ಒಟ್ಟು 9962 ಕಡೆಗಳಲ್ಲಿ , 129 ದಾಸರು , 5006 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗುಂಝಾವದಿ ಬಾರೊ ಹರಿಯೆ ಚರಣ ತೊಳೆದು ಜಲದಿ ತೀರ್ಥಪಾನ ಮಾಡುವೆನೊ ಪ. ನೀರ ಒಳಗೆ ನಿಂತುಕೊಂಡು ಬೆನ್ನ ಭಾರ ಪೊತ್ತು ನಿನ್ನವರ ಕಾದುಕೊಂಬೆ ಮೋರೆ ತಗ್ಗಿಸಿದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯಗೊಂಬೆ 1 ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ ಬಲವಂತ ನಿನಗಿದಿರಿಲ್ಲೊ ನಿನ್ನ ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ 2 ಗೋಕುಲದೊಳು ಪುಟ್ಟಿದೆಲ್ಲೊ ಲೋಕ ಪಾ(ಕಾ?) ಕು ಮಾಡಲು ಬುದ್ಧರೂಪನಾದೆಲ್ಲೊ ಯಾಕೆ ಹಯವನೇರಿದೆಲ್ಲೊ ನಮ್ಮ ಸಾಕುವ ಹಯವದನ ನೀನೆ ಬಲ್ಲೆಲ್ಲೊ 3
--------------
ವಾದಿರಾಜ
ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ1ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ 2ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ 'ಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ 3
--------------
ಭೂಪತಿ ವಿಠಲರು
ಬೆಳಗುವಿರಿ ನೋಡೆ ದೇವಕುವರರಂತಿಹಿರಿ ಧೀರ ಗಂಭೀರತರ ಭಾವ ತೋರ್ಪುದು ಮುಖದಿ ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ 1 ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು ವೈರಿ ನಿಗ್ರಹರು | ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು ಪಟುತರಂಗರು ಗಹನವಿಟದಿ ಪರಿವ್ರಾಜಕರು 2 ಆಜಾನುಬಾಹುಗಳು ಆಜಾನು ಜಂಘಗಳು ಆ ಜಟ ಮಂಡಲವು ರಾಜಿಸುತಲಿಹವು ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು 3 ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ ಗುರುತರದ ಕಾರ್ಯತತ್ಪರರಾಗಿ ಬಂದಿರುವ ನರೆÉಭಾವ ತೋರುವುದು ಕರಿಗಿರೀಶನ ದಯದಿ 4
--------------
ವರಾವಾಣಿರಾಮರಾಯದಾಸರು
ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ || ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ | ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು 1 ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ | ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ | ಮಂದರ ಕರುಣಾತರಗೆ 2 ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ | ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ || ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ | ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು 3
--------------
ಶಾಮಸುಂದರ ವಿಠಲ
ಬೆಳಿಯೋ ಬೆಳಿ ಮನವೇ ಬೆಳಿಕಂಡ್ಯಾ ಬೆಳಿ ಮನವೇ ಬೆಳಿ ನಿನ್ನ ಹೊಲವನು | ಇಳೆಯೊಳು ಯಣಿಗಾಣದ್ಹಾಂಗೆ 1 ಗುರುವಿನಭಯ ಕೊಂಡು ಸತ್ವದಾ ಹೊಲ ಹಿಡಿದು | ಜರಿದು ಸಂಗಿಗಳನ್ನೆಲ್ಲಾ 2 ವಿವೇಕವೇಯಂಬಾ ನೇಗಿಲ ಎಂಟು | ಭಾವವೆಂಬೆತ್ತುಗಳಿಂದ 3 ದೃಢಪಾಶದಿಂದಲಿ ಕಟ್ಟಿ ಯಚ್ಚರವೆಂಬಾ | ಒಡನೆ ಶಿಕ್ಷದಿ ನಡೆಸುತಾ 4 ಜ್ಞಾನ ಭಕ್ತಿ ವೈರಾಗ್ಯ ತಾಳದ ಬಲದಿ | ಅನನ್ಯ ಭಾವ ಕೂರಿಗೆಯಿಂದಾ 5 ಗುರು ಕರುಣ ಮಳೆ ಗರೆಯೆ ವೇದಾಂತ ಬೀಜ | ಭರದಿ ಬಿತ್ತಿ ನಾದುವಂತೆ 6 ಅನುಮಾನ ಕಸ ತೆಗೆದು ಬೋಧವ ಯಡಿಹಾಯ್ದು| ಧನಗಾಳ ತುಂಬಿಡುವಂತೆ 7 ವರಕ್ಷೋಭ ಯಂಬಾ ನುಡಿ ಹಕ್ಕಿ ಬರಗುಡದೆ | ಪರಮ ಜಾಗೃತಿಯ ಕವಣಿಯಿಂದಾ 8 ಬೇರೆ ಬೇರೆ ದೋರ್ವುದೆಲ್ಲಾ ವಬ್ಬುಳಿ ಮಾಡಿ | ಸಾರಿಹ ಶೃತಿ ವಾಕ್ಯದಿಂದ 9 ದೋರುವಾ ದೃಶ್ಯ ಹೆಕ್ಕಲ ಬಿಟ್ಟು ವಳಗಿರುವ | ತೂರಿ ಅಹಂಭಾವ ಹೊಟ್ಟವನು 10 ದೈನ್ಯವನು ಹಿಂಗಿ ಬಳಕೊಂಡು ಅನ್ಯರಾ ಮರೆ ಹೋಗದಂತೆ 11 ಪರಿಪೂರ್ಣಾದ ಬಳಿಕ ಒಕ್ಕಲು ತನಕ | ಮರುಳೆ ನೀ ಸಿಕ್ಕದಿರು ಕಂಡ್ಯಾ 12 ಸಂಚಿತ ಸರ್ವ ಬಿಡಿಸಿಕೊ ಸುತ ಪ್ರಭು ಗುರು ಮಹಿಪತಿ ವಲುಮೆಯಿಂದಾ 13
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳುದಿಂಗಳಿನೊಳು ಬೇಟೆಯನಾಡಿರಿಬಲ್ಲವರಾದವರೆಲ್ಲಒಳ್ಳೊಳ್ಳೆಯವರು ಕೂಡಿ ಆಡಿರಿ ಶಮದಮ ಶಾಂತರು ಎಲ್ಲ ಪ ತನ್ನ ಸರಿಯದ ಅವಿದ್ಯೆ ಹುಲಿಯದುಘುಡುರು ಘುಡುರು ಘುಡುರೆಂದೆನಲುಸುಮ್ಮನೆ ಪ್ರಣವದ ಧನುವನು ಎಳೆದು ನಾದ ಬಾಣದಿ ಬೀಳಿಸಿರಿ 1 ನಾನು ಎಂಬ ಕರಡಿಯು ಬಂದುಅಡರಲು ನಿಮ್ಮನು ನಿಲುವುದ್ಧಸ್ವಸ್ಥ ವಿವೇಕದ ಕೋಲಲಿ ಬಡಿಯಿರಿಕೆಡಹಿರಿ ನೋಡದೆ ನೀವೆಲ್ಲ2 ಅಪರೋಕ್ಷವೆಂಬ ಬಲೆಯನೆ ಒಡ್ಡಿದುರ್ಗುಣ ಮೃಗಗಳನೆ ಬಡಿದುಭವ ಹರ ಚಿದಾನಂದನ ನೆನೆಯುತಬೇಟೆಯನಾಡಿರಿ ಎಲ್ಲ 3
--------------
ಚಿದಾನಂದ ಅವಧೂತರು
ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬೆಳೆಬೆಳೆದು ಮನದಾಸೆಗಳ ಕಳೆದೆನಯ್ಯ ಸುಳಿದಿರ್ಪುದೊಂದಾಸೆ ಅದ ಪೇಳ್ವೆನಯ್ಯ ಪ ತೊಳತೊಳಲಿ ಬಳಬಳಲಿ ಬೆಂಡಾದೆನಯ್ಯ ಕೊಳಕೊಳದಿ ಮುಳುಮುಳುಗಿ ತಳಮಳಿಪೆನು ಅ.ಪ ಅದು ನಿನ್ನ ಬಳಿಸಾರ್ದು ನಿಲ್ವಪರಿಯಾಸೆ ಅದು ನಿನ್ನ ಪಾದಗಳ ನೋಡಿ ನಲಿವಾಸೆ ಅದು ನಿನ್ನ ನಾಮಗಳ ಪಾಡಿನುಡಿವಾಸೆ ಅದು ನಿನ್ನ ನಸುನಗೆಯ ಬೇಡಿಕೊಂಬಾಸೆ 1 ಅದು ನಿನ್ನ ಅಡಿಗಳಿಗೆ ಮುಡಿಯಿಡು[ವಾಸೆ] ಅದು ನಿನ್ನ ಕೊರಳಿಗೆ ಮಾಲೆಯಿಡು[ವಾಸೆ] ಅದು ನಿನ್ನ ಬೆಡಗುಗಳ ನುಡಿನುಡಿಯೊಳೆಸೆವಾಸೆ ಅದು ಮಾಂಗಿರಿಯ ರಂಗ ನಿನ್ನ ಕೃಪೆಯಾಸೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1 ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3
--------------
ಕನಕದಾಸ
ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ಬೇಗ ಬಾರೊ ಕರುಣಾವಾರಿಧೆ ಕೃಪೆ ದೋರೊ ನಿನ್ನನು ಸೇರಿದೆ ಪ. ಜನಕನ ವಲಿಸಿದ ಜಾನಕಿ ವರದ ಕನಕ ವಿಭೂಷಣ ಕಲ್ಮಷಹರ ಬೇಗ 1 ಭಂಜನ ದೈವತರಂಜನ ನಿರಂಜನ 2 ಅರಿಗಣ ಕರ್ಷಣ ಅದ್ಭುತ ದರ್ಶನ ಪರಮ ಪುರುಷ ಶೇಷಗಿರಿಯ ಭೀಮರ್ಶನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಗ ಬಾರೊ ಬೇಗ ಬಾರೊ ನೀಲಮೇಘವರ್ಣ ಪ. ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನಅ.ಪ. ಇಂದಿರ ರಮಣ ಗೋವಿಂದ ಬೇಗ ಬಾರೊನಂದನ ಕಂದ ಮುಂಕುಂದ ಬೇಗ ಬಾರೊ 1 ಅನಿರುದ್ಧ ಬೇಗ ಬಾರೊಹದ್ದನೇರಿದ ಪ್ರಸಿದ್ಧ ಬೇಗ ಬಾರೊ 2 ರಂಗ ಉತ್ತುಂಗ ನರಸಿಂಗ ಬೇಗ ಬಾರೊಕಂಗಳಿಗೆಸೆವ ಶುಭಾಂಗ ಬೇಗ ಬಾರೊ 3 ಧೀರ ಉದಾರ ಗಂಭೀರ ಬೇಗ ಬಾರೊಹಾರಾಲಂಕಾರ ರಘುವೀರ ಬೇಗ ಬಾರೊ4 ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೋ ಉ-ದÀಯಾದ್ರ್ರಿವಾಸ ಹಯವದನ ಬೇಗ ಬಾರೊ 5
--------------
ವಾದಿರಾಜ
ಬೇಗ ಮಾಡೋ ಭಕುತಿ ಆಗುವುದು ಮುಕುತಿಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ ಧ್ಯಾನ ಹಲವ ಬಿಡು ಧ್ಯಾನ ಆತ್ಮನ ಮಾಡುಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು 1 ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತುಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು 2 ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ 3 ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾಬೇರೆಯೆಂಬ ಮತಿಯ ಮಾಣು ಬಳಿಕ ಜಾಣ 4 ಬೋಧ ಬೋಧ ಗುರಿವಿಡಿಯೋ 5
--------------
ಚಿದಾನಂದ ಅವಧೂತರು
ಬೇಗದಿ ಮುಕುಂದ ಪ. ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ. ನಿರುತ ನಿನ್ನೊಳಗಿಹವು ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು ಪೀತಾಂಬರದಿಸರಿರವ ರೂಪಿಯಾಗಿ ಹೊಂದಿರುವಳು ನಗುತ 1 ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು ನೆನೆದು ಮರುಳಾದೆನು ವಿಲಿಪ್ತಿಯ ಸಲಿಸು 2 ತೋರದೊ ವರದ ನಿನ್ನನು ಮರೆದ ಕಾಯುವರ ಕಾಣೆ ನಿನ್ನಾಣೆ ಸಲಹೊ ಪುರಂದರಗೊಲಿದ 3 ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು ಸುಖವ ನೀಗಿ ನಾ ಬಾಗಿ ಕೂರ್ಮನಂತಿರುವೆ 4 ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು ಸುಜನಪಹಾಸಗೊಳಿಸದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್