ಒಟ್ಟು 1734 ಕಡೆಗಳಲ್ಲಿ , 106 ದಾಸರು , 1498 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಮಿನೀಮಣಿ ರಾಮಭಾಮಿನಿ ಪ ಸೋಮಬಿಂಬ ವದನೆಯೆ ಸೀತೆಯೆ ಅ.ಪ. ಪಾವಮಾನಿ ಮನೋವಾರಿಜಾಶ್ರಿತೆ ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ 1 ಭಕ್ತವತ್ಸಲೆಯೆ ಶಕ್ತಿರೂಪೆಯೆ ಮಾರ್ಗವಿಶದೆಯೆ ಮಾತೆಯೆ 2 ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ 3
--------------
ಬೇಟೆರಾಯ ದೀಕ್ಷಿತರು
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ಕಾಯಬೇಕು ಶ್ರೀ ತ್ರಿವಿಕ್ರಮÁಯಜನಯ್ಯ ಕಂಜನಯನ ಪ . ಆರು ನಿನ್ನ ಬಣ್ಣಿಪರು ಅಮರಗುಣನಿಲಯಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ 1 ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ 2 ಪಾವನ್ನ ಗಂಗಾಜಲವು ಪಾದವೆಂಬ ಪದುಮವÀ ತೊ-ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ 3
--------------
ವಾದಿರಾಜ
ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ ಶರಣರ ದುರಿತಪಹರಣ ಸುಪಾವನ | ಚರಣನೆ ಕೌಸ್ತುಭಾಭರಣ ಹೇಮಾಂಬರಾ | ತರಣಿ ಶತ | ಕಿರಣ ವಿರಾಜಿತ ಕರುಣಾ ಸಿಂಧೋ 1 ವಾರಣಭಯ ನಿವಾರಣ ಸುರಜನ | ತಾರಣ ದೈತ್ಯ ವಿದಾರಣ ಸೃಷ್ಟಿಯೆ | ಕಾರಣ ಚಿತ್ಸುಖ ಪೂರಣ ಮುನಿಜನ | ಪ್ರೇರಣ ಫಣಿಮದ ಹಾರಣ ಧೀರಾ2 ಚಕೋರ ಸು | ಚಂದಿರ ಸ್ಮರಚಿತ ಸುಂದರ ಸದ್ಗುಣ | ಮಂದಿರ ವಿಧಿಹರ ವಂದ್ಯ ಮುಕಂದನೇ | ತಂದೆ ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೊ ಕರುಣದಿಂದೆನ್ನನು ತೋಯಜಾಕ್ಷನೆ ನೀನು ಪ ಕಾಯೊ ಕರುಣದಿ ತೋಯಜಾಕ್ಷನೆ ನೀನು ಹೇಯ ಜನಮವೆತ್ತಿ ಮಾಯಕೆ ಸಿಲುಕಿದೆ ಅ.ಪ. ಹಿಂದೆ ತಪ್ಪಿದೆನ್ಯಯ್ಯ ಮುಂದೆ ಬುದ್ಧಿಯು ಬಂತು ಸಿಂಧುಶಯನ ನೀನು ಬಂದು ಮೈದೋರಿ 1 ಸತಿಸುತರೆನಗೆ ಅತಿ ಹಿತರೆಂತೆಂದು ಮತಿಭ್ರಾಂತನಾಗಿದ್ದೆ ಪತಿತ ಪಾವನನೆ 2 ಕೊಟ್ಟು ಆದರಿಸಲು ಇಷ್ಟ ಮಿತ್ರರು ಇದ್ದು ಕೆಟ್ಟುಪೋದಮೇಲೆ ಕೈಬಿಟ್ಟರು ನೀ ಬಿಡಬೇಡ 3 ತಂದೆತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೆರಮಣನೆ ಬಂಧವ ಬಿಡಿಸೀಗ 4 ಕರುಣಾಸಾಗರ ನಿನ್ನ ಮರೆಹೊಕ್ಕೆ ನಾನೀಗ ಶರಣರ ಪೊರೆಯುವ ರಂಗೇಶವಿಠಲನೆ 5
--------------
ರಂಗೇಶವಿಠಲದಾಸರು
ಕಾಯೊ ಕರುಣಾಕರ ಕೃಪಾಲ ಶ್ರೀ ಗುರು ಎನ್ನ ಕಾಯೊ ದಯದಿಂದೆನ್ನ ಪರಮಪಾವನ ಧ್ರುವ ಹುಟ್ಟಿಸಿಹ್ಯ ಜೀವನ ಸೃಷ್ಟಿಯೊಳು ನಾ ನಿಮ್ಮ ದೃಷ್ಟಿಸಿ ನೋಡಲು ಎನ್ನ ಕಷ್ಟಪರಿಹಾರ ಶಿಷ್ಟಜನ ಪ್ರತಿಪಾಲ ದುಷ್ಟಜನ ಸಂಹಾರ ಎಷ್ಟೆಂದು ಪೊಗಳಲಯ್ಯ ಕೃಷ್ಣಕೃಪಾಲ 1 ಇನ್ನೊಂದು ಅರಿಯೆ ನಾ ಅನ್ಯಪಥÀವೆಂಬುದನು ನಿನ್ನ ಚರಣಕೆ ಪೂರ್ಣ ನಂಬಿಹ್ಯನು ಭಿನ್ನವಿಲ್ಲದೆ ಎನ್ನ ಚನ್ನಾಗಿ ಸಲಹಯ್ಯ ಧನ್ಯಗೈಸೊ ಪ್ರಾಣ ಚಿನ್ಮಯನೆ 2 ವಾಸನೆಯ ಪೂರಿಸೊ ವಿಶ್ವವ್ಯಾಪಕ ಎನ್ನ ಭಾಸ್ಕರಕೋಟಿ ಪ್ರಕಾಶ ಪೂರ್ಣ ಲೇಸು ಲೇಸಾದಿ ಪಾಲಿಸೊ ವಾಸುದೇವನೆ ದಾಸಾನುದಾಸ ನಿಜದಾಸ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾಭಯ ಕೃದ್ಭಯ ನಾಶನ ಧ್ರುವ ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ 1 ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು 2 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರ ಮಹಿಮ 3 ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರಮುನಿಗಳ 4 ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ ಕಾಯೊ ಕಾಯೊ ಎನ್ನ ಕಾಯಜನಯ್ಯನೆ ಕಾಯದಿದ್ದರೆನ್ನ ಕಾವವರಾರೊ ಅ.ಪ ಎಂದೆಂದಿನ ಕರ್ಮಗಳನೆಣಿಸುತಲಿ ಕಂದಿಸಿ ಕುಂದಿಸಿ ಬಂಧಿಪರೇನೋ 1 ತಾಳಲಾರೆ ಈ ಕಾಲನ ಬಾಧೆಯು ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ 2 ಆಲಸ ಮಾಡದೆ ಆರ್ತಿಗಳೋಡಿಸಿ ಪಾಲಿಪುದೆನ್ನನು ಪಾವನ ಮೂರ್ತೆ3 ಮಾಡಿದ ಪಾಪಗಳೋಡಿಸಿ ಸುಖದಿಂ ದಾಡಿಸು ಕಣ್ಣಿಗೆ ಕಾಣಿಸಿಕೊಂಡು 4 ವಾಸುದೇವವಿಟ್ಠಲ ನೀ ಎನಗಿನ್ನು ವಾಸಿ ಮಾಡಿಸಿ ಕೀರ್ತಿಯ ಪಡೆಯೊ 5
--------------
ವ್ಯಾಸತತ್ವಜ್ಞದಾಸರು
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ಪ ಪರಿ ಪರಿ ಥರವೆ 1 ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ 2 ದುರಿತ 3 ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ 4 ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ 5 ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ 6 ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ 7
--------------
ವೇಣುಗೋಪಾಲದಾಸರು
ಕಾಯೊ ಸುಗುಣ ಮಣಿಯೆ ಪ ಪ್ರೀಯ ಮುರಾರಿ ವಿನಾಯಕ ಸೋದರ ||ಅ|| ಅಘ ಪಾವನಮೂರ್ತಿ ಶರಣರ ರಕ್ಷಕ 1 ಕುಂದ ಕುಂದಕುಟ್ಮಲಪದನಾನಂದಿಧ್ವಜ ಸುತ ಸುಂದರ ಮೂರುತಿ | ಇಂದುವದನ ಮುನಿವೃಂದ ವಂದಿತ ಗುಹ 2 ಮಯೂರ ಧ್ವಜಾ | ಕ್ಲೇಶದಿ ನರಳುವ ದಾಸರ ರಕ್ಷ ಸ-ರ್ವೇಶಕರಜ ನಿರ್ದೋಷಿ ಸುಬ್ರಹ್ಮಣ್ಯ 3
--------------
ಬೆಳ್ಳೆ ದಾಸಪ್ಪಯ್ಯ
ಕಾಯೊನೀನೆ ಕರುಣದಿ ಪ ರಾಮರಾಮಯೆಂದು ಪೊಗಳುವನು ಮಹಾರಾಜ ಸಾರ್ವಭೌಮ ಪೂರ್ಣ ಕಾಮನೆ ದಶರಥಾವನೀಶ ಕುಮಾರ 1 ದೇವದೇವನೆ ಕೃಪಾವಲೋಕನದಿ ದೀನಜನರ ನೋಡೊ ನೀದಯಮಾಡೊ ನೀಡೋಯನ್ನದುರಿ- ಜಯಜಯ ಪ್ರಭೋ ಭಂಜನ ಜಗ ಜ್ಜೀವನ ನತಜನ ಸಂಜೀವನಸು- ಶುಭ ಕುಶೀಲವರತಾತ ಸುಪ್ರೀತ2 ಸರಿಸಿಜೋದ್ಭವಾದ್ಯಮರನಾಯಕ ಸಾಧುರಕ್ಷಸ್ಸದ್ಧರ್ಮ ಪಾಲಕ ಮನುಜವೇಷ ದುರ್ಜನ ಕಾಲ ಶರಧಿ ಸೇತು ಬಂಧನ ಕಂಜೇಕ್ಷಣ ಮಾಂ ಪಾಹಿ ರಘುವೀರ 3
--------------
ಗುರುರಾಮವಿಠಲ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನ ಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನ ಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ 2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ತುಪಾಕಿ ವೆಂಕಟರಮಣಾಚಾರ್ಯ