ಒಟ್ಟು 75 ಕಡೆಗಳಲ್ಲಿ , 31 ದಾಸರು , 72 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ಪ ತುಂಬಿ ಭಾನು ಪ್ರಭೆ ಚಂದಮಾಮಅ ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ 1 ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ 2 ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ 3 ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ 4 ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ 5 ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ 6 ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮಸುಲಭ ಪದವಿದು ನಳಿನಜಾಂಡದೊಳು ಚಂದಮಾಮ 7 ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ 8 ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ 9
--------------
ಕನಕದಾಸ
ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ ಇಂದು ನಾನು ಬಂದೆ ದ್ರೌಪದಿ ಬಂದು ಬಾಗಿಲನ್ಹಾಕುವೋದು ಚೆಂದವೇನೆ ಚಂದ್ರಮುಖಿಯೆ ಬಂದು ಬಾಗಿಲು ತೆಗೆಯೆ ನೀನು 1 ಅಂಧಕಾರ ರಾತ್ರಿಯಲಿ ಬಂದವರ್ಯಾರೆಂದು ಅರಿಯೆ ನಿಂದು ಗುರುತೇನೆಂದು ಪೇಳಲು ಬಂದು ಬಾಗಿಲು ತೆಗೆವೆ ನಾನು 2 ಕಂಡರಿಯೆ ಎನ್ನ ಪರಾಕ್ರಮ ಖಾಂಡವವನವ ದಹಿಸಿದೆನೆ ಗಾಂಡೀವಾರ್ಜುನರಾಯ ನಾನು 3 ಗಾಂಡೀವಾರ್ಜುನರಾಯನಾದರೆ ದುಂಡು ಬಳೆ ಕಂಕಣಗಳಿಟ್ಟು ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ ಷÀಂಡರೂಪವ ಧರಿಸ್ಹೋಗೊ 4 ಕ್ಷೀರಸಾಗರದಲ್ಲೆ ತಾ ಮಂ- ದರ ಪೊತ್ತಮೃತವನೆ ತಂದ ಧೀರ ಕೂರ್ಮಗೆ ಮೈದುನಾದಂಥ ಶೂರ ಫಲ್ಗುಣರಾಯ ನಾನೆ 5 ಫಲ್ಗುಣರಾಯನಾದರೇನೊ ಸದ್ಗುಣ ಸಂಪನ್ನ ಬಿರುದು ಭದ್ರದೇವಿಯ ಕದ್ದು ತರುವಾಗ ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6 ಪರಮೇಶ್ವರನ ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದೆ ನಾನು ಪರಮ ಆಪ್ತ ವರಾಹನ ಕರುಣಕ್ಕೆ ಪಾತ್ರನಾದಂಥ ಪಾರ್ಥರಾಯನೆ 7 ಪಾಶುಪತಾಸ್ತ್ರ ಪಡೆದರೇನು ದೇಶ- ದೇಶ್ಯಾತ್ರೆತೀರ್ಥ ಚರಿಸಿ ಆಸೆ ಬಿಡದೆ ಸನ್ಯಾಸಿಯಾದಂಥ ಮೋಸಗಾರನೆ ಮನೆಗೆ ಪೋಗು 8 ಕೋಟಿ ದೈತ್ಯರ ಕೊಂದೆ ಎನ್ನಸರಿ- ಸಾಟಿಯಾರೀ ಲೋಕದೊಳಗೆ ಆ- ರ್ಭಟದವತಾರ ನಾರಸಿಂಹನೆ ನೀಟಾದಭಕ್ತ ಕಿರೀಟಿಯಲ್ಲವೆ 9 ಕೋಟಿ ದೈತ್ಯರ ಕೊಂದು ಜೂಜಿ- ನಾಟ ಸೋತ್ವನ ತೋಟ ತಿರುಗಿ ಪಾಟುಬಟ್ಟು ವಿರಾಟನಲ್ಲೆ ನಾ(ನ?)