ಒಟ್ಟು 18 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಹ್ಲಾದ ವರದ ಭಯಗಜಕೆ ಸಿಂಹಪರಮಆಹ್ಲಾದಪದವಿತ್ತು ಪೊರೆಯೊ ನರಸಿಂಹÀ ಪ.ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದನೊಂದವನ ಬಾಧೆಯಲಿ ಮರಳಿ ಮರಳಿಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿಬಂದವನುರವ ಬಗಿದು ರುಧಿರವನು ಸವಿದೆ 1ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿದಶರಂಬರದಿ ಪೂಮಳೆಗರೆಯಲುಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ 2ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯನಳಿನಾಕ್ಷ ನಿಮ್ಮ ಗುರುತವ ಕಾಣದೆಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ 3
--------------
ಪ್ರಸನ್ನವೆಂಕಟದಾಸರು
ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ಶರಣು ಶರಣು ಶರಣ್ಯವಂದಿತ ಶಂಖಚಕ್ರಗದಾಧರ |ಶರಣು ಸರ್ವೇಶ್ವರ ಅಹೋಬಲ ಶರಣ ಸಲಹೋ ನರಹರಿ ಪ.ಶೀಲದಲಿ ಶಿಶು ನಿನ್ನ ನೆನೆಯಲುಕಾಲಲೋತ್ತುತ ಖಳರನು |ಲೀಲೆಯಿಂದಲಿ ಚಿಟಿಲು ಭುಗಿಭುಗಿ -ಲೆನುತ ಉಕ್ಕಿನ ಕಂಬದಿ ||ಖೂಳದೈತ್ಯನ ತೋಳಿನಿಂದಲಿ ಸೀಳಿಹೊಟ್ಟೆಯ ಕರುಳನು ||ಮಾಲೆಯನು ಕೊರಳೊಳಗೆ ಧರಿಸಿದಜ್ವಾಲನರಸಿಂಹಮೂರ್ತಿಗೆ 1ಖಳಖಳಾ ಖಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ||ಜಲಧಿ ಗುಳಗುಳನೆದ್ದು ಉಕ್ಕಲು ಜ್ವಲಿತ ಕುಲಗಿರಿ ಉರುಳಲು ||ನೆಲನು ಬಳಬಳನೆಂದು ಬಿರಿಯಲು ಕೆಳಗೆ ದಿಗ್ಗಜ ನಡುಗಲು ||ಥಳ ಥಳಾ ಥಳ ಹೊಳೆವ ಮಿಂಚಿನೊಲ್ಹೊಳೆವ ನರಸಿಂಹ ಮೂರ್ತಿಗೆ 2ಕೋರೆ ಕೆಂಜೆಡೆ ಕಣ್ಣು ಕಿವಿ ತೆರೆ -ಬಾಯಿ ಮೂಗಿನ ಶ್ವಾಸದಿ||ಮೇರುಗಿರಿ ಮಿಗಿಮಿಗಿಲು ಮಿಕ್ಕುವ ತೋರ ಕಿಡಿಗಳ ಸೂಸುತ ||ಸಾರಿಸಾರಿಗೆ ಹೃದಯರಕುತವ ಸೂರೆ ಸುರಿಸುರಿದೆರಗುತಘೋರರೂಪಗಳಿಂದ ಮೆರೆಯುವ ಧೀರ ನರಹರಿಮೂರ್ತಿಗೆ3ಹರನು ವಾರಿಜಭವನು ಕರಗಳ ಮುಗಿದು ಜಯಜಯವೆನುತಿರೆ ||ತರಳ ಪ್ರಹ್ಲಾದನಿಗೆ ತಮ್ಮಯ ಶರಿರಬಾಧೆಯ ಪೇಳಲು ||ಕರುಣಿ ಎನ್ನನು ಕರುಣಿಸೆನ್ನಲು ತ್ವರದಲಭಯವನೀಡುತ ||ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತ ನರಹರಿಮೂರ್ತಿಗೆ4ವರವ ಬೇಡಿ ದನಿರುವ ತಂದೆಯ ಪರಿಯನೆಲ್ಲವ ಬಣ್ಣಿಸಿ ||ನಿರುತದಲಿ ನಿನ್ನೆರಡು ತೊಡೆಯಲಿ ಶರೀರವಿರಲೆಂದೆನುತಲಿ ||ಸುರರು ಪುಷ್ಪದ ವೃಷ್ಟಿಗರೆಯಲು ಸರಸಿಜಾಕ್ಷನು ಶಾಂತದಿ ||ಸಿರಿಯ ಸುಖವನು ಮರೆದಹೋಬಲವರದ ಪುರಂದರವಿಠಲಗೆ 5
--------------
ಪುರಂದರದಾಸರು