ಒಟ್ಟು 4509 ಕಡೆಗಳಲ್ಲಿ , 123 ದಾಸರು , 3059 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಾರಶೋಭಿತ ಮುಖ ಸಾರಸ ಲೋಚನ ಪ ತೋರ್ಪ ಸುಂದರ ಬಾಹುಯುಗ ಬಂದು ಕಂದನ ಪೊರೆಯೈ 1 ಪಂಕಜಾಸನ ಮುಖ್ಯ ಶಂಕರಪೂಜಿತ ಸಂಕಟ ಪರಿಹರಿಸೈ ಶಂಕೆಯಿಲ್ಲದೆ ಸ್ಥಿರ ಲಂಕಾ ರಾಜ್ಯವನಿತ್ತೆ 2 ಜನನ ಮರಣಗಳ ಘನಪರಿವಾಹದಿ ನೆನೆದು ಶೋಕಿಪೆ ದೇವನೆ ವಿನಯದೊಳೀವುದೈ ಧೇನು ಪುರಪತೆ 3
--------------
ಬೇಟೆರಾಯ ದೀಕ್ಷಿತರು
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು
ಹಿಡಿ ಮನವೇ ಸಂತರ ಸಂಗ ಪ ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಡಿ ಹಿಡಿ ಭಾವದಲೀ ಗುರು ಪಾದಾ ಪ ಘೋರ ಸಂಸಾರದ ಬಲಿಯನೇ ದಾಟುವ | ಬೀರುವ ಸ್ವಾನಂದ ಬೋಧಾ 1 ಮನಸಿನ ಕಲ್ಪನೆ ಹಾರಿಸಿ ತೋರುವ | ಚಿನಮಯ ನಿಜ ಸುಖ ಪಾದಾ 2 ಗುರುವರ ಮಹಿಪತಿ ಪ್ರಭು ದಯದಿಂದಲಿ | ದೊರೆಯುವ ಪರಮ ಪ್ರಸಾದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಂಡು ಕರ್ಮಗಳ್ಯಾಕೆ | ಬಂಡಿ ದೈವಗಳ್ಯಾಕೆಪಂಡರಿ ದೊರೆಯು ಇರಲು ಪ ಪುಂಡರೀಕಾಕ್ಷ ಪದಬಂಡುಣಿಯವೋಲ್ ತುತಿಸಲಿಲ್ಲಾ | ಬಲ್ಲಾ 1 ಕಂಬು ಸಾರಥಿ ಕೃಷ್ಣಚರಿತೆಗಳ ಪೊಗಳುತಿರಲೋ | ಕೇಳೋ 2 ಇಂದು ಭಾಗದಿ ಭಕ್ತಸಂದಣೀಯಲಿ ಸೇರುತಾ |ತಂದೆ ತಾಯಿಯ ಸೇವೆ | ಮುಂದು ಮಾಡಿದಗೊಲಿದುನಿಂದು ಇಟ್ಟಿಗೆ ಮೆಟ್ಟಿಹಾ |ನಂದ ನಂದನ ಗುರೂ ಗೋ | ವಿಂದ ವಿಠಲನವಂದಿಸೆಲೊ ಮುದದಿ ಸತತಾ | ವಿತತಾ 3
--------------
ಗುರುಗೋವಿಂದವಿಠಲರು
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತದಿಂದ ಪೊರೆಯೆನ್ನ | ವಿತತ ಮಹಿಮ ಹರಿಯೇ ಹಿತ ಅಹಿತವೆರಡನ್ನು | ಸಹಿಸುವಂತೇ ಪ ಅತಿ ದಯಾಪರನೆಂದು | ಖತಿದೂರನೆಂದೆನುತಶ್ರುತಿ ನಿಚಯ ಸಾರುತಿದೆ | ಗತಿ ಪ್ರದನೆ ದೇವಾ ಅ.ಪ. ವೇದ ವೇದ್ಯನೆ ದೇವ | ಆದ್ಯಂತ ರಹಿತನೇಕಾದುಕೋ ಎನ್ನನು | ಮೋದಗಳನಿತ್ತೂ ||ಸಾಧನ ಸುಮಾರ್ಗದಲಿ | ಹಾದಿಯನು ಕಾಣದಲೆಬಾಧೆಗೊಳಗಾಗಿಹನ | ಆದರಿಸು ದಯವನಧೀ 1 ಪ್ರಾಣಪತಿಯೇ ಎನ್ನ | ಪ್ರಾಣಗಳು ವಶವಿಲ್ಲಧ್ಯಾನ ಮಾಡುವೆನೆನ್ನ | ಮನನಿಲ್ಲಧ್ಹರಿಯೇ ||ಜ್ಞಾನ ಕರ್ಮೇದ್ರಿಗಳು | ಏನೊಂದು ನಿನ್ನಯಾಧೀನವಿರಲೂ ನಾನು | ಏನು ಮಾಡಲು ಸಾಧ್ಯ 2 ಗೋವರ್ಧನೋದ್ಧರನೆ | ಗೋವುಗಳ ಪರಿಪಾಲಕಾವ ಕರುಣೀ ನಮ್ಮ | ದೇವರ ದೇವಾ ||ಗೋವಿದಾಂಪತಿ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಾರು | ಕಾವರನು ಕಾಣೆನಯ್ಯಾ 3
--------------
ಗುರುಗೋವಿಂದವಿಠಲರು
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ ಹೆಂಡಿರು ಮಕ್ಕಳ ಕರೆದರೆ ಒಳಗೆ ತಂಡುಲವಿಲ್ಲ ಗಂಜಿಗೆಶರೆ ಉಂಡೆವೆನುತ ಬಾಯ ಬಿಡುತಾರೆ ಇದ ಕಂಡು ನಾಕ್ಷಣವು ಜೀವಿಸಲಾರೆ 1 ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು ಕೊಡುವರು ಕೊಡುವುದಿಲ್ಲವೋ ರೋಸಿ ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ 2 ಅತಿಥಿಗಿಕ್ಕಲಿಕೆ ತನಗೇ ಇಲ್ಲ ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ ವ್ರತನೇಮ ದಾನ ಧರ್ಮಗಳಿಲ್ಲ ಪರ ಗತಿಗೇನು ಮುಂದೆ ಸಾಧನವಿಲ್ಲ 3 ಸಂಸಾರದೊಳಗೇನು ಸುಖವಿಲ್ಲ ಪರಮ ಹಂಸನಾಗಲು ಮುಂದೆ ಪಥವಿಲ್ಲ ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ ಧ್ವಂಸಿ ಯಣುಗನ ಕೈವಶರೆಲ್ಲ 4 ಕಾಲಗತಿಯು ಬಲು ಬಿರುಸಣ್ಣ ಜನ ಬಾಳುವ ಪರಿಯಿನ್ನು ಹೆಂಗಣ್ಣ ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ ಲೋಲನ ಮೇಲೆ ಭಕ್ತಿಯಿಲ್ಲಣ್ಣ 5
--------------
ಕವಿ ಪರಮದೇವದಾಸರು
ಹಿರಣ್ಯಕಶ್ಯಪವೈರಿ ಮುರದಾನವವಿದಾರಿ ದುರಿತರೋಗ ನಿವಾರಿ ಪಾಹಿ ನೃಹರಿ ನಖಮುಖಮಹಾಯುಧ ಅಖಿಲ ಸಂಪತ್ಪ್ರದ ನಿಖಿಲ ಲೋಕಾಧೀಶ ಭಕ್ತಪೋಷ | ನೃಪಂಚಮುಖದೇವ ಸುಪವಿತ್ರ ಶ್ರೀಧವ | ಕೃಪಾರ್ಣವ ಕೇಶವ ಸುಪ್ರಭಾವ | ಘೋರ ವಿಕ್ರಮರೂಪ ವೈರಿ ಭಂಜನಕೋಪ | ಸಾರಸುಗುಣ ಕಲಾಪ ವಿಜಿತತಾಪ ವೇದವೇದ್ಯಸುಭದ್ರ ತರಳೆವರದ ಸಾಧುಸಮ್ಮತಚರಿತ ಸಿದ್ಧಿದಾತ ಕ್ಷುದ್ರದೈದ್ಯವಿನಾಶ ಚಿದ್ವಿಲಾಸ ಭದ್ರಶೇಷಾದ್ರೀಶ ಶ್ರೀನಿವಾಸ
--------------
ನಂಜನಗೂಡು ತಿರುಮಲಾಂಬಾ
ಹೀಂಗ್ಯಾಕ ಪ್ರಾಣಿ | ಹೀನ ಗುಣಗಳನೆಬಿಡಲಿಲ್ಲ | ಶ್ರೀ ಗುರುವಿನಾಶೆಯ ಮಾಡಲಿಲ್ಲ ಪ ವಿವೇಕವ ತೊಡಲಿಲ್ಲ ಅ-ವಿವೇಕವ ಸುಡಲಿಲ್ಲ |ಸಾವಧಾನದಿ ಮನವಿಡಲಿಲ್ಲ 1 ಆಚಾರವ ಕೊಳಲಿಲ್ಲಮತ್ಸರವ ಮರೆಯಲಿಲ್ಲಸಚ್ಚಿದಾನಂದ ಸುಖ ಉಣಲಿಲ್ಲ 2 ಈ ನಡತೀ ತರಹವಜಾಣನಾದವನೇ ಬಲ್ಲ |ಜ್ಞಾನಬೋಧನು ಸಾರಿದ ಸೊಲ್ಲ 3
--------------
ಜ್ಞಾನಬೋದಕರು
ಹುಚ್ಚು ಹಿಡಿಯಬೇಕು ಭಜನೆಯ ರಚ್ಚೆ ತೊಡಗ ಬೇಕು ಪ [ಮೆಚ್ಚುತ] ಅಚ್ಯುತನಾಮವ ಉಚ್ಚರಿಸುತಲಿರೆ ಕಿಚ್ಚೂ ಮಂಜಹುದು ಅ.ಪ ನೇರುತಲಿರಬೇಕು ಊರುಹೆಜ್ಜೆಗೂ ನಾರಾಯಣ ನಾಮೋ ಚ್ಚಾರದ ಹಸಿವು ಬಾಯಾರಿಕೆಯಾಗುವತನಕ 1 ಕೀರ್ತನೆಯಲಿ ಮುಳುಗಿ ಕೃಷ್ಣನ ಮೂರ್ತಿಯ ಕಾಣುತಲಿ ಪಾರ್ಥಸಾರಥಿಯವ ಅನಾಥರಕ್ಷಕನೆಂಬ ಕೀರ್ತಿಯನಾಂತ ಮಾಂಗಿರಿಯ ಭಜನೆಯಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹುಟ್ಟಿದ್ದು ಫಲವೇನು ಮನುಜನು | ಮುಟ್ಟದೆ ಗುರುಪದವನು ಪ ಬೀರಿ ವಾಗ್ಜಾಲ ಆರಿಗೆ ಸೋಲಾ | ಮೆರೆದನು ಬಹಳ ಮರೆದ ಸ್ಮರಣ ಕೀಲಾ 1 ಪರರುಪಕಾರಾ ಬಾರದಾ ಶರೀರಾ | ಸಿರಿಗಂಧ ಸಾರಾ ಧರಿಸಿದರೇನು ಪೂರಾ 2 ಹವಣಿಸಿಗಾಢಾ ಶ್ರವಣವ ಮಾಡಾ | ಕುಂಡಲ ನೋಡಾ 3 ತನ್ನ ತಾ ಮರೆವಾ ಅನ್ಯರಾ ಜರಿವ | ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ 4 ನಂದನ ಪ್ರಾಣಾ ತಂದೆ ಮಹಿಪತಿ ಜನಾ | ಹೊಂದನು ಚರಣಾ ಮಂದಗಾಣದ ಕೋಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು