ಒಟ್ಟು 21 ಕಡೆಗಳಲ್ಲಿ , 12 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ ಹೇಗೆ ಕಳಿಲಿ ಭವಸಾಗರದಲಿ ಮನ ನೀಗದು ಚಂಚಲ ಸಾಗರನಿಲಯ ಅ.ಪ ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು 1 ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ ಜನರ ಸೇವೆಯೊಳು ದಣಿಸಿತು ಪಾಪಿ 2 ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ ತನುಮನಧನ ನಿನಗರ್ಪಿಸಿ ಬೇಡುವೆ ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ 3
--------------
ರಾಮದಾಸರು
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು
ಹ್ಯಾಗೆ ಕಾಂಬೆ ನಿನ್ನ ಪಾದವ ಶ್ರೀನಿವಾಸ ಯೋಗಿ ಗಮ್ಯ ರೂಪ ಮಾಧವಾ ರಾಗ ರೋಗ ಸಾಗರಸ್ತನಾಗಿ ಮುಳುಗಿ ಬಾಯ ಬಿಡುವೆ ನಾಗರಾಜಗೊಲಿದ ತೆರದಿ ಬೇಗಲೊದಗಿ ಬಂದು ಕಾಯೊ ಪ. ಮನಸು ಎನ್ನ ವಶಕೆ ಬಾರದೆ ಭಕ್ತಿ ಸಾ- ಧನಗಳೆನಗೆ ಸೇರಿ ಬಾಹದೆ ನೆನಸಿಕೊಳುವ ಕಾರ್ಯ ದೊರೆಯದೆ ಸರ್ವಕಾಲ ತನುವ ಕೆಡಿಸಿ ವ್ಯರ್ಥಮಾಡಿದೆ ಕನಲಿ ಕೂಗುತಿರುವ ಶಿಶುವ ಜನನಿ ಕರದೊಳೆತ್ತುವಂತೆ ಮೂರ್ತಿ ದೋರೊ 1 ಕಲಿಯ ಬಾಧೆಯಿಂದ ನೊಂದೆನು ಮಲಿನ ಮೋಹದೊಳಗೆ ನಿಂದೆನು ತ್ಯಾಜ್ಯವಾದ ಫಲಗಳೆಲ್ಲ ತಂದು ತಿಂದೆನು ಗಾಳಿಗೆ ಸಿಲುಕಿದೆಲೆಯ ತೆರದಿ ಹೊರಲುಗಾಣೆನೀ ದೇಹ ಪಾದ ನೆಳಲ ಬಯಸಿ ಬೇಡಿಕೊಳುವೆ 2 ಗಣನೆಯಿಲ್ಲವಾದ ಮರಗಳು ಇರಲು ಪುರು ತನುವಿನಂತೆ ಮುಖ್ಯವಾವದು ಅನುಭವಾತ್ಮ ಸುಖವನೀವದು ಆದರೇನು ಕನಸಿನಂತೆ ಕಾತಿರುವುದು ಪಾದ ವನಜಯುಗವನಿತ್ತು ಎನ್ನ ಮನದೊಳದಯವಾಗು ಮಾರಜನಕ ಮೂಡಲದ್ರಿವಾಸ3
--------------
ತುಪಾಕಿ ವೆಂಕಟರಮಣಾಚಾರ್ಯ
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ
ಮರತೆ ನೀ ಕಂಡ್ಯ ಮನವೇ ಎಚ್ಚರವುಗುರುವರನ ನೆನೆಯೋ ನೀನುಅರಿತು ಸರ್ವಸರ್ವರಲ್ಲಿ ಆತ ತಾನಿಹನೆಂದುಹಿಂದು ನೆಲೆಗೊಳಿಸು ಬೇಗಪಅಣುಮಹತ್ತಾದನೆಂದುಅನಂತ ಗುಣಗಣನೆಯಾದನೆಂದುಎಣಿಸೆ ಏಕ ದೇವಾದವನಕುಣಿಕುಣಿದು ನೆನೆದು ಆಡುವಾಡು1ಆವಾವಸ್ಥೆಯ ತೋರ್ಪಅವನೆಲ್ಲ ತೀವಿಹನು ಪೂರ್ಣನಾಗಿದೇವದೇವಾದವನ ಧೈರ್ಯದಿಂ ಹೃದಯದಲಿಸಾವಧಾನದಲಿ ನಿಲಿಸು ಬಲಿಸು2ನಿರುಪಮ ನಿರಾಶಾಪರ ನಾನಿಶ್ಚಿಂತ ನಿರುತ ನಿರ್ಲೇಪನಾಪರಮಪಾವನಮೂರ್ತಿಪದ್ಮಾವತಿ ಶತಕೋಟಿವರಚಿದಾನಂದ ಗುರುವಾ ಸ್ಥಿರವಾ3
--------------
ಚಿದಾನಂದ ಅವಧೂತರು