ಒಟ್ಟು 19 ಕಡೆಗಳಲ್ಲಿ , 13 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಸುತ ಬಂದ ನೋಡಿ ಭಾಸ್ಕರಕೋಟಿ ತೇಜ ಲೇಸು ಲೇಸಾಯಿತೆನ್ನ ಮನದೊಳಗೆ ಧ್ರುವ ಹೊಳೆಯುತ ಸುಳಿಯುತ ಥಳಥಳಗುಡುತ ಒಲಿಯುತ ಬಂದ ನೋಡಿ ಎನ್ನೊಳಗೆ 1 ಕರುಣ ಕವಚವ ತೊಟ್ಟು ವರಮುನಿಗಳ ಪ್ರಾಣ ಹರುಷ ಬೀರುತ ಬಂದ ತ್ವರಿತಿಲ್ಲಿಗೆ 2 ದೀನ ದಯಾಳು ಎನ್ನ ಅನಾಥ ಬಂಧು ಸ್ವಾಮಿ ಸನಾಥ ಮಾಡಲಿ ಬಂದ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ಪ ಬೇಸರಿಸಿ ಧರಿಸಿದಳು ಜನನಿ ಎನ್ನನÀು ದಶ- ಮಾಸ ಗರ್ಭದೊಳಿದ್ದು ಬಹಳ ಬಳಲಿದೆನು ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ ಆಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ1 ಮಲ ಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು ತಿಲ ಮಾತ್ರ ಹೇಸಿದೆಯ ಎನ್ನೊಳಗೆ ನೀನು ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು ತೊಳೆದ ಹಸ್ತದಿ ಎನಗೆ ಕೊಳೆಯನಿಕ್ಕಿದಳು 2 ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು ಒಗೆದು ಬೀಸಾಡಿದಳು ಎಡದ ಹಸ್ತದಲಿ ಜಗಳವಾಡಲು ಪಿತನು ಮಗನ ಮೋಹದ ಮೇಲೆ ತೆಗೆಯಬಾರದೆ ಮಲವನೆಂದು ಜರೆÀದಪಳು3 ಪಡೆದ ತಾಯ್ತಂದೆಗಳು ಅಡಗಿ ಹೋದರು ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ ಕಡೆಗಾಲದೊಳು ಕೈಯ ಪಿಡಿದು ರಕ್ಷಿಸದೆನ್ನ ಒಡಲ ದುಃಖವ ನೋಡಿ ನುಡಿಯದಿರಬಹುದೆ 4 ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪನಿಗೆ ಗೆಲವಿಂದ ಭೂರಮಣನೆನಿಸಿ ಮೆರೆವ ಜಲಜನಾಭನೆ ಎನ್ನ ಪಿತನು ಮಾತೆಯು ನೀನು ಸುಲಭದೊಳು ಮೈದೋರು ಫಲಿತವಹ ಪದವ 5
--------------
ವರಹತಿಮ್ಮಪ್ಪ
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