ಟರಾಟಕೆ ನಿಂತಿರ್ಯಾಕೊ 10 ಮಾತಿಗೆ ಮಾತಾಡೋರೇನೆ ಅ- ಭೂತಳವ ಬೇಡಿದ್ವಾಮನಗೆ ದೂತ ನಾ ಶ್ವೇತೂವಾಹನನೆ 11 ಶ್ವೇತೂವಾಹನ ನಿಮ್ಮ ಸತಿಗೆ ನಾಥರಿದ್ದೂ ಅನಾಥಳಂತೆ ಅ- ಜ್ಞಾತದಲ್ಲಿ ಸುದೇಷ್ಣೆ ಸೇವೆಗೆ ದೂತಿಯಾದ ಪ್ರಖ್ಯಾತಿ ದಾರದೊ 12 ಹೆತ್ತತಾಯಿ ಶಿರವನಳಿದ ಕ್ಷತ್ರೇ- ರಂತಕ ಭಾರ್ಗವಗೆ ನಿತ್ಯದಲಿ ನಿಜಸೇವಕ ಭೀ- ಭತ್ಸುರಾಯ ನಾನಲ್ಲವೇನೆ 13 ಧೀರ ಭೀಭತ್ಸುರಾಯ ನಿನ್ನ ನಾರಿಯ ಸಭೆಗೆಳೆದು ತಂದು ಸೀರೆ ಸೆಳೆವಾಗ ಶೂರರಾದರೆ ದಾರದಾರಂತೆ ನೋಡಿರ್ಯಾಕೊ 14 ಕಾಮ ಮೋಹಗಳಿಂದ ನಿನ್ನಲ್ಲೆ ಪ್ರೇಮದಿ ನಾ ಬಂದೆನೀಗ ರಾಮರಾಜÉ್ಞಗೆ ನಿಜ ಸೇವಕ- ನಾದ ವಿಜಯರಾಯ ನಾನೆ 15 ವಿಜಯರಾಯ ನೀನ್ಹೌದೊ ತೇಜಿದಿ- ಗ್ವಿಜಯಕೆನುತದರ್ಹಿಂದೆ ಪೋಗಿ ಮಗನ ಕೈಯಿಂದ ವಧೆಯು ನೀತವೆ ಮೊದಲೆ ಪರಾಜಿತನಾದಿರ್ಯಾಕೊ 16 ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ ಅಸ್ತ್ರವಿದ್ಯದಲ್ಲಧಿಕನೆಂದು ಕೃಷ್ಣಮೂರುತಿ ಒಲಿಸಿಕೊಂಡಂಥ ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17 ಸಾರಥಿ ಆದ್ದರಿಂದ ಹಸ್ತಿನಾವತಿ ಪಟ್ಟಣಾಳ್ವುದು ಇಷ್ಟು ದಾರ ದಯದಿಂದ್ಹೇಳೊ 18 ಅಂಗನಾಮಣಿ ನಿನ್ನ ಅಂಗ- ಸಂಗ ಬಯಸಿ ನಾ ಬಂದೆನೀಗ ಅಂಗದ್ವಸ್ತ್ರವಬಿಟ್ಟ ಬೌದ್ಧಗೆ ಸಖನು ನಾ ಸವ್ಯಸಾಚಿ ಅಲ್ಲವೆ 19 ಭುಜ ಪರಾಕ್ರಮಿ ಸವ್ಯಸಾಚಿ ನಿನ್ನೆರಡು ಕೈದಡ್ಡಿನ್ಯಾತಕೇಳೊ ದ್ವಿಜರ ಸುತರ ತಂದುಕೊಡದೆ ಮೊದಲೆ ಮಾಡಿದ ಪ್ರತಿಜ್ಞವೇನೊ 20 ಅಂಜೋನಲ್ಲ ನಾನರಿಗಳಿಗೆ ಕಲಿ- ಭಂಜನ ಕಲ್ಕ್ಯಾವತಾರಗೆ ಕಂಜಚರಣಕ್ಕೆ ವಂದಿಸುವೆ ಧ- ನಂಜಯ ನಾನಲ್ಲವೇನೆ 21 ಸೈಯೊ ನೀ ಧನಂಜಯರೇಯ ಸುರಪತಿಗೆ ಪತ್ರವನೆ ಬರೆದು ಶರದ ಪಂಜರ ಕಟ್ಟಿ ನೀ ಕುಂ- ಜರವನಿಳಿಸಿದ ಕಾರಣೇನೊ 22 ನಿನ್ನ ಸರಿ ಮಾತಾಡುವೋರ ಧನ್ಯರ ನಾ ಕಾಣೆನೆಲ್ಲು ಳನ್ನು ಕೇಳಿದಿನ್ಯಾಕೆ ತಡೆವೆ 23 ದಶ ನಾಮಗಳ ಕೇಳಿ ದ್ರೌಪದಿ <ಈಔಓಖಿ ಜಿಚಿ
--------------
ಹರಪನಹಳ್ಳಿಭೀಮವ್ವ
ಕರೆದುಣ್ಣಲಿಲ್ಲಾ ಹರಿನಾಮ ಕಾಮಧೇನುವನು ಪ ಹೊರೆಯಲು ಅನುವಾಗಿ ಬಂದಿರಲು | ಮನುಜ ಮೈ ಮರೆವರೆ ನೀನು 1 ಮನವೆಂಬ ಕರುಬಿಟ್ಟು ಘನ ಭಕ್ತಿ ಮುರವಿಟ್ಟು | ತನುವಿನ ಪಾತ್ರೆಲಿ ನೀನು 2 ಕರುಣದಾ ಕೆಚ್ಚಲು ತೊರೆದು ಭೊರ್ಗರೆಯಲು | ಅರಿವೆಂಬ ಕೈಯಿಂದ ನೀನು 3 ಗುರು ಮಹಿಪತಿಕಂದಗರುಹಿದ ನಿಜಾನಂದ ಸಿರಿಸುಖವ ಪಡೆಯಲು ನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾರು ಯಾರಮನೆಗುಂಟು ಖೋಡಿ ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ ಕಾಯಜನಯ್ಯನ ದಿವ್ಯ ಚರಿತಗಳನ್ನು ಬಾಯಿಂದ ಪೊಗಳುತ ಕೈಯಿಂದ ಬರೆದು ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1 ನಳಿನನಾಭನ ವಿಮಲ ಸುಲಲಿತ ಮಹಿಮೆಗಳ ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2 ಭೂಮಿಯೊಳಧಿಕ ಶ್ರೀರಾಮನ ದಾತೃತ್ವ ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3
