ಒಟ್ಟು 3729 ಕಡೆಗಳಲ್ಲಿ , 124 ದಾಸರು , 2629 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರುಗೊಂಡಳು ಇಂದಿರಾದೇವಿ | ಮದನ ಮೋಹನ ದಿವ್ಯ ಮೂರುತಿಯಾ || ಸದಮಲಾನಂದ ಕೀರುತಿಯಾ ಪ ನವ ಸ್ವರ್ಣ ಹರಿವಾಣದಿ ಕಂಚ ಕಲಶನಿಕ್ಕಿ | ಹವಳದಾರತಿ ರನ್ನ ಜ್ಯೋತಿಯಲಿ || ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು | ನವರತ್ನ ನಿವಾಳೆಯ ಕೊಡುತಾ1 ಮತ್ಸ್ಯ ಕ್ರೋಢ ನರಸಿಂಹ | ಜಯ ಮುನಿವಟು ಭಾರ್ಗವ ರೂಪನೆ || ಜಯ ರಾಮ ಶ್ರೀ ಕೃಷ್ಣ ಜಯ ಬೌದ್ಧ್ಯ ಕಲ್ಕಿಯೆ | ಜಯವೆಂದು ಬೆಳಗಿ ಪಾದಕೆ ನಮಿಸಿ ||2 ಕರೆದೊಯ್ದು ತೂಗು ಮಂಚದಿ ಕುಳ್ಳರಿಸಿ | ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ || ಗುರು ಮಹೀಪತಿ ಸುತ ಪ್ರಭುವಿನ ಸವಿ ಸವಿ | ಕರುಣ ಮಾತುಗಳಾಡಿಸುತಾ ಹರಿಯಾ ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರೆ ಪ ನೀರಜ ನಿಲಯೆ ಅ.ಪ ಬಾರೆನ್ನಯ ಭವನಕೆ ಭಾಗ್ಯದ ನಿಧಿ ಪೂರಗೊಳಿಸೆ ಮನ ಕೋರಿಕೆಗಳನು1 ಕೊಳಲೂದುವ ಗೋವಳನಿಲ್ಲಿರುವನು ತಿಳಿನಗುಮೊಗದಲಿ ಬೆಳಗೆಲೆ ಭವನವ 2 ಚಿನ್ನದ ಹೊಗೆಯಾಡಿಸೆ ಈ ಮಂದಿರ ನಿನ್ನದೇ ಭಕುತ ಪ್ರಸನ್ನನ ಪ್ರಿಯಳೆ3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರೆ ಪ ಸಿಂಧು ಸಂಭೂತೆ | ಪೂರ್ಣ ಚಂದಿರ ಮುಖಿ ಸುಖದಾತೆ ಅ.ಪ ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ ವಂದಿಪೆ ಮನ್ಮನ ಮಂದಿರದೊಳು ಬಾರೆ || ಕೃತಿ ಶಾಂತಿ ಜಯಮಾಯೆ ಸೀತೆ ದೇವಿ ಪತಿತಪಾವನೆ ಕ್ಷಿತಿಜಾತೆ | ವಿಧಿ ಶಿತ ಕಂಧರಾದಿ ನಮಿತೆ | ಮಹ | ಪತಿವ್ರತೆ ಪರಮವಿಖ್ಯಾತೆ ಆಹಾ ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ ಅತಿಹಿತದಲಿ ತವ ಪತಿಯ ಪಾದವ ತೋರೋ 1 ಹರಿಣಲೋಚನೆ | ಶ್ರೀರುಕ್ಮಿಣೀ | ಮದ ಕರಿ ಮಂದಗಮನೆ ಕಲ್ಯಾಣಿ ದ್ವಿಜ ಪರಿವಾರ ಸಂಸ್ತುತೆ ಜಾಣೆ | ಚಾರು ಚರಿತೆ ಚಂಚರೀಕ ಸುವೇಣಿ || ಆಹಾ || ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ 2 ಕಂಬು ಕಂಧರೆ ಕಾಮನ ತಾಯೆ ಅರ ಭವ ಚಂದನ ಗಂಧಿಯೆ | ನಂದ ನಂದನ ಶಾಮ ಸುಂದರವಿಠಲನ್ನ ಸಂದರುಶನವೀಯೆ 3
--------------
ಶಾಮಸುಂದರ ವಿಠಲ
ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ ಪ್ರೇಮವ ಬಣ್ಣಿಸಲಸದಳ ಕಂಡ್ಯ ಪ ಜಕ್ಕ ಜವ್ವನ ಪೋಗಬಾರದೆಂದೆನುತಲಿ ಮಕ್ಕಳ ನಿನ್ನೊಳು ಜನಿಸನು ಕಂಡ್ಯ ಅಕ್ಕರೆಯನು ಶ್ರೀದೇವಿ ನೀ ಕಂಡ್ಯ 1 ಉರದೊಳು ತೊಡೆಯೊಳು ಕೊಳಲೊಳಾಭರಣದೊಳು ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ ನೀರೊಳಕ್ರೂರಗೆ ಒಲಿಯುವಾಗಲು, ಮಹಾ ನೀರೊಳು ಪ್ರಳಯದಿ ನಿನ್ನನು ಬಿಡನು 2 ರಾಜಾಧೀರಾಜರು ಬಹುದಾರರೆಂಬರು ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ ರಾಜೇಶಹಯಮುಖನಂಥ ಪ್ರೇಮಿಗಳುಂಟೆ ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ 3
--------------
ವಿಶ್ವೇಂದ್ರತೀರ್ಥ
ಇಂದಿರೆ ಪತಿ ಭಂಗಬಡುವ ವಿಷಯಂಗಳಿಗೆರಗದೇ ರಂಗ ನಿನ್ನಯ ಮಂಗಳಂಗುಟರ್ಚಿಸುವಂತೆ 1 ಉದರ ಪೋಷಣೆಗಾಗಿ ಸದೆಬಡಿಗನಾಗದೇ ಸದಮಲ ನಿನ್ನೂಳಿಗದವನಾಗುಳಿವಂತೆ 2 ಶರೀರ ಸಂಬಂಧಿಗಳಲ್ಲಿರುವ ಪ್ರೇಮವ ತಂದು ಗುರು ಮಹಿಪತಿ ಪ್ರಭು ಸ್ಮರಣೆಯೊಳಿರುವಂತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರೆ ಮನೋಹರನ ಪ ಒಂದು ಕ್ಷಣ ತಾಳಲಾರೆ ವಂದಿಸುವೆನೆಲೆ ನೀರೆ ಅ.ಪ ಚಂದ್ರಕಿರಣಗಳುರಿಯಂದದಿ ತೋರುತಲಿದೆ ಮಂದ ಮಾರುತಗೆ ಕಡು ಕುಂದಿದೆನೆ ಮಂದಯಾನೆ 1 ಸೇರಿದ ಸುಖವ ಮರೆಯಲಾರೆನೆ ಸರೋರುಹಾಕ್ಷಿ 2 ಭೂತಳಕಧಿಕವಾದ ನೂತನಾವರಣಪುರಿ ದಾತ ಗುರುರಾಮವಿಠಲ ಯಾತಕೆ ನಿರ್ದಯಗೈದ 3
--------------
ಗುರುರಾಮವಿಠಲ
ಇಂದಿರೆ ರಮಣಾ ಪಬಂದನೋಡು ಆನಂದದಿಂದ ಗೋ'ಂದಗೋಕುಲಾನಂದ ಮುಕುಂದಾ ಅ.ಪಶ್ರೀ ಕೇಶವ ನಾರಾಯಣಮಾಧವಶ್ರೀಧರ ಗಿರಿಧರ ಗೋವರ್ಧನಧರಶ್ರೀ ದಾಮೋದರ ಪದ್ಮನಾಭಮುಚಕುಂದವರದ ಮುರಹರ ಶ್ರೀಕೃಷ್ಣ 1ಸರ್ವೋತ್ತಮ ಸರ್ವಜ್ಞ ಶಿಖಾಮಣಿಸರ್ವಪ್ರೇರಕ ಸರ್ವವ್ಯಾಪಕಸರ್ವಾಧಾರಕ ಸರ್ವ ನಿಯಾಮಕಸರ್ವತಂತ್ರ ಸ್ವತಂತ್ರ ಸಮರ್ಥಾ 2ಗೋಪಾಲಾಚ್ಯುತ ಗೋಪ ಕಿಶೋರಾಗೋಪಿ ಜನಮನ ಚಂದ್ರ ಚಕೋರಾಆಪದ್ಬಾಂಧವ ಭೂಪತಿ'ಠ್ಠಲಕೈಪಿಡಿದೆಮ್ಮನು ಕಾಪಾಡಲು ಬಾ 3ಪಾದ ಮ'ಮೆ
--------------
ಭೂಪತಿ ವಿಠಲರು
ಇಂದಿರೆ ಅರಸ ಚಂದ್ರಮಂಡಲಮಂದಿರಾಖಿಳವಂದ್ಯ ಹಯಮುಖಎಂದೆಂದೆನ್ನ ಮನದಿಂದಗಲದಿರುಮಂದರಾದ್ರಿಧರ ಪ. ತುಂಗಮಹಿಮ ತುರಂಗವದನ ಶು-ಭಾಂಗ ರಿಪುಕುಲಭಂಗ ಸುಜನರಸಂಗ ಎನ್ನಂತರಂಗ ಮಲಿನವಹಿಂಗಿಸುವುದೆಂತೊಮಂಗಳಾಬ್ಧಿತರಂಗದುಬ್ಬಿಗೆತಿಂಗಳೆನಿಸುವ ಅಂಗಜನ ತಂದೆರಂಗ ನಿನ್ನ ಪಾದಕೆಂಗಮಲದಲ್ಲಿಭೃಂಗನಪ್ಪುದೆಂತೊ 1 ವಾರಿಜಾಕ್ಷ ಮುರಾರಿ ಮದವೆಂಬೋಮಾರಿ ಮುಸುಕಿತು ಸಾರಿ ಮತ್ಸರಮಾರನೊಡಗೂಡಿ ದಾರಿ ತಪ್ಪಿಸಿಗಾರುಮಾಡಿತೆನ್ನ ನಾ-ನಾರೆ ಕ್ರೋಧಮಹೋರಗನ ವಿಷ-ಧಾರೆಗೆ ಭಯಕಾರಿ ಹರಿ ನಿನ್ನಚಾರುಚರಣವ ಸಾರಿದೆನಿಂದುತೋರಿ ಸಲಹಬೇಕು 2 ಧsÀನ್ಯ ಸುರರಜೀವನ್ನ ಕರುಣಸಂ-ಪನ್ನ ನಿತ್ಯಪ್ರಸನ್ನ ಚಿನುಮಯಪನ್ನಗಾರಿವಾಹನ್ನ ಶಶಿಸಮ-ವರ್ನ ಹಯವದನನಿನ್ನ ಪಾದಪಾವನ್ನಸುರತರು-ವಿನ್ನ ನೆಳಲೊಳಿಟ್ಟೆನ್ನ ಸಲಹಬೇ-ಕನ್ಯಥಾ ಗತಿಶೂನ್ಯ ನಾನೆಲೊಪೂರ್ಣಪುರುಷರನ್ನ 3
--------------
ವಾದಿರಾಜ
ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಪ ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ 1 ಕಂಬು - ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ | ಕಂಚುಕ ಹಸ್ತಕಡಗ ಮುದ್ರೆ ಪ್ರವಳಮಣಿಯು ಕೇಯೂರ ದಂಡೆಯ ಸರ | ಬೇವಿನೆಸಳಂತೆ ಪುಬ್ಬು ಢಾಳಿಪ | ತಾವರೆಯ ಫಣೆಯೂ ಸಂಪಿಗೆ | ನಾಸಿಕ ವೇಣಿ | ಹಾವಿನಂದದಿ ಒಪ್ಪುತಿರೆ ದೇವಿ 2 ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು | ಕದಪು ಮುಂಗೂದಲು | ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು | ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ | ಪಾಲ ಸಾಗರ ಶಾಯಿ ವಿಜಯವಿ- ಠ್ಠಲರೇಯನ ಉತ್ಸಾಹದಲಿ | ತೋಳಿನಲ್ಲಿ ಬಿಗಿದಪ್ಪಿ ಪವಳಿಪ | ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3
--------------
ವಿಜಯದಾಸ
ಇಂದಿರೆ ಇಂದುವದನೇ ಸರಸಿಜಸದನೇ ನಿಂದಿತ ಜನಸೂದನೆ ಪ ವಂದಿಸುವೆನೆ ಅರವಿಂದಗಂಧಿನಿ ಮಂದಿರದಲಿ ಗೋವಿಂದನ ತೋರಿಸೆ ಅ.ಪ. ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ ಶೀಲೆ ಸಂಪೂರ್ಣ ಗುಣವ್ರಾತೇ ಫಾಲನಯನ ತ್ರಿದಶಾಲಯ ಪ್ರಮುಖರ ಪಾಲಿಸುತಿಹೆ ಮಂದಜಾಲಜನಕೆ ರಮೇ ಶ್ರೀಲತಾಂಗಿ ನಿನ್ನಾಳುಗಳೊಳು ಹರಿ ಲೀಲೆಯ ಮನದಲಿ ಅಲೋಚನೆ ಕೊಡೆ 1 ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ ಸಾಕಾರವಂತೆ ಗುಣ ಸÉ್ತೂೀಮೆ ನೀ ಕರುಣಿಸಿ ಅವಲೋಕಿಸಿ ಎನ್ನಯ ಕಾಕುಮತಿಯ ಕಳೆದೇಕಾಂತದಿ ನಿತ್ಯ ಏಕ ಮನದಿ ಹರಿ ಶ್ರೀ ಕರಪದಧ್ಯಾನ ನೀ ಕರುಣಿಸು ನಿರಾಕರಿಸದಲೆ 2 ಜಾತರಹಿತ ಜಯವಂತೆ ದೈತ್ಯಕೃತಾಂತೆ ಸೀತಾಂಶುಕೋಟಿ ಮಿಗೆಕಾಂತೆ ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ ನೀತದೂರಾದಿ ಮಧ್ಯಾಂತೆ ಪುರುಹೂತ ಮುಖಾವರ ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ ವಾತಜನಕ ಜಗನ್ನಾಥ ವಿಠಲನ ಮಾತು ಮಾತಿಗೆ ನೆನೆವಾತುರ ಮನ ಕೊಡೇ 3
--------------
ಜಗನ್ನಾಥದಾಸರು
ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ. ಜರದ ಪೀತಾಂಬರ ಕರದೊಳು ಧರಿಸಿರುವೆನೆಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ 1 ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ 2 ಭುಂಜಿಸು ಬೇಗ 3 ಹರಡಿ ಕಂಕಣ ದುಂಡು ಹೆರಳು ಭಂಗಾರಗಳನುಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ4 ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ 5
--------------
ಇಂದಿರೇಶರು
ಇಂದಿರೆ ಪಾಲಿಸು ಎನ್ನ ಪ ಇಂದಿರೆ ನಿನ್ನನು ವಂದಿಸಿ ತುತಿಸುವೆ ವಂದಿಪ ಜನಕಾನಂದ ನೀಡುವ ದೇವೀ ಅ.ಪ ಮಂದಜಾಸನ ಮುಖ ಸುರರಾ ಕರುಣ ದಿಂದಲಿ ಪಾಲಿಪೆ ಅವರ ಸದರ ಸದಾ ಪೊಂದಿದ ಜನಕೆ ಅಧಾರಾ ಆಹ - ಳೆಂದು ನಿನ್ನಯ ಪಾದದ್ವಂದ್ವಜಲಜ ಮನೋ - ನಿತ್ಯ ವಂದಿಪೆ ಹರಿರಾಣೀ 1 ಸ್ಮರಣೆ ಮಾಳ್ಪರ ಪಾಪಹÀರಣ ಪರಿ - ಹರಿಸಿ ಮಾಡುವಿ ಪೂರ ಕರುಣಾ ಆಹಾ ಸರಿಯಿಲ್ಲ ನಿನಿಗಿನ್ನು ಹರಿಗೆ ಸಮಾಸಮೆ ತ್ವರಿತಾದಿ ಎನ್ನನು ಮರೆಯದೆ ಪೊರೆಯೆಂದೆ2 ಮಾತೆ ದಾರಿದ್ರ್ಯವ ಕಳೆದು ನಿನ್ನ ದೂತ ನಾನೆಂದು ನೀನೊಲಿದು ಮಾತು ಲಾಲಿಸಿ ಭಾಗ್ಯಗರಿದು ಎನಗೆ ನೀತವಾಗಿ ಸುಖ ಸುರಿದು ಆಹಾ ದಾತಗುರುಜಗನ್ನಾಥವಿಠಲ ನೀ - ಕೇತನ ಸುಖ ಎನಗೆ ಈ ತೆರ ನೀಡಮ್ಮಾ3
--------------
ಗುರುಜಗನ್ನಾಥದಾಸರು
ಇಂದಿರೆ ಮನೋಹರ ಭಕ್ತಲಲಾಮ ಸಿಂಧುಸದನ ತ್ರಿಜಗದೋದ್ದಾಮ ಪ ಮಂದರಮಂದಿರ ಮೇಘ ಶ್ಯಾಮ ಕುಸುಮ ಅ.ಪ ಅಮಿತ ಲೀಲ ಸಗುಣನಿರ್ಗುಣ ಮಹಿಮಜಾಲ ಸುಜನ ಪಾಲ ಕಾಲ 1 ಪರತರಪಾವನ ಕರುಣಾಂತರಂಗ ಮಾಧವ ಪರಿಭವ ಭಂಗ ಸಿರಿ ನರಸಿಂಗ ಮರಣರಹಿತ ಪ್ರಭುವರ ನೀಲಾಂಗ2 ಗೋಕುಲಪತಿ ಗೋಪಾಲಶೀಲ ವ್ಯಾಕುಲಪರಿಹರ ವೇಣುಲೋಲ ಕಾಕುದನುಜ ಸಂಹಾರ ವಿಶಾಲ ಲೋಕಪಾವನೆ ವರ ದೇವಕಿ ಬಾಲ 3 ಯೋಗಿ ವಂದಿತ ವನಜ ಸಂಭವಾದಿ ಸುರಮುನಿವಿನುತ ಚಿನುಮಯ ಚಿದ್ರೂಪ ಚಿತ್ಕಳಾಭರಿತ ಜನಕತನುಜೆಪತಿ ವಿಮಲಚರಿತ 4 ಗೋಕುಲನಾಯಕ ಶ್ರೀಕೃಷ್ಣನಮೋ ವೈಕುಂಠನಾಯಕ ಶ್ರೀ ವಿಷ್ಣು ನಮೋ ಲೋಕನಾಯಕ ಶ್ರೀನಿವಾಸ ನಮೋ ಭಕುತಿದಾಯಕ ಶ್ರೀರಾಮ ನಮೋ5
--------------
ರಾಮದಾಸರು
ಇಂದಿರೆ ವಿಜಯೆ ಜಯಮಂಗಳಂ ಪ ಸಾರಸದಳಹಿತೆ ಸಾರಸಮಹಿತೆ ಮಂಗಳಂ1 ಇಂದು ಸುಮಾಕರೆ ಸಹೋದರಿ ಸುಂದರ ಕಬರಿ ಮಂಗಳಂ 2 ರಾಜರಾಜಾರ್ಚಿತೆ ರಾಜಮುಖಾಂಚಿತೆ ರಾಜಗೃಹಾರ್ಚಿತೆ ರಾಜಿತ ವನಿತೆ ಮಂಗಳಂ 3 ಮಾನವ ವಂದಿತೆ ಧೇನುನಗರ ಹರಿಮಾನಿನಿ ಜನನಿ ಮಂಗಳಂ 4
--------------
ಬೇಟೆರಾಯ ದೀಕ್ಷಿತರು