ಒಟ್ಟು 21 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಸಾಂಡದಿ ಕಾಂಬೊನ್ಯಾರೇ | ನಮ್ಮಮೌನಿ ಧ್ಯಾನಾಗಮ್ಯ ಕೃಷ್ಣಮೂರುತಿಯೇ ಪ ಗುಂಗುರು ಕುಂತಲ ಶೋಭಾನೇ | ನಮ್ಮಗಂಗಾ ಜನಕ ಗೋಪಿರಂಗಾನೇ |ಮಂಗಳ ಮಹಿಮ ಶುಭಾಂಗಾನೇ | ಹೃದ-ಯಾಂಗಣದಲಿ ನಿಂತು ಕುಣಿವಾನೇ 1 ಕೊಳಲ ಕೈಯಲಿ ಧರಿಸ್ಯಾನೇ | ಚಂದ್ರಬೆಳಕಾಮಿತದಲಿ ಕುಣಿದಾನೇ |ಕಲಕುತ್ತಲೆನ್ನಯ ಮನವಾನೇ | ಹರಿಚಳಕದಿ ಕುಣಿವಂತೆ ಮಾಡ್ಯಾನೇ 2 ಅಗಣಿತ ಮಹಿಮ ಲಾವಣ್ಯಾನೇ | ಹರಿಸುಗುಣಿ ಕಾಲಲಿ ಗೆಜ್ಜೆ ಕಟ್ಯಾನೇಝಗಿ ಝಗಿಸುವ ಹಾರ ಪದಕಾನೇ | ಕೃಷ್ಣಮಘವನಾರ್ಚಿತ ದಿವ್ಯ ಚರಣಾನೇ 3 ಯಾದವರೊಡೆಯನು ಬಂದಾನೇ | ಗುರುವಾದಿರಾಜರ ಮಾತು ಸಲಿಸ್ಯಾನೇಸಾದರದಲಿ ಕೈಯ್ಯ ಪಿಡಿದಾನೇ | ಎನ್ನಮೋದದಿ ಕುಣಿವಂತೆ ಮಾಡ್ಯಾನೇ 4 ಗೋವಳರೊಡಯನು ನಗುತಾನೇ | ಹೃದಯನೋವನು ಕಳೆಯಲು ಬಂದಾನೇಸಾವನೀಪರಿ ಕರುಣಿ ಕಳೆದಾನೇ | ಗುರುಗೋವಿಂದ ವಿಠಲ ಹಯಾಸ್ಯಾನೇ 5
--------------
ಗುರುಗೋವಿಂದವಿಠಲರು
ಶ್ರೀ ರಾಘವೇಂದ್ರರು ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಾಘವೇಂದ್ರನ ಕಂಡಿರೇನಮ್ಮ ಪ ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಗುರುಗಳ ಕಂಡಿರೇನಮ್ಮ ಅ.ಪ. ಕಾಲಲಿ ಕಡಾಂವಿಗಿ ಕರದಲ್ಲಿ ದಂಡಕಾಷ್ಟಾ ಮೈಯೊಳು ಕಾವಿಶಾಟಿ ಪೊತ್ತಿರುವರಮ್ಮ ಬಂದ ಬಂದ ಜನರಿಗೆಲ್ಲ ಆನಂದ ನೀಡುತ ಛಂದಾಗಿ ತಾಂವು ಇಲ್ಲಿ ಇರುತಿಹರಮ್ಮ 1 ಬಂದ ಬಂದ ಜನರಿಗೆ ಅಭೀಷ್ಟವ ನೀಡುತ ಛಂದಾಗಿ ಅಭಯವ ನೀಡುತಿಹರಮ್ಮ ಒಂದಿನ ಸ್ವಪ್ನದಿ ಫಲಮಂತ್ರಾಕ್ಷತೆ ಕೊಡುತಲಿ ಅಂದಿನ ಆನಂದನ ಕಾಣಮ್ಮ 2 ಬಂದ ಬಂದ ಜನರು ಪ್ರದಕ್ಷಿಣೆ ನಮಸ್ಕಾರ ತಾಂವ ದಿಂಡು ಉರುಳುವರಮ್ಮಾ ಬಂದ ಬಂದ ಜನರಿಗೆಲ್ಲಾ ಅಭಯವ ನೀಡುತ ತಾಂವ ತುಂಗಾ ತಟದೊಳು ಇರುತಿಹರಮ್ಮಾ 3 ಮೈಯೊಳು ಕೇಸರಿಗಂಧಾ ಪೋಷಿಸಿದಾರಮ್ಮಾ ಎದುರಲಿ ಶ್ರೀ ಕೃಷ್ಣನ ಪೂಜಿಪರಮ್ಮಾ ಢಾಳ ಅಕ್ಷಂತಿ ತಿದ್ದಿದ ಅಂಗಾರವು ಮುದ್ರಿಯು ತಾಂವ್ ಧರಿಸಿಹರಮ್ಮ 4 ಕರದಲಿ ಜಪಮಾಲೆ ಕೊರಳಲಿ ಕಮಲಾಕ್ಷಿ ತಾವ್ ಧರಿಸಿಹರಮ್ಮಾ ಬಿಡದೆ ನಿರಂತರ ನರಸಿಂಹವಿಠಲನ ಜಪಿಸುತ ತಾಂವರಿಂದಾವನದೊಳ್ ಇರುಹರಮ್ಮಾ 5
--------------
ನರಸಿಂಹವಿಠಲರು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸಿರಿಯ ರಮಣ ನರಹರಿಯ ಚರಣಗಳ ನಿರತ ಭಜಿಪರಿಗೆ ಸ್ಥಿರ ಸುಖವಿಹುದು ಪ ದುರಳ ವಿಷಯಗಳ ತೊರೆದು ಮುದದಿ ಮೈ ಮರೆಯುವ ತೆರದಲಿ ಉರುತರ ಭಕುತಿಯಲಿ ಅ.ಪ ತನಯ ಪ್ರಹ್ಲಾದನು ಜನಕನ ವಚನವ ನನುಸರಿಸದೆ ತನ್ನ ಮನದಲಿ ಸಂತತ ನೆನೆದು ಶ್ರೀಹರಿಯನು ದಿನದಿನ ನಾರಾಯಣನ ಸುಮಂಗಳ ಗುಣಗಳ ಪೊಗಳುತ ಕುಣಿ ಕುಣಿಯುತ ತನ್ನ ಜನಕನ ಕೋಪಕೆ ಹೊಣೆಯಾಗುತಲಿರೆ ಕ್ಷಣದಲಿ ಪೊರೆದ 1 ಖೂಳನು ತನ್ನಯ ಬಾಲನ ನಡತೆಯ ತಾಳಲಾರದೆ ಕೋಪ ಜ್ವಾಲೆಯಿಂದುರಿಯುತ ಪೇಳೊ ಇಲ್ಲಿಹನೇನೊ ತಾಳೊ ನೋಡುವೆನೆಂದು ಪೇಳಿ ಕಂಬವ ತನ್ನ ಕಾಲಲಿ ಒದೆಯಲು ಸೀಳಿ ಛಟ ಛಟನೆ ತಾಳಿ ಘೋರತನು ಖೂಳ ರಕ್ಕಸನಲಿ ಧಾಳಿಯ ಗೈದ 2 ದುರುಳ ಹಿರಣ್ಯಕನ ಕರಳ ಬಗೆದು ತನ್ನ ಕೊರಳಲ್ಲಿ ಮಾಲೆಯ ಧರಿಸಿ ಸಿಡಿಯುತಿರೆ ಉರಿಯಿಂದ ಧರಣಿಯು ತರತÀರ ನಡುಗಲು ಸುರರ ಮೊರೆಯ ಕೇಳಿ ವರಲಕುಮಿಯು ನರ ಹರಿಯನು ಸ್ತುತಿಸಲು ಮರೆತು ಕೋಪವನು ವರ ಭಕುತನಿÀಗೆ ಪ್ರಸನ್ನತೆಯಿತ್ತ 3
--------------
ವಿದ್ಯಾಪ್ರಸನ್ನತೀರ್ಥರು
