ಒಟ್ಟು 587 ಕಡೆಗಳಲ್ಲಿ , 80 ದಾಸರು , 477 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ರಘುರಾಮಚಂದ್ರ ಬಾರೈ ಹರೆ ದಿವ್ಯ ರತ್ನಪೀಠಕೆ ಪ ದೇವತಾಳಿ ನುತಿಯ ಕೇಳಿ ಭಾವದಲ್ಲಿ ಮುದವ ತಾಳಿ ರಾವಣಾದಿ ದನುಜ ವೃಂದವ ಸೀಳಿ ಜಗವ ಪೊರೆದ ವಿಭುವೆ 1 ಇಂದು ಸುಂದರ ಫಾಲರಾಮ ಇಂದು ವಂಶಜಲೋಲ ದಶರಥನಂದನಾಶ್ರಿತ ವತ್ಸಲ ವಿಭುವೆ 2 ಪಂಕಜ ಮಲ್ಲಿಕಾಕುಸುಮಾಳಿ ಭಾಸುರ ಪುಲ್ಲ ಚಂಪಕ ಮಾಲಕ ರಂಜಿತ ಉಲ್ಲಸನ್ಮøದುವಾಣಿ ವಿಭುವೆ 3 ಭಕ್ತ ಹೃದಯ ಕುಮುದ ಚಂದ್ರ ಶಕ್ತಿವಿಜಿತ ರಾಕ್ಷಸೇಂದ್ರ ಭುಕ್ತಿ ಮುಕ್ತಿದಾಯಕ ವಿಭುವೆ 4 ಮಾನವೇಂದ್ರ ಸುರೇಂದ್ರ ವಂದಿತ ಸೂನ ಶರ ಸಹಸ್ರ ಸುಂದರ ಚಕೋರ ಧೇನುನಗರ ಶ್ರೀರಾಮ ವಿಭುವೆ5
ರಘುರಾಮರ ಪಾದವ ಹಿಡೀ ಹಿಡಿ ಪ ಕಾಮ ಕ್ರೋಧ ಮದ ಮತ್ಸರಗಳೆಂಬೋ ದುರಿತವ ಬ್ಯಾಗನೆ ಹೊಡಿ ಹೊಡಿ 1 ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ ಅದರೊಳಗೇನಿದೆ ಹುಡಿ ಹುಡೀ 2 ಶ್ರೀದವಿಠಲನ ಪಾದಸ್ಮರಣೆಯ ಮರೆಯದೆ ಬೇಗನೆ ನುಡಿ ನುಡೀ3
ರಘುರಾಯ ಯನ್ನಮನವ ನಿಲಿಸಲಾಗದೇ ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ ಹನುಮನೊಡನೇ ಕಾಂತ ಮಾತ ಅನುವರದಲಿ ಆಡುತಿರಲು ವನಧಿ ಘೋಷವನ್ನೆ ಕಂಡು ವನಜ ಕರವನೆತ್ತಿಕೊಂಡು ನಿಲ್ಲಲು ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ ಧರೆಯದೋರಿ ಸುಮ್ಮನಿಪ್ಪನು ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು 1 ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ | ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ ವರಹರೂಪದಿಂದ ಮೂಡಿದೇ ಈ ಜಗವ ಕೊರೆದಾಡಿ ಲೆತ್ತಿ ಆಡಿದ ಅಧೃವನ ತಿರಗದಂತೆ ಅಢಳ ನೀಡಿದೆ 2 ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ ಸ್ವಾಮಿ ಸಲಹು ಜಗದಲಿ 3
