಪವ ಮಾಡಲಿಲ್ಲ ಉಪವಾಸವ ಕಾಣೆ ತಪಿಸುತಿರುವೆ ಎನ್ನ ಅಪರಾಧಗಳಿಗೆ ಕುಪಿತನಾಗದಿರೊ ದ್ವಿಪ್ರವರ ವರದ 2 ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ ದುರ್ಮಾರ್ಗದಲಿ ಬಲು ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು ಬೊಮ್ಮ ಜನಕ ಸುಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ದೀನಶರಣ ಮಾಮನೋಹರಾ ಕೃಪಾಪೂರಾ ಪ ಗಾನಲೋಲ ತರಣಿರುಚಿರ ನೀಲಗಾತ್ರ ಅ.ಪ ನೀರಜಾಕ್ಷ ನೀರಜಭವ ನಾರದಾದಿನುತಚರಣಾ ಚಾರುಚರಿತಾ ನಿಗಮವಿದಿತಾ | ವಾರಣೀಶನಮಿತಾ 1 ಸುಗುಣ ಭರಿತ ಮಾಂಗಿರೀಶ ಪಾರ್ಥಸೂತ್ರ [ಅಗಣಿತಗುಣಚರಿತ ಕಾಯೋ ನಾ ಶರಣಾಗತ] 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವ ದೇವ ದೇವ ದಿವಿಜರೊಡಿಯನೆ ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ಪ ನಂದಗೋಪಿಯ ಕಂದನಾದ ಸುಂದರಾಂಗನೆ ಸಿಂಧುಶಯನ ಮಂದರಧರ ಇಂದಿರೇಶನೆ ಎಂದು ನಿನ್ನ ಪೊಂದಿದವರನಂದ ಪೊರೆವನೆ 1 ಹೆಂಗಳೆರ ಸಂಗವುಳ್ಳ ಮಂಗಳಾಂಗನೆ ಶೃಂಗಾರಾಂಗ ರಮಾಸಂಗವುಳ್ಳ ರಂಗನೆ ಗಂಗಾಜನಕ ನೀರಜಾಂಬಕ ಗಾನಲೋಲನೆ ಮಂಗಳಕರದಿಂದ ಲಭಯಂಗಳೀವನೆ 2 ರನ್ನೆ ಸೀತೆಯನ್ನು ವೈದವನ್ನ ತರಿದನೆ ನಿನ್ನವರಿವರೆನ್ನುವವರನ್ನು ಕಾಯ್ವನೆ ಪನ್ನಗಶಯನನಾದ ಚೆನ್ನ ನೀವನೆ ಘನ್ನ ' ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ 3
--------------
ಹೆನ್ನೆರಂಗದಾಸರು