ಕೊಟ್ಟಸಾಲ ಕೊಡದೆ ಭಂಡಾಟ ಮಾಡುತಿಹನೆ |ಎಷ್ಟು ಕೇಳಿದರೆನಗೆ ಓಯೆನ್ನದಿಹನೆ ಪಭರದಿ ಕೇಳಲು ಜಲದಿ ಕಣ್ಣ ಬಿಡುತಿಹನೆ |ತರುಬಿ ಕೇಳಲು ಕಲ್ಲು ಹೊತ್ತು ನಿಂತಿಹನೆ ||ಮರಳಿ ಕೇಳಲು ಊರ ಅಡವಿ ಸೇರುವನೆ |ಇರುಳು ಹಗಲೆಲ್ಲ ಕಾಣಿಸಿಕೊಳ್ಳದಿಹನೆ 1ಕಂಡು ನಿಲ್ಲಿಸಲೊಂದು ಕಾಲಲಿ ನಿಲುವನೆ |ಕೊಂಡ ಸಾಲಕೆ ಕೊಡಲಿ ಪಿಡಿದು ನಿಲ್ಲುವನೆ ||ಉಂಡರಾಣಿಯೆಂದು ಉಪವಾಸವಿರುವನೆ |ಬಂಡನಂದದಿ ಠಕ್ಕುಟೌಳಿ ನಡಿಸುವನೆ 2ಕೆಟ್ಟ ಬಯಲುಲಜ್ಜೆಹೇವ ತೊರೆಯುವನೆ |ಕೊಟ್ಟು ಪೋಗೆನ್ನಲು ಕಲಿಯು ಆಗುವನೆ ||ಸೃಷ್ಟಿಗೊಡೆಯ ಶ್ರೀರಂಗಪಟ್ಟಣದಪುರಂದರ |ವಿಠಲೇಶನು ನಮ್ಮ ಪಶ್ಚಿಮರಂಗನಾಥನು 3
--------------
ಪುರಂದರದಾಸರು
ವಂದಿಸಿದರ ಕಾವೆ ವರವನೀವೆ ಅಹಿಪವೀಂದ್ರಭವಸುರರಗುರುಮಧ್ವಮುನಿರಾಯಪ.ಒಂದೊಂದುಶ್ರುತಿಸ್ಮøತಿಗೆ ಬಹ್ವಾರ್ಥಗಳ ಪೇಳದೆಒಂದೆರಡು ತತ್ವವಿಸ್ತರವ ಪೇಳಿದೆಒಂದು ಮೂರವತಾರದಲ್ಲಿ ಹರಿಯನೆ ಒಲಿಸಿಒಂದು ನಾಲ್ಕರ ಭೇದ ನಿಜರಿಗರುಹಿದೆಯ 1ಒಂದೈದು ರಿಪುವರ್ಗ ನಿಗ್ರ್ರಹವ ಮಾಡಿಸಿದೆಒಂದಾರು ತ್ರಿಗುಣಿಸಿದ ಮತವ ಮುರಿದೆಒಂದೇಳು ಮದವ ಕಾಲಲಿ ಮೆಟ್ಟಿ ಹರಿಪುರಕೆಒಂದೆಂಟು ಭಕುತಿಪಥ ತೋರ್ದೆ ವೈಷ್ಣವರಿಗೆ 2ಒಂದು ಒಂಬತ್ತು ಹರಿಯವತಾರ ಕಥೆ ರಚಿಸಿಒಂದು ಹತ್ತೇಂದ್ರಿಯದ ಗೆಲವ ಕಳಿಸಿಒಂದು ಹನ್ನೊಂದು ಸ್ತೋತ್ರದಿ ಕೃಷ್ಣನ ಮೆಚ್ಚಿಸಿದೆಒಂದು ಹನ್ನೆರಡು ತತ್ವದಾಗ 3ಒಂದು ಹದಿಮೂರು ಭುವನಗಳಲ್ಲಿ ನೀ ವ್ಯಾಪ್ತಒಂದು ಹದಿನಾಲ್ಕು ದ್ವಿಗುಣಿಸಿದ ಮ್ಯಾಲೇಳೊಂದಿದ ಸದ್ಗ್ರಂಥಗಳ ನಿರ್ಮಿಸಿ ಬುಧರಿಗಿತ್ತೆಒಂದು ಹದಿನೈದು ಗುಣದ ಲಕ್ಷಣಾಂಗ 4ಒಂದು ಹದಿನಾರೆಂಟು ತತ್ವ ಸಿದ್ಧಾಂತದಲಿಒಂದು ಹದಿನೇಳು ಪರ್ವಮೋಹಕ ಬಿಡಿಸಿದೆಒಂದು ಮನದಿಂದ ಶಿರಿ ಪ್ರಸನ್ನವೆಂಕಟ ಕೃಷ್ಣನಒಂದೊಂದು ಗುಣಕೆ ಅನಂತ ವ್ಯಾಖ್ಯಾನ 5
--------------
ಪ್ರಸನ್ನವೆಂಕಟದಾಸರು