ರಘುವರ್ಯ ಕರಜಾತ ಶ್ರೀ | ರಘೋತ್ತಮ ತೀರ್ಥಾ ಪ ಅಘಹರ ಶ್ರೀ ರಾಮ ಪದ ಭಜಕ ನೇಮಾ ಅ.ಪ. ಪ್ರವಚನಾಚಾರ್ಯರಿಂ | ದವಮಾನ ತಡೆಯದಲೆಸವನ ಮೂರರ ಮೇಲೆ | ಪವಡಿಸಿರೆ ತಾನೂ |ಪವನ ಪಿತ ತೈಜಸನು | ಗುರುವರರ ರೂಪಿನಲಿಪ್ರವಚಿಸೆನೆ ನ್ಯಾಯ ಸುಧೆ | ಪ್ರವಚಿಸಿದ ಮಹಿಮಾ 1 ಪ್ರಮೆಯ ದೀಪಿಕೆ ತತ್ವ | ಅಮಮ ಬೃಹದಾರಣ್ಯಸುಮನ ವ್ಯಾಹರಣೆಯನು | ನೀ ಮಾಡಿ ಮುದದೀ |ಕಮಲನಾಭನ ಮಹಿಮೆ | ಅಮೃತವನು ತೆಗೆಯುತಲಿಸುಮನಸರಿಗುಣಿಸಿದೆಯೋ | ರಾಮ ಪದ ಭಜಕಾ 2 ತತುವನ್ಯಾಸವ ಮಾಡೆ | ತತ್ವ ದೇವತೆಗಳನುತತುತತೂ ರೂಪದಲಿ | ಸತತ ನೋಡುವನೇ |ಕ್ಷಿತಿಪತಿ ಶ್ರೀ ಗುರೂ | ಗೋವಿಂದ ವಿಠ್ಠಲನೆಉತ್ತಮೋತ್ತಮನೆನುತ | ಬಹು ಮೆರೆಸಿದಾತ 3
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
ರಮಾ ಮನೋಹರ ಶ್ಯಾಮಸುಂದರ ವಿಮಾನ ಶೋಭಿತ ಹರೇ ಹರೇ ಪ ಕುಮಾರಪಿತನುತ ಶವi ದಮಾಯುತ ಸಮಾನ ವಿರಹಿತ ನಮೋ ನಮೋಅ.ಪ ಸುರೇಶ ಪಶುಪತಿ, ನಾರಾಯಣಾ ಧರೇಶ ರಘುಪತಿ ಲಾವಣ್ಯಮೂರುತಿ ಹರೀಶ ಮಾರುತಿ ಪಾರಾಯಣ 1 ಗೋಪಾಂಗನಾ ಪ್ರಿಯ ಗೋಪಾಲ ಬಾಲ ಚಾಪಾಂಬುಕರ ಭಯಹಾರ ಪ್ರಮೇಯ ಶ್ರೀಪಾದ ಚಿನ್ಮಯ ಸೌಂದರ್ಯ ಶೀಲ ಭೂಪಾಲ ಮಾಂಗಿರಿ ಶೃಂಗಾರ ನಿಲಯ2
ರಾಜೀವನಯನ ಸೀತಾರಾಮ ಪಾಹಿ ಮುದಂದೇಹಿ ಪ ರಾಜಾಧಿರಾಜ ಕಲ್ಪಭೂಜಾ ಸೌಜನ್ಯ ನಿಲಯ ರಾಮ ಅ.ಪ ಸಾಕೇತಾಧಿಪರಾಮ, ಲಂಕಾನತ ದನುಜ ಭೀಮ ಕಾಕಾಸುರ ನಮಿತ ನಾಮ, ಶ್ರೀಕರ ಕೀರ್ತಿಕಾಮ ಏಕಾಂತ ರಘುನಾಮ, ಏಕಾಂಬರ ಶಿವಪ್ರೇಮ ಸಾಕೇಶ್ವರ ಸಾರ್ವಭೌಮ, ಶ್ರೀಮಾಂಗಿರಿ ರಂಗಧಾಮ 1
ರಾಮ ನಾಮಕೆ ಸಮ ನಾಮವುಂಟೆ ಜಗದೀ ಪಾಮರರಘನಾಶಕೆ ಪ ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ ನಾಮಕೆ ಸಮವುಂಟೇ ಅ.ಪ ಕೋಸಲಪತಿಯೆನಿಸೀ ಅಸುರೆಯ ಸಂಹರಿಸೀ ದುರುಳರಪಹರಿಸೀ ಮುನಿ ಸತಿಯನುದ್ಧರಿಸಿದ 1 ಸತಿಯನುಜರ್ವೆರೆಸೀ ದಿತಿಜರ ಕುಲವಳಿಸೀ ಸತಿಯಳ ನೆಲೆಯರಸೀ ದಿತಿಜಾಂತಕನೆನಿಸಿದ 2 ಶರಣನ ಪತಿಕರಿಸೀ ನರನಾಟಕ ನಡೆಸೀ ಕರುಣಾನಿಧಿಯೆನಿಸೀ ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ 3
ರಾಮ ನಿನ್ನ ಭಜನೆಗೈಯುವೆ ಕಾಮಾರಿಮಿತ್ರ ರಾಮ ನಿನ್ನ ಭಜನೆಗೈಯುವೆ ಪ ರಾಮ ನಿನ್ನ ಭಜನೆಯನ್ನು ಪ್ರೇಮದಿಂದ ಮಾಳ್ಪ ಜನಕೆ ಕಾಮಿತಾರ್ಥವಿತ್ತು ಸುಖವ ಪ್ರೇಮದಿಂದಕರುಣಿಸುವವನೆ 1 ಜಾನಕಿಯರಮಣ ನಿನ್ನ ಧ್ಯಾನಮಾಳ್ಪೆನಯ್ಯ ಸತತ ಸಾನುರಾಗದಿಂದ ಸಲಹು ಭಾನುವಂಶ ಜಲಧಿಚಂದ್ರ 2 ಇಂದಿರೇಶ ನಿನ್ನ ಪಾದವಿಂದು ಪೂಜೆಗೈವೆ ನಾನು ತಂದೆ ಸಲಹೊ ರಾಗದಿಂದ ಸುಂದರಾಂಗ ಸುಪ್ರಸನ್ನ 3 ಹಾರ ಕುಂಡಲಾದಿಭೂಷ ಚಾರುಮಕುಟಧರಸುಶೋಭ ಸಾರಸಾಕ್ಷ ರವಿಜವರದ ತೋರೋ ಮುಖವ ರಾಘವೇಂದ್ರ 4 ರಾವಣಾದಿ ಸಕಲದನುಜ ಜೀವಹರಣ ರಘುಕುಲೇಶ ಪಾವಮಾನಿ ಪೂಜಿತಾಂಘ್ರಿ ಧೇನುಪುರನಿವಾಸ ದೇವ 5
ರಾಮ ನಿನ್ನಯ ಚರಿತೆ ರಘು ರಾಮ ನಿನ್ನಯ ಚರಿತೆ ಪ. ಪ್ರೇಮದಿ ಭಜಿಸಲು ಕ್ಷೇಮವಹುದು ರಘುರಾಮ ಅ.ಪ. ದಶರಥ ಪುತ್ರ ಕೌಶಿಕನ್ಯಾಗ ಕರ್ತ ಪಶುಪತಿ ಧನುಭಂಗ ಜಾನಕೀಪತಿ ರಘು 1 ಪರಶುರಾಮನ ಗರ್ವಮುರಿದ ವರ ಮಾತೆ ವಾಕ್ಯವ ಸಲಿಸೆ ಕಾನನಕೈದ ರಘುರಾಮ 2 ದಶಶಿರ ಸೀತೆಯ ಕದ್ದೊಯ್ಯಲು ಅರಸುತ ಪತಿ ಹನುಮಗುಂಗುರವಿತ್ತ ಧೀರ 3 ಶರಧಿಯ ಲಂಘಿಸಿ ವರಹನುಮನು ತನ್ನ ಕರದಲಿಯದ ವರ ಜಾನಕಿಗಿತ್ತ 4 ಚೂಡಾಮಣಿ ಮಾರುತಿಗೊಡೆ ಸೇತುವೆ ಅತಿಶಯದಲಿ ಬಂಧಿಶಿ ದಶಶಿರನಳಿದಾ ರಘುರಾಮ 5 ನಿನ್ನಡಿ ನೆನೆವರೆ ಧನ್ಯರು ನಿತ್ಯ ಸನ್ನುತ ಚರಿತ ಶ್ರೀ ಶ್ರೀನಿವಾಸ ರಘುರಾಮ 6
ರಾಮ ಪೀಠಮಾಶ್ರಯ ಕಾಮಕೋಟಿ ಮೋಹನಾಂಗಕ ಶ್ರೀ ಪ ಸೂರ್ಯಕುಲ ಮಾಲಿಕಾಮಣಿ ಆರ್ಯವಂಶ ದಿವ್ಯ ಮೌಕ್ತಿಕ ಶ್ರೀ 1 ಇಂದು ಸುಂದರಾಸ್ಯ ರಾಘವ ಶ್ರೀ 2 ವೈರಿವನ ದಾವಪಾವಕ ವೀರ ವರರಘು ನಂದನ ಶ್ರೀ 3 ಭೂಮಿಸುತ ಪ್ರಾಣನಾಯಕ, ಮಾಮಿತಾರ್ಥ ಫಲದಾಯಕ 4 ಭಾನು ಶತಕೋಟಿಭಾಸುರ ಧೇನುಪುರನಾಥ ಶ್ರೀಕರ 5