--------------
ರಾಮದಾಸರು
ಗಾಯಿತ್ರಿ ಹಿರಿಮೆ ಹತ್ತು ರೂಪದ ಗಾಯಿತ್ರಿ ನಿನಗೆ ರಂಗದ ತಾನ ಹತ್ತು ರೂಪಗಳಲ್ಲಿ ಕುಣಿಯುತಿಹೆ ನೀನು ಹತ್ತು ಸಲವಾದರೂ ಗಾಯಿತ್ರಿ ಜಪಿಸದಿರೆ ನಿನ್ನಲ್ಲಿ ಭೂಸುರತೆ ಉಳಿಯುವದೆಂತು? 89 ತನ್ನಾಮದರ್ಥವೇ ವ್ಯಾಪ್ತಿರೂಪದ ಮೀನು ಅಮೃತಸವನದಕತದಿ ಕೂರ್ಮನಿಹೆ ನೀನು ಭೂವರಾಹನು ನೀನು ವರೇಣ್ಯನಾಮಕನು ಶತ್ರುಭರ್ಜನದಿಂದ ಭರ್ಗನಾಗಿರುವೆ 90 ಪ್ರಾಣವನು ಮೇಲೆತ್ತಿ ಅಪಾನವನು ಕೆಳಗಿರಿಸಿ ಮಧ್ಯದಲಿ ವಾಮನನು ದೇವ ನೀನಿರುವೆ&ಚಿmಠಿ;ಟಿ, bsಠಿ;91 ಮಹಿಯ ಭಾರವ ತೆಗೆದ ಪರಶುರಾಮನು ನೀನು ಪ್ರಾಣನ ಪ್ರೀತಿಕರ ರಾಮ ನೀನಿರುವೆ 92 ಕಲಿಯುಗದ ದೇವನೇ ಜ್ಞಾನರೂಪದ ಕೃಷ್ಣ ಬುದ್ಧ ನೀನಿರುವೆ ಧರ್ಮ ಪ್ರಸಾರಣಕೆ ಹಯವನ್ನು ಚೋದಿಸುವ ಕಲ್ಕಿನಾಮಕ ನೀನು ತಿಳಿದು ಜಪ ಮಾಡು 93 ಗಾಯನದಿ ರಕ್ಷಿಸುವೆ ಗಾಯಿತ್ರಿಯೇ ನಮಗೆ ಬ್ರಾಹ್ಮತೇಜವನುಳಿಸಿ ರಕ್ಷಿಪುದು ನಮ್ಮ ಗಾಧಿಪುತ್ರನು ತಾನು ಕ್ಷತ್ರಿಯನದಾದರೂ ಬ್ರಹ್ಮರ್ಷಿಯಾಗಿ ಬಾಳಿದನು ನಿಜವೈ 94 ಸಿರಿವರನೆ ನೀನು ಭಾಸ್ಕರನ ಮಂಡಲದಲ್ಲಿ ಕಮಲದಾಸನದಲ್ಲಿ ಶೋಭಿಸುತಲಿರುವೆ ಚಕ್ರ ಶಂಖ ಮಕರಕುಂಡಲಾದಿಗಳಿಂದ ಲೆನ್ನ ಹೃದಯಕೈತಂದು ನೆಲೆನಿಲ್ಲು 95 ನಿನ್ನ ಸೌವರ್ಣ ತೇಜದ ಬೆಳಕಿನಿಂದೆನ್ನ ಆತ್ಮದ ಜ್ಯೋತಿಯನು ಬೆಳಗಿಸುತ ನೀನು ನಿನ್ನನ್ನೆ ಹಂಬಲಿಪ ಭವಬಂಧ ತಪ್ಪಿಸುವ ನಿನ್ನ ಬಳಿಬರುವ ದಾರಿಯನು ತೋರಿಸೆಲಾ 96 ಗಾಯಿತ್ರಿಯ ಜ್ಯೋತಿ ನಂದದಂತಿರಲು ನಾನಷ್ಟಾಕ್ಷರಿಯ ಮಂತ್ರ ಜಪಿಸುವೆನು ನಾನು ವಿದ್ಯುತ್ತಿನದು ರಕ್ಷೆ ನಾರಾಯಣನ ಮಂತ್ರ ಅದರಿಂದ ರಕ್ಷಣೆಯ ಮಾಡುವೆನು ನಾನು 97 ಆತ್ಮರಕ್ಷಕನು ಹರಿ ದೇಹರಕ್ಷಕನು ಹರ ಹರನ ದೇಹವು ಪ್ರಕೃತಿಪಂಚಕದಿ ರಚಿತ ಆತ್ಮದಲ್ಲಿರುವಹಂಕೃತಿಗೊಡೆಯ ಹರ ಹರಿಹರರೇ ದೇಹಾತ್ಮ ರಕ್ಷಣೆಯ ಮಾಡಿ98 ವಿದ್ಯುತ್ತು ಬಿಳಿ ಕಪ್ಪು ಕೆಂಪು ನೀಲಿಗಳೆಂಬ ಐದು ಮುಖ ಹರನಿಗಿಹುದದರಿಂದ ನಾನು ಪಂಚಾಕ್ಷರಿಯ ಮಾಡಿ ಹರನನ್ನು ಧ್ಯಾನಿಸುವೆ ಧರ್ಮಾಯತನದ ದೇಹ ರಕ್ಷಣೆಯ ಮಾಳ್ಪೆ 99 ವೈರಿ ಮನದಲ್ಲೆ ಹುಟ್ಟಿದವ ಮನದೊಡೆಯ ರುದ್ರನನ್ನೇ ಹೊಡೆಯಲೆಂದು ಐದು ಬಯಕೆಗಳೆಂಬ ಬಾಣದಿಂ ಹೊಡೆಯುತಿರೆ ಕಾಮದಹನವ ಹೊಂದಿ ಬೂದಿಯಾದನವ 100 ಆ ಕಾಮನೇ ಮತ್ತೆ ಅಂಗಹೀನನದಾಗಿ ರುದ್ರನನ್ನರ್ಧನಾರೀಶ್ವರನ ಮಾಡಿ ಮನವನ್ನು ಕೆಡಿಸುತಲಿ ಮಾನವರೆಲ್ಲರನು ದುಃಖದಾ ಮಡುವಿನಲಿ ಕೆಡಹುವನು ನಿಜದಿ 101 ದೇಹಸೃಷ್ಟಿಗೆ ಮೂಲ ಮಣ್ಣು ತೇಜವು ನೀರು ಈ ಮೂರು ಮೂರುವಿಧವಾಗಿ ಪರಿಣಮಿಸಿ ಪಾಲನೆಯು ನಡೆಯುವದು ದೇವರಿಂದಲೇ ಇದನು ಉಪನಿಷತಿನಾಧಾರದಿಂದ ಪೇಳುವೆನು 102 ಭಕ್ಷ್ಯಭೋಜ್ಯವು ಲೇಹ್ಯ ಪೇಯವೆಂಬೀ ನಾಲ್ಕು ಪ್ರಾಣದಾಹುತಿಯನ್ನು ನಾವು ಕೊಡುತಿಹೆವು ಅದರಿಂದ ಪಾಕವನು ಮಾಡುತ್ತ ದೇವನವ ಸಪ್ತಧಾತುಗಳನ್ನು ಮಾಡಿ ರಕ್ಷಿಸುವ 103 ತೇಜವದು ವಾಗ್ರೂಪ ತಾಳುವದು ಮತ್ತದುವೆ ಅಸ್ಥಿಮಜ್ಜಗಳಾಗುವವು ನಿಜವ ಪೇಳ್ವೆ ವೈದ್ಯಕೀಯಪರೀಕ್ಷೆಗೊಳಗಾಗಿ ತಿಳಿವೆ ನೀನ್ ಶ್ರುತಿತತ್ವವೆಂದೆಂದು ಸಾರುತಿಹುದಿದನೆ 104 ಮಣ್ಣಿನನ್ನವೆ ಮೊದಲು ಮನವಾಗಿ ಮತ್ತದುವೆ ಮಾಂಸ ರೂಪವ ತಾಳಿ ಮಲವದಾಗುವುದು ನೀರೆ ಮುಖ್ಯ ಪ್ರಾಣ ಮತ್ತೆ ಶೋಣಿತವಾಗಿ ಮೂತ್ರರೂಪವ ತಾಳಿ ಹೊರಗೆ ಹೋಗುವುದು 105 ಸ್ವೇದಜೋದ್ಭಿಜ್ಜ ಮತ್ತಂಡಜ ಜರಾಯುಜಂಗಳು ಎಂಬ ನಾಲ್ಕು ವಿಧ ಜೀವಜಂತುಗಳು ನಾರಾಯಣನು ತಾನು ಜಲವಾಸಿಯಾಗುತಲಿ ಜೀವಜಂತುಗಳನ್ನು ಸೃಷ್ಟಿ ಮಾಡುವನು 106 ನಿನ್ನ ಗುಣದೋಷಗಳ ಪರರೆಂಬ ದರ್ಪಣದಿ ನೋಡಿದರೆ ತೋರುವವು ನಿನ್ನವೇ ತಿಳಿಯೈ ಪರರಲ್ಲಿ ಕಾಣುತಿಹ ದೋಷಗಳನು ತೊರೆಯುತ್ತ ಗುಣಗಳನು ಎಣಿಸುವವ ಲೋಕಮಾನ್ಯ 107 ಊಧ್ರ್ವಮೂಲದ ದೇವನೂಧ್ರ್ವದ ಹಿಮಾಲಯದೊ ಳುತ್ತುಂಗ ನಾರಾಯಣಪರ್ವತದಲಿ ತಾರಕನು ರಾಮನಂತೆಲ್ಲ ನರರನು ತನ್ನ ಬಳಿಗೆ ಕರೆದೊಯ್ಯಲ್ಕೆ ಮೇಲೆ ನಿಂತಿರುವ 108 ಮಧ್ವಗುರುಹೃದಯಭಾಸ್ಕರನು ನಾರಾಯಣನು ಬದರಿಯೊಳಿಹ ನೆಲೆಗೆ ಕರೆಯಿಸುತಲೆಮ್ಮನ್ನು ಸೇವೆಯನು ಕೈಕೊಂಡು ಭಾವಗತನಾಗಿದ್ದು ಪ್ರೇರಿಸಿದನೀಕೃತಿಗೆ ಪ್ರಕೃತಿ ಪರಮಾತ್ಮ&ಚಿmಠಿ;ಟಿbs, ಠಿ; 109 ಆತ್ಮದಲಿ ಒಳಗಿದ್ದು ಅಂತರಾತ್ಮನು ನೀನು ಆತ್ಮದ ಬಹಿರ್ಗತನು ಪರಮಾತ್ಮ ನೀನು ದೇಹದಿಂ ಹೊರಗಿದ್ದು ಕಾಲಾತ್ಮಕನು ನೀನು ನೀನಿಲ್ಲದಿಹ ದೇಶಕಾಲವೆಲ್ಲಿಹುದು? 110 ಮೂರು ನಾಮಗಳಿಹವು ಶ್ರೀನಿವಾಸನೆ ನಿನಗೆ ಅವುಗಳನು ನೆನೆದರೇ ಪಾಪ ಪರಿಹಾರ ಅಚ್ಯುತಾನಂತಗೋವಿಂದನೆನ್ನುವ ನಾಮ ಕೃತದೋಷ ಪರಿಹಾರಕಾಗಿ ಜಪಮಾಳ್ಪೆ 111 ಮಧುರಾಖ್ಯನಾಮವನು ಹಿಂದು ಮುಂದಾಗಿಸುತ ಮಧ್ಯದಕ್ಷರವನ್ನು ಕೈಯಲ್ಲಿಯಿರಿಸು ನಾಮಜಪ ಮಾಡದಿರೆ ಅವನ ಮುಖಕೆಸೆದು ನೀ ನನವರತ ಜಪಮಾಡಿ ಸಿದ್ಧಿಪಡೆ ಮನುಜಾ 112 ಅಣುವಿಂದ ಅಣುವಾಗಿ ಮಹದಿಂದ ಮಹತ್ತಾಗಿ ನಿನ್ನ ದರುಶನವು ಜನರಾರಿಗೂ ಇಲ್ಲ ಮಧ್ಯಕಾಲದಿ ಮಾತ್ರ ದರುಶನವು ವಸ್ತುವಿಗೆ ಅವತಾರ ರೂಪಗಳೆ ಪೂಜಾರ್ಹವಿಹವು 113 ಎಲ್ಲರೂ ಶ್ರೀಹರಿಯ ನೆಲೆಯೆಂದು ನೀನರಿತು ಮಮತೆಯಿಂ ನೋಡುತಲಿ ಸುಖವನನುಭವಿಸು ಹೊಲೆಯನಾದರು ನಿನ್ನ ನಂಬಿ ಮರೆಹೊಕ್ಕಿದರೆ ಕೈಬಿಡದೆ ನೀನವನ ರಕ್ಷಿಸಲೆ ಮನುಜಾ 114 ಹಲವಾರು ಜಾತಿಗಳು ಹಲವಾರು ಮತಗಳಿಹ ವವುಗಳಿಗೆ ಮೂಲಮತ ವೇದಮತವೊಂದೆ ಬೈಬಲ್ ಖುರಾನ್ ಮೊದಲಾದ ಪೆಸರಿಂದದುವೆ ಲೋಕದಲ್ಲೆಲ್ಲು ಪಸರಿಸುತಲಿಹವು 115 ಭವಬಂಧನವ ಕಳೆದು ತನ್ನ ಬಳಿಗೊಯ್ಯುವವ ನೀನಲ್ಲದಿನ್ನಾರು