ಒಟ್ಟು 9962 ಕಡೆಗಳಲ್ಲಿ , 129 ದಾಸರು , 5006 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಬರೋ ರಂಗಯ್ಯಾ ನೀ ಬಾರೋ | ನಿನ್ನ | ಮೂರುತಿ ಹೃದಯಕ ತಾರೋ ಪ ಬೀರೋ ಬೀರೋ ಕರುಣಾರಸ ಬೀರೋ | ಪದ | ವಾರಿಜ ಶರಣರ ತೋರೋ 1 ಪಥ ಸಾರೋ | ಹಗೆ| ತೀರಿದೆ ಭವಭಯ ಬಾರೋ 2 ಗುರುವರ ಮಹಿಪತಿ ಪ್ರಭು ಬಾರೋ | ಮರಹು | ಹಾರಿಸಿ ಸಲಹುವರಾರೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೆಲೋ ಹೃದಯ ವಾರಿಜದೊಳುಬಾರಿ ಬಾರಿಗೆ ಕರೆವೆ ನಿನ್ನ ಮೋರೆ ತೋರೆಲೋ ಪ ಪುಟ್ಟ ಪಾದವ ಕ್ಷಿತಿಯೊಳಿಟ್ಟು ಮೋದವ ಕೊಟ್ಟು ಭಕ್ತರಿಗೆ ತೋರೋ ಕೃಷ್ಣ ರೂಪವಾ 1 ಸಿಂಧು ಮಥಿಸಿದಿ ಸುಧೆಯ ತಂದು ಬಡಿಸಿದಿ ಕೃಷ್ಣಾಚಂದದಿಂದ ದೇವತೆಗಳ ವೃಂದ ಸಲಹಿದಿ 2 ಇಂದು ವದನನೆ ಶಾಮಸುಂದರಾಂಗನೇಆನಂದದಿಂದ ತೋರೋ ಎನಗೆ ಕುಂಜಹೃದಯನೇ 3 ಇಂದಿರೇಶನೆ ಭವೇಂದ್ರ ವಂದ್ಯನೆ ಕೃಷ್ಣಾ ನಿನ್ನಕಂದನೆಂದು ಕರೆಯೋ ಎನ್ನ ನಂದ ಬಾಲನೇ4
--------------
ಇಂದಿರೇಶರು
ಬಾರೋ ಬಾರೋ ಎನ್ನ ನೀ ತಾರಿಸ ಬಾರೋ ಪ ಸಾರಥಿ ಬಾರೋ | ವಾಸುಕಿ ಶಯನಾವಂತನೇ ಬಾರೋ | ವಾಸುದೇವ ಮುಕುಂದನೆ ಬಾರೋ | ವಾಸ ಮಾಡಿದೆ ಕ್ಷೀರಾಬ್ಧಿಲಿ ಬಾರೊ 1 ಕರಿವರ ಸಂಕಟ ಹರಿಸಿಹ ಬಾರೋ | ಕರುಣಾಕರ ಗೋಪಾಲನೆ ಬಾರೋ | ಕರದಲಿ ಚಕ್ರವ ಪಿಡಿದಿಹ ಬಾರೋ | ಕರಿಚರ್ಮಾಂಬರ ಮಿತ್ರನೆ ಬಾರೋ 2 ಸರಸೀರುಹದಳ ನೇತ್ರನೇ ಬಾರೋ | ಸರಸೀರುಹ ಸಂಭವ ವಂದ್ಯನೇ ಬಾರೋ | ಸರಸಿಜೋವನಾಭನೆ ಬಾರೋ | ಸಾರಥಿ ಬಾರೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಕೋಪವಿನ್ಯಾತಕೆನ್ನ ಕೂಡಾ ರಂಗರಾಯಾ| ಸಾರಿದ ನಿನ್ನರಸಿಯ ತಪ್ಪನೊಳ್ಪರೇ ರಂಗರಾಯಾ ಪ ಚಲ್ವ ಕಣ್ದೆರೆವುತ ಮೊಗವತಿರಹುವರೇ ರಂಗರಾಯಾ| ಹಲ್ಲವ ಮಸೆಯುತ ಘುಡುಘುಡಿಸುವರೇ ರಂಗರಾಯಾ 1 ಭೀಕರಾಕೃತಿಯಾಗಿ ಕೊಡಲಿಯ ಪಿಡವರೇ ರಂಗರಾಯಾ| ಏಕಾಂಕಿಯಾಗಿ ಕದ್ದು ತಿರುಗುವರೇ ರಂಗರಾಯಾ 2 ಆಗೋಚರವಾಗದೇ ತುರಗೇರಿ ತ್ವರಿತದಿ ರಂಗರಾಯಾ| ಸುಮದಿ ಬಾ ಮಹಿಪತಿ ಸುತ ಜೀವನ ರಂಗರಾಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಗುರುರಾಯನೆ ಧ್ರುವ ಹೊಳೆಯನೀಸಿ ಇಳದಿ ಬಾರೊ ಇಳಿಯ ಪೊತ್ತು ಬಳಿದಿ ಬಾರೊ ಇಳಿಯಗೆಲಿದು ಸೀಳಿ ಕಂಭದೊಳು ಹೊಳದಿ ಬಾರೊ ನೀನು 1 ಅಳೆದು ಭೂಮಿ ಬಳದಿ ಬಾರೊ ಇಳಹಿ ತಳಿಯ ತಿಳದಿ ಬಾರೊ ಅಳಿದು ದೈತ್ಯಬಲವ ಮುರಿದು ಕೊಳಲನೂದಿ ಬಳಲಿ ಬಾರೊ 2 ಸುಳ್ಳ ವ್ರತನಳಿದಿ ಬಾರೊ ಸುಳುಹಿ ತೇಜ ಹೊಳಿದಿ ಬಾರೊ ಹೊರೆದು ಸಲಹುವ ಸ್ವಾಮಿ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ಬಾರೋ ಚನ್ನಕೇಶವನೇ ಬಾರೋ ಬಾರೋ ಮುರಲೀಧರನೇ ಪ ನಿತ್ಯ ನಿರ್ಮಲನೇ ಸನಕಾದಿ ವಂದಿತ ಮಧುಸೂದನನೇ 1 ಭಜಕನ ಪಾಲಿಸೋ ಮುಕ್ತಿದಾಯಕನೇ 2 ದೂರ್ವಾಪುರದಿ ನಿತ್ತ ಯದು ಕುಲಪತಿಯೇ ದೂರ್ವಾಸವಂದಿತ ಆದಿ ಮೂರುತಿಯೇ 3
--------------
ಕರ್ಕಿ ಕೇಶವದಾಸ
ಬಾರೋ ಬಾರೋ ಪ್ರಾಣಕಾಂತ ತೋರೊ ಮುಖವ ನೋಡುವೆ ತೋರಿ ತೋರಿ ನಿನ್ನ ಪದವಾರಿಜವ ನಂಬಿದೆ ಪ ಮಾರ ಎನ್ನ ಘೋರಿಸುತಿರುವನು ಗಾರು ಮಾಡಬೇಡ ಎನ್ನ ಸೇರಿ ಆನಂದ ನೀಡೊ 1 ಕಂತು ಜನಕ ಲಾಲಿಸೊ ಅಂತರಂಗದ ಬಾಧಿಗೆ ನಾ ಚಿಂತೆ ಪಡುತಿರುವೆ 2 ವಾಸುದೇವವಿಠಲ ನಿನ್ನ ದಾಸಿಯಲ್ಲವೆ ನಾನು ಆಶೆಯಿಂದ ಬಂದೆ ಪರಿಹಾಸ ಮಾಡಬೇಡ 3
--------------
ವ್ಯಾಸತತ್ವಜ್ಞದಾಸರು
ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಧ್ರುವ ಸ್ವರೂಪಸುಖ ನಿಜವನ್ನು ತೋರೊ ಹರುಷಾನಂದದನುಭವ ಬೀರೊ ಗುರುತವಾಗ್ಯೆನ್ನೊಳು ನಿತ್ಯವಿರೊ ತರಣೋಪಾಯದ ನಿಜಬೋಧ ನೀ ಸಾರೊ 1 ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ ಪುಣ್ಯಚರಣ ತೋರೊ ಘನ ಪರಬ್ರಹ್ಮ ಚಿಣ್ಣಕಿಂಕರ ಅತಿದೀನ ನಾ ನಿಮ್ಮ ಧನ್ಯ ಧನ್ಯಗೈಸುವದೆನ್ನ ಜನುಮ 2 ಚಾಲ್ವರುತಾವೆ ಮನೋರಥಗಳು ಆಲೇಶ್ಯ ಮಾಡದಿರು ನೀ ಕೃಪಾಳು ಮೇರೆದಪ್ಪಿ ಹೋಗುತಿದೆ ದಿನಗಳು ಬಲು ಭಾಗ್ಯೊದಗಿಬಾಹುದು ನೀ ದಯಾಳು 3 ಹಾದಿ ನೋಡುತಿದೆ ಹೃದಯ ಕಮಲ ಸಾಧಿಸಿಬಾಹುದು ಮುನಿಜನ ಪಾಲ ಸಾಧುಹೃದಯ ನೀನಹುದೊ ಸಿರಿಲೋಲ ಛೇದಿಸೊ ನೀ ಬಂದು ಭವಭಯಮೂಲ 4 ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ ಕರುಣಿಸಿಬಾಹುದು ಜಗನ್ಮೋಹನ ತರಳ ಮಹಿಪತಿಗೆ ನೀ ಜೀವಜೀವನ ಕರೆದು ಕರುಣ ಮಳೆಗೈಸು ಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ಬಾರೋ ಬಾರೋ ರಂಗಾ | ಬಾರೋ ಶುಭಾಂಗಾ| ವರಶೌರಿ ಪರೋಪರಿದೋರ್ವಲೀಲೆ | ವೀರ ದೀರ ಶೂರುದಾರಿ ವಾರಿಜಾರಿ ವಂಶಜಾ ಪ ಉತ್ಸಹದಗೆ ತ್ಯಾವಿನಾ | ವತ್ಸವ ಗಾಯಿದೇ ಪ್ರಾಣಾ | ಪರ ಸಂಹಾರಾ | ಮತ್ಸ್ಯಾವ ತಾರಾ | ಸಿರಿ ವತ್ಸ ಚಿತ್ಸ್ವರೂಪನೇ 1 ಕಾಯಜಕೋಟಿ ಲಾವಣ್ಯಾ | ಕಯಾದು ಸುತಪಾಲನಾ | ತ್ರಯಭುವನ ವ್ಯಾಪಕಾ | ತೃಯಾಕ್ಷ ಸಖಾ | ದಯ ತೋಯಧಿ ಶ್ರೀ ಯದುನಾಯಕನೇ | ತೋಯಜಾಯತಾಕ್ಷಾಕ್ಷಯ ಪಯಧೀಯ ವಾಸನೇ 2 ಮಂದಮತಿಯೆಂದು ನೋಡೋ | ಕುಂದನನಾರಿಸಬ್ಯಾಡೋ | ಬಂದು ಕೊಡೋ ಮಹಿಪತಿಯಾ | ನಂದನ ಪ್ರಿಯಾ | ಎಂದೆಂದಿಗೆ ಸದ್ವಂದ ರಕ್ಷಕ ಶ್ರೀ - ನಂದ ಕಂದ ಇಂದಿರೇಶಾನಂದನೀವಾ ನಂದನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ಬಾರೋ ಹರಿ ತೋರೋ ತೋರೋ ಮುಖವ ದೊರಿ ಪ ಧೀರನೆ ಬಹುಗಂಭೀರನೆ ಗೋರಸ ಗೋಪಿ ಜಾರನೆ ಬ್ಯಾಗನೆ ವೀರಾಧಿವೀರನೆ ಎನ್ನ ವಾರೆ ನೋಟ ನೋಡುವರೆ ಭೃಂಗಗಳ್ಯಾತಕೆ ಕೂಗಿದವೊ ಅಂಗಜ ಶರಗಳು ಸೇರಿದವೊ ಪಿಳಂಗೊಳವಿನೂದಲು ಆ ರಂಗ ಎನ್ನ ಬಿಡಿಸಿದ 1 ಕಾವರೆ ನಿನ್ಹೊರತಿನಾರೊ ಭಾವಜಪಿತ ಮಂದಿರ ಸೇರೊ ದೇವನೆ ಭಕುತರ ಕಾವನೆ ವರಗಳ ನೀವನೆ ರಿಪುವನದಾವನೆ ಬ್ಯಾಗನೆ ದೇವಾದಿ ದೇವನೆ ಎನ್ನ ಕಾವನು ನೀನಲ್ಲದೆ ಇ ನ್ಯಾವನು ಈ ಭೂಮಿಯೊಳ ಗೀವನು ಕಾಣಿನೊ ನಾನೊಬ್ಬ2 ಈ ಸಮಯದಿ ಪರಿಪಾಲಿಪರ್ಯಾರೋ ವಾಸುದೇವವಿಟ್ಠಲ ನೀ ತೋರೋ ಶ್ರೀಶನೆ ಸುಂದರಹಾಸನೆ ಮುನಿ ಮನ ವಾಸನೆ ಶತರವಿ ಭಾಸನೆ ಬ್ಯಾಗನೆ ಹಾಸುಮಂಚದೊಳು ಹುವ್ವಿನ ಹಾಸಿಕಿಯೊಳು ಮಲಗಿ ಬ್ಯಾಸರಗೊಂಡೆನು ಪರಿ ಹಾಸವ ಮಾಡದೆ ಬ್ಯಾಗ 3
--------------
ವ್ಯಾಸತತ್ವಜ್ಞದಾಸರು
ಬಾರೋ ಬಾರೋ ಭವನುತಚರಣನೆ ಸಾರಸುಗುಣ ಪರಿಪೂರಿತ ಕರುಣನೆ ಪ ಚರಣಕಮಲಗಳಿಗೆರಗುವೆ ಭಕ್ತಿಯಲಿ ಭರದಲಿ ಎನ್ನನು ಪೊರೆಯಲು ಮುದದಲಿ 1 ಅರಿದರ ವರಗಳ ಕರದಲಿ ಪಿಡಿಯುತ ಕರಿಯನು ಪೊರೆಯುವ ತ್ವರೆಯಲಿ ಬಹವೋಲ್2 ಪರಮಪುರುಷ ಫಣಿಗಿರಿಶಿಖರಾಲಯ ವರದವಿಠಲ ಸುಖಕರ ಕಮಲಾಲಯ 3
--------------
ವೆಂಕಟವರದಾರ್ಯರು
ಬಾರೋ ಬಾರೋ ಮನುಕುಲಗುರುಗುಹಾ ಸೇರಿದಾನತರ್ಗೆ ಚಾರುಸುರಭೂರುಹಪ. ಮಾನಾಭಿಮಾನ ನಮ್ಮದು ನಿನ್ನಾಧೀನ ದೀನಜನರ ಸುರಧೇನು ಮಹಾಸೇನ1 ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2 ಲಕ್ಷ್ಮೀನಾರಾಯಣನ ಧ್ಯಾನಾಭರಣ ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಬಾರೋ ಮೋಹನಾ | ಶ್ರೀದೇವಾ ಪ ವೃಷಭಾನು ಜಾನನ ಸರಸಿಜ ಬೃಂಗಾ | ಶಶಿಧರ ವಂಶಾಭರಣಾ1 ನಿರ್ಜರ ತುಂಗಾ | ದನು ಚಾವಳಿ ಮದಹರಣಾ2 ಮಹಿಪತಿ ಸುತ ಪ್ರಭು ಜಗದಂತರಂಗಾ | ಇಹಪರದಾಯಕ ಕರುಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1 ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2 ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3 ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4 ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಾ ಪ ಬಾರೈಯ್ಯಾ ಯದುವೀರಾ | ಈರೇಳು ಭುವನಾಧಾರಾ | ಶ್ರೀ ರಮಣಿಯ ಮನೋಹರಾ | ವಾರಣ ಭಯ ನಿವಾರಾ | ಕರುಣಾಕರಾ | ದೀನೋದ್ಧಾರಾ | ಸರ್ವಾಧಾರಾ | ಪರಮ ಉದಾರಾ | ಸುರಸಹತಾರಾ | ದಯಾಸಾಗರ 1 ಒದಗುವೆ ಸ್ಮರಣೆಗೆ ನೇಮಾ | ಮದನಜನಕ ಮಹಮಹಿಮಾ | ಜೀಮೂತ ಶಾಮಾ | ಸದ್ಗುಣ ಧಾಮಾ | ಪೂರಿತ ಕಾಮಾ | ತ್ರಿವಿಕ್ರಮಾ | ಅನಂತ ನಾಮಾ | ಲೋಕಾಭಿರಾವi 2 ಅಸುರ ಕುಲ ಸಂಹರಣಾ | ಬಿಸರುಹ ಸಖ ಶತ ಕಿರಣಾ | ಅಸಮನೆ ಮಹಿಪತಿ ಸುತನಾ | ಪೋಷಿಸುವೆ ನೀ ಪರಿಪೂರ್ಣ ಖಗವರ ಗಮನಾ | ಮೃದುತರ ಚರಣಾ | ಅಹಲ್ಯೋದ್ಧರಣಾ | ಕನPsÀರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು