ಒಟ್ಟು 24 ಕಡೆಗಳಲ್ಲಿ , 17 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಾಘವೇಂದ್ರರು ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1 ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2 ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3 ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4 ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5 ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
--------------
ಗೋಪತಿವಿಠಲರು
ಶ್ರೀ ವ್ಯಾಸರಾಯರು ನೋಡಿದೇ ನಾ ನೋಡಿದೆ ಪ ನೋಡಿದೆನೊ ಗುರು ವ್ಯಾಸರಾಯರ ನೋಡಿದೆನೊ ಶುಭಕಾಯರಾ ಮಾಡಿದೆ ಶಿರಬಾಗಿ ನಮನವ ಬೇಡಿದರ್ಥವ ಕೊಡುವ ವಡೆಯರ ಅ.ಪ ಭಿದುರಮಯವಾದ ವೇದಿಕಾಗ್ರದಿ ಚದುರದಿಕ್ಕಿಲಿ ಶೋಭಿಸುವ ಶುಭ ತ್ರಿದಿಶವರ ಮುಖ ದಿವಿಜರೈವರು ಮುದದಿ ಇರುತಿಹರಿವರ ಮಧ್ಯದಿ ಪದುಮನಾಭನ ಚತುರರೂಪವÀ ಹೃದಯ ಮಂದಿರದಲ್ಲಿ ಭಜಿಸುವ ಪದುಮನಾಭನ ಪ್ರೀತಿಪಾತ್ರರ ಸದಮಲಾಗುರು ವ್ಯಾಸರಾಯರ 1 ಶ್ರೀನಿವಾಸನು ಶಿರಸಿನೊಳಗಿಹ ಆನನಾಗ್ರದಿ ಬಾದರಾಯಣ ಙÁ್ಞನಮಯ ಶಿರಿ ಹಂಸ ಅಚ್ಯುತ ಮೌನಿ ಕಪಿಲಾನಂತ ಭಾರ್ಗವ ಮಾನನಿಧಿ ಹಯಗ್ರೀವ ಹಂಸನು ದಾನವಾಂತಕ ರಾಮಚಂದ್ರ ಸ - ದಾನುರಾಗದಿ ತೆನೆಗಳಲ್ಲಿ ಭಾನುನಂದದಿ ಪೊಳೆವ ಬಗೆಯನು 2 ಮಧ್ಯಭಾಗದಿ ಕೃಷ್ಣದೇವನು ಇದ್ದು ಇವರನು ಸೇವೆ ಮಾಳ್ಪರ ಶುದ್ಧ ಮಾಡÀ್ಯವರರ್ಥ ಸರ್ವದ ಶಿದ್ಧಿಮಾಡಿ ಇವರನತಿ ಪ್ರ ಶಿದ್ಧಮಾಡಿವರಲ್ಲಿ ಪ್ರತ್ಯಕ್ಷ ಸಿದ್ಧನಾಗಿರುತಿಹನು ನಮ್ಮ ಗುರು ಮಧ್ವಗುರುಜಗನ್ನಾಥವಿಠಲನ ಮಧ್ಯಹೃದಯದಿ ಭಜಿಪ ಗುರುಗಳ 3
--------------
ಗುರುಜಗನ್ನಾಥದಾಸರು
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ
ಸರಸಿಜಭವಸತಿ ಕರುಣಿಸು ಸನ್ಮತಿ ಹರಿ ಸ್ಮರಣಾಭಿರತಿ ಪರಮ ಕೃಪಾಕರೆ ವರದಾಭಯಕರೆ ನೀನಹುದೌ ಸುಕರೆ ಪ. ಸತ್ಯವೆನಗಿದು ಉತ್ತಮಾಂಗವು ಭಕ್ತಿಯೆ ಫಾಲಸ್ಥಲವು ಉತ್ತಮೋತ್ತಮ ವಿನಯಮೆಂಬುದೇ ನಾಶಿಕವದು ನಿಜವು 1 ಆನನ ವಿದರೋಳ್ ತಾನಾಗಿರೆ ವೇದವೆ ವದನವು ಮಾನಸಕತಿ ಸುಖವು 2 ಬಗೆಗೊಳ್ಳುವ ನಿನ್ನೀ ಬಗೆಬಗೆ ರೂಪವ ಬಗೆಬಗೆದಾನೆವೇಂ ಸೊಗಸಿತೆ ನಿನ್ನೀ ಬಗೆ ಸೇವೆಗೆ ನಿನ್ನಣುಗರ ವರಿಸೆನುವೇ 3 ದೇಶಸೇವೆಯೊಳಾಶಿಸುತಿರುವೆಮಗಾಶ್ರಯತರು ನೀನೇ ಭಾಷಾಮಾನಿನಿ ಬಲಗೊಂಬೆನು ನಿನ್ನನೆ ಶೇಷಗಿರೀವರನಾಣೆ 4