ಹರಿಯೆ ಶ್ರೀರಾಮ ಸಾಂತಾನಿಕದ ಲೋಕಕೊಟ್ಟು ರಕ್ಷಿಸಿದ ಹರಿ ತಾರಕನು ನೀನಿರುವೆ ನೀನೆ ಗತಿ ದೊರೆಯೆನಗೆ 116 ಪರಶುರಾಮನ ರೂಪದಿಂದ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದಿ ನೀನು ಅವನ ಹೃದಯವ ಹೊಕ್ಕು ಮಧ್ವಮತವನು ಜಗದಿ ದೇವ ಪಸರಿಸಿದೆ 117 ಮಿನುಗು ಹುಳಗಳ ಸೃಜಿಸಿ ಬೆಳಕನದರಲ್ಲಿರಿಸಿ ಕಗ್ಗತ್ತಲೆಯ ಕಾಡುಗಳಲಿ ರಕ್ಷಿಸುವೆಯೊ ಅಂತೆಯೇ ನಮ್ಮ ದೇಹದೊಳಗಿದ್ದು ನೀನ್ ಪ್ರತಿಬಿಂಬ ಜೀವವನು ರಕ್ಷಿಸುವೆ ದೇವಾ 118 ಪರಶುರಾಮನು ರಾಮ ಪರಶುರಾಮನು ಕೃಷ್ಣ ನರನು ನಾರಾಯಣನು ವ್ಯಾಸ ಮೊದಲಾಗಿ ಒಂದಾಗಿ ಬೇರೆಯಾಗಿಯೆ ರೂಪ ತಾಳುತ್ತ ಭಕ್ತರಕ್ಷಕನಾಗಿ ದುಷ್ಟವಂಚಕನು 119 ಇಂದ್ರಿಯಂಗಳ ಹೊರಮುಖವಾಗಿ ಸೃಷ್ಟಿಸಿದೆ ಹೃದಯಗುಹೆಯಲ್ಲಿರುವೆ ಕಾಣುವುದದೆಂತು? ಮನದಬಾಗಿಲ ತೆರೆದು ಅಂತರ್ಮುಖದಿ ನೋಡೆ ಪ್ರತ್ಯಗಾತ್ಮನು ನೀನು ಕಾಣುವದು ನಿಜವು 120 ಕುರುಡನಾಗಿಹೆ ನಾನು ಕುರುಡು ಇಂದ್ರಿಯಂಗಳಿಂ ತೋರುಬೆರಳಿಂದ ತೋರಿಸಲು ಬಯಸಿದೆನು ನನಗೆ ಅಂಜನಹಾಕಿ ತೋರು ನಿನ್ನ ಜ್ಯೋತಿ ವಿಶ್ವತಶ್ಚಕ್ಷು ಪರಮಾತ್ಮ ಶರಣೆಂಬೆ 121 ಕೋಟಿ ಗೋದಾನಕ್ಕೂ ಮಿಗಿಲಾಗಿ ಪುಣ್ಯಕರ ನಿನ್ನ ನಾಮದ ಜಪವು ತಾರಕನು ನೀನು ತಿಳಿದ ಗುಣಸಾಗರದ ಹನಿಗಳನು ಹೆಕ್ಕಿ ನಾನ್ ನುತಿಸಿದೆನು ನಿನ್ನನ್ನು ಮುಕ್ತಿದಾಯಕನೆ 122 ಸುಗುಣೇಂದ್ರ ಮೊದಲಾದ ಯತಿವರರ ಪೂಜೆಯಿಂ ಜ್ಞಾನರೂಪದ ನೀನು ಸಂತಸವ ತಾಳಿ ಜ್ಞಾನಭಂಡಾರಿ ಯತಿವರರಿಗೆಲ್ಲರ್ಗೆ ಜ್ಞಾನಾಮೃತವ ಕೊಟ್ಟು ರಕ್ಷಿಸುವೆ ಹರಿಯೇ 123 ಭವದಿ ಬಂಧಿಸಿಯೆನ್ನ ಭಾವಗತನಾಗಿದ್ದು ದುಷ್ಕರ್ಮ ಮಾಡಿಸುತ ಫಲ ಕೊಡುವದೇಕೆ? ಎನ್ನ ಕೈಯಿಂದೆತ್ತಿ ಬಳಿಗೆ ಕರೆದೊಯ್ಯು 124 ಉಚ್ಛ್ವಾಸ ನಿಶ್ವಾಸ ರೂಪದಿಂದೊಳಹೊಕ್ಕು ಆತ್ಮ ಸಂದರ್ಶನವ ಮಾಡುತ್ತ ವಾಯು ಇಪ್ಪತ್ತಒಂದುಸಾಸಿರ ಮತ್ತೆ ಆರ್ನೂರು ಹಂಸಮಂತ್ರದ ಜಪವ ಮಾಡುವನು ದಿನಕೆ 125 ಪರಶುರಾಮನು ರಾಜರೆಲ್ಲರನು ಸಂಹರಿಸಿ ಭೂಮಿಯನು ನಕ್ಷತ್ರಮಂಡಲವ ಮಾಡಿ ವಿಶ್ವಜಿತ್‍ಯಾಗದಲಿ ಕಶ್ಯಪರಿಗೀಯಲದ ಕಾಶ್ಯಪಿಯ ನಾಮವನು ಭೂಮಿ ಪಡೆಯಿತಲಾ 126 ಕಶ್ಯಪರ ತಪದಿಂದ ರಾಜರಿಲ್ಲದ ಭೂಮಿ ಭಾರದಿಂ ಕೆಳಗಿಳಿಯೆ ಊರುವಿಂದೆತ್ತಿ ಅವಳ ಮೊರೆ ಕೇಳಿ ರಾಜವಂಶವನ್ನುದ್ಧರಿಸೆ ಉರ್ವಿನಾಮವ ಪಡೆಯಿತು ಭೂಮಿ ನಿಜವು 127 ವ್ಯಾಸಪುತ್ರನದಾಗಿ ವ್ಯಾಸಪಿತ ನಾನಾಗಿ ವ್ಯಾಸಭವನದ ಒಳಗೆ ಭದ್ರನಾಗಿದ್ದೆ ಈ ಭವನದಿಂದೆನ್ನ ನಿನ್ನ ಭವನಕೆ ಒಯ್ಯು ಅಮೃತಲೋಕದಿ ನಿನ್ನ ಸೇ, ವೆ ಗೈಯ್ಯುವೆನು 128 ರಾಧಿಕಾರಮಣನೆ ಮಧುರಾಪುರಾಧಿಪತಿ ದಾನವಾಂತಕ ಕೃಷ್ಣ ಸತ್ಯಸ್ವರೂಪ ವಿಶ್ವಜ್ಞ ಪೂಜಿತನೆ ರಕ್ಷಿಸೆನ್ನನು ಹರಿಯೇ ಚಿತ್ತದಲಿ ನೆಲೆನಿಲ್ಲು ತಂದೆ ಕಾಪಾಡು 129 ಇಂದ್ರಾಣಿ ತಪಗೈದ ತಾನದಲಿ ಚ್ಯವನಮುನಿ ವೇದಾದ್ರಿ ಎಂಬಲ್ಲಿ ತಪಗೈಯುತ್ತಿದ್ದ ಸ್ವರ್ಣವರ್ಣವನ್ನಿತ್ತು ಕಣ್ಣಿತ್ತ ಸ್ವರ್ಣನದಿ ಹರಿಯುತಿಹುದಿಲ್ಲಿಯೇ ಈಗಲೂ ನಿಜವು 130 ಪ್ರಕೃತಿ ಪ್ರಕೃತಿಯ ಭೇದ ಪ್ರಕೃತಿ ಜೀವದ ಭೇದ ಜೀವ ಜೀವಗಳ ಭೇದ ಮೂರನೇಯದು ಜೀವೇಶ ಭೇದವದು ಪ್ರಕೃತೀಶ ಭೇದವೆಂ ದಿಹವು ಪ್ರಪಂಚದಲಿ ಪಂಚಭೇದಗಳು 131
