ಒಟ್ಟು 26 ಕಡೆಗಳಲ್ಲಿ , 13 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣಿಗಣ ಭೂಷಣ ಅಣಿಗಾಣೆನಿಮಗಿನ್ನು ಗಣರಾಯ ಗಣರಾಯ ಪ. ರುದ್ರ ಕುಮಾರನೆ ಸಿದ್ಧಿ ನಿನಾಯಕ ವಿದ್ಯವಪಾಲಿಸೊಬುದ್ಧಿದಾತನೆ ಅ.ಪ. ಆನೆಯ ಮುಖದವನ ಧೇನಿಸಿನಮಿಸುವೆ ಗಣರಾಯ1 ಶ್ರೀನಿವಾಸನ ಪ್ರಿಯ ನೀನಮ್ಮಗೆಲಿಸೆಂದು ಗಣರಾಯ2 ಹಸ್ತಿಯ ಮುಖದವಗೆ ಹಸ್ತವ ಮುಗಿದೆವಸ್ವಸ್ಥ ಮನಸು ಕೊಡು ವಿಸ್ತರ ಉದರನೆ ಗಣರಾಯ3 ಗಂಧ ಅಕ್ಷತೆ ಪುಷ್ಪ ತಂದೆ ದುರ್ವಾಂಕುರ ಚಂದದ ವಸ್ತ್ರಗಳ ಒಂದೊಂದು ಕೈಕೊಳ್ಳೊ ಗಣರಾಯ 4 ರನ್ನ ಮಾಣಿಕ ಬಿಗಿದ ಚಿನ್ನದಾಭರಣವ ನಿನ್ನ ಪೂಜೆಗೆ ತಂದೆ ಚೆನ್ನಾಗಿ ಕೈಕೊಳ್ಳೊ ಗಣರಾಯ 5 ಚಕ್ಕಲಿ ತರುಗುಮಿಕ್ಕಾಗಿ ಲಡ್ಡುಗೆ ಚಿಕ್ಕಗಣಪ ಉಂಡು ಚಕ್ಕನೆ ವರಕೊಡು ಗಣರಾಯ 6 ಚಲ್ವ ರಾಮೇಶನನೆಲೆಕಂಡ ಪುರುಷನೆಇಲಿವಾಹನ ನಮ್ಮ ಸಲುಭದಿ ಗೆಲಿಸಯ್ಯ7
--------------
ಗಲಗಲಿಅವ್ವನವರು
ಯೋಗಿ ಎಂಬ ಆನೆ ಬಂದಿತಯ್ಯಆನೆ ಬಂದಿತು ಪ್ರಪಂಚ ಪೇಟೆಯತಾನೆ ಕೀಳುತ ತಳಪಟ ಮಾಡುತ ಪ ಪಾಷಗಳೆಂದೆಂಬ ಸರಪಳಿ ಹರಿದುಈಷಣಗಳು ಎಂಬ ಸಂಕೋಲೆ ಮುರಿದುದ್ವೇಷವೆನಿಪ ಗಾಡಿಕಾರರನರೆದುಕ್ಲೇಷವೆನಿಪ ಕಾವಲವರ ಜಡಿದು 1 ದಶವಾಯುಗಳೆಂಬ ದನಗಳನೋಡಿಸಿವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿಹಸಿವು ತೃಷೆಗಳನು ಕಾಲೊಳಿಕ್ಕಿಕಸೆಕಸೆ ಅಂಗಡಿಗಳನು ತೂರಿಕ್ಕಿ2 ಬಹುಮತಗಳು ಎಂಬ ಮನೆಯನೆ ಕೆಡಹಿಇಹಪರ ವಾಸನೆ ಕೊಟ್ಟಿಗೆ ಕೊಡಹಿಮಹಾ ಅಭಿಮಾನದ ನಾಯಿಗಳ ಮುಡುಹಿಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ3 ಬೋಧ ಲಹರಿಯಲಿ ತೂಗುತಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ ತಾನೆ ತಾನಾಗಿ ತನ್ನ ಮರೆಯುತ 4 ಬೆಳಗುವ ಸುಷುಮ್ನ ಬಾಜಾರವಿಡಿದುಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದುತಿಳಿಗೊಳ ಸಹಸ್ರಾರದ ನೀರ ಕುಡಿದುಬಲು ಚಿದಾನಂದವೆಂಬ ಆನೆಯು ನಡೆದು 5
