ಒಟ್ಟು 19 ಕಡೆಗಳಲ್ಲಿ , 14 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು
ಉಪ್ಪವಡಿಸಯ್ಯ ಹರಿಯೇಏಳೈ ಹೃಷಿಕೇಶ ಏಳುರವಿ-ಶಶಿನಯನಪ.ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವಏಳು ಸುರವಂದಿತನೆ ಏಳು ಭೂಸತಿರಮಣಉಪ್ಪವಡಿಸಯ್ಯ ಹರಿಯೇ ಅಪಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯುಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯುಪುನ್ನಾಗಅಚ್ಚರಿಯ ಬಕುಲ ಕೆಂಜಾಜಿ ಕೇತಕಿಕುಸುಮಗುಚ್ಛಗಳಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗುಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆಉಪ್ಪವಡಿಸೊ 1ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರುಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನುರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||ಮನ್ನಣೆಯ ನಾರದರು ಮೊದಲಾದ ಮುನಿನಿಕರನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯಇನ್ನು ಏಳೇಳು ಉದಯದ ಸಮಯ ಸಿರಿಯರಸಚೆನ್ನಿಗನೆ ಉಪ್ಪವಡಿಸೊ 2ದೇವದುಂದುಭಿ ಮೊಳಗೆ ದೇವಕನ್ನೆಯರೆಲ್ಲದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||ದೇವ ಪ್ರಹ್ಲಾದಬಲಿ ಮುಖ್ಯರನು ಕಾಯ್ದವನೆದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲಉಪ್ಪವಡಿಸೊ 3
--------------
ಪುರಂದರದಾಸರು
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು
ರಂಗ ಕೊಳಲನೂದಲಾಗ |ಮಂಗಳಮಯವಾಯ್ತುಧರೆ-ಜ -ಪನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
--------------
ಪುರಂದರದಾಸರು