ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತೆಂದೆನಬ್ಯಾಡಿ ಧ್ರುವ ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ ಎಲ್ಲ ಕಡೆಯಲ್ಲೇಕೋಮಯವೊ ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ ಫುಲ್ಲಲೋಚನ ಪ್ರಾಣದೊಲ್ಲಭನು 1 ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ ನಿತ್ಯವಾಗಿಹ್ಯ ಹೃತ್ಕಮಲದಲಿ ತುತ್ತಾಯಿತ ತಾ ಮಾಡಿ ನಿತ್ಯಸಲಹುವ ಹತ್ತಿಲೆ ಹೊಳೆಯುತ ಚಿತ್ತದಲಿ 2 ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ ಸಂಧಿಸಿಹನು ಅಂತರಾತ್ಮದಲಿ ತಂದೆ ತಾಯಿಯು ಬಳಗಾಗಿಹ್ಯ ತಾನೆ ಎಂದಿಗೆ ಅಗಲದೆ ಅನುದಿನದಲಿ 3 ಜನವನದೊಳಗಿಹ್ಯ ಜನಾರ್ಧನ ತಾನು ತನುಮನದೊಳು ಥಳಥಳಸುತಲಿ ಅನುಮಾನವಿಲ್ಲದೆ ಅನಿಮಿಷದಲಿ ನೋಡಿ ಆಣುರೇಣುದಲಿ ಪರಿಪೂರ್ಣನು 4 ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು ಸೂರ್ಯಾಡಬಹುದು ಸುಜ್ಞಾನಿಗಳು ತೋರದು ಎಂದಿಗೆ ಗುರುಕೃಪೆಯಿಲ್ಲದೆ ತರಳಮಹಿಪತಿ ವಸ್ತುಮಯವಿದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತ್ರೆ ತಾಳ ಇವು ಯಾತಕ್ಕೋ ಹರಿ ಖಾತ್ರಿ ತಾಳ ಶುದ್ಧಿರಬೇಕೊ ಪ ಧಾತ್ರಿ ಈರೇಳಕ್ಕೆ ಸೂತ್ರಧಾರ ಕೃಪಾ ಪಾತ್ರನಾಗ್ವ ತಾಳ ತಿಳೀಬೇಕೊ ಅ.ಪ ಕೃತಿ ಇವುಯಾತಕ್ಕೋ ಹರಿ ಪೂರ್ಣಮಹಿಮಸ್ಮøತಿ ಅರೀಬೇಕೊ ವರ್ಣಾಶ್ರಮ ಧರ್ಮ ಬಣ್ಣಿಪಗೂಡಾರ್ಥ ಕರ್ಣಕ್ಕೆ ಬಲು ತಾಳಿರಬೇಕೊ 1 ರಾಗಭೇದಗಳ ಬಲವ್ಯಾಕೋ ಹರಿ ಭೋಗಭಾಗ್ಯದಾಸೆ ನೀಗಿ ಸುಮನರನು ಬಾಗಿ ಒಲಿಸುವ ತಾಳಿರಬೇಕೊ 2 ಸಾಸಿರವಿದ್ಯದ ತಾಳ್ಯಕೋ ಹರಿ ಧ್ಯಾಸದ ಮಹ ತಾಳಿರಬೇಕೊ ಶ್ರೀಶ ಶ್ರೀರಾಮನದಾಸರ ಪ್ರೇಮನು ಮೇಷ ತನಗೆ ತಾಳಿದ್ದರೆ ಸಾಕೊ 3
--------------
ರಾಮದಾಸರು
ಮಾಧವ ಗೋವಿಂದ ಪ ಪಾದಭಕುತಿ ನೀಡೋ ದೇವ ಅ.ಪ ಅನವರತವು ಮನದಿ ನಿನ್ನಯ ಘನಮಹಿಮೆಗಳನ್ನು ಮೋದದಿ ನೆನೆಯುವಂತೆ ಮಾಡೋ ದೇವ 1 ಅಭಿಮಾನವ ಬಿಡಿಸೋ ವಿಷಯದ ಅಭಿಮಾನವ ಬಿಡಿಸೋ ನಿನ್ನಯ ಅಭಯಕರ ನೀಡೋ ದೇವ 2 ಎಂದಿಗು ಹೃದಯದಲಿ ರಾಗದ ಗಂಧವು ಬರದಂತೆ ದೇವ ಸುಂದರ ಗೋಪಾಲ ಎನ್ನ ಹೃ ನ್ಮಂದಿರದಲಿ ನಿಲ್ಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮಾಧವ ತೀರ್ಥಾ ಯತಿ ವಾಸಿಪ ವೃಂದಾವನದಲ್ಲಿ ಖ್ಯಾತಿ ಪ. ವಾಸುದೇವನ ಭಕ್ತ ಸುಜನಕೆ ಪ್ರೀತಿ ಸೂಸುತ ಪೊರೆಯುವ ಕರುಣಿ ಪ್ರತೀತಿ ಅ.ಪ. ಭದ್ರಾವತಿಯ ತೀರ ನರಸಿಂಹ ಕ್ಷೇತ್ರ ಭದ್ರಾವತೀ ಪುರ ಮಠದಿ ಸತ್ಪಾತ್ರಾ ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ 1 ಸ್ವಪ್ನದಿ ತೋರಿದ ಯತಿರೂಪದಿಂದ ವಪ್ಪದಿ ದರ್ಶನಕೆ ಬಾರೆಂದು ನುಡಿದಾ ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ2 ಎನ್ನಿಂದ ಸಾರೋದ್ಧಾರ ಪದವನ್ನು ಎನ್ನಲ್ಲೆ ನಿಂತು ತಾ ಬರಸಿದ ಘನ್ನ ತನ್ನ ದೇವತ್ವವ ತೋರ್ದ ಪ್ರಸನ್ನ ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ 3 ಮಧ್ವಕರ ಸಂಜಾತ ಮಾಧವರಂತೇ ಶುದ್ಧ ಈ ಯತಿಕುಲ ಸಂಜಾತನಂತೇ ಭದ್ರಾವತೀ ಪುರದಲ್ಲಿ ವಾಸಂತೇ ಮುದ್ದು ಕೇಶವ ಮಾಧವಾತೀರ್ಥನಂತೆ 4 ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ ಕಾಮಚಾರಿಗಳೀಗೆ ತೋರ್ಪನಲ್ಲಂತೆ ಸ್ವಾಮಿ ರಾಮನ ಜಪಮೌನ ವ್ರತವಂತೆ ಯೋಗಿ ಅವಧೂತನಂತೆ 5 ಭಾಗಾವತಾದಲ್ಲಿ ಬಹು ದೀಕ್ಷಾಯುತರು ಬಾಗಿದ ಜನರಿಗೆ ಪ್ರೇಮ ತೋರುವರು ಭಾಗವತವ ರಾಜಗ್ಹೇಳಿದರಿವರು ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು 6 ನಂಬಿದ ಜನರಿಂದ ಹಂಬಲೊಂದಿಲ್ಲ ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ ಕುಂಭಿಣಿ ಮೂಢರಿಗೀವನು ಬಲ್ಯಾ 7 ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ ಘನ್ನರ ಕೃಪೆಯಿಂದ ಈ ಮುನಿವರನಾ ಸನ್ನುತ ಸುಗುಣವ ಕಂಡ ನಾ ನಿನ್ನ ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ 8 ಸ್ವಾಪರೋಕ್ಷಿಯ ವೃಂದಾವನಸ್ಥಾ ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ ಕಾಪಾಡು ತವ ದಾಸದಾಸರ ನಿರುತಾ 9
