ಭವ ಪರಿಹಾರ ಪಾವನನಾಮ ಪ
ಕಮಲಜ ಜನಕಾ ಕಾಮಿತ ಫಲದಾಯಕಾ
ಅಮಿತ ಪರಮಾನಂದ ಆದಿಮೂರುತಿ ಗೋವಿಂದಾ 1
ಸಕಲಗುಣ ಪರಿಪೂರ್ಣ ಶಾಶ್ವತ ಸಂಪನ್ನ
ಮುಕುತಿ ರಾಮಕೃಷ್ಣ...............ರುತಿ ಮೋಹನಾ 2
ಸುಂದರರೂಪಾ ಸುಗುಣ ಪ್ರತಾಪ
ಇಂದಿರೆ ರಮಣ ಶ್ರಿತ ಜನ ಪೋಷಣ 3
ದಶ ಅವತಾರಾ ದೈತ್ಯ ಸಂಹಾರಾ
ಪಶುಪತಿ ಪಾಲಕಾ ಪಾವನೋದಕ ಜನಕಾ 4
ಹರಿ `ಹೆನ್ನ ವಿಠಲಾ ' ಅಧಿಕ ಸುಶೀಲಾ
ಪರಮ ಭಕ್ತ ವಿಲಾಸಾ ಪಾಲಿತ ಜಗದೀಶಾ 5