ಒಟ್ಟು 448 ಕಡೆಗಳಲ್ಲಿ , 68 ದಾಸರು , 355 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲ ಕಲ್ಯಾಣ ಗುಣಾಢ್ಯಗೆ ಮಂಗಳಂ ನಿಖಿಲ ದೋಷದೂರಗೆ ಮಂಗಳಂ ಭಕುತರ ಸಂತತ ಪೊರೆಯುತಿರುವ ನಮ್ಮ ರುಕುಮಿಣಿ ಭಾಮಾರಮಣಗೆ ಮಂಗಳಂ 1 ಯಾದವ ಕುಲಭೂಷಣನಿಗೆ ಮಂಗಳಂ ಸಾಧು ಸುಧಾಮ ಸಖಗೆ ಮಂಗಳಂ ಪಾದ ಸೇವಕರಿಗೆ ಮೋದವ ನೀಡುವ ಮಾಧವನಿಗೆ ಸಂತತ ಶುಭಮಂಗಳಂ 2 ವಿವಿಧ ಸೌಭಾಗ್ಯ ಸಂಪನ್ನಗೆ ಮಂಗಳಂ ರವಿಶತ ಸಮತೇಜಗೆ ಮಂಗಳಂ ಸುವಿನಯದಲಿ ಬೇಡುವರಿಗೆ ಶುಭಗಳ ಜವದಲಿ ಕೊಡುವ ಪ್ರಸನ್ನಗೆ ಮಂಗಳಂ 3
--------------
ವಿದ್ಯಾಪ್ರಸನ್ನತೀರ್ಥರು
ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸಂಜೀವ ದೀಪ್ತಿಪೂರ್ಣ ಪ. ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ 1 ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ2 ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದÀಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ 3
--------------
ವಾದಿರಾಜ
ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ಪ ನಿನ್ನ ಗುಣ ಸುರ ತರುವು ವನದಿ ಶುಕಾದಿಗ ಳುನ್ನತವಾಗಿಹವು ಉಚಿತವೇ ಸರಿಯು ಎನ್ನ ಮನ ಕೋಡಗವು ಅಡವಿಯನು ಬಿದ್ದದೆ ಇ ದನ್ನ ಅದರೊಳಗೆ ಇಡಬಹುದಯ್ಯ ಹರಿಯೆ 1 ಕಮಲಭವ ವಾಣಿ ಮುಖ ನಯನಗಳು ಎಂಬ ಮಹ ಕಮಲೋತ್ಪಲಗಳಿಂದ ಶೋಭಿಸುತಿಹ ವಿಮಲ ಲಾವಣ್ಯ ಸುಧಾಂಬುಧಿಯೊಳಿಡಿಸಯ್ಯ ಮಮ ನೇತ್ರ ಮೀನಗಳ ವಿಷಯ ಪಂಕದಿ ತೆಗಿಸು 2 ನಿಮ್ಮ ನಾಮಾಮೃತದ ಸೂರೆಯನು ಬಿಟ್ಟು ಶ್ರೀ ಭವ ಮುಖರ ಕೆರೆ ಕೋಡೇರಿಸುವಿ ತುತಿ ಚೂರ್ಣ ತೆಗೆದು ತೊಳೆದು ತುಂಬೊ ನಮ್ಮ ವದನ ಕರಡಗೆಯ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ ಶ್ರುತಿಗಗೋಚರ ಯತಿಜನಾಶ್ರಯ ಅತಿಶಯಾನಂದಾತ್ಮನ ಭಜಿಸು ಮನವೆ ಧ್ರುವ ಪವಿತ್ರಪ್ರಣವ ಸುವಿದ್ಯದಾಗರ ವ್ಯಕ್ತಗುಣ ಅವಿನಾಶನ ಘವಿಘವಿಸುವಾನಂದಮಯ ರವಿಕೋಟಿ ತೇಜಪ್ರಕಾಶನ ಭವರಹಿತ ಗೋವಿಂದ ಗುರುಪಾವನ ಪರುಮಪುರುಷನ ಭುವನತ್ರಯಲಿಹ್ಯ ಭಾವಭೋಕ್ತ ಸಾವಿರನಾಮ ಸರ್ವೇಶನ 1 ಮೂಜಗದಿ ರಾಜಿಸುತಿಹ್ಯ ತೇಜೋಮಯ ಘನಸಾಂದ್ರನ ಅಜಸುರೇಂದ್ರ ಸುಪೂಜಿತನುದಿನ ರಾಜಮಹಾರಾಜೇಂದ್ರನ ಭಜಕ ಭಯಹರ ನಿಜ ಘನಾತ್ಮಗಜವರದ ಉಪೇಂದ್ರನ 2 ಪರಾತ್ಪರ ಪರಿಪೂರ್ಣ ಪರಂಜ್ಯೋತಿ ಘನಸ್ವರೂಪನ ಪರಂಬ್ರಹ್ಮ ಪರೇಶ ಸುರವರನಾಥ ಗುರುಕುಲದೀಪನ ನಿರಾಳ ನಿರ್ವಿಶೇಷ ನಿರಾಕಾರ ನಿರ್ವಿಕಲ್ಪನ ಕರುಣದಿಂದಲಿ ಹೊರೆವ ಮಹಿಪತಿಸ್ವಾಮಿ ಚಿತ್ಸ ್ವರೂಪನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ತವರಿಗೆ ನೀನಳುತಲಿರುಮೆನ್ನೂಮತ್ತನಾಗಿ ಮಂದಜೀವಾ ಪಮೃತ್ಯುವೆಂಬರಿಪು ಕುತ್ತಿಕೆಡಹಿದಾಗಮತ್ತಾರಿಗಳುವೆಯೊ ಜೀವಾ ಅ.ಪನೆತ್ತಿಯ ಬಡುಕೊಂಬೆ ಜೀವಾಕತ್ತೆಯಂತೊದರದೆ ಬಿಡದೆ ಕಾಂತೆಯ ಬೆನ್ನಹತ್ತಿ ಹೋಗುತ್ತಿಹೆ ಜೀವಾ 1ಕತ್ತಲೆಯಂತಿಹ ನಿನ್ನ ವಿದ್ಯೆಯನುತೊತ್ತಳದುಳಿವರೆ ಜೀವಾಉತ್ತಮ ಜನ ಸಂಗವ ಮಾಡು ನಿನ್ನನೀನೆತ್ತಿಕೊ ಭವಕೂಪದಿಂದಾ 2ಏಳು ಶ್ರವಣ ಮನನವ ಮಾಡು ನೀನಿಂತುಘೋಳಿಟ್ಟರೆ ಫಲವೇನೂಬೀಳು ಗುರುವಿನ ಚರಣ ಕಮಲಗಳಲ್ಲಿನಾಳೆ ಮುಕ್ತಿ ಸುಖವುಂಟೂ 3ತಾಳು ಶೀತೋಷ್ಣಾದಿ ದೇಹಧರ್ಮಗಳನುಮೂಳ ಸುಮ್ಮನೆ ಕೆಡಬೇಡಾನಾಳೆ ನಾಡಿದ್ದು ಸಾಧಿಸುವೆನೆಂದೆನುತಲೆಹಾಳಾಗಬೇಡೆಲೊ ಜೀವಾ 4ಇತ್ತಲತ್ತ ಹಿಂದೆಮುಂದೆ ಕೆಳಗೆ ಮೇಲೆಉತ್ತಮ ಬೊಮ್ಮವೆಂದೆನುತಾಸತ್ಯವೆಂದು ಶೃತಿಬ್ರಹ್ಮಪುರಸ್ತಾದೆನುತ್ತ ಸಾರುತ್ತಿದೆ ಜೀವಾ 5ಮನೆಮಾರು ಧನ ನಿನ್ನತನು ಮೊದಲಾದವುಇನಿತು ನಿತ್ಯವಲ್ಲ ಜೀವಾಘನ ವಿರತಿಯ ಮಾಡು ಮನದಲ್ಲಿ ಧ್ಯಾನಿಸುವಿನುತ ಚೈತನ್ಯವ ಜೀವಾ 6ಅನುದಿನ ನಿನ್ನ ನಿಜವ ನೀತಿಳಿದರೆಳ್ಳನಿತುಶೋಕಮೋಹವಿಲ್ಲ ಜೀವಾಸನುಮತಿುಂದ ಗೋಪಾಲಾರ್ಯನ ಸೇರಿಚಿನುಮಯನಾಗೆಲೊ ಜೀವಾ 7
--------------
ಗೋಪಾಲಾರ್ಯರು
ಸತ್ಯಭೋಧ ಯತಿಕುಲವರನೆ ನಿತ್ಯ ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ ಅರ್ಥಿಜನ ಚಿಂತಾಮಣಿ ಸತ್ಕರುಣಿ ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ ಖ್ಯಾನ ಪೇಳುವ ಕಾಲದಿ ಶ್ವಾನರೂಪದಿ ಪವಮಾನ ಜನರು ನೋಡೆ ಕಾಣಿಸಿಕೊಂಡನಂದೊ ತಾ ಬಂದು 1 ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ಸುವಿಚಿತ್ರ ಮಹಿಮೆ ಕಂಡು ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ ಕವಿ ಆವಾ ವಿಭವಾ ವರ್ಣಿಸುವಾ 2 ಇವರು ದೇವಾಂಶರೆಂದರುಪುವಗೋಸುಗ ಬಂದು ದಿವಿಜತರಂಗಿಣಿಯು ಶಿವನಂಗಭೂರುಹ ಮೂಲ ಭಾಗದಲಿ ಉ ದ್ಭವಿಸಿ ಕಂಗೊಳಿಸಿದಳು ಕೃಪಾಳು 3 ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ ವಂತನಂಘ್ರಿ ಕಮಲ ಸಂತತ ಸರ್ವತ್ರ ಚಿಂತಿಸುತಿಪ್ಪ ಮ ಹಾಂತರಿಗೇನಚ್ಚರೀ ವಿಚಾರ 4 ಚಾರು ಚರಿತ ಭೂ ಸುರವರ ಸನ್ನುತನೇ ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
--------------
ಜಗನ್ನಾಥದಾಸರು
ಸನ್ನುತ ವಿಠಲ | ಕಾಪಾಡೊ ಇವನಾ ಪ ಭದ್ರಮೂರುತಿ ದೇವ | ಪ್ರಾರ್ಥಿಸುವೆ ಹರಿಯೇ ಅ.ಪ. ಸುವಿನೀತ ನಿಹನಿವನು | ಸುವಿವೇಕ ಕೊಟ್ಟಿವಗೆವಿವಿಧ ಭೋಗಗಳಿತ್ತು | ಕಾಪಾಡೊ ಹರಿಯೇ |ಅವನಿಸುರರಾ ಸೇವೆ | ಅವಿರತದಿ ದೊರಕಿಸುತಪವನಮತದಲಿ ಚರಿಪ | ಭಾಗ್ಯ ಕರುಣಿಸುತಾ 1 ತಂದೆ ತಾಯ್ಗಳಸೇವೆ | ಬಂದುರದಿ ಗೈವಂಥಬಂದೆ ಮನವನು ಇತ್ತು | ಕಾಪಾಡೊ ಹರಿಯೇಇಂದಿರಾ ರಮಣ ನೀ | ನಂಘ್ರಿ ಭಕ್ತಿಯನಿತ್ತುಛಂದದಲಿ ಸಾಧನವ | ನೀಗೈಸಬೇಕೊ 2 ಗುರುವಂತರಾತ್ಮ ಗುರು | ಗೋವಿಂದ ವಿಠಲನೆಶರಣು ಬಂದವ ನನ್ನ | ಕೈಯ ಬಿಡದೇತರತಮಜ್ಞಾನಾದಿ | ಅರಿವ ನೀ ಇತ್ತಿವಗೆಕರುಣದಿಂದ್ದುರಿಸೆ | ಪ್ರಾರ್ಥಿಸುವೆ ಹರಿಯೇ 3
--------------
ಗುರುಗೋವಿಂದವಿಠಲರು
ಸಂಪ್ರದಾಯದ ಕೀರ್ತನೆಗಳು ಬಜಬೆಣ್ಣೆನಿಡುವೆನು ಬಾ ರಂಗ ಮೋಹನಾಂಗ ಕೃಷ್ಣಾ ಪ. ಬಜ ಬೆಣ್ಣೆನಿಡುವೆನು ನಿಜರೂಪ ತೋರಿಸೊ ಭುಜಗ ಶಯನ ದೇವಾ ಅ.ಪ. ಮೀಸಲಳಿದ್ಹಾಲು ಕಾಸಿದ ಮೊಸರನ್ನ ಸೋಸಿಲಿ ಕಡೆದ ಬೆಣ್ಣೆ ವಾಸುದೇವನೆ ನಾ 1 ಅಸುರ ಪೂತÀನಿಯ ವಿಷದ ಮೊಲೆಯನುಂಡು ಕಸುವಿಸಿಯಾಗಿಹ ಹಸುಳೆ ನಿನ ಬಾಯೊಳು 2 ಉಡುಗೆ ತೊಡುಗೆ ತೊಡಿಸಿ ಕಡಗ ಕಂಕಣ ಕೈಗೆ ವಡೆಯ ಶ್ರೀ ಶ್ರೀನಿವಾಸ ಸಡಗರÀದಲಿ ನಾ 3
--------------
ಸರಸ್ವತಿ ಬಾಯಿ
ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಸರ್ವ ಸ್ವತಂತ್ರನು ಹರಿ ನಿಜವಾದ ದಾರಿ ಪ. ವಿಧಿ ಶೌರಿ ವಿಭೂತಿ ವಿಹಾರಿ 1 ತತ್ವೇಶ ನಿಚಯಸ್ತುತ್ಯ ಮುರಾರಿ ಸತ್ಯಾತ್ಮಕ ನಿರ್ವಿಕಾರಿ 2 ಲಕ್ಷ್ಮೀನಾರಾಯಣ ನಿರ್ಗುಣ ಸುವಿಲಕ್ಷಣ ದೀನೋದ್ಧಾರಿ ಮೋಕ್ಷಾಶ್ರಯ ಕಲಿಕಲುಶನಿವಾರಿಸಾಕ್ಷಿರೂಪ ಗಿರಿಧಾರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸವಿಸವಿದುಣಬೇಕು ಸುವಿದ್ಯಸಾರದೂಟ ಧ್ರುವ ಊಟಕೆ ಬ್ಯಾಸರಿಕಿಲ್ಲ ನೋಟದ ಸವಿಸಾರಾಯದ ಬೆಲ್ಲ ಕೋಟಿಗೊಬ್ಬವನೆ ಬಲ್ಲ ನೀಟಾಗಿದೆಲ್ಲ 1 ಮಂಡಲದೊಳು ಸವಿಸುಖದಾನಂದ ಕೊಂಡಾಡಲಿಕ್ಕಿದೆ ಬಂದ ಖಂಡಿತ ಭವಬಂಧ 2 ಸಾರಸ ನಿತ್ಯ ಮಹಿಪತಿಗೆ ಬಲು ಉಲ್ಲಾಸ ಹತ್ತಿಲ್ಯದೆ ಬ್ರಹ್ಮರಸ ವಸ್ತುವದೆ ವಿಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ ಬದ್ಧವಾಗಿ ಸೇವಸಿದ ಇದು ಏಕಾಗ್ರ 1 ಉಂಡು ಹರುಷವಾಯಿತು ಮಂಡಲದೊಳಗಿಂದು ಕಂಡು ಆನಂದ ಸುಖವ ಪಿಂಡಾಂಡದೊಳು 2 ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನದ ಚಿಂತೆ ಎನಗ್ಯಾಕೊ ಹರಿಯೇ ಪ. ಮಾಧವಾ ನೀಯನ್ನಾ ಮನಸಿಲಿದ್ದು ಮಾಡಿಸುವಿ ಧೊರಿಯೇ ಅ.ಪ. ಹಿಂದೇಸು ಜನ್ಮಗಳು ಬಂದು ಪೋದವು ಒಂದು ತೃಣವಾದರೂ ನಾ ಗಳಿಸಲಿಲ್ಲ ಮುಂದಿನ ಗತಿಯು ತಿಳಿಯದು ಬಿಂದು ಮಾಧವಾ ಯಾದವಾ 1 ನಿನ್ನ ಹೊರತು ಎನಗೆ ಮನ್ನಿಸುವರು ಯಾರೋ ಬೇರೆ ಗತಿ ಕಾಣೆ ಪುಸಿಯಲ್ಲಿ ಯನ್ನಾಣೆ ಪಾದಸ್ಮರಣೆ ಮಾಡಿಸುವ ಬಾರಾ ಉದಾರ ಭಕ್ತರಾಧಾರಾ 2 ಯೆಷ್ಟು ಪೊಗಳಿದರು ನಿನ್ನ ಕರುಣಕೆ ಇನ್ನು ಕೇಡು ಉಂಟೇ ಸ್ವಾಮಿ ದಯಾ ದೃಷ್ಟಿಯಿಂದಲಿ ನೋಡು ಪ್ರೇಮಿ ದುಷ್ಟ ಅಘರಾಶಿ ದೂರ ಮಾಡೋ ಕಣ್ತೆರೆದು ನೋಡೋ ಕಾಳಿಮರ್ಧನ ಕೃಷ್ಣನೆ ಮಧ್ವಮುನಿ ಪ್ರಿಯನೆ 3
--------------
ಕಳಸದ ಸುಂದರಮ್ಮ
ಸಾಮಜಾದ್ರಿ ನಿವಾಸ | ಮಮ ಹೃದಯ | ಸದ್ದಾಮದಲಿ ಆವಾಸ |ಸೌಮನಸ್ಯವ ಕಾಮಿಸುವೆ ಮನಕೀಶ | ನಾ ನಿಮ್ಮ ದಾಸಾ ಪ ಶ್ರೀ ಮನೋಹರನಂಘ್ರಿ ಕಮಲವ | ಯಾಮ ಯಾಮಕೆ ಭಜಿಸಿ ಹಿಗ್ಗುವ ಆಮಹಾತ್ಮರ ಚರಣ ರಜವನು | ಕಾಮಿಸುವೆ ಕರುಣಾಳು ಗುರುವರ ಅ.ಪ. ಘಾಸಿ ಪಡುತಲಿ ಬಂದ | ಪಾಪಾತ್ಮಯೆನ್ನಯಕ್ಲೇಶ ಹರಿಸಲು ಛಂದ | ಅಂಕಿತವನುಪದೇಷಿಸಿದೆ ನೀ ನಲವಿಂದ | ಕರುಣಾಳು ನಿನ್ನಯದಾಸ ಜನಗಳ ವೃಂದ | ಸೇವೆ ಕೊಡು ಆನಂದ || ವಿಷಯ ದಾಸೆಯ ಹರಿಸೊ ಗುರುವರ | ಬಿಸುರುಹಾಂಬಕನಂಘ್ರಿ ಕಮಲವ ಒಸೆದು ಸ್ಮರಿಸುವ ಮತಿಯನಿತ್ತು | ಎಸೆವ ಹರಿಯಪರೋಕ್ಷ ಪಾಲಿಸೊ 1 ವತ್ಸರ ಸುವಿಕ್ರಮವರ ನವಮಿ ಮಧ್ಯದಿನಂದೂ | ನಿಶ್ಚಯಿಸಿ ಮನದಲಿನರನಟನೆ ಉಪರಮಿಪೆನೆಂದೂ | ತನುವ ತ್ಯಜಿಸಿದೆ ಅಂದೂ ||ಸಾರ ಭಕುತರು ಸೇವೆ ಗೈಯಲು | ಕರಿಗಿರೀಯಲಿ ಒಂದು ಅಂಶದಿವರವ ಪಾಲಿಪುದಕ್ಕೆ ನೆಲೆಸಿದೆ | ಧೀರ ಕರುಣಾಪಾರ ಗುರುವೇ 2 ಚಾರು ಚರಣವ ತೋರು ಗುರುವೇ 3
--------------
ಗುರುಗೋವಿಂದವಿಠಲರು