--------------
ಅಂಬಾಬಾಯಿ
ಮಾಧವ ದೇವಾದಿ ದೇವಾ ಪ ಪ್ರೇಮದಿಂದ ಕಾವ ಶ್ರೀ ಮಹಾನುಭಾವ ಅ.ಪ. ಯಾರು ಇಲ್ಲದೆ ಘೋರಾಂಧಕಾರದೆ ಸೇರಿ ಸಾಗರ ಧೀರನಾಗಿದ್ದವ 1 ಸೃಷ್ಟಿ ಸ್ಥಿತ್ಯಾದಿ ಅಷ್ಟಕರ್ತನಾದಿ ಇಷ್ಟದಾತನೀತ ಶಿಷ್ಟ ಕೃಪಾನ್ವಿತ 2 ಅಚ್ಯುತಾನಂದ ಸ್ವಚ್ಛಮೂರ್ತಿನಾಥ ನೆಚ್ಚಿದವರ ಬಿಡ ಲಕ್ಷ್ಮೀಕಾಂತ ದೃಢ 3
--------------
ಲಕ್ಷ್ಮೀನಾರಯಣರಾಯರು
ಮಾಧವ ನಿಮ್ಮ ಪಾದಾ ದೋರೋ| ಸಾರಭಕುತಜನ ಸುರತರುವಾಗಿಹ ಪಾದಾದೋರೋ ಪ ಚಕೋರ ಚಂದಿರವಾದ ಪಾದಾದೋರೋ| ಪಾದ ದೋರೊ 1 ಕುಣಿದಾಡಿದ ಪಾದಾ ದೋರೋ| ಆಫಣಿಯಂಗವ ನಿರ್ವಿಷ ಮಾಡಿದ ಪಾದಾ ದೋರೊ2 ಸರಸಿಜ ಭವಭವರೊಂದಿತ ಪಾವನ ಪಾದಾ ದೋರೋ| ಗುರುಮಹಿಪತಿ ಪ್ರಭು ಕಂದಗೊಲಿದು ಬಂದು ಪಾದಾದೋರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಪ ಪರಮಪುರುಷ ನೀಪುರುಷೋತ್ತಮ ನೀ ಅಜ ಭವ ಸುರ ನರೋತ್ತಮಾರ್ಚಿತ ಅ.ಪ ದೇವ ದೇವೋತ್ತಮ ದೇವ ಸಾರ್ವಭೌಮ ಜೀವ ಜೀವಾಂರ್ತಗತ ಸರ್ವೋತ್ತಮ 1 ಅಣುತೃಣಗಣ ಮಹತ್ತತ್ವಾದಿಗಳ ಅನಂತರೂಪಗುಣಗಳಲಡಗಿ ಮೆರೆವ ಪ್ರಭು 2 ಬ್ರಹ್ಮ ಸುರೇಂದ್ರಾರ್ಚಿತ ಪಾವನ ಪದ ಚಿನ್ಮಯರೂಪ ಸುರಾಸುರ ವಂದ್ಯಾ 3 ಗರುಡಗಮನ ಸಿರಿರಮಣ ಚರಣನಖ ಕಿರಣ ಕೋಟಿರವಿತೇಜಪ್ರಕಾಶಕ4 ಗಂಗಾಪಿತ ಅನಂಗಜನಕ ಹೇ ಮಂಗಳಾಂಗ ರಘುರಾಮವಿಠಲ ಪ್ರಭು 5
--------------
ರಘುರಾಮವಿಠಲದಾಸರು
ಮಾಧವ ಮಾಯ ಜಾಲಗಳ್ ಜಾಣÀ ನೀನೆಲೈ ಮಧುರ ನುಡಿಯೊಳು ಮಾನವಳಿದ ಮೇಲ್ ಪ್ರಾಣವೇತಕೆ ಕಾಣಬಂದಿತು ನಿನ್ನ ಕಪಟವು 1 ಶೋಕ ಕಾರಣವರಿಯದಂತೆ ನೀ ನೇಕೆ ಪೇಳುವೆ ಬರಿದೆ ಎನ್ನನು ಸಾಕು ಸಾಕು ಈ ಸರಸವಾಕ್ಕುಗಳ್ ಶೋಕವಹ್ನಿಗೆ ಆಜ್ಯ ಸುರಿವರೆ 2 ಭಾಮೆ ಕೃಷ್ಣನ ಪ್ರೇಮ ಪುತ್ಥಳಿ ಸಾಮ್ಯರಹಿತವೀ ಸ್ನೇಹವೆನ್ನುತ ಭೂಮಿಯೊಳ್ ಜನ ಪೊಗಳುತ್ತಿದ್ದರು ಈ ಮಹಾಭ್ರಮೆ ಪೋಯಿತೀಗಲೆ 3 ಚಾರುನುಡಿಗಳಾಪಾರವೆನ್ನೊಳು ಸಾರ ಪ್ರೇಮವು ರುಕ್ಮಿಣಿಯೊಳು ಪಾರಿಜಾತದ ಪುಷ್ಪವವಳಿಗೆ ನೀರಸೋಕ್ತಿಗಳೆನ್ನ ಪಾಲಿಗೆ 4 ಅಮರ ಮುನಿಪನು ನಿನ್ನ ಸಮುಖದೊಳ್ ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ ಕುಮತಿಯಿಂದ ತಾನೆನ್ನ ತೆಗಳಲು ಅಮಮಯೆಂದೆಯಾ ಅಪ್ರಮೇಯನೆ 5 ಕುಸುಮ ಮಾಲೆಯು ಉರಗನಾದೊಡೆ ಮಾಳ್ಪುದೇನು ಶರದ ಚಂದ್ರನ ಕಿರಣ ತಪಿಪೊಡೆ ಹಿರಿದು ಕರ್ಮವ ಫಲವಿದೆಲ್ಲವೇ 6 ಕರಿಗಿರೀಶನ ಚಿತ್ತವೀಪರಿ ಇರಲು ಸುಮ್ಮನೆ ಕೊರಗಲೇತಕೆ ಸರುವ ಸಂಗವ ತೊರೆದು ತಪದೊಳು ನಿರತಳಾಗುವೆ ನೀರಜಾಕ್ಷ ಕೇಳ್ 7
--------------
ವರಾವಾಣಿರಾಮರಾಯದಾಸರು
ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ ಧ್ರುವ ಗೋಪವೇಷಧರ ಗೋಪ ಕೀಶೋರ ಚಕೋರ 1 ಯದುಕುಲತಿಲಕ ವಿರಾಜಿತ ಪೂರ್ಣ ಸದೋದಿತ ಸುಖಸಾಂದ್ರ ಸದ್ಗುಣ 2 ಭಾಸ್ಕರಕೋಟಿ ತೇಜ ಮಾಮನೋಹರ ದಾಸ ಮಹಿಪತಿ ಸ್ವಾಮಿ ಸಕಲ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಧವ ಗುರುವರ ಬೋಧಿಸು ಸುಖಸಾರ ಪಾದವ ಸ್ತುತಿಪೆನು ದಯವಾಗೊ ಸುಖಕರ ಪ ನಶಿಸಿಪೋಗುವ ಈ ವಿಷಮಸಂಸಾರದ ವಿಷಯದಾಸ್ಹರಿಸೆನಗೆ ಅಸಮಸುಖದ ಮಾರ್ಗ 1 ಅನುದಿನ ತ್ರಿಮಲಮೋಹಂಗಳ ಕ್ರಮದಿ ಖಂಡ್ರಿಸಿ ಮಹ ವಿಮಲಪದವಿ ಮಾರ್ಗ 2 ಮರವೆ ಮಾಯವ ತರಿದು ಅರಿವಿನಾಲಯದಿರಿಸಿ ಪರಮ ಶ್ರೀರಾಮನ ಚರಣಕಮಲಭಕ್ತಿ 3
--------------
ರಾಮದಾಸರು
ಮಾಧವ ನಮ್ಮ ಶ್ರೀಧವ ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ ನಿರುತ ನೀರೊಳು ನಿಂದ ಈತ ಚಾರು ನಿಗಮಗಳ ತಂದ ಬಲು ಭಾರ ಪೊತ್ತನು ಬೆನ್ನಲಿಂದ ಆಹ ಕೋರೆದಾಡೆಯಲಿಂದ ಘೋರದೈತ್ಯನ ಸಂ ಹಾರವ ಮಾಡಿ ಭೂಭಾರವನಿಳುಹಿದ 1 ಅರಮನೆಕಂಬದಲಿಂದ ಕಡು ಘೋರ ರೂಪವ ತಾಳಿ ಬಂದ ಮಹ ದುರುಳನುದರ ಬಗಿದುಕೊಂದ ಆಹ ಧರೆಯನೀರಡಿ ಮಾಡಿವ ದನುಜನ ತುಳಿದು ಚರಣದಾಸರ ಮನದೊರವಿತ್ತು ಸಲಹಿದ 2 ವೀರತನದಿ ಕೊಡಲಿಪಿಡಿದ ಧರೆಯ ಸಾರಕ್ಷತ್ರಿಯಮೂಲವಳಿದ ದೇವ ಧಾರುಣಿಯೊಳು ನರನಾದ ಅಹ ತೋರಿ ವಿಪಿನವಾಸ ಮೀರಿದಸುರನ ಕೊಂದು ಮೂರುಲೋಕದ ಕಷ್ಟ ದೂರಮಾಡಿದ ಶೂರ 3 ಗೊಲ್ಲಕುಲದಿ ಜನಿಸಿದ ಪುಂಡ ಬಿಲ್ಲಿನಾಟವ ರಚಿಸಿದ ವೀರ ಖುಲ್ಲ ಕಂಸನ ಮದ ಮುರಿದ ಆಹ ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4 ಸಾರಿಬತ್ತಲೆ ಕದಲಿದ ಪರಮ ನಾರಿಯರ ವ್ರತ ಭಂಗಿಸಿ ಮೆರೆದ ಮೂರುಪುರದ ಗರ್ವಮುರಿದ ಆಹ ಪಾರುಮಾಡಿದ ಸುರರ ಘೋರಕಂಟಕದಿಂದ ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5
--------------
ರಾಮದಾಸರು
ಮಾಧವ ಮಧುಸೂದನ ಕೇಶವÀ ಹರೆ ಯಾದವ ಕೃಷ್ಣ ಶ್ರೀಹರಿ ಶೌರೆಪ ವೇದವೇದ್ಯ ಸನÀ್ಮುನಿಗುಣ ಸೇವಿತ ಸಾಧುವಂದಿತ ಚರಣಕೆ ನಮಿಪÉ ಅ.ಪ ಮಂದರಧರ ಗೋವಿಂದ ಮುಕುಂದನೆ ಇಂದಿರೆಯರಸ ಹೃನ್ಮಂದಿರದಿ ಮಂದಗಮನೆ ಮಹಾಲಕ್ಷ್ಮಿಯೊಡನೆ ಆ- ನಂದದಿ ನಲಿನಲಿದಾಡು ಹರಿ 1 ಸರಸಿಜನಾಭನೆ ಮುರಳಿಧರನೆ ಹರಿ ಪರಮಪುರುಷ ಪಾವನರೂಪ ಸುರಗಂಧರ್ವರು ಸ್ತುತಿಸುತ ಪಾಡ್ವರು ವಾಹನ ಹರಿಯೇ2 ಆದಿಪುರುಷ ಪುರುಷೋತ್ತಮ ಹರಿ ಈ ವತ್ಸರ ಶುಭದಿನಗಳಲಿ ಆದರದಲಿ ಗುರುಹಿರಿಯರ ಸೇವಿಸಿ ಶ್ರೀಧರನನ್ನು ಭಕ್ತಿಲಿ ಭಜಿಸಿ 3 ಗೋಕುಲಪತಿ ಗೋವಿಂದ ಮುಕುಂದನೆ ಮಾತುಳಾಂತಕ ಮಧುಸೂದನನೆ ಗೋಪತಿ ಕೃಷ್ಣನೆ ಸಲಹುವ ಸುಜನರ ಮೂಕಾಂಬಿಕೆ ನಾಮವ ಧರಿಸಿ 4 ಕಡುಹರುಷದಿ ನಿನ್ನಡಿಗಳಿಗೆರಗುವೆ ಬಿಡದೆ ರಕ್ಷಿಸೆಂದೆನ್ನುತಲಿ ಕರುಣದಿ ಕಾಪಾಡುತ ಸಲಹುವದು ಕಮಲನಾಭ ವಿಠ್ಠಲ ದೇವ 5
--------------
ನಿಡಗುರುಕಿ ಜೀವೂಬಾಯಿ
ಮಾಧವನ ಚರಣಾರವಿಂದೆ ಪಾದೆ ಪ ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ 1 ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ ವಂದನೆಯ ಮಾಡಿ ಸಾಷ್ಟಾಂಗೆರಗಲೂ ದುರಿತ ರಾಸಿಗಳೆಲ್ಲ ಒಂದು ಉಳಿಯದಂತೆ ಬೆಂದು ಹೋಹವು 2 ಅತಿವೇಗದಿಂದ ಬಂದು ಸ್ನಾನವನು ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ಸಿರಿ ವಿಜಯವಿಠ್ಠಲನ್ನ ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ3
--------------
ವಿಜಯದಾಸ
ಮಾಧವಮಧುಸೂದನೆನಿಪಪಾದಭಜನೆಯಮಾಡುವೇ ಸಾಧು ಶಿಖರನೆ ಸರ್ವತಂತ್ರನೇ ಬೋಧಿಸೆನುತಾ ಬೇಡುವೇ ಪ ವಾರಿಧಿಶಯನ ಪಾರಮಹಿಮ ಪರಾತ್ಪರ ಪಾಪವಿದೂರನೇ ಅ.ಪ ಆತೊಡರ್ಚಿತುವೋತಡಂತಿಸೂ ಭೂತಪಕ್ಷದಯಾನಿಧೆ ಭೀತಿಗೊಳಿಸದಿರೆನ್ನ ನೀನೆ ಅನಾಥರಕ್ಷ ಕೃಪಾನಿಧೇ 1 ನೀನೆ ಕಲುಷವಿಖಂಡ ನಿಶ್ಚಲ ನೀನೆ ವೇದಾಂತಾರ್ಯನೂ ಶ್ರೀನಿವಾಸದಯಾನಿಧೆ ಜಗದಾನುಭವತತ್ತೂರ್ಯನೂ 2 ದೇಶಿಕನೆ ತ್ವದ್ದಾಸನಾಡೆಯ ಆಶೆಯಳಿದೀಗೆರಿನನೂ ಪಾಶರಹಿತನ ಮಾಡೊಯೆನುತಲಿ ಪಾಡುವೆನಾ ನಿನಗೆನ್ನನೂ 3 ನಿತ್ಯಪೂರ್ಣನೆ ಸತ್ವಗುಣಮಣಿ ಚಿತ್ಸುಖಾಂಶ ಚಿದಂಬರಾ ತತ್ವಮೆನಗೆ ಪ್ರಸಾದಿಸಿದ ಶ್ರೀತುಲಶಿರಾಮ ದಿಗಂಬರಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಮಾಧವಾ ನಿಮ್ಮ ನಾಮ ಸಾಲದೇ ಪ ಪರಗತಿ ಸುಖವನು ಸ್ಮರಿಸಲು ನಿನ್ನನಾ|| ಪರಿಪರಿ ತಪದಿಂದಾ ಚರಿಸುವ ದ್ಯಾತಕೆ ನಾ 1 ಕರಿಕಿರಿಯನ್ನಲು ಶರೆಯನು ಬಿಡಿಸಿದ| ಶರಣ ಪ್ರಹ್ಲಾದನ ದುರಿತದಿ ಕಾಯ್ದ2 ದ್ರೌಪದಿ ಸ್ಮರಿಸಲು ಆಪತ್ತ ಹರಿಸಿದ| ಆ ಪತಿತ-ಜಮಿಳ ಪಾಪದಿ ತರಿಸಿದ 3 ನೆನೆಯಲು ಪಿಂಗಳಾ ಕ್ಷಣದಿ ಗತಿಯ ಕೊಟ್ಟಾ| ಬಿನುಗು ಮಂಡೂಕನ ವಿಮಾನದಿ ಮೆರೆಸಿದಾ4 ದುರುಳನ ಕೈಯಿಂದ ಹರಣಿಯ ಕಾಯಿದಾ| ಗುರಿಯಾ ತಪ್ಪಿಸಿ ಸೆರೆ ಹೊರೆದ ಕಪೋತಕ5 ಹಲವು ಸಾಧನದಿಂದ ಬಳಲುವ-ದ್ಯಾತಕ| ತಿಳಿದವ ಬೇಡಿದ ಫಲವನೇ ಕೊಡುತಿಹ 6 ತಂದೆ ಮಹಿಪತಿ ನಂದನ ಸಾರಥಿ| ಎಂದೆಂದು ನನಗಿದೆ ಛಂರದಿ ಕುಡು ಕಂಡ್ಯಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು