ಒಟ್ಟು 4691 ಕಡೆಗಳಲ್ಲಿ , 124 ದಾಸರು , 3091 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಾರೆ ಕಂಡೆನಚ್ಯುತನ-ಕಂಚಿಪುಣ್ಯ ಕೋಟಿ ಕರಿರಾಜವರದನ ಪವರಮಣಿ ಮುಕುಟಮಸ್ತಕನ ಸುರ-ವರಸನಕಾದಿ ವಂದಿತ ಪಾದಯುಗನ ||ತರುಣಿ ಲಕ್ಷ್ಮೀ ಮನೋಹರನ-ಪೀತಾಂಬರದುಡಿಗೆಯಲಿ ರಂಜಿಸುವ ವಿಗ್ರಹನ 1ಕಸ್ತೂರಿ ಪೆರೆನೊಸಲವನ ತೋರಮುತ್ತಿನ ಹಾರ ಪದಕವ ಧರಿಸಿದನ ||ಎತ್ತಿದಭಯ ಹಸ್ತದವನ ತನ್ನಭಕ್ತರ ಸ್ತುತಿಗೆ ಹಾರಯಿಸಿ ಹಿಗ್ಗುವನ 2ನೀಲಮೇಘಶ್ಯಾಮಲನ ದೇವಲೋಲಮಕರಕುಂಡಲಧರಿಸಿಹನ ||ಮೂಲೋಕದೊಳಗೆ ಚೆನ್ನಿಗನ ಕಮಲಾಲಯಾಪತಿ ವೈಕುಂಠವಲ್ಲಭನ 3ಭಾನುಕೋಟಿ ತೇಜದವನಭವಕಾನನರಾಶಿಗೆಹವ್ಯವಾಹನನ ||ದಾನವರೆದೆಯ ತಲ್ಲಣನ ಮುನಿಮಾನಸೆಹಂಸನೆಂದೆನಿಸಿ ಮೆರೆವನ4ತುಂಗಚತುರ್ಭುಜದವನಶುಭಮಂಗಳ ರೇಖೆ ಅಂಗಾಲಲೊಪ್ಪುವನ ||ಶೃಂಗಾರ ಹಾರ ಕಂಧರನ ದೇವಗಂಗೆಯ ಪಿತಪುರಂದರವಿಠಲನ5
--------------
ಪುರಂದರದಾಸರು
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||ಥಟ್ಟನೆದ್ದು ಯನ್ನ ಕೈಯವರಮುಟ್ಟಿಸದಿರೆ ಬಿಡೆ ನಿನ್ನ 1ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆಗೋಪಿ||ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ 2ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ 3ನೀ ಹಾರ ಮಗನೆಂದುಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||ಹೋದಬಾರಿಹೊಟ್ಟಿಗೆಮಾರಿಹೋದಳೂ ನಿಮ್ಮಮ್ಮನೆನೆ 4ಯನಗೆ ಪಾಪ ನೀನಾಗಿತಿನಲಿಕ್ಕಪ್ಪಚ್ಚಿ ಬೇಡೇ ||ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ 5ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ 6ಏನು ಪುಣ್ಯ ಮಾಡಿದೆನೋಕ್ಷೋಣಿಗೆ ಹತಾರ್ಥವಾಗಿ ||ಪ್ರಾಣೇಶ ವಿಠಲನು ನಿನ್ನತಾನೇ ಕೊಟ್ಟನು ಯನಗೆನ್ನ 7
--------------
ಪ್ರಾಣೇಶದಾಸರು
ಕಣ್ಣೆತ್ತಿ ನೋಡಲುಬೇಡ - ಅವಳಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.ಕಣ್ಣಿಟ್ಟ ಕೀಚಕ ಕೆಟ್ಟ -ಪರಹೆಣ್ಣಿಗಾಗಿ ರಾವಣ ತಲೆಕೊಟ್ಟಏನು ಮಾಡಿದಳಣ್ಣ ನಷ್ಟ -ಪರಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1ದೂರದಲ್ಲಿಯ ಸುಖದಣ್ಣ - ಅವಳಚಾರು ಕಂಚುಕದೊಳಗಿನ ಕುಚವಣ್ಣಸೀರೆಯ ಬಿಗಿದುಟ್ಟ ಹೆಣ್ಣ - ಅವಳಓರೆನೋಟ ನೋಡಿ ಹಾರಬೇಡಣ್ಣ 2ಹಸಿವು ಇಲ್ಲರ ಸವಿಯೂಟ - ತನ್ನವಶಕೆ ಬಾರದ ಪರಹಸ್ವಿನ ಕೂಟದೆಸೆದೆಸೆಗಪಕೀರ್ತಿಯಾಟ - ನಮ್ಮವಸುಧೀಶ ಪುರಂದರವಿಠಲನೊಳ್ನೋಟ 3
--------------
ಪುರಂದರದಾಸರು
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5
--------------
ಪುರಂದರದಾಸರು
ಕರುಣಾದಿ ಪೊರಿ ಎನ್ನ ಗುರುವೇ ಪಶರಣು ಪೊಕ್ಕೆನೊಚರಣಕಮಲಕೆಕರುಣಿಸೆನ್ನನು ಕರುಣಸಾಗರ ಅ.ಪತಾಪತ್ರಯದಿ ಬಹುಬೆಂದೇಭವ-ಪಾಪಮೋಚಕ ನಿಷ್ಪಾಪಿ - ಜನರ ಪಾಲಕಾಪಾಡೊ ನೀ ಎನ್ನಅಪಾರಮಹಿಮನೆದ್ವಾಪರದಿ ಯದುವರನು ಸಾಂ -ಭೂಪ ಬಕನಳಿದು ಸಲಹಿದ -ನಾಪರಿಯಲಿ ಎನ್ನಸಲಹೋ 1ಕಾಮಿತ - ಫಲದ ನೀನೆಂದೂ ಬಲು -ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -ತಾಮರಸವ ಮನೋ - ಧಾಮಾದಿ ನಿಲಿಸೆಂದೆಆಮಹದ್ಭಯ ಕಳದ ತೆರದಿ 2ತಾತನಿನ್ನನು ಬಾಧೆ ಬಡಿಸೇ ಶಿರಿ-ದಾತಗುರುಜಗನ್ನಾಥ ವಿಠಲನತಿಮಾತು ಲಾಲಿಸಿ ಕಾಯೋ ಯತಿಕುಲ -ಭೀತಿಯನು ಸದೆದು ಪಾಲಿಸ -ನಾಥರಕ್ಷಕನಲ್ಲೆ ಗುರುವರ 3
--------------
ಗುರುಜಗನ್ನಾಥದಾಸರು
ಕರುಣಾಂಬುಧಿ ಪಾಲಿಸೊಶರಣಾಗತರರಸ ಮುರಾರಿ ಪ.ಹಿಂದೆ ಕ್ಲೇಶವನುಂಡು ಬಳಲಿ ನಾ ನೊಂದೆಮುಂದೆ ಕತ್ತಲೆ ಕವಿದಿದ್ಯಲ್ಲೊ ತಂದೆ 1ಒಡೆಯನಿದ್ದೊಡಲಿನ ಚಿಂತೆ ಎನಗ್ಯಾಕೆಪಡಿಯಾಸೆಲಿನ್ನೊಬ್ಬರೊಲಿಸಲ್ಯಾಕೆ 2ಜನಕಜನನಿಆಪ್ತಧನ ಧಾನ್ಯ ನೀನೆಅನುಮಾನ ಬಿಡಿಸುವ ಅನುಕೂಲದವನೆ 3ಪೋಕರ ಮುಂದೆÀಡಹಿದರಾರಕುಂದುಜೋಕೆ ಬಿರುದುದಾತಆನತ ಬಂಧು4ನಾಭಿಸುರಭಿಕಾಣದರಸುವ ಮೃಗದಂಥಈ ಭ್ರಾಂತಿ ಕಳೆಯೊ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇಪಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
--------------
ಪುರಂದರದಾಸರು
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನಕರೆತಾರೆ ನೀರೆ ಬೇಕಾದವಳನಿನಿತುವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.ಬಿಸಜಕುಟ್ಮಳಕುಚವಸೋಂಕಿಮುದದಿ ಪಿಡಿದುಶಶಿಮೊಗದಿ ಮೋಹವನಿಡುವ ನುಡಿವಎಸೆವ ಕೊನೆವಲ್ಲಲಳುಕಿಸಿ ಎನ್ನಅಧರಪೀಯೂಷವನೊಲಿದೊಲಿದು ಸವಿದಕೋವಿದಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿಮಿಸುನಿಪುತ್ಥಳಿಯ ತೆರದಿ ಮೆರೆದಅಸಿಯ ಮಾಣಿಕಳೆ ಕೇಳಸುರಹರನಾಳಿದನೀಅಸುತೊರೆವೆ ತಾನಪಕಾರೆ ನೀರೆ1ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆಕಂಠಮಾಲೆಯ ಕೊಟ್ಟನೆ ನೆಟ್ಟನೆಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆವೆಂಠಣಿಸಿ ಅಮೃತವೆರೆದ ನೆರೆದಕಂಟಕಿಯು ದಾವಳೊ ಹರಿಯನೊಯ್ದಳಕದಿಂಗಂಟಿಕ್ಕಿದಳೊ ಬಿಡದೆ ಮಡದೆಉಂಟು ಮಾಡಿದನಲಾಮಂದಮುಗ್ಥೆಗೆ ಅಸಿಕಕಂಟಕಬಲೆಯ ಕಾಣೆ ಜಾಣೆ 2ಸರಸವಾತಿನ ಜಾಣ್ಮೆಯೆಂತುಸುರುವೆನಬಲೆಹರಣಳಿಯದೆಂದು ಪೇಳೆ ಕೇಳೆನಿರುತವನ ಕಿರುವೆರಳ ಸೌಂದರ್ಯಮಂ ನೆನೆಯುತಿರುವೆ ಪುಸಿಯಲ್ಲ ಕಾಣೆ ಪ್ರಾಣೆಕರುಣಿ ಬಲುನೊಂದರೆಂದದು ತನಗೆಕುಂದುಮರೆಯದಿನಿತೆಲ್ಲ ಒರೆಯೆ ಚತುರೆಯೆಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟಗಿರಿಯರಸನೆಂದನಕ್ಕ ರಸಿಕ 3
--------------
ಪ್ರಸನ್ನವೆಂಕಟದಾಸರು
ಕರುಣಿಸೆನಗೆ ಶಂಭೋ ಕರುಣಿಸಯ್ಯಾಶರಣಾರಂದದಿ ನಿನ್ನ ಮನದಿರವರಿಯೆನುಕರವಜೋಡಿಸಿ ದೇವಾ ಚರಣಕೊಂದಿಪೆನು ಪಕ್ಷೋಣಿಯೊಳ್ ಮಾರ್ಕಾಂಡೆಯಂತೆ ಪೂಜಿಸಲಾರೆಮೀನಾಕ್ಷಿಯಂತೆ ಕಾದಿ ಪರಿಸಲಾನರಿಯೇಬಾಣಾಸುರನಂತೆ ತಪಗೈಯ್ಯಲಾರೆ ನಾನುರಾವಣನಂತೆ ಸಾಮಗಾನವನರಿಯೇ 1ಶಿರದಿ ಚಂದಿರನಂತೆ ಶೋಭಿಸಲಾರೆ ಭಕ್ತಿಸ್ಥಿರವರಿಯೆನು ಭೀಮಸೇನನಂತೆಉರಗನಂದದಿ ಕೊರಳಾಭರಣವಾಗಿರಲಾರೆಗಿರಿಜೆಯಂದದಿ ನೆರೆದು ಮುದ್ದಿಸಲರಿಯೆ 2ಮಂದಾಕಿನಿಯಂತೆ ಜಡೆಯಾಲಂಕರಿಸೆನುನಂದೀಶನಂತೆ ಪೊತ್ತು ತಿರುಗಾಡಲರಿಯೆಇಂದ್ರನಂದನನಂತೆ ಭರದಿ ಮೆಚ್ಚಿಸಲಾರೆಬಂದೆನ್ನ ಸಲಹೋ ಗೋವಿಂದನ ಸಖನೆ 3
--------------
ಗೋವಿಂದದಾಸ
ಕಲ್ಯಾಣಂ ತುಳಸೀ ಕಲ್ಯಾಣಂ ಪಕಲ್ಯಾಣವು ನಮ್ಮ ಕೃಷ್ಣ ಶ್ರೀ ತುಳಸಿಗೆ |ಬಲ್ಲಿದಶ್ರೀವಾಸುದೇವನಿಗೆಅ.ಪಅಂಗಳದೊಳಗೆಲ್ಲ ತುಳಸೀವನವ ಮಾಡಿ |ಶೃಂಗಾರವ ಮಾಡೆ ಶೀಘ್ರದಿಂದ ||ಕಂಗಳ ಪಾಪವ ಪರಿಹರಿಸುವ ಮುದ್ದು |ರಂಗಬಂದಲ್ಲಿ ನೆಲಸಿಹನು 1ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು |ತಂದ ಶ್ರೀಗಂಧಾಕ್ಷತೆಗಳಿಂದ ||ಸಿಂಧುಶಯನನ ವೃಂದಾವನದಲಿ ಪೂಜಿಸೆ |ಕುಂದದ ಭಾಗ್ಯ ಕೊಡುತಿಹಳು 2ಉತ್ಥಾನ ದ್ವಾದಶಿದಿವಸದಲ್ಲಿ ಕೃಷ್ಣ-|ಉತ್ತಮ ತುಲಸಿಗೆ ವಿವಾಹವ ||ಚಿತ್ತ ನಿರ್ಮಲರಾಗಿ ಮಾಡಿದವರಿಗೆ |ಉತ್ತಮ ಗತಿ¬ೂವ ಪುರಂದರವಿಠಲ 3
--------------
ಪುರಂದರದಾಸರು
ಕಷ್ಟದಿ ಕಾಲವ ಕಳೆವೆನು ದೇವಾ |ಪಕ್ಷಿವಾಹನ ಕಾಯೋ ಕರುಣ ಸಂಜೀವಾ ಪಕೃಷ್ಣಮೂರುತಿ ಫಲುಗುಣನಿಗೆಭಾವ|ಸೃಷ್ಟಿಗೊಡೆಯ ಭಕ್ತಜನರನು ಪೊರೆವಾ ||ಉಟ್ಟ ಸೀರೆಯನು ಕುರು ದುಷ್ಟನು ಸೆಳೆಯಲು |ರಕ್ಷಿಸೆನ್ನುತ ಮೊರೆಯಿಟ್ಟ ದ್ರೌಪದಿಗೆ ||ಅಕ್ಷಯವರವಿತ್ತು ಪಕ್ಷಿವಾಹನ ಕಾಯ್ದೆ |ಸೃಷ್ಟಿಗೊಡೆಯ ಶ್ರೀಕೃಷ್ಣಾವತಾರ 1ದಾನವಾಂತಕ ಭಕ್ತ ದೀನದಯಾಕರ |ಮಾನವಶರೀರ ಮನುಮಥನಯ್ಯ ||ಭಾನುನಂದನಫಣಿಬಾಣವನೆಸೆಯಲು |ಜಾಣತನದಿ ನರನ ಪ್ರಾಣವನುಳುಹಿದೆ 2ನಂದಗೋಪನ ಮುದ್ದು ಕಂದನ ಚರಣಕ್ಕೆ |ವಂದಿಸಿ ಕರಗಳಾನಂದದಿ ಮುಗಿವೆ ||ಇಂದಿರೆಯರಸ ಗೋವಿಂದ ಜನಾರ್ದನ |ಮಂದರಧರ ಅರವಿಂದ ನಯನ ದೇವಾ3
--------------
ಗೋವಿಂದದಾಸ
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ಕಾಣದೆ ಇರಲಾರೆ ದೇವ ಮುಖ್ಯಪ್ರಾಣ ಮನೋಹರ ದೇವ ನಿನ್ನವಾಣಿಯಲಮೃತವನೂಡೊ ಕಡೆಗಾಣಿಸಿ ಪದದೆಡೆಯಲ್ಲಿಡೊ ಪ.ಹಿಡಿಯಲು ಮರದಾಸೆಯಿಲ್ಲ ಕುಳಿತಡೆ ಪೊಡವಿಲಿ ದೃಢವಿಲ್ಲ ನಿನ್ನೊಡಲೊಳಗಿಡಬಹುದೆನ್ನ ನನ್ನೊಡೆಯ ಕರುಣಾರಸಪೂರ್ಣ 1ನಿಲಗುಡವರಿಯಾರು ವರ್ಗ ಬಲುಬಳಲಿಪ ಮೂರುಪಸರ್ಗ ಇದರೊಳಗೆ ನಿನ್ನಯ ಶುಭನಾಮ ಒಂದೆಬಲಿಕ್ಯಾಗಿರಲಿ ಪೂರ್ಣಕಾಮ 2ಚಿನ್ಮಯ ಸುಗುಣದ ಖಣಿಯೆ ಸಲಹೆನ್ನನಿರ್ಜರಚಿಂತಾಮಣಿಯೆ ಬಿಡದೆನ್ನ ಮನದೊಳಗೆ ಬೆರೆಯೊ ಪ್ರಸನ್ವೆಂಕಟ ಗಿರಿದೊರೆಯೆ 3
--------------
ಪ್ರಸನ್ನವೆಂಕಟದಾಸರು
ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿಹರಿಕಾಯನಿವಾಸೇ ||ಕಾಯೇ | ಕಾಯೇ ಪಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನಸತಿ||ಕರ್ದಮಜಾಲಯ | ಭದ್ರ ಶರೀರೆ 1ಇಂಗಡಲಾತ್ಮಜೆ| ಅಂಗನಾಕುಲಮಣಿ||ರಂಗನ ಪದಕಂಜ | ಭೃಂಗೆ ಕರುಣದಿ 2ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||ಹೀನತೆಯೆಣಿಸದೆ | ಪೋಣಿಸಿ ಮತಿಯ 3
--------------
ಪ್ರಾಣೇಶದಾಸರು