--------------
ಚಿದಾನಂದ ಅವಧೂತರು
ಶ್ರೀ ಗಣರಾಯ ಶ್ರೀ ಗಣರಾಯ ಶ್ರೀ ಗಣರಾಯವಂದಿಸುವೆನೀಗ ಶ್ರೀ ಗಣರಾಯ ಪ. ಪಾದ ಏಕಚಿತ್ತದಲೆಬಲಗೊಂಬೆ ವಂದಿಸುವೆ ಶ್ರೀ ಗಣರಾಯ 1 ನೆನೆಯಕ್ಕಿ ನೆನಗಡಲೆ ಗೊನೆ ಬಾಳೆಹಣ್ಣು ಘನವಾದ ಚಿಗಳಿ ತಂಬಿಟ್ಟುಫನವಾದ ಚಿಗಳಿ ತಂಬಿಟ್ಟು ತಂದಿಹೆ ಗಣಪತಿಮತಿಯ ಕರುಣಿಸು ವಂದಿಸುವೆ 2 ನಿತ್ಯ ಬ್ರಹ್ಮಚರ್ಯ ಉತ್ತಮ ವ್ರತವುಳ್ಳಮತ್ತು ಪಾರ್ವತಿಯ ತನಯನೆಮತ್ತು ಪಾರ್ವತಿಯ ತನಯನೆ ವಿಘ್ನೇಶನೆ ಭಕ್ತಿಯಿಂದ ಮೊದಲೆ ಬಲಗೊಂಬೆ 3 ಸುಲಭದಿ ರುಕ್ಮಿಣಿಯ ಗೆಲಿಯಬೇಕೆನುತಲೆಹಲಧರನ ತಂಗಿ ಸುಭದ್ರೆಹಲಧರನ ತಂಗಿ ಸುಭದ್ರೆ ಮೊದಲಿಗೆ ಚಲುವ ಗಣಪತಿಯ ನೆನೆದಳು 4 ಪರೀಕ್ಷಿತ ಪರೀಕ್ಷಿತ ಮೊದಲೆ ಪೂಜೆಯ ಮಾಡಿಪ್ರತ್ಯಕ್ಷ ರಾಜ್ಯ ಪಡೆದನು 5 ಆನೆಯ ಮುಖದವನ ಮತ್ತಾರು ಪೂಜಿಸಿದರುತಾನು ಮಾಂಧಾತರಾಯ ಮೊದಲಾಗಿತಾನು ಮಾಂಧಾತರಾಯ ಮೊದಲು ಪೂಜೆಯ ಮಾಡಿನಾನಾ ಸೌಭಾಗ್ಯ ಪಡೆದನು 6 ಮುದ್ದು ರಾಮೇಶನ ಪೂಜಿಸಿ ರಾವಣನ ಗೆಲಿದನುಮ್ಯಾಲೆ ಪಾಂಡವರು ಮೊದಲಾಗಿಮ್ಯಾಲೆ ಪಾಂಡವರು ಮೊದಲ ಪೂಜೆಯ ಮಾಡಿಹೀನ ಕೌರವರ ಗೆಲಿದರು 7
--------------
ಗಲಗಲಿಅವ್ವನವರು
ಸಲಹಿಕೊಂಬವರಿಲ್ಲವೋ ವೆಂಕಟರಾಯ ಗೆಲುವ ಪರಿಯ ಕಾಣೆನು ಪ ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ ಅರಳಿಯ ವೃಕ್ಷದೊಳು ಆನೆಯ ತಂದು ಸ್ಥಿರವಾಗಿ ಕಟ್ಟಿದಂತೆ ದುರುಳರು ಬಂದೆನ್ನ ಕೊರಳು ಕೊಯ್ದೀಗ ಪರಿ ಇರವ ಕಾಣುತ ಮುಂದೆ 1 ಮಾಡಿದ ಉಪಕಾರವ ಮರೆತು ಮುಂದೆ ಕೇಡನು ನೆನೆವರಿಗೆ ನೋಡಿದೆ ಯಾತಕೆ ಮಾಡದೆ ಶಿಕ್ಷೆಯ ಆಡಿದೆ ನಿನ್ನೊಳು ಬೇಡ ಇನ್ನವರೊಳು 2 ವಾರಿಧಿ ತೀರದಲಿ ನೆಲ್ಲನು ತಂದು ಹಾರಿಸಿ ಬಿತ್ತಿದಂತೆ ಭವ ಘೋರ ಕಾನನದೊಳು ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ 3 ಒದಗಿದ ನ್ಯಾಯದಲಿ ಇದಿರು ಬಂದು ಕದನವ ಕಟ್ಟುತಲೆ ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ 4 ನೊಂದೆನು ಬಹಳವಾಗಿ ಈ ಭವದ ಸಿಂಧುವ ದಾಟಿ ಹೋಗಿ ಚಂದದಿ ನಿನ್ನಯ ಚರಣಾರವಿಂದವ ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
(ಇ) ವಾತ್ಸಲ್ಯಭಾವÀ33ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ಪ.ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರುಆನೆಯಾಡಬಾರೊ ರಂಗ ಎಂದೆನ್ನನೊಯಿದುತಾನಾಗಿ ಗೋರಸವನು ಕೊಟ್ಟರುಣ್ಣದೆ ಚೆಲ್ಲುವೆನೀನಣ್ಣನ ಕರೆದು ಕೇಳೆ ಗೋವಳೇರ ಠಕ್ಕ ಡೌಲು 1ಸಾಸಿರ ಬಿಸಳಿಗೆ ಬೆಣ್ಣೆ ಕೂಸುಗಳು ಮೆಲ್ಲೋದುಂಟೆಹೇಸಿಕೆಬರುತಿದೆಅವರಮೊಸರು ಕಂಡುಮೀಸಲ ಮುರಿದರೆಅವರಜೆಟ್ಟಿಗ ನನ್ನ ಕಚ್ಚನೆಹಾಸ್ಯದೊಳು ಮಾತನಾಡಿ ಮೋಸ ಮಾಡುತಿಹರಮ್ಮ 2ತಮ್ಮ ಮಕ್ಕಳುಪಟಳ ನಮ್ಮ ಮೇಲಿಕ್ಕುತಿಹರುತಮ್ಮ ನಲ್ಲರ ಕಾಟವು ನಮ್ಮದೆಂಬರುನಿಮ್ಮ ಮಕ್ಕಳ ಗುಣವ ನೀ ಬಲ್ಲೆ ನಂದನರಾಣಿಗುಮ್ಮನಂಜಿಕೆಗೆ ಮನೆಯೊಳಿಹೆನೆ ಪ್ರಸನ್ವೆಂಕಟ 3
--------------
ಪ್ರಸನ್ನವೆಂಕಟದಾಸರು
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ಬಡವಾ ನಿನಗೊಬ್ಬರಗೊಡವೆ ಏತಕೊ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಒಡವೆ ವಸ್ತು ತಾಯಿತಂದೆ ಒಡೆಯ ಕೃಷ್ಣನೆಂದು ನಂಬೋ ಪ.