--------------
ನಂಜನಗೂಡು ತಿರುಮಲಾಂಬಾ
ಸರಸ್ವತಿ ಬ್ರಹ್ಮನರಸಿ ವಾಣೀ ನಿನ್ನ ಸ್ಮರಿಸೆ ವೇದಮರ್ಮ ತಿಳಿಸಿ ಪರಬ್ರಹ್ಮನ ತೋರಿಸೆ ಪ ಆನನ ತೂಗುತಶ್ರೀನಿವಾಸನ ಗುಣಗಾನ ಮಾಡುವಿಯೆ 1 ಮಣಿ ಭೂಷ ವೃಂದ ಶೋಭಿತ ಕರಇಂದುವದನೆ ಮಯೂರೇಂದ್ರ ವಾಹನಳೆ2 ಈಸು ಪುಸ್ತಕದೊಳು ವಾಸಮಾಡುತಇಂದಿರೇಶನ ಸೊಸೆ ಭಕ್ತರಾಶಿಗೆ ಪೊಳೆಯೆ 3
--------------
ಇಂದಿರೇಶರು
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಜಯ ಮಂಗಳಂ ಮಹಾ ಶುಭಮಂಗಳಂಮಂಗಳಂ ಮಧುಹರಗೆ ಮಾವರನಿಗೆ ಪ.ಶ್ರುತಿಹೃತ ವಿಹೃತನಾದಗೆಕ್ಷಿತಿಭೃತ ವಿಭೃತನಾದಗೆಧೃತಿಜಿತವಿಜಿತ ಕುಪಿತಗೆ ವಿತರಣಾಂತಗೆಪತಿತತನು ಕ್ಷತಕೃತಗೆಕೃತಪೂತಹಿಸತಿನುತಗೆಪತಿವ್ರತ ಮೋಹಿತ ತುರಗಯುತವ್ಯಾಕೃತಗೆ 1ತತ್ವಾಮೃತ ಸತ್ಯವ್ರತಗೆಮಥÀನಾಮೃತ ದಿತಿಜಾತರ್ಗೆಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆಭ್ರಾತಪಿತ ಸ್ತ್ರೀಸತಿವ್ರಾತಕೆಭೂತಪತಿಗೆ ಜಾತಧರ್ಮಕೆಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ 2ಅನಿಮಿಷಾನಿಮಿಷ ಮಾನಿಗೆಕನಕಾಕ್ಷಕನಕಕಶ್ಯಪುವಿನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆಆನನದಶದಾನವಮಾನಿನಿಹನನಶೀಲ ಮೋನಾನ್ವಿತಗೆಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ 3
--------------
ಪ್ರಸನ್ನವೆಂಕಟದಾಸರು
ಜಯ ಮಂಗಳಂ ಮಹಾ ಶುಭಮಂಗಳಂಮಂಗಳಂ ಮಧುಹರಗೆ ಮಾವರನಿಗೆ ಪ.ಶ್ರುತಿಹೃತ ವಿಹೃತನಾದಗೆಕ್ಷಿತಿಭೃತ ವಿಭೃತನಾದಗೆಧೃತಿಜಿತವಿಜಿತ ಕುಪಿತಗೆ ವಿತರಣಾಂತಗೆಪತಿತತನು ಕ್ಷತಕೃತಗೆಕೃತಪೂತಹಿಸತಿನುತಗೆಪತಿವ್ರತ ಮೋಹಿತ ತುರಗಯುತವ್ಯಾಕೃತಗೆ 1ತತ್ವಾಮೃತ ಸತ್ಯವ್ರತಗೆಮಥÀನಾಮೃತ ದಿತಿಜಾತರ್ಗೆಕಥಾಮೃತ ಸುಮತಿಗೆ ಕೃಪಾಮೃತ ದೈತ್ಯಜಗೆಭ್ರಾತಪಿತ ಸ್ತ್ರೀಸತಿವ್ರಾತಕೆಭೂತಪತಿಗೆ ಜಾತಧರ್ಮಕೆಹಿತಾಮೃತ ತಾಮೃತೋಪೇತಗೆ ಮೂತ್ರ್ಯಮಲನಿಗೆ 2ಅನಿಮಿಷಾನಿಮಿಷ ಮಾನಿಗೆಕನಕಾಕ್ಷಕನಕಕಶ್ಯಪುವಿನ ನಿಘಘ್ನ ಅಕ್ಷಯತನುಗೆ ಜನನಿಜಘ್ನುಗೆಆನನದಶದಾನವಮಾನಿನಿಹನನಶೀಲ ಮೋನಾನ್ವಿತಗೆಜ್ಞಾನಜನೇಶ ಪ್ರಸನ್ವೆಂಕಟ ಅನಾಥನಾಥಗೆ 3
--------------
ಪ್ರಸನ್ನವೆಂಕಟದಾಸರು