ಒಟ್ಟು 7653 ಕಡೆಗಳಲ್ಲಿ , 132 ದಾಸರು , 4671 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ
ಮಾನಿನೀ ವ್ರತಹರಣ ದೀನರಕ್ಷಣ ನಿಪುಣ ದಾನವ ಕುಲಾಹನನ ವಸನಹೀನ ತ್ರಿಪುರಾರಿ ವಂದಿತ ತಪ್ತಹೇಮಸುಗಾತ್ರ ಸುಪವಿತ್ರ ಸುಚರಿತ ಭೇದರಹಿತ ನಿತ್ಯ ನಿಷ್ಕಲ್ಮಷ ಸತ್ವಮಯ ಸ್ವರೂಪ ಬುದ್ಧರೂಪ ಆನಂದಪರಿಪೂರ್ಣ ಅಬ್ಜಪತ್ರೇಕ್ಷಣ ಆದ್ಯಂತಕಾರಣ ಅಪಾರಮಹಿಮ ಭೂತದಯಾಪರ ಧರ್ಮಸಾರ ಪೂತ ಸದ್ಗುಣಲಸಿತ ದುರಿತದೂರ ಧಾತ ಸುಕವಿಜನ ಚೈತನ್ಯದಾತ ಖ್ಯಾತ ಶೇಷಾದ್ರಿವರ ಪಾಹಿಸುಕÀರ
--------------
ನಂಜನಗೂಡು ತಿರುಮಲಾಂಬಾ
ಮಾಮವ ಮಮ ಕುಲಸ್ವಾಮಿ ಗುಹ ನತಜನ ದುರಿತಾಪಹ ಪ. ಭೀಮವೀರ್ಯ ನಿಸ್ಸೀಮಪರಾಕ್ರಮ ಧೀಮತಾಂವರ ನಿರಾಮಯ ಜಯ ಜಯಅ.ಪ. ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ ಮೀನಕೇತನಸಮಾನ ಸಹಜ ಲಾವಣ್ಯ ಗಾನಲೋಲ ಕರುಣಾನಿಧಿ ಸುಮನಸ- ಸೇನಾನಾಥ ಭಾವನಿಸುತ ಸುಹಿತ1 ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ ಕುಟಿಲ ಹೃದಯ ಖಲಪಟಲವಿದಾರಣ ತಟಿತ್ಸಹಸ್ರೋತ್ಕಟರುಚಿರ ಮಕುಟ2 ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ ಸೇವಕ ವಿಬುಧಜನಾವಳಿಪಾಲಕಕೇವಲ ಸುಖಸಂಜೀವ ಜೀವನದ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಮವ ಮೃಗರಿಪು ಗಿರಿರಮಣ ಮಹಿತಗುಣಾಭರಣ ಪ ಕಾಮಕಲುಷಭವಭೀಮ ಜಲಧಿಗತ ತಾಮಸಾತ್ಮಕಂ ದುರಿತಮಹಿ ಅ.ಪ. ನೀಲಜಲದ ಮದಹೇಳನ ಸುಭಗಶರೀರ ಕುಂದಕುಟ್ಮಲ ಸಮಾನ ಶುಭರದನ 1 ವತ್ಸಲಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸಾಮಗಾರತ ಸತತಶುಭ ಚರಿತ 2 ಸಂತತಾರ್ತಾದರಚಕ್ರ ವಿಬುಧಗೇಯ ಪಾರಿಜಾತ ದುರಿತಾರಿ ವರದನುತ 3
--------------
ವೆಂಕಟವರದಾರ್ಯರು
ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ ದುರಿತಚರಿತ ಮಹಿ ಮಾಮ ಅ.ಪ. ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ ನೀಲ ಜಲದ ಮದಹೇಳನ ಸುಭಗಶರೀರ ಕುಂದ ಕುಟ್ಮಲ ಸಮಾನ ಶುಭರದನ 1 ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ ಶುಭ ಚರಿತ||ಮಾಮವ|| 2 ಕಮಲ ಸಂತತಾರ್ತಾದರ ಚಕ್ರ ವಿಬುಧಗೇಯ ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ ದುರಿತಾರಿ ವರದನುತ ||ಮಾಮವ|| 3
