ಒಟ್ಟು 24701 ಕಡೆಗಳಲ್ಲಿ , 138 ದಾಸರು , 9090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರವ್ವಾ ಕೇಳದೀ ಶ್ರೀನಿಧಿಯಾ|ಕಾರುಣ್ಯಂಬುಧಿಯಾ ಪ ಹರಿಯಾ ಸಕಲ ಜಗಧೊರಿಯಾ|| ಸುರಮನಿ ಜನಸಿರಿಯಾ|ಅನಂತಾನಂತ ಚರಿಯಾ| ಕರುಣ ಹೊಕ್ಕಾಕರಿಯಾ| ಕೇಳುತ ಘನ ಮೊರಿಯ ಬಂದೊದಗಿದಧೊರಿಯಾ 1 ಸ್ಮರನಾ ಲಾವಣ್ಯಾ ಮಂದಿರನಾ| ಸಿರಿದೇವಿ ಮನೋಹರನಾ ಪರಕ ಪರಾತ್ಪರನಾ| ಶಂಖಚಕ್ರದ ಕರನಾ| ಸಾರಥಿಯಾದಾ ನರನಾ|ಪೀತಾಂಬರ ಧರನಾ 2 ನಂದಾನಂದನ ಶ್ರೀ ಮುಕುಂದಾ| ದೀನವತ್ಸಲದಿಂದಾ|ಹೊರಿಯಲಯನ್ನದೊಂದಾ| ನೋಡದೇ ಮುನ್ನಿನ ಕುಂದಾ| ಗುರು ಮಹೀಪತಿ ಪ್ರಭುಬಂದಾ ನೀಡಿದಾನಂದಾ|| 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತೋರಿದ ನಿಜರೂಪ ಶ್ರೀಕೃಷ್ಣ ಆಹಾಗಾರ ಮಧ್ಯದಿ ವೃಜ ಚೋರ ಬಾಲಕನು ಪ ಪೆಟ್ಟಿಗೆಯೊಳು ಕರವಿಟ್ಟು ಬೆಣ್ಣೆಯ ತೆಗೆದಷ್ಟು ಇಷ್ಟನು ಮೆದ್ದು ಬೊಟ್ಟು ಚೀಪುವನು 1 ಜರದ ಕುಂಚಿಗಿ ಗೊಂಡ್ಯಾ ಶಿರದಿ ತೂಗುತಲೆನ್ನತಿರುಗಿ ತಿರುಗಿ ನೋಡಿ ಮುಚ್ಚದೆ ಪೋದನು 2 ಇಂದು ತಿನ್ನುತಲಿಹ ಶ್ರೀಕೃಷ್ಣಒಂದು ಎರಡು ವಯ ಇಂದಿರೇಶನ ಕಂಡು ನಂದ ಭೋಗಿಪೆನು 3
--------------
ಇಂದಿರೇಶರು
ತೋರಿಸಯ್ಯ ಬೆಳಕು ದೇವ ತೋರಿಸಯ್ಯ ಬೆಳಕು ದಾರಿ ತಪ್ಪಿ ದೂರ ಬಂದಿಹೆನು ಪ ತಿಮಿರ ಮಧ್ಯದಿ ನಿಂತಿಹೆನೊಅ.ಪ ಚತುರನೆಂದು ತಿಳಿದು ಬಲುದಿನ ಸ್ತುತಿಸಲಿಲ್ಲ ನಿನ್ನ ಪತಿತನೆಂಬ ಭಯ ತೊರೆದು ಧೈರ್ಯದಲಿ ಕ್ಷಿತಿ ಭೋಗಗಳಿಗೆ ಮತಿಗೊಟ್ಟೆನು ನಾ 1 ಬೇಡುವುದಿಲ್ಲವೊ ನಾ ಎನ್ನ ಕೂಡಿ ಪೋಗಲೆಂದು ಹೂಡು ಎನ್ನಯ ಹೆಜ್ಜೆಯ ಸನ್ಮಾರ್ಗದಿ ಕಾಡು ಮೇಡುಗಳ ದಾಟಿ ಬರುವೆನೊ 2 ಕೂತಿರುವೆನು ನಾನು ತನುಮನ ಸೋತಿರುವುದು ಬಹಳ ಈ ತರಹದಿ ಬದುಕಿರುವುದು ನಿನ್ನಯ ಪ್ರೀತಿಯಿಂದಲೆ ಜ್ಯೋತಿರ್ಮಯನೆ 3 ಎತ್ತಲು ಕಾಣದಿದೆ ಚಿತ್ತವ ಬೆಳಗಿಸೊ ಮತ್ತೆ ನೋಡುವೆನು ಉತ್ತಮ ದೃಶ್ಯವ ಭಕುತರ ಪ್ರಸನ್ನನೆ 4
--------------
ವಿದ್ಯಾಪ್ರಸನ್ನತೀರ್ಥರು
ತೋರಿಸು ಪಾದವ ವಾರಿಸು ದಾಹವ ಪ ನೀರಜ ಸಂಭವಾರಾಧಿತ ಮಾಧವ ಮಾರಜನಕ ಭವದೂರ ದಯಾರ್ಣವಾ ಅ.ಪ ಗಾನವಿಲೋಲಾ ಗೋಕುಲ ಬಾಲಾ | ದಾನವಕಾಲಾ ಶ್ರೀವನಮಾಲಾ 1 ಘನತರ ಲೀಲಾ ಮುನಿಜನ ಪಾಲಾ | ಕನಕದುಕೂಲ ಮಾಂಗಿರಿವರಬಾಲಾ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತೋರಿಸೊ ತವರೂಪ ತೋಯಜ ನೇತ್ರ ಪ ಮಾರಜನಕ ಕರುಣಾರಸಪೂರ್ಣನೆ ನಾರಾಯಣ ಭವತಾರಕ ಮಮ ಸ್ವಾಮಿ ಅ.ಪ. ದಶರಥ ನಂದನ ವಸುಮತಿ ರಮಣ ತ್ರಿ ದಶವಂದಿತ ಚರಣ ಪಶುಪತಿಧನುಭೇದನ ವಸುಧಾಸುತೆರಮಣ ಋಷಿಪತ್ನಿ ಶಾಪಹರಣ ಅಸಮಾ ವಲ್ಕಲ ಚೀರವಸನಾ ಭೂಷಣಸ್ವಾಮಿ ಬಿಸಜಾಪ್ತನ ಸುತಗೊಲಿದವನಗ್ರಜ ನಸುವನು ತೊಲಗಿಸಿ ಅಸುನಾಥನ ಸುತ ಗೊಸೆದು ಬಿಸಜಭವ ಪದವಿಯ ಕರುಣಿಸಿ ವಿಷಧಿಯ ಬಂಧಿಸಿದಸಮ ಸಮರ್ಥ 1 ದಿನಮಣಿವಂಶ ಮಸ್ತಕಮಣಿಯೆಂದೆನಿಸಿ ಮುನಿ ಕೌಶಿಕನ ಯಜ್ಞಫಲವಾಗಿ ರಕ್ಷಿಸಿ ಅನಲಾಕ್ಷಧನು ಮುರಿದು ಮುನಿಪತ್ನಿಯನು ಪೊರೆದು ಜನಕಸುತೆಯ ಕರವನು ಪಿಡಿದ ಧೀರ ಜನಕನಾಜ್ಞೆಯಿಂ ವನವ ಪ್ರವೇಶಿಸಿ ಇನಸುತಗೊಲಿಯುತ ಅನಿಲಜನಿಂದಲಿ ಘನಸೇವೆಯ ಕೊಂಡನಿಮಿಷ ವೈರಿಯ ಹನನಗೈದ ಹೇ ಅನುಪಮ ಶೂರ2 ಲೀಲಾಮಾನುಷರೂಪ ಭೂಲಲನಾಧಿಪ ಫಾಲಾಕ್ಷವಿನುತ ವಿಶಾಲಸುಕೀರ್ತಿಯು ತಾ ಆಲಸ್ಯವಿಲ್ಲದೆ ವಿಶಾಲವನವ ಪೊಕ್ಕು ವಾಲಿಯ ಸಂಹರಿಸಿ ಪಾಲಿಸಿ ಸುಗ್ರೀವನ ಲೋಲಲೋಚನೆಯಿಹ ಮೂಲವ ತಿಳಿದು ಬಂ ದ್ಹೇಳಿದ ಪವನಜಗಾಲಿಂಗನವಿತ್ತು ಖೂಳ ದಶಾಸ್ಯನ ಕಾಲನೆಂದೆನಿಸಿದ ಶ್ರೀಲೋಲನೆ ಶ್ರೀ ಕರಿಗಿರೀಶನೆ3
--------------
ವರಾವಾಣಿರಾಮರಾಯದಾಸರು
ತೋರಿಸೋ ಶ್ರೀಹರಿ ನಿನ್ನ ತೋರಿಸೋ ಪ ತೋರಿಸೋ ಹರಿ ವಿಶ್ವಮಯ ನಿನ್ನರೂಪವ ತಾರಿಸೋ ಭವಸಾಗರದಿಂದಲೆನ್ನನು ಅ.ಪ ಜಲ ಭೂ ಖೇಚರ ಪ್ರಾಣಿವರ್ಗಗಳೊಳು ನೆಲಸಿ ಅವ್ಯಕ್ತನಾಗಿಹ ನಿನ್ನ ರೂಪವ 1 ತೃಣ ಲತೆ ತರು ವನಸ್ಪತಿ ವರ್ಗಗಳೊಳು ಅಣಗಿ ಅವ್ಯಕ್ತನಾಗಿಹ ನಿನ್ನ ಮೂರ್ತಿಯ2 ಪಂಚಭೂತ ತನ್ಮಾತ್ರಂಗಳೊಳಡಗಿ ಪ್ರ ಪಂಚಕವ್ಯಕ್ತನಾಗಿಹ ನಿನ್ನ ಮೂರ್ತಿಯ 3 ಭೂತಜಾಲದ ಹೃತ್ಪೀಠದಿ ಮಂಡಿಸಿ ರಥಿಕನಾಗಿ ದೇಹರಥವ ಚಾಲಿಪ ನಿನ್ನ 4 ತಾರಾಗಣದಿ ಚಂದ್ರ ಸೂರ್ಯಾದಿಗ್ರಹ ಪರಿ ವಾರದೊಳಡಗಿ ಜ್ಯೋತಿರ್ಮಯನಹ ನಿನ್ನ 5 ತಳಿರೆಲೆ ಹೂ ಹೀಚು ಕಾಯಿ ಧಾನ್ಯಂಗಳ ಬೆಳೆಸಿ ಶೋಭಿಪ ದಿವ್ಯ ವಿವಿಧರೂಪಂಗಳ 6 ಅಂಗ ಪ್ರತ್ಯಂಗ ಕರಣಗಳೊಳಡಗಿಹ ಮಂಗಳಮಯ ಚತುರ್ಮೂರ್ತಿಗಳಿರವನು 7 ಅಜಭವ ಸುರಮುಖ್ಯ ದೇವಗಣದೊಳಿಪ್ಪ ಸುಜನರಂತರ್ಯಾಮಿ ಚರಪ್ರತಿಮೆಗಳನ್ನು 8 ಅಂಬುಜಾಂಬಕಿ ಜಗದಂಬೆ ಸಿತಾಪತಿ ಬಿಂಬಮೂರುತಿ ರಘುರಾಮವಿಠಲ ನಿನ್ನ9
--------------
ರಘುರಾಮವಿಠಲದಾಸರು
ತೋರು ನಿಮ್ಮ ಪಾದಕುಸುಮ ಮಾರನಯ್ಯಾಪಾರಮಹಿಮ ಪ ಧರೆಯ ಭೋಗದಾಸೆ ತೊರೆಸಿ ನಿರುತವಾದ ಮಾರ್ಗ ಹಿಡಿಸಿ ಕರುಣಿಸು ಎನ್ಹøದಯಕಮಲಕೆ ಕರೆ ತತ್ತ್ವಜ್ಞಾನ ಅಮೃತ1 ಕವಿದುಕೊಂಡಜ್ಞಾನಕತ್ತಲು ಜವದಿಹಾರಿಸಿ ಎನ್ನಯ ಭವದ ಬಂಧನ ದೂರಮಾಡಿ ಜವನಭಯನಿರ್ಬೈಲು ಎನಿಸು 2 ಮಯಾಮೋಹದೊಳಗೆ ಮುಳುಗಿ ಪೋಯಿತೆನ್ನಯ ಅರ್ಧವಯವು ಕಾಯಜಪಿತ ಸ್ವಾಮಿ ಶ್ರೀರಾಮ ನೋಯಿಸದೆ ನಿಜಪಥಕೆ ಹಚ್ಚೆನ್ನ 3
--------------
ರಾಮದಾಸರು
ತೋರುವನೂ | ದಯ ದೋರುವನೂ|| ಭಕ್ತರಿಗೆ | ದಯ| ದೋರುವನು ಪ ತೋರುತಲವರನು | ಪರಿಪರಿವಿಧದೊಳು ಪೊರೆಯುವನೂ | ಹರಿ | ಮೆರೆಯುವನೂಅ. ಪ ಆದಿಯೊಳಾ| ತಮನೆಂಬಾಸುರನನು || ಭೇದಿಸಿ ವೇದವ ತಂದವನು || ಮೋದದಿ ಗಿರಿಯನು | ಕೂರ್ಮವತಾರದಿ | ಸಾಧಿಸಿ ಬೆನ್ನೊಳು ಪೊತ್ತವನು 1 ಧರಣಿಯ ಕದ್ದೊಯ್ದಸುರನ ಬಗಿಯಲು | ವರಾಹವತಾರವ ತಳೆದವನು|| ನರಮೃಗರೂಪದೊ| ಳುದಿಸುತ ಕಂಬದಿ| ವರ ಪ್ರಹ್ಲಾದನ ಪೊರೆದವನು 2 ಬಲಿಯೊಳು ದಾನವ |ಬೇಡುತ ಮೂರಡಿ| ಯೊಳಗಿಳೆಯನು ತಾನಳೆದವನು|| ಭಾರ್ಗವನೂ ಭೃಗು ಮೊಮ್ಮಗನು| 3 ಶರಣಗೆ ಲಂಕಾ| ಪುರದೊಡೆತನವನು| ಸ್ಥಿರವಾಗಿತ್ತಿಹ ರಾಘವನು|| ತುರುಗಳ ನಿಕರವ ಪೊರೆದವನು 4 ಬೌದ್ದವತಾರವ | ಧರಿಸಿದ ಮಹಿಮನು| ಕಲ್ಕಿಸ್ವರೂಪದಿ ಮೆರೆಯುವನು|| ಶ್ರಧ್ದೆಯೋಳವನನು | ಭಜಿಸಲು ಮುದದಲಿ | ಅಬ್ಧಿವಾಸ ಮೈದೋರುವನು 5 ಮಧುವನದಲಿ ಧ್ರುವ | ತಪವಾಚರಿಸಲು | ಮುದದೊಳು ಧ್ರುವಪದವಿತ್ತವನು | ಸುದತಿಯು ಮೊರೆಯಿಡ | ಲಕ್ಷಯ ಸೀರೆಯ | ಇತ್ತವನೂ ದಯವಿತ್ತವನು6 ಶೇಷಗಿರೀಶನು | ದಾಸರಿಗೊಲಿದವ | ರಾಸೆಯ ಸಲಿಸಿದ | ಶ್ರೀವರನು || ಶೇಷಶಯನ ಹರಿ | ದಾಸದಾಸನೆ | ನ್ನಾಸೆಯನೂ ತಾನೀಯುವನು 7 ಪಂಕಜನಾಭನು | ಪರಮಪವಿತ್ರನು | ಕಿಂಕರಜನಪರಿಪಾಲಕನು || ಶಂಕಚಕ್ರಂಗಳ ಧರಿಸಿದ ಶ್ರೀಪತಿ | ವೆಂಕಟೇಶ ದಯದೋರುವನು 8
--------------
ವೆಂಕಟ್‍ರಾವ್
ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ ಹೃದಯವೆಂಬೊ ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ ಸಾರಿ ಮುರಾರಿ ಪ ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ ಅಂಬುಜಾಕ್ಷ ನೀ ನೆಂಬದು ಸುರನಿಕರಂಬ ಹಂಬಲಿಸಲು ದಿಂಬಾಗಿ ಕರ್ಣಾವಲಂಬನವಾಯಿತು ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ1 ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ ದಾನ ಕೊಂಡಡಲಾಮೇಲೆ ನೆನೆವೆನನುದಿನ ಮಾನವನ ಹೀನವ ನಾಡದೆ ನೀನೆನಿಸದೆ ಸುಮ್ಮನದಿಂದಲಿ ನೋಡೊ ದಾನವನ ವಡಲನು ಬಗದು ಕರುಳನು ವನಮಾಲೆ ಹಾಕಿದ ಶ್ರೀನಿಕೇತನ 2 ಇಂದು ಮಾಡುವದೇನು ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ ವಂದಿತ ಮರ ವೃಂದಾ ಕರುಣದಿಂದಾ ಎಂದಿಗೆಂದಿಗೆ ಎನ್ನಿಂದಗಲದೆ ಗೋ ವಿಂದ ಇಂದಿರಾಪತಿ ಸುಂದರ ವಿಗ್ರಹ ಮಂದಿರದೊಳು ಸುಮದಾಸನದಲ್ಲಿ ಬಂದು ವಿಜಯವಿಠ್ಠಲೆಂದು ನೀನಿಂದು3
--------------
ವಿಜಯದಾಸ
ತೋರೋ ತೋರೋ ತವ ದಿವ್ಯ ಚರಣವ ಪ ತೋರಿಸು ಕರುಣಾವಾರಿಧಿ ಶರಜ ನೀ ತೋರೋ ಅ.ಪ ವಲ್ಲಿದೇವಿಯ ವಲ್ಲಭ ಸುರನುತ ಪಲ್ಲವಾಧರ ವಿಶ್ವದೊಲ್ಲಭ ಶರಜ ನೀ ||ತೋರೋ 1 ತಾರಕನ ಸಂಹಾರಿ ಕಾರ್ತಿಕೇಯಾ ಶೂರಪದ್ಮನ ಅಸು ಹೀರಿದ ಶರಜ ನೀ ||ತೋರೋ2 ಕಂಬುಕಂಧರ ಭಕ್ತರ್ಗಿಂಬೀವ ಶರಜ ನೀ ||ತೋರೋ 3 ಯೋಗಿವಂದಿತ ರಾಗಾದಿ ವಿರಹಿತ ಆಗಮಜ್ಞನೆ ಗುಣಸಾಗರ ಶರಜ ನೀ ||ತೋರೋ 4 ವಾಸೀ ಪಾವಂಜೆ ಶೇಷ ಶಾಯಿಯ ಸಖ ದಾಸರ ಪೋಷ ಸರ್ವೇಶ ಶರಜ ನೀ ||ತೋರೊ 5
--------------
ಬೆಳ್ಳೆ ದಾಸಪ್ಪಯ್ಯ
ತೋರೋ ಮುಖವ ಕರುಣಿಸು ಸುಖವ ದುರುಳ ಜರಾಸುತನುರುತರ ಘನವನು ಪ. ತರಿದು ರುಕ್ಮಿಣಿಯ ವರಿಸಿದ ಧೀರ 1 ಸಾಂದೀಪಿನಿ ಗುರುವೆಂದ ನುಡಿಯ ಕೇ- ಳಂದು ಕಂಧರನ ತಂದ ಪರೇಶ್ವರ 2 ವರದ ಭುಜಗವರಗಿರಿಯ ಶಿಖರದಲಿ ಮೆರೆವನೆ ಮನದಲ್ಲಿರು ಸುಖಸಾರ 3
