ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿವಿಜ ಪ ಓ ಗುರುಮಾನ್ಯ ಕಾಮಿತ ನೀರಜ ತ್ಯಾಗಿ ಶುಭಾಂಗ ಭಾಸ್ಕರತೇಜ ಅ.ಪ ಕಂಗಳ ನೀಡಿದೆ ಚರಣವ ತೋರಿದೆ ಬಂಗಾರವ ನೀ ಪಡೆದೆ | ಪಂಗುತಾ ನಡೆಯಲಾದ ಮಂಗನ ಸಿಂಗಗೈದೆ | ಇಂಗಿತಜ್ಞನೀನೆಲೆ ಮಾಂಗಿರಿರಂಗನ ಪ್ರೇಮದಿಂದರ್ಚಿಸುವ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀನ ಜನ ಅಭಿಮಾನವನು ನೀನು ಅನುದಿನದಲಿ | ರಕ್ಷಿಸುವೆ ಸಾನುಕೂಲದಿ | ಶ್ರೀ ನಿಧಿಯೆ ಧೀರ ಎಂದು | ವೀರ ಹರಿಮಾರ ಸಂಹಾರಸಖ ಕ್ರೂರ ಫಣಿದರ್ಪಹರನೇ | ಮುಕುಂದ ಮುಚಕುಂದ | ಪ್ರೀಯ ವರದನಾ ಮಾನಸದಿ ಅರಿತು ತವ ಕುರಿತು | ಭಕ್ತಿರತನಾಗಿಹ ಅನವರತ ಸುಖದಲಿಡುತಿಹ | ಕೃಷ್ಣಾ ಸಲಹು ಒಲವಿಂದ 1 ಅಂಕಿತ-ಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ದಯಾಳು ನೀನೆವೆ ನಮ್ಮ ಅನಾಥನಾಥಾ ನಂದೊ ಬ್ರಹ್ಮನಂತುಗಾಣನುಪಮ ಧ್ರುವ ಪರಮಾನಂದ ಪರಮ ಪಾವನ ಶರಣ ಜನರಾಭರಣಾಗಿ ಹ್ಯ ಕರುಣ ಸಾಗರ ಪೂರ್ಣನೆ 1 ಅವ್ಯಕ್ತನಹುದೊ ವಿರಕ್ತ ಶಕ್ತನಹುದೊ ಭಕ್ತವತ್ಸಲ ಭೋಕ್ತರ ಮುಕ್ತಿದಾಯಕ 2 ಭೇದಾತೀತ ಸದೋದಿತ ಪೂರ್ಣ ಸಾಧುಹೃದಯನಿವೇದ ಪೂಜಿತ ಅದಿದೇವ ಸದಾತ್ಮನೆ 3 ವರ ಮುನಿಗಳ ಹರುಷವುದಯ ತರಳ ಮಹಿಪತಿಯ ಹೊರೆವ ಅನುದಿನ ಹರಿಯು ಪರಮ ದಯಾನಿಧೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನ ದಯಾಳು ಹರೀ ಕೃಪಾನಿಧಿ ಪ ಜಲಚರ ಬಾಧೆಗೆ ನೆನೆಯಲು ನಾಮಾ| ಸಲಹಿದೆ ರಾಜ ಕರಿ|ಕೃಪಾನಿಧಿ 1 ನೊಂದು ಸಂಸಾರದಿ ಬರಲು ಸುದಾಮಾ ಸಿರಿ ಕೃಪಾನಿಧಿ2 ಮಹಿಪತಿ ಪ್ರಭು ಕೈರವ ಶಾಮಾ| ಇಹಪರನೀವ ದೊರೆ ಕೃಪಾನಿಧಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀನ ಬಂಧು ಕರುಣಾಸಿಂಧು ನೀನೆ ಬಂದು ರಕ್ಷಿಸೆಂದು ಪ. ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ ನಿತ್ಯ ಕಾರುಣ್ಯ ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ 1 ಸರಸಿಜಾಸನ ತಾನು ಪರಮ ಭಕುತಿಯಿಂದ ಸಿರಿವರ ನಿನ್ನ ನಾನಾ ಪರಿಯಿಂದಲಿ ಶರದೃತುವಿಲಿ ಬಹುಧರವಾಗಿ ಪೂಜಿಸುವ- ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ 2 ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ- ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೀನ ಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ ಧ್ರುವ ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ (?) ನೀನೆ ಮುರಾರಿ1 ಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀ ಹರಿ 2 ಪತಿತಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನಜನ ಮಂದಾರನೇ ಪ ಮಂದಭಾಗ್ಯವ ಕೂಡ ಮಂದಹಾಸವೇಅ.ಪ. ಸರ್ವತ್ರದಲಿ ನೀನಿದ್ದು ಸಲಹುವಿ-ಸ್ಮøತಿ ಕೊಡುವುದುಚಿತವೇ 1 ಪಾಪದೊಳು ಶಿಲ್ಕಿಸಿ ಮಹಾಪಾಪಿ ಎಂದೆನಿಸಿ ವಳಹೊರಗೆ ಪರಿಪೂರ್ಣನಾಗಿ2 ಮಂದರನು ಪೊರೆವದಕೆ ಸಂಧಿಕಾಲವು ಬಂದೊದಗಿದೆ ತಂದೆವರದಗೋಪಾಲವಿಠ್ಠಲನ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ದೀನನ ಸೇರಿದರೇನು ಫಲ ರಾಮ ಗುಣ ಹೀನನ ಸೇರಿದರೇನು ಫಲ ಪ ಮಕ್ಕಳು ಜನಿಸದರೇನು ಫಲ ಒಕ್ಕಲುತನದಿಂದೇನು ಫಲ 1 ಜನನೀ ಜನಕರಿಗೇನು ಫಲ ಮನುಜರಿಗೇನು ಫಲ 2 ಅರಿಯದೆ ಕೊಂಡವಗೇನು ಫಲ ಹರಿಯವನಾಗಿರಲೇನು ಫಲ 3 ಹೆಂಡತಿಯಿರಲೇನು ಫಲ ಗಂಡಸುತದಿಂದೇನು ಫಲ 4 ತೆರದಲಿ ಸಿಂಗರಸಿದರೇನು ಫಲ ಪರಿಪರಿ ಪುಣ್ಯದಿಂದೇನು ಫಲ5
--------------
ವೆಂಕಟವರದಾರ್ಯರು
ದೀನನಾಥ ನೀನೆ ಪ್ರಭು ಧ್ಯಾನಮಾಳ್ಪೆ ಕಾಯೊ ಕರುಣಿ ಪ ಜಾಹ್ನವೀಜನಕ ಜನಾರ್ದನ ಜಾನಕೀಪ್ರಿಯ ಜಗದೊಡೆಯ ವೇಣುಗೋಪಾಲ ನಿನ್ನ ಧ್ಯಾನಾನಂದ ಪಾಲಿಸಭವ 1 ಕವಿದುಕೊಂಡು ದಹಿಸುತಿರುವ ತಾಪ ಭಯವ ತರಿದು ಸುವಿಚಾರ ಸುಜನಸಂಗ ಜವದಿ ನೀಡಿ ದಯದಿ ಪೊರೆ 2 ವಿಷಯದ್ವಾಸನೆ ಪರಿಹರಿಸಿ ಅಸಮಜ್ಞಾನ ಸೌಖ್ಯವಿತ್ತು ಒಸೆದು ನಿಮ್ಮ ವಿಮಲಚರಣ ಕುಸುಮದಾಸನೆನಿಸು ಶ್ರೀರಾಮ 3
--------------
ರಾಮದಾಸರು
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು
ದೀನಬಂಧೋ ಹೇ ಭಲಾ ನೀನೆ ಸೈ ಸೈಯಲಾ ಪ ಪಾಸಲೆ ಶರಣರ ಪೊರೆವದಕಿನ್ನು ಬ್ಯಾಸರೇನಿಲ್ಲಲಾ 1 ದುಷ್ಟರ ದಂಡಿಸಲಾ ಮನಸಿಗೆ ಹುಟ್ಟಿದೆ ಕಲಕಲಾ 2 ಬಿಡದೆ ಶ್ರೀವಿಠಲಾ ಎನ್ನೊಳು ಮಾಡಿದೆಲೋ ಛಲಾ 3
--------------
ಶ್ರೀದವಿಠಲರು
ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ. ಹಗಲು ರಾತ್ರೆಯು ಹಲವು ಚಿಂತೆಯು ದ್ವಿಗುಣವಾಯಿತು ಧೈರ್ಯ ಕುಂದಿತು ನಗುವ ವಿಧಿಯನು ನೆನೆಯದಾಸೆಯ ಬಿಗುವಿನಿಂದ ಬೆಂಡಾದೆ ಕೇಶವ 1 ಸಂದ ಕಾಲವು ಸುಮ್ಮಗ್ಹೋಯಿತು ಮುಂದಿನವಧಿಯ ಮರವು ಮುಸುಕಿತು ಸುಂದರ ಸ್ಮಿತಾನಂದ ಮೂರುತಿ ಇಂದಿರೇಶ ನೀ ಎಂದು ತೋರುತಿ 2 ಗಣನೆಯಿಲ್ಲದಗಾಧ ತಪ್ಪನು ಎಣಿಸಲಾರೆನು ಎಂತು ನುಡಿವೆನು ವನಜನಾಭ ನೀನಾವ ಯುಕ್ತಿಯ ನೆನಸಿ ಸಲಹುವೆ ಎಂಬುದರಿಯೆನು 3 ಅಂತವಿಲ್ಲದಾ ಚಿಂತೆ ಎನ್ನನು ಭ್ರಾಂತಿಗೊಳಿಪುದು ಭಂಡು ಮಾಳ್ಪುದು ಕಂತುಜನಕ ಭೂಕಾಂತ ಕರುಣಿಸು ಸ್ವಾಂತರಂಗದಿ ನಿಂತು ನಿಯಮಿಸು 4 ನಿತ್ಯ ಸಲಹುವ- ನೆಂಬ ಬಿರುದ ನಾನರಿತು ನುಡಿದೆನು ಶಂಭುವಂದ್ಯ ಶೇಷಾದ್ರಿನಾಥ ಪಾ- ದಾಂಬುಜಾಶ್ರಿತನೆನಿಸು ಎನ್ನನು 5
--------------
ತುಪಾಕಿ ವೆಂಕಟರಮಣಾಚಾರ್ಯ
ದೀನರಿಗೆಲ್ಲಾ ಬಂಧು ಕೇಶವ ತಂದೆ ದೀನರಿಗೆಲ್ಲಾ ಬಂಧು ಪ ದಾನವಾಂತಕÀ ನಿನ್ನ ನೇಮಾನುಯಾಯಿಗೆ ಮಾನವ ಕೊಟ್ಟು ರಕ್ಷಿಪ ಬಂಧು ನೀನೇ ಅ ದೀನ ದ್ರೌಪದಿ ದೇವಿಗೇ ಅಕ್ಷಯವಿತ್ತು ಮಾನವ ಕಾಯ್ದೆ ನೀನೇ ಪ್ರಾಣವು ಹಾರುವಾಗ ಜಮಿಳ ಸ್ಮರಿಸಲು ಯೇನನ ಸಲಹೆ ಮೋಕ್ಷವನಿತ್ತ ಹರಿಯೇ 1 ದೀನ ದೇವಿಕಿ ದೇವಿಯ ಗರ್ಭದಿ ಬಂದು ದೈನ್ಯಳ ಸಲಹಿತಿದೆಯೋ ಹೀನ ವಾಲ್ಮೀಕನು ನಾಮವ ಭಜಿಸಲು ಹೀನನಿಗೊಲಿದು ಬುದ್ಧಿಯನಿತ್ತ ಹರಿಯೇ 2 ಸನ್ನುತ ನಮಿಸುವಂಥ ದಾಸರಿಗೆಲ್ಲ ಸನ್ನುತ ಸ್ಮರಿಸುವಂಥ ನಿತ್ಯ ಭಜಿಪ ದೀನರಿಗೆಲ್ಲ ಚನ್ನಕೇಶವ ಸ್ವಾಮಿ ಪೊರೆವಂಥ ಬಂಧೂ 3
--------------
ಕರ್ಕಿ ಕೇಶವದಾಸ