--------------
ಸರಗೂರು ವೆಂಕಟವರದಾರ್ಯರು
ಮಾಮವದೇವ ಮಹಾನುಭಾವ ಶ್ರೀಮನೋಹರ ನಿ ರಾಮಯ ಚಿನ್ಮಯರಾಮ ರಮ್ಯಗುಣಧಾಮ ತಾವಕಂ ಪ ಪಂಕಜನೇತ್ರ ಪರಮಪವಿತ್ರ ಶಂಖಚಕ್ರಧರ ಕಿಂಕರಾರ್ತಿಹರ ಪಂಕಜಾಲಯಾಲಂಕೃತಗಾತ್ರ 1 ನೀಲಾಂಬುದಾಭ ನೀರಜನಾಭ ಬಾಲಭಕ್ತ ಪರಿ ಪಾಲ ಹೇಮಮಯಚೇಲ ನವ್ಯ ವನಮಾಲ ಸುಶೋಭsÀ 2 ಕರುಣಾಲವಾಲ ಖಳಕುಲಕಾಲ ಹರಿಣಹರಣ ಧರ ವರಶಿಖರಾಲಯ ವರದವಿಠಲ ಸುಖಕರಕಮಲಾಲಯ 3
--------------
ವೆಂಕಟವರದಾರ್ಯರು
ಮಾಮವದೇವ-ಮಹಾನುಭಾವ-ಶ್ರೀಮನೋಹರ ನಿರಾಮಯ ಚಿನ್ಮಯ ರಾಮರಮ್ಯ- ಗುಣಧಾಮ ತಾವಕಂಪ ಪಂಕಜನೇತ್ರ ಪರಮ ಪವಿತ್ರ ಶಂಖಚಕ್ರಧರ ಗಾತ್ರ 1 ನಿಲಾಂಬುದಾಭ ನೀರಜನಾಭ ಬಾಲ ಭಕ್ತಪರಿಪಾಲ ಹೇಮಮಯ | ಚೇಲನವ್ಯವನ ಮಾಲ ಸುಶೋಭ 2 ಸುಖಕರ ಕಮಲಾಲಯ 3
--------------
ಸರಗೂರು ವೆಂಕಟವರದಾರ್ಯರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಮಾಯಮತವೊಳಿತಲ್ಲ ನಿನಗೆನಾಯಿ ಜನ್ಮವು ಬಾರದೆ ಬಿಡದಲ್ಲ ಪ ಜಗಕೆ ಕಾರಣ ದೇವ ತಾನಿರಲುಬೊಗಳಿಕೊಂಬೆ ಭೇದವಿಲ್ಲೆಂದುತೆಗೆವನು ಯಮ ಬೆನ್ನ ಚರ್ಮ ಇದುನಗೆಯಲ್ಲ ಕೇಳೋ ತಿಳಿಯೊ ದುಷ್ಕರ್ಮ 1 ಭೇದವಿಲ್ಲೆಂದು ತಿಳಿದು ನೀಮಾದಿಗರ ಮನೆಯಲ್ಲಿ ಉಣಲೊಲ್ಲೆ ಯಾಕೊಸಾಧಿಸಿ ನೋಡಲು ನಿನಗೆ ಇಷ್ಟುಬದುಕುಂಟಾದರು ಉಸುರಲಿನ್ಯಾಕೋ 2 ಅಕ್ಕತಂಗಿಯರಿರಲು ನೀನುರೊಕ್ಕವಿಕ್ಕಿ ಮದುವೆ ಆಗುದ್ಯಾಕೊಚಿಕ್ಕ ತಂಗಿತಾಯಿ ಮೊದಲು ನಿನ್ನಲೆಕ್ಕದಲ್ಲಿ ನೋಡಲು ಒಂದಲ್ಲವೇನೋ3 ಸಂಕರ ಮತಕೆ ನೀ ಹೊಂದಿ ಪಂಕದೊಳು ಬೀಳಬೇಕಲ್ಲೊಸಂಕಟಗೊಳಗಾದಿಯಲ್ಲ ನಿನ್ನಬಿಂಕವ ಮುರಿವರು ಯಮನವರಲ್ಲೊ4 ಇನ್ನಾದರು ಭೇದಮತವನುಚೆನ್ನಾಗಿ ತಿಳಿಯೋ ರಂಗವಿಠಲನುತನ್ನ ದಾಸ್ಯವನು ಕೊಟ್ಟುಉನ್ನತ ಪದವೀವನು ನಿನಗೆ 5
--------------
ಶ್ರೀಪಾದರಾಜರು
