ಒಟ್ಟು 17 ಕಡೆಗಳಲ್ಲಿ , 10 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಗ್ರಹವನು ನಿಲಿಸೊ ವೆಂಕಟ ಗಗ- ಪ ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ಅ.ಪ. ಕುಂಡಲ ತೇಜ ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ1 ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ 2 ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ- ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ3 ನಖದೊಳನಂತ ಬ್ರಹ್ಮಾಂಡವನಡಗಿಸಿ ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ4 ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ- ಗತ್ಪತಿ ವಿಜಯವಿಠ್ಠಲ ವೆಂಕಟ 5
--------------
ವಿಜಯದಾಸ
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