ಒಪ್ಪತ್ತು ಭಿಕ್ಷವ ಬೇಡು, ಒಬ್ಬರಿಗೆ ಒಂದಿಷ್ಟು ನೀಡು |ಅಪ್ಪನಾದಚ್ಯುತನ ನೋಡು, ಆನಂದದಲಿ ಪೂಜೆಮಾಡು 1ಮಡದಿ ಮಕ್ಕಳು ಹೆದರಿಸಿದರೆ ಮುಂಕೊಂಡು ನೀಅಡಕೆಯ ಹೋಳಿಗೆ ಹೋದ ನಾಚಿಕೆ ಆನೆಯಬಲ್ಲೆ ನಿನ್ನ ಎಲ್ಲ ಮಾತು ಕ್ಷುಲ್ಲಕತನದ ಭ್ರಾಂತು |ಎಲ್ಲರ ಮನೆಯ ದೋಸೆ ತೂತು ಅಲ್ಲವೇನುವೇದ - ತರ್ಕವೆಲ್ಲವು ಭ್ರಾಂತಿ -ಬೂದಿಮುಟ್ಟಿದ ಕೆಂಡದಂತೆ ಬುದ್ಧಿಯಲಿರುದೊರೆತನವು ಏನು ಹೆಚ್ಚು - ಸಿರಿಯು ಏನುವರದ ಪುರಂದರವಿಠಲರಾಯನು ಪರಿಪಾಲಿಪನೆಂದು ನಚ್ಚು 5
--------------
ಪುರಂದರದಾಸರು
ಬಲಿಯ ದಾನವಬೇಡಿ | ಚೆಲುವಕಾರವಾಗಿದೆ |ನೆಲನಾ ನಿರಡಿಯಾ ಮಾಡಿದಾಡೆ ನಾನಾ|ಲಲಾನೆ ಮಾಡಿಯಾಲಿಟ್ಟುಶಿರಾ ವಾನೊರಾಸೂಕ್ತ | ಮೊಲೆಯಾನೂಡುವಾ ಪುಣ್ಯ ಹೀಗೆಪಡೆದಾಳೋ | ಮಗಾನೆಂದೂ ಪಮಗಾನೆಂದಾಡಿಸುವಾಳು | ಮೊಗಾನೊಡಿನಗೂವಾಳು |ಮಿಗೆ ಹರೂಪದಾಲಿ ಲೊಲಾಡುವಾಳೂ |ಜಗಾದೂರಂಗಾಗಿ | ಮೊಗ ಬಂದು ರಕ್ಷಕ |ಬಿಗಿದಪ್ಪೊ ಪುಂಣ್ಯ ಹೇಗೆ ಪಾಡದಾಳೊ 1ಪಶೂಪಾಲೆಯರೂ | ಬ್ರಂಹ್ಮವನೂ ನೂರಮುನಿಗಳು |ವಸುಧಯ ಮಲುಳಿದಾವರೆಲ್ಲಾರು | ಶಶಿಮೌಖಿಸಾವಿರಾ |ವರಹಾವಿತ್ತವಾನೆಂದೂ | ಕೊಸಾರಾನಿಡುವಾ ಪುಣ್ಯಹೇಗೆ ಪಡದಾಳೊ 2ಸಾಗಾರಾ ಸುತಿಯಾರು |ಭೋಗಿ ಯನಾನಾ |ಯೋಗಾನಿದ್ರೆಯೊಳದ್ಯ ದೇವನಾ |ಆಗಾಮಾ ಶೃತಿಗಾಳು | ಆರಾರೆ ಕಾಣದ ವಾಸ್ತುವ |ಕೂಗಿದಾಳೆ ಪುಂಣ್ಯ ಹೇಗೆ ಪಾಡದಳೋ 3ಕಾಲಲಂದ್ಹುಗೆಕಿಂಕಿಣಿ ಹೊಂನ್ನು ಕಿರೂಗೆಜ್ಜೆ |ಹಾರಾಸಾರದಾ ಕೊರಾಳಾ ಪಾದಾಕಾ | ಬಾಲದೊಡಿಗೆಸಮ್ಮಬಾಲಾನಾಯತ್ತಿಕೊಂಡು | ಹಾಲಾಕೂಡಿಸುವಾ ಪುಂಣ್ಯಹೇಗೆ ಪಾಡಾದಾಳೊ 4ತೋಳಂನಾಡೆಲೊ ಕೃಷ್ಣ ಕೊಳಂನಾಡಿಸುಕಾಲಿ |ಭಾಮೆರೂಕಮಿಣಿ ಬಿಗಿದಪ್ಪುವಾ |ಭಾಮರೂಕೂಮಿಣಿ ಬಿಗಿದಾಪ್ಪುವಾ ನೆಲನಾ ತೊಳಂನಾಡಿಸುವಪುಣ್ಯ ಹೇಗೆ ಪಾಡದಾಳೊ 5ಆನೆಯೊಡೆಲೊ ಕೃಷ್ಣ | ಆನೆಯೊಡೆನೂಲಾಲಿರಾಯರಾಯರೂಗಾಗೆಲಿದಂತ | ರಾಯಾ ರಾಯಾಕೂ ಗಾಲಾ ಪಟ್ಟದಾನೆಯಾಡಿಸುವ ಪುಂಣ್ಯಹೇಗೆ ಪಡದಾಳೋ 6
--------------
ಪುರಂದರದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು