ಒಟ್ಟು 16359 ಕಡೆಗಳಲ್ಲಿ , 135 ದಾಸರು , 7416 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನವಿಗೊಮ್ಮೆ ಹರಿನಾಮಘೋಷ ಮಾಡಿ ಜನುಮ ಸಾರ್ಥಕಾಗುವುದು ಪೂರ್ಣ ನೋಡಿ ಧ್ರುವ ಜನವನ ದೊಳು ಹರಿಯ ಕೊಂಡಾಡಿ ಅನುಮಾನ ಹಿಡಿದು ಕೆಡಬ್ಯಾಡಿರೊ ನೆನವಿಗೊಮ್ಮೆ ನಾಮಘೋಷವ ಮಾಡಿ ನೆನವಿನೊಳು ನೀವು ಘನ ಬೆರದಾಡಿರೊ 1 ಹರಿಯ ನಾಮ ನೆನವುತಿಕ್ಕಿ ಚಪ್ಪಾಳಿ ದೂರಮಾಡಿ ಮನದ ಚಿಂತೆ ಮುಮ್ಮಳಿ ಸಾರಿ ದೂರುತಿದೆ ವೇದ ಪೂರ್ಣ ಕೇಳಿ ಅರಿತು ಹರಿಯ ನಾಮ ನೀವು ಬಲಗೊಳ್ಳಿರೊ 2 ಹರಿನಾಮಕಾಗಬ್ಯಾಡಿ ವಿಮುಖ ಅರಿತು ಮಾಡಿಕೊಳ್ಳಿ ಪ್ರಾಣಪದಕ ತರಳ ಮಹಿಪತಿಯ ತಾರಕ ತೋರುತಿಹ್ಯ ದು ಬ್ರಹ್ಮಸುಖವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನಿ ಮನವೇ ನೀ ಮುಕುಂದನ ಪ ನೆನಿ ಮನವೇ ನೀ ಮುಕುಂದನಾ| ಅಜ ವಂದ್ಯನಾ 1 ಸಿರಿಲಕ್ಷುಮಿ ಮನೋಹರನಾ| ಸುರಾಧಾರನಾ ಯದುವೀರನಾ2 ದುರಿತ ನಿವಾರಿಯಾ| ವರ ಶೌರಿಯಾ ಮುರವೈರಿಯಾ 3 ಮನೋಹರ ಮೂರುತಿ ರಾಮನಾ| ಘನ ಶ್ಯಾಮನಾನಂತ ನಾಮನಾ 4 ಗುರು ಮಹಿಪತಿ ಸುತ ಪ್ರೀಯನಾ| ಸ್ಮರ ನೈಯನಾ ಕೃಷ್ಣರೇಯನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನಿ ಮನವೇ ಪಾವನ ದೇವನ ಚರಿತ ಕಥನುವೇ | ನಿನಗಿದ-ವನಿಲಿ ನೆಚ್ಚಿರೆ ತನುವೇ ಪ ಘನ ಶ್ಯಾಮನದಯ ಪಡಿಯದ ಸಾರ್ಥಕ | ಜನುಮಗಳೇವದಿದು ಗುಣವೇ ಅ.ಪ ಸುರಲೋಕ ಮೊದಲಾದ ಸುರಪ ವಿಚ್ಛೈಸಿ | ಪರಿ ಸಾಧನ ಮಾಳ್ಪರೆ | ಸುರಭಿಯಿರಲು ವಿಡಿಸದ ಪುಳಿ ಪಾಲವ | ಕರೆಸುವೆನೆಂದು ಅರಸುವರೇ 1 ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ | ಧರೆಯ ದೈವಕ ತಲೆವಾಗುವರೇ | ಸುರ ತರುವಿನ ನೆರಳವನೇ ತ್ಯಜಿಸಿ | ಬ| ರ್ಬುರ ದ್ರುಮವನು ಸಾರುವೇ 2 ವಿಕಳಿತ ಮಾಡುವ ತಾಪತ್ರಯದಾ | ಸಕಲ ಹಳಾಹಳ ತ್ಯಜಿಸೀ ಅಖಿಳ ಜೀವನದೊಡಿಯನ ಸದ್ಮೂರ್ತಿಯ | ಹೃತ್ಕಮಲದೊಳಗಿರಿಸೀ 3 ಹರಿಮಹಿಮೆಯ ಕೊಂಡಾಡುತ ಪೊಗಳುತ | ಬೀರುತ ಗುರು ಭಕುತರಿಗೇ | ಪರಮ ಸದ್ಭಾವದ ಭಕುತಿಲಿ ಮುಣುಗೈನ | ವರತ ಪ್ರೇಮಾರ್ಣವದೊಳಗೇ 4 ನಯನದಿಂದಲೀ ಸ್ಮರಿಸುವ ಬಹು ಶರಣರ | ಭಯವ ನಿವಾರಣ ಮಾಡುವ | ದಯದಲಿ ಮಹಿಪತಿ ನಂದನ ಪಾಲಿಸು | ತಿಹಕರುಣಾಕರ ಮಾಧವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನಿಯೊ ಮನದಲಿ ಮನದಭಿಮಾನಿಯನ ಪ ಭವಭಯ ನಾಶನಾ ಪಾರ್ವತಿ ರಮಣನ ಅ.ಪ ಗಂಗೆಯ ಪೊತ್ತ ಘನ ಗಂಭೀರನಾ 1 ಇಂದು ಸುಜನ ರಕ್ಷಕ ಕರುಣಸಾಗರನಾ ---- 2 'ಹೊನ್ನ ವಿಠ್ಠಲ’ ಪ್ರೀಯ ಮಹಾದೇವನ 3
--------------
ಹೆನ್ನೆರಂಗದಾಸರು
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯಪಾದ ಖೂನ ತೋರುವದಿದೆ ನಿಜಬೋಧ ದ್ರುವ ನೆನೆಯಬೇಕೊಂದೆ ಭಾವದಿಂದೆ ತಾನೆತಾನಾಗುವ ಗುರು ತಾಯಿತಂದೆ 1 ಘನ ಸುಖ ಕೊಡುವ ಅನುಭವದಲಿಡುವ ಜನನ ಮರಣದ ಬಾಧಿಯ ಮೂಲಗಡೆವ 2 ಗುರುವಿಂದಧಿಕ ಬ್ಯಾರಿಲ್ಲ ಸುಖ ತಿರುಗಿ ನೋಡಲು ತನ್ನೊಳಾದ ತಾ ಕೌತುಕ 3 ಇದೆ ನಿಜಬೋಧ ಸ್ವಸುಖದ ಭೇದಿಸಿದವರಿಗಿದೆ ಸುಪ್ರಸಾದ 4 ಗುರುತಾ ತೋರುವ ಸುರಿಮಳೆಗರೆವ ಅನುದಿನ ಹೊರೆವ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನೆ ಮನವೆ ಮಾಧವನ ಪ ಮುನಿವರೇಣ್ಯರ ಮನದಿ ಅನುದಿನವು ನೆಲಸಿಹ ವನರುಹ ಲೋಚನನ ಅ.ಪ ಸತಿಸುತರ ಮೋಹವನು ಹಿತವೆಂದು ಅರಿಯುತಲಿ ಮತಿಯ ಕೆಡದಂತೆ ನೀ ಅತಿಶಯದ ಭಕುತಿಯಲಿ 1 ಮರುಳು ಮಾಡುವ ಭವದ ಪುರಳು ಸುಖಗಳಿಗೆ ನೀ ಇರುಳು ಹಗಲಲ್ಲಿ ಉರಳಿ ಕೆಡದಿರುವಂತೆ 2 ಮುನ್ನಗಳಿಸಿದ ಬಹಳ ಉನ್ನತದ ಅಘಗಳಿಗೆ ಖಿನ್ನನಾಗುತ ಸುಪ್ರಸನ್ನ ಶ್ರೀ ನರಹರಿಯ 3
--------------
ವಿದ್ಯಾಪ್ರಸನ್ನತೀರ್ಥರು
ನೆನೆದು ನಮಿಸುವೆ ನಾನು ವಾರಂವಾರ ಪ ನೆನೆದು ನಮಿಸುವೆ ನಾನನುದಿನ ಹರಿಪದ ವನಜ ಮಧುಪರಾದ ಅನುಭವ ಶರಣರ ಅ.ಪ ಆದಿಮೂರುತಿತ್ರಯ ಮಧ್ವಮುನಿರೇಯ ಪದ್ಮನಾಭ ನರಹರಿ ಧ್ಯಾನ ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ ರಾಧಕ ವಿದ್ಯಾದಿರಾಜ ಕವಿನಿಧಿ ಸಾದರ ವಾಗೀಂದ್ರ ಶಾಂತ ರಾಮಚಂದ್ರ ಸಾಧು ವಿದ್ಯಾನಿಧಿಯರ ರಘುನಾಥ ಮೇದಿನಿ ರಘುವರ್ಯರ ರಘೋತ್ತಮ ವೇದವ್ಯಾಸಾರ್ಯರ ವಾರಂವಾರ 1 ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ ಸತ್ಯವ್ರತರ ನಾಮ ಸತ್ಯನಿಧಿಯ ನೇಮ ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ ಇತ್ಯಧಿಕ ಸರ್ವರ ಜನದಲಿ ಅತ್ಯಧಿಕ ಮೀರ್ವರಾ ಪುರುಷಾರ್ಥ ಉತ್ತಮ ಪದಲಿರುವರಾ ವಾರಂ ವಾರ 2 ಶರಣೆಂದು ಆದ್ಯರ ಸಕಲ ಪ್ರಸಿದ್ಧರ ಶುಭ ವ್ಯಾಸರಾಯರ ವರ ಹಯಗ್ರೀವ ಜಗವರಿತ ವಾದಿರಾಜ ಪುರಂದರದಾಸ ಪುತ್ರರಾ ವರ ಮಧ್ವರಾ ನೆರೆ ತಾಳ ಪಾಕರ ನುತ ಮತಿ ಕನಕರ ಹರಿಭಕ್ತಿ ಉಲ್ಹಾಸರ ಬಂಡೆರಂಗ ನರಿತಿಹ ನಿಜದಾಸರ ಮಹಿಪತಿ ಗುರುಶರಣರ ತೋಷರ ವಾರಂ ವಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನೆದು ನಿಷ್ಕಳಂಕರಾಗಿರೋ ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಪ ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ ಹೊಲಗೇರಿಯೊಳಗೆ ಸುಳಿದಾಡುವಾಗ ಹೊಲಿಯಾದವನು ತನ್ನ ಎದುರಿಗೆ ಬರುವಾಗ ಕಲಿಶಿಷ್ಯನಾದ ಮಣಿವಂತನ ನೆನೆಸಿರೊ1 ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ ಗುಹ್ಯ ತೊಳೆಯುವಾಗ ಅಪ್ರ ಬದ್ಧನಾದ ಏಕಲವ್ಯನ ನೆನೆಯಿರೋ 2 ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ ವಮನವಾಗುವಾಗ ಮರಿಯದಲೆ ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ 3
--------------
ವಿಜಯದಾಸ
ನೆನೆದು ಸುಖಿಸಿ ನಮ್ಮ ಆದಿ ಶರಣರಾ ಅನುದಿನ ಹರಿ ಮೆಚ್ಚಿದ ಪ್ರಿಯರಾ ಪ ಪ್ರಲ್ಹಾದ ನಾರದ ಪರಾಶರ ಮುನಿ ವಲ್ಲಭ ರುಕ್ಮಾಂಗದಾ ಧ್ರುವರಾ ಉಲ್ಹಾಸದಿಂದಲಿ ಅಂಬರೀಷ ಗಜೇಂದ್ರನಾ ಬಲ್ಲಿದ ಬಲಿ ಗುಣ ಸಾಗರರಾ ಹನುಮ ವಿಭೀಷಣ ಜಾಂಬವ ಅಜಮಿಳ ಮುನಿ ಮುಚಕುಂದಾರ್ಜುನ ಮುಖ್ಯರಾ 1 ಉದ್ಧವ ಉಪಮಾನ್ಯನು ಜನÀದೋಳಧಿಕರಾದಾ ಪುಂಡಲೀಕ ಭೀಷ್ಮರಾ ಭಕುತಿ ವನಧಿಯೊಳು ಮೆರೆವರ ತನವಾದಾ 2 ಶುಕಶೌನಕ ಮುಖ್ಯ ಸಜ್ಜನರಾ | ಪ್ರಕಟದಿ ಮಹಿಪತಿ ನಂದನು ಸ್ತುತಿಸಿದ | ಮುಕುತಿಗೆ ಯೋಗ್ಯ-ನಾ ಮಾಡುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆನೆನೆ ಮನವೆ ನೀ ಘನಸುಖವನೆ ಪಡೆವೆ ಪ ಭಾರ ನಿನ್ನದೆಂಬ ಪೋರ ಪ್ರಹ್ಲಾದನ ಘೋರಬಂಧವ ನಿವಾರಿಸಿ ಪೊರೆದವನ 1 ಕರಿಮಕರಿಗೆ ಸಿಲ್ಕಿ ಹರಿಯೆಂದು ಕೂಗಲು ಭರದಿ ಒದಗಿ ಮಹಕರುಣದಿ ಸಲಹಿದವನ 2 ದುರುಳನ ಸಭೆಯೊಳು ತರುಣಿಯು ಮೊರೆಯಿಡಲು ವರಹ ಶ್ರೀರಾಮ ನಾರಿಮರಿಯಾದೆ ಕಾಯ್ದವನ 3
--------------
ರಾಮದಾಸರು
ನೆನೆಯ ಬಾರದೆ ಮನವೆ ಪರಮಪಾವನನ ಪ ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ-ನೇಕ ಮೂರುತಿ ಸೂರ್ಯನಾರಾಯಣನ 1 ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ 2 ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ 3
--------------
ಕನಕದಾಸ
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ ಕನಕದಾಸನು ಗೆದ್ದ ಇದು ಸರ್ವಸಿದ್ಧ 1 ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ 2 ಸುಲಭನೊ ಮಾಂಗಿರಿಯ ರಂಗ ಜಗದಾನಂದ ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ ಬಲು ಮೆರೆದ ಕೌರವನ ಕುಲವಿನಾಶವ ಗೈದ ಚೆಲುವ ಮಾಂಗಿರಿರಂಗ ಶರಣರಿಗೆ ವರದ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆವೆನನುದಿನ ನೀಲನೀರದವರ್ಣನ ಗುಣರನ್ನನಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ಪ. ದೇವಕೀ ಜಠÀರೋದಯಾಂಬುಧಿಚಂದ್ರನ ಸುಖಸಾಂದ್ರನಗೋವ್ರಜಕೆ ಘನ ಯಮುನೆಯನು ದಾಟಿ ಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಶಠವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ 1 ಗೋಕುಲದ ಗೋಪಿಯರ ಸಂಚಿತ್ತ ಚೋರನ ಬಹು ಧೀರನ ಅ-ನೇಕ ನಾರಿಯರ್ವಸನವನು ಕದ್ದೊಯ್ದನ ಪುರಗಾಯ್ದನನಾಕಿಯರ ನೋಯಿಪಧೇನುಕ ವತ್ಸವಿಘಾತ ವಿಖ್ಯಾತನಕಾಕುಮತಿ ಕಾಳಿಂಗನ ಫಣ ತುಳಿದನ ಆವಗೊಲಿದನ 2 ಕರ ಪಿಡಿದನ ಸುಧೆಗುಡಿದನಬಾಲ ಭಾಮೆಯರೊಡನೆ ಜಲಕ್ರೀಡೆಗಿಳಿದನ ಅಲ್ಲಿ ನಲಿದನಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ 3 ಕ್ರೂರ ಬಕ ಕೇಶಿಗಳನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನಸಾರಿ ಕುಬ್ಜೆಗೆ ಭೂರಿಸಂತಸವಿತ್ತನ ಅತಿಶಕ್ತನವಾರಣವ ಒದ್ದು ಕೆಡಹಿದಾಪ್ರತಿಮಲ್ಲನ ಅತಿಚೆಲ್ವನ4 ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆಮೆರೆದನಮಲೆತÀ ಮಲ್ಲರ ಮಡುಹಿರಂಗದಿ ನಿಂತನ ಜಯವಂತನಖಳಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನಬಲದಿ ತಾಯಿತಂದೆ ಬಂಧನ ಕಡಿದನ ಕೀರ್ತಿ ಪಡೆದನ 5 ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ದಿಟ್ಟನಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನವಿವಿಧ ವಿದ್ಯಾ ಕಲೆಗಳನ್ನೆಲ್ಲ ಅರಿತನ ಶುಭಚರಿತನ ಜವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ 6 ಕುಮತಿ ಖಳ ಮಾಗಧನ ಯುದ್ಧದಿ ಗೆದ್ದನ ಅನವದ್ಯನದ್ಯುಮಣಿಸಮ ದ್ವಾರಕೆಯ ರಚಿಸಿದುದಾರನ ಗಂಭೀರನಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿದಿಟ್ಟನವಿಮಲ ಸುಚರಿತ್ರಾಷ್ಟಮಹಿಷಿಯರಾಳ್ದನ ನೆರೆಬಾಳ್ದನ 7 ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನಸುರತರುವ ಸತಿಗಾಗಿ ತಂದ ಸಮರ್ಥನÀ ಜಗತ್ಕರ್ತನದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹು ಶೂರನಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ 8 ಸಂತತವೀ ಸಾರÀ ಕತೆಯನು ಕೇಳ್ವರ ನೆರೆ ಬಾಳ್ವರಕಂತುಪಿತ ಕಾರುಣ್ಯದಿಂದಲಿ ಹೊರೆವನು ಸುಖಗರೆವನುಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನಪಂಥವುಳ್ಳ ಪ್ರಸನ್ನ ಹಯವದನ್ನನಮುನಿಮಾನ್ಯನ 9
--------------
ವಾದಿರಾಜ
ನೆನೆವೆನಾ ನೆನೆವರಿಗೊಲಿವನಾ ಅನುದಿನಾ ನೆನೆವನಾ| ಕಾವನಾ ಪಾವನಾ ದೇವನಾ ಪ ಗಜರಾಜ ಧ್ರವ ಪ್ರಲ್ಹಾದಂಬರೀಷನ| ಅಜಮಿಳ ವಿಭೀಷಣ ರುಕ್ಮಾಂಗದರ್ಜುನ| ಸುಜನ ಭೀಷ್ಮ ವಿದುರನ| ನಿಜವ ದೋರಿಧನ್ಯ ಗೈಸಿದವನಾ1 ಮುರಾರಿ ವಾರಿಜಾರಿ ವಂಶ ವೀರಧೀರನಾ ಪಾರ ವಾರನಾ ಸುರ ಸಹಕಾರನಾ ಕರುಣಾಳು ಮೂರುತಿ ಪರಮೋದಾರನ ಗುರು ಮಹಿಪತಿಜ ಮನೋಹರನಾ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು