ಒಟ್ಟು 18 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ |ಬಾರೇ ಗೋಪಮ್ಮ - ನಾವ್ ||ಆರೂ ತೂಗಿದರೂ ಮಲಗನು ಮುರವೈರಿಬಾರೇ ಗೋಪಮ್ಮ ಪನೀರೊಳಗಾಡಿ ಮೈಯೊರಸೆಂದು ಅಳುತಾನೆ_ಬಾರೆ-|ಮೇರುವ ಹೊತ್ತು ಮೈಭಾರವೆಂದಳು ತಾನೆ-ಬಾರೆ-||ಧರೆಯ ನೆಗಹಿ ತನ್ನದಾಡೆನೊಂದಳು ತಾನೆ-ಬಾರೆ-|ದುರುಳರಕ್ಕಸನ ಕರುಳ ಕಂಡಳು ತಾನೆ-ಬಾರೆ-1ನೆಲವನಳೆದು ಪುಟ್ಟ ಚರಣನೊಂದಳು ತಾನೆ-ಬಾರೆ-|ಛಲದಿಂದ ಕೊಡಲಿಯ ಪಿಡಿವೆನೆಂದಳು ತಾನೆ-ಬಾರೆ-||ಬಲುಕಪಿಗಳ ಕಂಡಂಜಿಕೊಂಡಳು ತಾನೆ-ಬಾರೆ-|ನೆಲುವಿನ ಬೆಣ್ಣೆ ಕೈ ನಿಲುಕದೆಂದುಳು ತಾನೆ-ಬಾರೆ- 2ಬಟ್ಟ ಬತ್ತಲೆ ನಿಂತು ಎತ್ತಿಕೊ ಯೆಂದಳು ತಾನೆ-ಬಾರೆ-|ಶ್ರೇಷ್ಠ ತೇಜಿಯನ್ನು ಹತ್ತಿಸೆಂದಳು ತಾನೆ-ಬಾರೆ-||ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ-ಬಾರೆ-|ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ-ಬಾರೆ 3
--------------
ಪುರಂದರದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು
ಸದ್ಗುರುನಾಥಗೆ ಮಂಗಳ ಭಾಸಶತಸೂರ್ಯತೇಜಗೆ ಮಂಗಳನಿರ್ಗುಣ ನಿರ್ವಿಕಾರಗೆ ಮಂಗಳ ಸ್ವಪ್ನಜಾಗೃತಿ ಸುಷುಪ್ತಿ ನಿಗ್ರಹಗೆ ಮಂಗಳಭರ್ಗೋ ದೇವಗೆ ಭಯಂಕರನಿಗೆ ಮಂಗಳ ಅತಿಶೀಘ್ರ ಭಕ್ತರ ಪಾಲಿಪಗೆ ಮಂಗಳ1ನಿತ್ಯನಿರ್ಮಲ ನಿಜಬೋಧಗೆ ಮಂಗಳಘನವಸ್ತು ಸಾಕ್ಷಾತ್ಕಾರನಿಗೆ ಮಂಗಳಸತ್ಯ ಸನಾಥ ಸಾಕ್ಷಿಗೆ ಮಂಗಳಶುದ್ಧ ಚಿತ್ಪ್ರಭಾಗಮ್ಯಗೆ ಮಂಗಳ2ಪರಮಚೈತನ್ಯ ಪರಮೇಶಗೆ ಮಂಗಳ ಸತ್ಯಶರಣ ರಕ್ಷಕ ಯೋಗಿಗೆ ಮಂಗಳಪರಮಆರೂಢಪರಮೇಶಗೆ ಮಂಗಳ ನಿಜಗುರುಚಿದಾನಂದಾವಧೂತಗೆ ಮಂಗಳ3
--------------
ಚಿದಾನಂದ ಅವಧೂತರು