--------------
ತುಪಾಕಿ ವೆಂಕಟರಮಣಾಚಾರ್ಯ
ತ್ತಾತ್ವಿಕವಿವೇಚನೆ ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ ಕಾಯ ಕಾರ್ಯಕಾರಣವನನುಸರಿಸಿ ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು ನಿಜರೂಪ ಉಗ್ರ ಊರ್ಜ ಕರ್ಣದೊಳು ನಿಜ ಋತುಂಬರ ಋಘನಾಸದಲ್ಲಿ ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ 1 ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ 2 ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್ ಅಪರಿಚ್ಛಿನ್ನನೇ ನೀನು ಸಂಧಿಗಳಲಿ ಸುಫಲದಾತನೆ ಙಸಾರನಾಮದಲಿದ್ದು ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ 3 ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ ಞಮನಾಮದಲಿ ನೆಲೆಸಿರುವೆ 4 ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ ಟಂಕ ರಹಿತ ದಕ್ಷಿಣ ಪಾದದಲ್ಲಿ ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ 5 ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ ಬಲಿ ಭಗನಾಮ ಪೃಷ್ಟ ಗುಹ್ಯದಲಿ ನಿರುತ ಮನ ವರ್ಣವಾಚ್ಯ ನೆನಿಸಿಹೆ ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ6 ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ ರುಧಿರ ಶಾಂತಸಂವಿತ್ ಮಾಂಸದಲ್ಲಿ ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ 7 ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ 8 ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ ನಿರುತ ನಿನ್ನನುದಿನದಿ ಪೊಗಳುತಿಹವೋ 9 ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ ಉರಗಾದ್ರಿವಾಸ ವಿಠಲ ಜಗದೀಶ10