ಮಾಯಾ ನೋಡಮ್ಮ ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ. ಕಾಶೀಶ ಮೃತ್ಯುಂಜಯಾಯಿ ವಿಷವಲ ಭಂಜನಾದಿಗಳೀತನಿಗಂಜಿ ಕೊಂಬುವರು ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ ನಿರಂಜನ ತಾ ಲೀಲೆಯಿಂದ 1 ಪುಟಿತಹಾಟಕ ಮಣಿಘಟಿತ ಕಂಕಣಾಂಗದ ಕಟಿಸೂತ್ರಗಳನಿಟ್ಟು ನಟನಂದದೀ ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2 ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ ತುಂಗಮತಿವಂತ ಋಷ್ಯ ಶೃಂಗಾದಿಗಳು ನಿತ್ಯ ಮಂಗಳ ದೇವಿಯರ ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3 ಗೋಪಿ ಗೃಹ ಕರ್ಮರತಳಾಗಿರಲು ಒಮ್ಮನದಿಂದ ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4 ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ- ಶೇಖರಾದ್ರಿವಾಸ ಭಕ್ತನಾಕ ಭೂರುಹ ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಯಾದೊಳಗೆ ಶಿಲ್ಕಿ ಮಗ್ನನಾಗಿ ಮರವೆಗೆ ಒಳಗಾದೆ ಕಾಯಬೇಕಯ್ಯ ನಿನ್ನ ಕರುಣ ರಸವನ್ನು ಕಾಣದೆ ನಾ ಬರಿದೆ ಪ ದೀನದಯಾಪರ ದನುಜಾಂತಕ ನಿಧಾನ ಸುಜನವಂದ್ಯಾ ಮಾನವಾದಿ------ಜನಕ ಸನ್ಮಾನಿತ ಮುಚುಕುಂದ ನಿತ್ಯ ಶ್ರೀ ರಂಗಾ 1 ಇತರ ಜ್ಞಾನತೊರೆದು ಮನಬಣ್ಣ ಮರೆದು ಪಾದ ಸೌಖ್ಯವ ಕಾಣದಿನ್ನೂ ಪಿಡಿವರು ಇನ್ನೂ 2 ಏಸೋ ಬಾರಿ ನಾ ಹುಟ್ಟಿದರೇನು ಇನ್ನು ನಿನ್ನ ಕಾಣದೆ ಮನವು ನಿನ್ನಲ್ಲಿಲ್ಲದೆ ಘಾಸಿಗೆ ಬಿದ್ದೆನು ಕರುಣಿಸೊ ಬೇಗನೆ ಘನ್ನ `ಹೆನ್ನ ವಿಠ್ಠಲನೆ ' ವಾಸುದೇವ ಎನ್ನ ವೈನದಿ ರಕ್ಷಿಸೋ ವಸುಧೆಯ ಪಾಲಕ 3
--------------
ಹೆನ್ನೆರಂಗದಾಸರು
ಮಾಯೆ ಮುಟ್ಟದಿರೆನ್ನನು ನಿನ್ನಯ ಮೂರುಕಾಯಾಭಿಮಾನವೆನಿಸುವ ಮೈಲಿಗೆಯನು ಹೇಯವಿದೆಂದು ಬಿಟ್ಟರಿಕೆಯ ಮಡಿಯುಟ್ಟೆಬಾಯ ಹೊೈುಸುವೆನಿನ್ನು ತಪ್ಪಿದೆಯಾದರೆ ಪಧೀರತನದಿ ಸದಸದ್ವಿವೇಕವ ತೊಟ್ಟು | ಸಾರಿ ಧನಾದಿ ಭೋಗಗಳ ಬಿಟ್ಟುಸಾರವಲ್ಲೆಂದು ಸ್ವರ್ಗಾದಿ ಸುಖಂಗಳ | ಮೀರಿದ ವಿರತನು ನಾನೆಂದೆನಲ್ಲದೆ ನಿನ್ನನಾರಿಯಬೇಕೆಂದೆನೆ ವಿಷಯವಿ | ಕಾರದೊಳ್ಬಳಿಸಂದೆನೆ ಧ್ಯಾನ ಸಾಧನಕಾರವೆ ಸಾಕೆಂದೆನೆ ಕಲ್ಪಿತವಾದ ಘೋರ ಸಂಸಾರವಸಾರವೆಂದೆನಲ್ಲದೆ 1ಶಮೆುಂದ ಚಿತ್ತ ವಿಕ್ಷೇಪವ ತೊಲಯ | ದಯೆುಂದಿಂದ್ರಿಯಗಳ ತಗ್ಗಿಸಿಕ್ರಮದಿಂ ತಿತಿಕ್ಷೆುಂ ಸಹನವ ಮಾಡಿ | ಯಮಿತೋಪರಮದಲಗ್ಗಳನೆಂದೆನಲ್ಲದೆಸಮತೆುಲ್ಲದೆ ಬಂದೆನೆ ತನು ಭೋಗ | ಮಮತೆಯೊಳಗೆ ನಿಂದೆನೆ ವಿಘ್ನವಿಕ್ರಮಕೊಳಗಾದೆನೆಂದೆನೆ ವೇದಾಂತೋಪಕ್ರಮವೆನ್ನೊಳಾುತೆಂದು ವಿವರಿಸಿದೆನಲ್ಲದೆ 2ದೀಪಿತ ಮೋಕ್ಷೇಚ್ಛೆುಂದ ತೋರುವ ಸಕಲ | ತಾಪತ್ರಯಗಳ ತೊಲಗಿಸಿಈಪರಿ ವೇದಾಂತ ಶ್ರವಣ ಮನನದ ಪ್ರ | ತಾಪದಿಂದರಿಗಳಿಲ್ಲೆನಗೆಂದೆನಲ್ಲದೆನೀ ಪುಸಿಯಲ್ಲೆಂದೆನೆ ಕಲ್ಪಿತ ನಾಮ | ರೂಪವ ನಿಜವೆಂದೆನೆ ತಾದೃಶ್ಯ ವಿಲೋಪಕನಲ್ಲೆಂದೆನೆ ಕೇಳು ಪ್ರತಿಜ್ಞೆಯ | ಗೋಪಾಲಾರ್ಯನೆ ನಾನೆಂದೆನಲ್ಲದೆ3
--------------
ಗೋಪಾಲಾರ್ಯರು
ಮಾರ ಜನಕನ ನೀರೆ ಪ ಕರವ ಹರುಷದಿಂದಾ ಅ.ಪ ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು 1 ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು 2 ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ 3 ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ 4 ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ 5
--------------
ಗುರುರಾಮವಿಠಲ
ಮಾರಕೋಟಿ ರೂಪ ಮೈದೋರು ನೀಂ ಪ ಸೇರಿ ಸುಖಿಸಲೆಂದು ಕೋರಿ ಭಜಿಸುತಿಪರ ಪಾರಕಾಂಕ್ಷಿಯಾದೆನ್ನ ಪಾರಗಾಣಿಸೆ ಅ.ಪ ಮುನ್ನ ಭಕ್ತಬಾಲ ಧ್ರುವನು ಕಷ್ಟದೊಳಗೆ ಯನ್ನ ಕಾಯೊಯೆಂದು ಬಿನ್ನಹಂಗೈಯಲ್ ಚನ್ನರೂಪತೋರಿದೆನ್ನತಾತ ನೀ ನಿನ್ನೂ ಏಕೆ ಬಾರದಿರ್ಪೆ ಜಾಜಿಶ್ರೀಶಾ 1
--------------
ಶಾಮಶರ್ಮರು
ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ. ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ1 ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ 2 ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ 3 ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ4 ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ 5
--------------
ಗಲಗಲಿಅವ್ವನವರು