ರಾಮ ಬಂದನೇನೆ | ಶ್ರೀ ರಘು ರಾಮ ಬಂದನೇನೆ|| ಪ್ರೇಮಿಕ ಜನರನು ಪೊರೆಯಲಾಗಿ|ಶ್ರೀರಘು ಪ ಜಾನಕಿ ಸಹಿತ ಲಕ್ಷಣರೊಡಗೂಡಿ | ಸ್ವಾನಂದದಿ ದಿಗ್ವಿಜಯಮಾಡಿ | 1 ಈರೇಳು ವರುಷಕೆ ಬರುವೆನೆಂದು ಮುನ್ನ | ಸಾರಿದ ನುಡಿ ಸತ್ಯಮಾಡಿ ದೋರಲು 2 ಹಾರೈಸಿ ನೋಡಲು ಕಣ್ಣಿಗೆ ಹಬ್ಬ | ದೋರಲು ಮೋಹದ ಮುದ್ದು ಮೊಗದಾ3 ಅವಧಿಯ ಮೀರಲು ಅಸುವ ತೊರೆವೆಸಿಂದು | ತವಕದಿ ಭರತನ ಪಾಲಿಸಲಿಕ್ಕೆ 4 ಸಾಕೇತ ಪುರಪತಿ ಸಾಮ್ರಾಜ್ಯಲೋಲನಾಗಿ | ಸಾಕುವ ಜಗಂಗುರು ಮಹೀಪತಿ ಪ್ರಭು 5
ರಾಮಂ ಭಜರೇ | ಭಜಮಾನಸ ರಘು ಪ ಭುವನಾಭಿರಾಮಂ ಗುಣರತ್ನಧಾಮಂ ಅ.ಪ ರಾಮೇತಿ ದೀನಪಾಲ ಲಲಾಮೇತಿ ಶುಭಕರ ನಾಮಂ | ಕೋದಂಡಧರರಿಪು ದೋರ್ದಂಡ ಸದ್ಗುಣಂ | ತಾರಕನಾಮ ರಾಮಂ ಧಾಮಂ ಜಾನಕಿರಾಮಂ | ಸನ್ನುತ ರಾಮಂ | ನೀಲಾಂಬುಜಾತರಾಮಂ ಪಟ್ಟಾಭಿರಾಮಂ | ಶೃಂಗಾರಪೂರ್ಣ ಶುಭಾಂಗ ಮಾಂಗಿರಿವಾಸ ರಂಗಂ | ಸತ್ಕರುಣಾಂತರಂಗಂ ದಾನವಕುಲ ಭಂಗಂ 1
ರಾಮ ರಘುಕುಲಾಬ್ಧಿ ಸೋಮಾ ಪ ಸಂತತ ಭಕ್ತ ಪ್ರೇಮಾ ಮಂಗಲಧಾಮಾ | ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ಅ.ಪ. ಏಸಪರಾಧಗಳೆಣಿಸದೆ ದಯವಿಟ್ಟು | ದೋಷದೂರನ ಮಾಡೊ ಕೇಶವ ಕಮಲಾಕ್ಷಾ 1 ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ | ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ2 ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-| ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ3
ರಾಮ ರಮಣಾರಘು ಪ ಸುಂದರವದನಾಸುರಮನಿ ಪಾಲಕ ಮಾಧವ ಕೃಷ್ಣ ಹರಿ 1 ಕುಂಡಲೀಶ ಶಯನ ಕೋದಂಡಧರ ಘನ ಮಂಡಲಾಧಿಪತಿ ಮಹಾಮಹಿಮ ರಘುಪತಿ 2 ಶ್ರೀ ಜಗನ್ನಾಯ್ಕನೆ ಶ್ರೀತಜನಪೋಷಕ ರಾಜಾಧಿರಾಜ ಮತ್ರ್ಯರಾಜನೆನಿಸಿಹ 3 ವೆಂಕಟರಮಣ ಅಕಳಂಕ ಮಹಿಮ ಪಂಕಜೋದ್ಭವನಯ್ಯಾ ಪರಮಭಕ್ತರ ಪ್ರಿಯ 4 'ಹೆನ್ನೆರಂಗ ' ಬಿಲವಾಸ ಹೆನ್ನ ಚಿನ್ಮಯ ರೂಪ ಶ್ರೀ ಚಿತ್ತಜನಯ್ಯ ಭೂಪ 5