--------------
ಉರಗಾದ್ರಿವಾಸವಿಠಲದಾಸರು
ತ್ಯಜಿಸದಲೆ ಸಂಸಾರ ಭಜಿಸಬಹುದು ಪ ಅಜಭವಾದಿಗಳೆಲ್ಲ ತ್ಯಜಿಸಿ ಭಜಿಸುವರೇ ಅ.ಪ ಅರ್ಣವವ ಪೋಲುವ ಭವವನ್ನು ನೀಗಲು ವರ್ಣಾಶ್ರಮಗಳ ಧರ್ಮಗಳನರಿತು ಪೂರ್ಣ ಸುಖಜ್ಞಾನ ಪೊಂದಿದ ಹರಿಯ ಗುಣಗಳನು ನಿರ್ಣಯದ ಭಕುತಿಯಲಿ ವರ್ಣಿಸುವ ನರನು 1 ಜನ್ಮವನು ಕಳೆವುದಕೆ ತೀರ್ಮಾನ ಮಾಡಿ ದು ಷ್ಕರ್ಮಗಳ ತ್ಯಜಿಸಿ ಸತ್ಕರ್ಮಗಳನು ಮರ್ಮವರಿಯುತ ರಚಿಸಿ ಹೆಮ್ಮೆಯಿಂದಲಿ ತನ್ನ ಧರ್ಮದಲಿ ಸತಿಸುತರ ಭೋಗ ಉಣುವವರು2 ಅನ್ಯಾಯಗಳ ಬಿಟ್ಟು ಮಾನ್ಯರೆಂದೆನಿಸುತಲಿ ಘನ್ನ ಮಹಿಮನ ಸೇವೆಯೆಂದರಿಯುತ ಕನ್ಯಾದಿ ದಾನಗಳ ಮಾಡುತಲಿ ಮುದದಿಂದ ಚೆನ್ನಾಗಿ ಹರಿಯ ಪ್ರಸನ್ನತೆಯ ಪಡೆಯುವರು 3
--------------
ವಿದ್ಯಾಪ್ರಸನ್ನತೀರ್ಥರು
ತ್ಯಜಿಸಬಾರದೋ ನೀವು ಸಜ್ಜನರ ಸಂಗತ್ಯಜಿಸಬಾರದೋ ನೀವು ಪ ದರುಶನ ಮಾಡೆ ದುರ್ದೋಷವು ಹರಿವುದುಸ್ಪರ್ಶವ ಮಾಡೆ ಪ್ರಪಂಚವು ಹರಿವುದು 1 ಮಾತು ಆಡುತಲಿರೆ ಮೈಯದು ಮರೆವುದುಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು 2 ವಾಸನೆ ಇರೆ ನಿರ್ವಾಸನೆಯಹುದುಸೂಸುತಲಿಹ ಮನ ನಿಶ್ಚಿತವಹುದು 3 ಸಂಶಯವಿರೆ ನಿಃಸಂಶಯವಹುದುಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು 4 ಸುದತಿ ಇಹಪರ ತಾ ಬಿಡಲು ಬಹುದುಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು 5
--------------
ಚಿದಾನಂದ ಅವಧೂತರು
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ 1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ 2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ 3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ 4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ 5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು 6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