--------------
ನಿಡಂಬೂರು ರಾಮದಾಸ
ಗುಡಿಯ ತುಂಬ ದೇವರ ಕಂಡೆ | ಅಡಿಯಿಡಗೊಡದೆನ್ನ ಹಿಡಿಕೊಂಡಿತಕ್ಕ ಪ ಕೈಯಿಲ್ಲ ಕಾಲಿಲ್ಲ ಮೂಗಿಲ್ಲ ಮಾರಿಲ್ಲ | ಮೈಯೆಲ್ಲ ನೋಡಲು ಮರಿಯಾದೆ ಇಲ್ಲ | ಸೈಯೆನಿಸಿ ಜಗಕೆಲ್ಲಕೆ ಮಿಗಿಲಾದ ದೇವರು | ವೈಯಾರ ಇಲ್ಲದೆ ಸಿಕ್ಕಿತಕ್ಕ 1 ಹೆಣ್ಣಲ್ಲ ಗಂಡಲ್ಲ ಹಣ್ಣಲ್ಲ ಕಾಯಲ್ಲ | ಹೂವಿಲ್ಲದೆ ಪೂಜೆಗೊಂಡಿಹುದಕ್ಕ | ಪೂಜೆಯ ಮಾಡುವ ಪೂಜಾರಿಯ ನುಂಗಿತು | ಮೂಜಗದೊಳು ಇದು ಸೋಜಿಗವೆನ್ನಿ 2 ಅರಿತು ನೋಡಲು ಬೆರೆತು ನಿಂತಿಹುದಲ್ಲ | ಮರೆತು ಹೋಯಿತು ನಾನೆಂಬುವದೆಲ್ಲ | ಗುರುತವ ಬಲ್ಲದು ಗುರು ಭವತಾರಕ | ಭಜಕರ ಹೊರತು ತಿಳಿಯದು ಜನಕೆ 3
--------------
ಭಾವತರಕರು
ಚಾರು ಗಾಯನ ರತನಾ | ಸಾಕಾರನ ತಂದು ತೋರೇ ಪ ಇರುವ ದಿಕ್ಕಿನೋಳಿಹನಾ ಪರಮ ಮಿತ್ರನಾಹಾರಾ ಮಾಳ್ವೆರಿಯಣ್ಣನಾ ನಿರುತ ಸೇವೆಯ ಕೊಂಬನಾ | ಶರೀರದಿ ಜನಿಸಿದಾವಳ ಕೂಡಿಕೊಂಡಳ ಅರಸನ ಸ್ನೇಹವ ಮಾಳ್ವನಾ ಹರಿಣಾಕ್ಷಿ ತಂದು ತೋರೇ 1 ಯೊಡಲೊಳು ತ್ವರಿತದಿ ಜನಿಸಿದನಾ | ಬಂದನಾ ಶರದೆಚ್ಚ ಸ್ಥಳ ಕೊಂಡನೇ | ಅಸುರನ ಕಂದನಾ ಕೊಂದನಾ | ಜಗ ದರಿಯನ ತಂದು ತೋರೇ 2 ಮಂದಗಮನಿ ಪ್ರಿಯನಾ | ಮುಂದ ಗಾಣದ ಲೊಲ್ಲನಾ | ಕೈಯಿಂದ ಕೊಲಿಸಿದನಾ | ನಂದನ ತಂದು ತೋರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚೋದ್ಯ ಕೇಳಿಚಿತ್ರದ ಹೂವಿನ ಹವಳ ಕಾಯಾಗುವಅರ್ಥವ ತಿಳಿದು ಹೇಳಿ 1 ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿಬೆಟ್ಟದಿ ಸಾರವನುತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬಹುಟ್ಟು ಬಂಜೆಯ ಮಗನು 2 ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನುದಣಿಯದೆ ಮೆದ್ದಿಳಿದ ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲುಹೆಣನೆದ್ದು ಕುಣಿದಾಡಿತು 3 ಕಣ್ಣಿಲ್ಲದಾತನು ಕಂಡು ಪಿಡಿದ ಮೃಗಕೈಯಿಲ್ಲದಾತನೆಚ್ಚಮಣ್ಣಲಿ ಹೊರಳುವ ಕಾಲಿಲ್ಲದಾತನುಗಣ್ಯವಿಲ್ಲದೆ ಪಿಡಿದ 4 ಎಲ್ಲರು ಕೇಳಿ ಕನಕ ಹೇಳಿದ ಮಾತಎಲ್ಲರೂ ಗ್ರಹಿಸಿಕೊಳ್ಳಿಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತುಬಲ್ಲಾದಿಕೇಶವನು 5 |
--------------
ಕನಕದಾಸ
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ ಮಲಗಯ್ಯ ಜೋ ಜೋ ಪ ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ ಬೆನ್ನು ಭಾರವಾಗಿರುವುದೇನೋ ದೇವ ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ 1 ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ 2 ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ ಮುತ್ತಿಟ್ಟು ತೂಗಿದಳು ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ 1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ 2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ 3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ 4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ 5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು 6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಧ್ಯಾನಕೆ ಮನವಿಲ್ಲ ಸುರಪಾನಕೆ ಕೊನೆಯಿಲ್ಲ ಪ ದಾನಧರ್ಮಕೆ ಕೈಯಿಲ್ಲ ಜ್ಞಾನದ ಸೊಲ್ಲಿಗೆ ಸ್ಥಳವಿಲ್ಲ 1 ಜೀವಕೆ ಅರಿವಿನ ಅರಿವಾಯ್ತಲ್ಲ ದೀವಿಗೆ ಆರಿ ಕತ್ತಲೆಯಹುದೆಲ್ಲ 2 ಚಿಂತೆಯಿಂದ ತುಂಬಿತು ಸಕಲಾಂಗ ಸಂತವಿಸೋ ಎನ್ನ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾಲ್ಕನೆಯ ಸಂಧಿ ಶಶಿಹಾಸ ಕಾಳಿಯನೊಲಿಸಿ ಪೊಸತಾಗಿ ತೋರಿತಾಶ್ಚರ್ಯ ಮಿಥ್ಯದ ವಿಷವನು ಉಣಿಸಿ ಕೃತ್ಯವೆ ಪಥ್ಯವಾದುದನು 1 ಕರುಣದ ಬಗೆಯ ತನುಜೆಯು ವಿಷಯು 2 ವಿಷಯೆ ಇದ್ದೆಡೆಗೆ ತಲೆಯ ತಗ್ಗುವಳು 3 ಪನ್ನಗಧರನ ಕೃಪೆಯಿಂದ ಸನ್ಮಾನವನೆ ಮಾಡಿದರು 4 ಜಾರಿದ ಕುರುಳನೋಸರಸಿ ಚಾರುಮಾಣಿಕಖಚಿತ ಪೀಠಕ್ಕೆ 5 ಹರಸಿ ಅಕ್ಷತೆಗಳನಿಟ್ಟು ಅರಸಿನಗಳ ತಿವರಿದರು 6 ಮಜ್ಜನ ತಂಬಿಗೆಯ ಲೋಕುಳಿಯ ಬೆನ್ನಲೋಕುಳಿಯನೆರೆದರು 7 ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ8 ಪಾಟಿಸಿ ತುರುಬನೋಸರಿಸಿ ಮಧ್ಯದಲಿ ಇಡುವರು 9 ಬೆಳಗುವ ಮೂಗುತಿಯ ಮಂದ ಗಮನೆಯರು ಹರುಷದಲಿ 10 ಮೂಗುತಿಯನಿಕ್ಕುವರು ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ11 ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ ಬೆರಳ ಮುದ್ರಿಕೆಯು 12 ಕಡಗ ಮುತ್ತಿನ ಹತ್ತೆ ಕಡಗ ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ ನಾರಿಯರು 13 ಕಂಠೀಸರ ಬಿಲ್ಲಸರವು ಸರಸಿಜ ಗಂಧಿಯರೊಲಿದು 14 ಕಣಕಾಲುಗಳೆಸೆವ ಭಾವಕಿಯ ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು15 ಉಂಗುರ ಮುದ್ರಿಕೆಯಿಟ್ಟು ಮಂದಗಮನೆಗೆ ಒಪ್ಪಿದವು 