ಒಟ್ಟು 29 ಕಡೆಗಳಲ್ಲಿ , 15 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿರಿದೇವಿಯೆ ಪೊರಿಯುವದೆನ್ನನು ತಾಯೆ ಭಾ ಸ್ಕರ ಪುರ ನಿಲಯೆ ಪ ಧರಣಿಸುರವರÀನಿಗೊಲಿದು ಶ್ರೀಗಂಧದ ವರ ಶಿಲೆಯೊಳು ನೆಲಿಸಿರುವ ಶುಭಾಂಗಿಯೆ ಅ.ಪ ಲಕುಮಿಯೆ ತವ ದರುಶನ ವರುಷಂಪ್ರತಿ ಮಾಡುವ ನೇಮಾಸಕ್ತ ಶ್ರೀ ಲಕ್ಷ್ಮೀಕಾಂತ ತತ್ಕರಸಂಪೂಜಿತ ಸತಿ 1 ಪದ್ಮೇ ಪ್ರಣಮಾಮಿ ಭವತ್ಪದ ಪದ್ಮೆ ವಾರಿಜದಳ ಸದ್ಮೆ ಪದ್ಮಾನನೆ ಸ್ಮರಿಸುವೆ ಕರಧೃತ ಪದ್ಮೆ ವಾಸಯಿ ಮಮಸದ್ಮನಿ ಪದ್ಮಾವತಿ ಪದ್ಮಜನುತ ಪದಪದ್ಮೇ ಉದ್ಭವಿಸಿದ ಪದ್ಮದಿ ಪದ್ಮನಾಭ ಹೃತ್ಪದ್ಮನಿವಾಸಿನಿ 2 ಸಿಂಹಧ್ವಜ ಶೋಭಿತೆ ಸಾನುರಾಗದಿ ಭಜಿಸುವರಿಗೆ ಪ್ರೀತೆ ಕಾಮಿತ ಫಲದಾತೆ ಜ್ಞಾನಾ ಸದ್ಭಕುತಿಯು ಕರುಣಿಸು ಮಾತೆ ವರದಾಭಯಹಸ್ತೆ ರಾಣೆಯೆ ನಮಿಸುವೆ 3 ವಂದಾರುಜನ ಮಂದಾರಾಮಿಂದಿರಾ ಸುಂದರಾನನಾಂ
--------------
ಕಾರ್ಪರ ನರಹರಿದಾಸರು
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ಪ ಸುಜನ ಸುರಭೂಜರಾಗಿಹ ಮಹಾ ಕರ ಸಂಜಾತ ಅ.ಪ ಉದ್ಭವಿಸಿದರು ಗಾಲವರು ಜಗದೊಳೆಂಬಂಶ ವೇದ್ಯವಾಯಿತು ಆಪ್ತಜನವೃಂದಕೆ ಮಧ್ವಮತ ತತ್ವಗಳನುದ್ಧಾರವನೆಗೈದ ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ 1 ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ ನಿಕರಗಳಿಗಲವಬೋಧರ ಭಾಷ್ಯವ ಸುಖದಿಂದಲರಿಯಲುಪಕೃತಿಗೈದ ಯತಿಕುಲ ತಿಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ 2 ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ ಸರ್ವಭಕ್ತ ಪ್ರಸನ್ನನೆಂದರುಹಲು ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ 3
--------------
ವಿದ್ಯಾಪ್ರಸನ್ನತೀರ್ಥರು
ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು
ಎಂತು ವರ್ಣಿಸಲಹುದು ಸಿರಿವರನಸಿರಿನಾರಸಿಂಹನಪಅಂತರಂಗದಿ ಹರಿಯ ಸ್ಮರಣೆಯಸಂತತವು ಬಿಡದಂತೆ ಮಾಡುವಕಂತುಪಿತ ಭಕ್ತರನು ಪೊರೆಯಲುನಿಂತಿರುವ ಸಿರಿಕಾಂತನೆನುತಲಿ ಅಪನಿಷ್ಠೆಯಿಂದಲಿ ಬೆಟ್ಟವೇರುತ್ತಹರಿಭಕುತರೆಲ್ಲರುಕಷ್ಟಗಳ ಪರಿಹರಿಸು ಎಂದೆನುತಮನಮುಟ್ಟಿ ಭಜಿಪರುಸೃಷ್ಟಿಕರ್ತನೆ ರಕ್ಷಿಸೆಂದೆನುತಇಷ್ಟದಾಯಕ ನಿನ್ನ ಮಹಿಮೆಯಎಷ್ಟು ಪೊಗಳುವರಯ್ಯ ಕೇಶವಭಕ್ತರನು ಉದ್ಧರಿಸಲೋಸುಗಬೆಟ್ಟದಲಿ ಉದ್ಭವಿಸಿದಾತನ 1ವಾಸುದೇವನ ಮಹಿಮೆ ಪೊಗಳುತ್ತ ನ-ರಸಿಂಹ ಲಕ್ಷೀ ನಾರಸಿಂಹ ನ-ರಸಿಂಹ ನರಸಿಂಹ ಎಂದೆನುತ ಹರಿ-ದಾಸರೆಲ್ಲರು ಸಾರಸಾಕ್ಷನೆ ನಿನ್ನ ಪೊಗಳುತ್ತದ್ವಾರ ದ್ವಾರದಿ ಪೂಜೆUಷÉೂಳ್ಳುತಮಾರಪಿತ ಮಹಲಕ್ಷೀ ಸಹಿತದಿದೋರ ರಥÀದೆಡೆಯಲ್ಲಿ ನಿಲ್ಲುತತೇರ ನೇರುವ ಶ್ರೀ ರಮೇಶನ 2ಸಾರಪದಕಗಳಿಂದ ಶೋಭಿಸುತ ಝಳಝಳಿಪವಜ್ರದ ತೋರ ಮುತ್ತಿನ ಮಾಲೆಹೊಳೆಯುತ್ತ ಥಳಥÀಳಿಪ ನೊಸಲಲಿಸಾರಕಸ್ತೂರಿ ತಿಲಕ ರಂಜಿಸುತಮಾರಬಿಲ್ಲೆಂತೆಸೆವ ಪುಬ್ಬಿನಚಾರುತರ ಶೃಂಗಾರ ನಯನದವಾರೆ ನೋಟÀದಿ ನೋಡಿ ಭಕುತರ ಅ-ಪಾರದುಃಖಗಳನ್ನ ನೀಗುವರ3ಕೋಟಿಸೂರ್ಯಪ್ರಕಾಶಮಯವಾದನವರತ್ನ ಖಚಿತ ಕಿರೀಟಕುಂಡಲಧರಿಸಿ ಅನುವಾದಎಡಬಲದ ಭುಜದಲಿಮಾಟದ ಭುಜಕೀರ್ತಿ ಸುಲಲಿತದನೋಟಕಾಶ್ಚರ್ಯವನೆ ತೋರುತಶ್ರೀ ಕಳತ್ರನು ರಥದಿ ಮೆರೆಯುತ ದಿ-ವಾಕರನ ಪ್ರಭೆಯಂತೆ ಪೊಳೆಯುವರಮಾ ಮನೋಹರ ರಮೆಯ ರಮಣನ 4ಛತ್ರಿ ಚಾಮರಗಳನೆ ಪಿಡಿದಿಹರು ಎಡಬಲದಿಸ್ತುತಿಸುತ ಎತ್ತಿ ಸ್ವರಗಳ ಗಾನಪಾಡುವರುಚಿತ್ತೈಸುಹರಿಬಾ ಬಾರಿತ್ತಬಾಬಾರೆಂದು ಕರೆಯುವರುಸುತ್ತ ತುಂಬರು ನಾರದರಪರಿನೃತ್ಯಗಾನಗಳಿಂದ ಸ್ತುತಿಪರುಕರ್ತೃ ಕಮಲನಾಭ ವಿಠ್ಠಲರ-ಥೋತ್ಸವದಿ ನಲಿನಲಿವ ದೇವನ 5
--------------
ನಿಡಗುರುಕಿ ಜೀವೂಬಾಯಿ
ನೀನೇ ಅಚ್ಚುತ ನೀನೇಮಾಧವ|ಹರಿಗೋವಿಂದನು ನೀನೆ ||ನೀನೆಗತಿಯೆಂದು ನಂಬಿದ ದಾಸಗೆ |ಅಭಯಕೊಟ್ಟಾತನು ನೀನೆಪಜಲದೊಳು ಪೊಕ್ಕು ಮೈನಡುಗಿಸಿ ಭಾರವ |ತಳೆದಾತನು ನೀನೆ ||ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |ದೊಳು ಉದ್ಭವಿಸಿದೆ ನೀನೆ 1ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|ಡಲಿಯ ಪಿಡಿದವನು ನೀನೆ ||ಜಲಧಿಯ ದಾಟಿ-ಅಸುರರ ಕಡಿದು |ಲಲನೆಯ ತಂದಾತ ನೀನೆ 2ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |ಕಳ್ಳನೆನಿಸಿದವ ನೀನೆ ||ಬಲ್ಲಿದತ್ರಿಪುರದಿ ಬತ್ತಲೆ ನಿಂತು |ಒಳ್ಳೆ ಹಯವ ಹತ್ತಿದೆ ನೀನೆ 3ಪಾಂಡವರಿಗತಿ ಪ್ರಿಯನೆಂದೆನಿಸಿದ |ಪುಂಡರೀಕಾಕ್ಷನು ನೀನೆ |ಪುಂಡಲೀಕ ಪುರುಷೋತ್ತಮ ಮೂರುತಿ |ಪುರಂದರವಿಠಲನು ನೀನೆ 4
--------------
ಪುರಂದರದಾಸರು
ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ವೀರಭದ್ರೇಶ್ವರನೆ ಪಾಲಿಸು ನಮಸ್ಕಾರವ ಗೈಯುವೆನೆ ಪಫೋರ ಶರೀರನೆ ಧೀರನೆ ಶೂರನೆಕ್ರೂರ ಖಡುಗಧಾರಿತುರಗಸವಾರಿಯೆ ಅ.ಪರುದ್ರ ರೌದ್ರಾವತಾರ ಚಿತೆಯೊಳಂದುಉದ್ಭವಿಸಿದ ವೀರ-ಭದ್ರ ಶರೀರ ಕೆರಳ್ದ ಲೋಚನಾಕಾರಊಧ್ರ್ವ ದೇಶಾನ್ವಿತ ಸಮುದ್ರ ಸಾಹಸಿಯೆ 1ಮಣಿಮಯ ಭೂಷಣನೇ ತೋರುವೆಘೋರಘಣಿ ಘಣಿ ನಾದವನೇಕುಣಿಯುವ ಕೂಗುವ ಭೂತಗಣದಸಂದಣಿಸೇರಿತ್ರಿನಯನಾಜೆÕಯ ತಾಳ್ದು ಧರಣಿಗೆ ನಡೆತಂದ 2ದಕ್ಷಾಧ್ವರ ಹರನೇ ಕ್ರೋಧದಿ ಕ್ರೂರದಕ್ಷನ ಮುರಿದವನೇಸೃಷ್ಟಿ ಪಾಲಕ ಭಗನಕ್ಷಿಯ ಕೀಳಿಸಿದುಷ್ಟ ಪೊಷನದಂತ .... ಸೃಷ್ಟಿಗುರುಳಿಸಿದಾ 3ಪಾದೇಮಠದ ಪುರದೀ ನೆಲಸಿದೆ ಬಂದುಸಾಧು ಜನರ ಪೊರೆದೆಆದಿಮೂರುತಿ ಗೋವಿಂದನ ದಾಸನಆಧರಿಸೈ ಕರುಣೋದಯ ಮೂರುತಿ 4
--------------
ಗೋವಿಂದದಾಸ
ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