16 ಸಾರಿಸಿ ಅಂಗಕ್ಕೆ ತಿಗುರಿ ಹಾವುಗೆಯನೆ ಮೆಟ್ಟಿಸಿದರು 17 ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ ಬಂದೇರಿದಳೊಜ್ರದಂದಣವ 18 ಹೊತ್ತರು ಕಳಸ ಕನ್ನಡಿಯ ಹೊತ್ತಿದ ಕಾಳಂಜಿಯವರು 19 ಜಗಜಗ ಬೆಳಕುಗಳು ತುಂಬಿ ಜಗಜಗಿಸುವ ಜೊ&#8209;ಂಪಿನ ಸುರೆಪಾನವು ನೆಗಪಿದವಗಣಿತವಾಗ20 ಉದುರು ಬಾಣ ಪುಷ್ಪಬಾಣ ಸದನದಿ ನಡೆತಂದಳಬಲೆ 21 ಹೊನ್ನಂದಣವನೆ ಇಳಿಸುವರು ಬಂದಳು ವಿವಾಹ ಮಂಟಪಕೆ 22 ಪಿಡಿದಳು ಮದನನರ್ಧಾಂಗಿ23 ಮುಕುಂದಗರ್ಪಿತವಾಗಲೆಂದು ಮಂದಾರಮಾಲೆ ಹಾಕಿದರು 24 ಪೊರೆಯಲಿ ತಂದು ನಿಲ್ಲಿಸಿದರು ಅರುಹಬೇಕೆಂದು ಕೇಳಿದರು 25 ಎನ್ನ ಪರಮ ಗುರುವೆಂದ 26 ಸಮಯವು ಲಗ್ನವೆಂದೆನುತ ಬ್ರಾಹ್ಮಣೋತ್ತಮರು ಹೇಳಿದರು 27 ಸಮಯವು ಲಗ್ನವೆಂದೆನುತ ಮೇಲೆ ಸೂಸಿದನು 28 ಶತಪತ್ರನಯನೆ ಸಮಗಾತ್ರೆ ಚಮತ್ಕಾರದಿಂದ ಸೂಸಿದಳು 29 ಸೊಡರುಗಳನೆ ಹಚ್ಚುವರು ಪಿಡಿದರು ಇತ್ತಂಡದಲ್ಲಿ 30 ಮುತ್ತೈದೆಯರೆಲ್ಲ ಅಲಂಕರದಿ ವಿಷಯೆ ಸಂಭ್ರಮದಿ 31 ಕೈಯಿಂದ ತೋರುವರು ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ 32 ದಿನಕರ ಪ್ರತಿಬಿಂಬದಂತೆ ಅನುಕೂಲಗಳನೆ ಮಾಡಿದರು 33 ಮಾಡಿದನು ಶ್ರೀಪತಿಯ ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ34 ಎಡೆಮಾಡಿ ಚಪ್ಪರದೊಳಗೆ ಭೋಜನಕೆ ಕುಳ್ಳಿರಿಸಿ 35 ಉಪ್ಪಿನೆÀಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು 36 ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ ಭೂಮಕ್ಕೆ ಬಡಿಸಿದರಾಗ 37 ರಾಜೀವ ಮುಖಿ ತನ್ನ ಪತಿಗೆ ಮ- ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು38 ಸಂಭ್ರಮದಿಂದ ಸೂಸಿದರು39 ವಾಸುದೇವ ಕೃಷ್ಣ ಎನುತ ಮದನ ವಿಲಾಸದಿಂದಲಿ ನಿದ್ರೆಗೈದ 40
--------------
ಹೆಳವನಕಟ್ಟೆ ಗಿರಿಯಮ್ಮ
ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1 ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2 ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3 ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4 ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5 ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6 ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7 ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8 ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9
--------------
ಕನಕದಾಸ