ಒಟ್ಟು 49270 ಕಡೆಗಳಲ್ಲಿ , 136 ದಾಸರು , 11161 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ಪ ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು1 ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು 2 ಕದಂಬ ವನದೊಳು 3
--------------
ವ್ಯಾಸರಾಯರು
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಕೊಳಲನೂದೆಲೋ ಕೃಷ್ಣ ಕೊಳಲನೂದೆಲೊ ಪ ಕೊಳಲನೂದು ಮನದ ದುಗುಡಕಳೆದು ಮತ್ತೆ ಮನಕೆ ಪ್ರಶಾಂತೆತಳೆಯುವಂತೆ ನಿತ್ಯಮಂ_ಜುಳ ಸ್ವರಗಳನ್ನು ತೆಗೆದು ಅ.ಪ. ತುಂಬಿ ನಳಿನಬೆರಳುಗಳು ತೂತು ಮುಚ್ಚಿತೆರೆದು ಸವಿಯ ನಾದದಲ್ಲಿ ನಿಸಾರ ನಿ ದ ಪ ಮ ಪ ನಿ ಎಂದು 1 ಇಲ್ಲಿ ಪೀಠದಿ ಎದ್ದು ನಿಲ್ಲು ಥಾ7ಟದಿಮಲ್ಲಿಗೆ ವನಮಾಲೆ ಕೊರಳೊಳಲ್ಲಾಡುತಿರಲು ರೂಪದಲ್ಲಿ ಮನವಿನೈಕ್ಯವಾಗಿತಲ್ಲೀನರಾಗುವಂತೆ ಕೃಷ್ಣಾ 2 ಎದ್ದುನಿಂತು ಮಾಟದಿ ನಿಂತು ಮುದ್ದು ನೋಟದಿಬಿದ್ದವರನು ನೋಡಿ ನಮಗೆಶುದ್ಧ ಬುದ್ಧಿ ಕೊಟ್ಟು ನಮ್ಮದುದ್ಧರಿಪುದು ಗದುಗಿನ ಪ್ರಸಿದ್ಧ ವೀರನಾರಾಯಣ 3
--------------
ವೀರನಾರಾಯಣ
ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ಪ ಕೊಳಲನೂದೋ ದ್ವಾರಕಾ ಪುರನಿಲಯಾ ಅ.ಪ. ಎಡಹೆಗಲಲ್ಲೆಡಗಲ್ಲಂವ ನೀಡೀ ಕುಡಿ ಹುಬ್ಬುಗಳಲ್ಲಾಡಿಸುತ್ತ 1 ಮೃದುತರ ತುದಿ ಬೆರಳಿಂದೊತ್ತುತ ಮಧುರಾಧರದಲ್ಲಿಟ್ಟು ರಂಗಯ್ಯ2 ನಾದ ಮೂರುತಿ ಗೋಪೀಜನಲೋಲಾಶ್ರೀದವಿಠಲ ಗೋಪಾಲಬಾಲ3
--------------
ಶ್ರೀದವಿಠಲರು
ಕೊಳಲೂದೋ ಕೃಷ್ಣ ಕೊಳಲೂದೊ ಪ ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ. ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ 1 ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ 2 ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ 3 ಮಧುರ ನಿನ್ನಯ ಗಾನವ ಕೇಳ್ವುದುಗದುಗು ವೀರನಾರಾಯಣನ ಮಹಾ ಪ್ರಸಾದೊ 4
--------------
ವೀರನಾರಾಯಣ
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ. ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1 ಇಂದು ಗೋವುಗಳ 2 ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3 ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4 ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5 ಇಂದು ನಮ್ಮೊಳು ಸರಸವಾಡುವನೆ 6
--------------
ಇಂದಿರೇಶರು
ಕೊಳ್ಳೇಗಾಲದ ಲಕ್ಷ್ಮೀನಾರಾಯಣ ಯನ್ನ ಸೊಲ್ಲ ಲಾಲಿಸಿ ಬೇಗ ಸಲಹು ದೇವಾ ಖುಲ್ಲ ಮಾನವನೆಂದು ತಲ್ಲಣಗೊಳಿಸೋರು ಭವನಾವಾ ಪ ಓಡಿಬಂದೆನೊ ನಿನ್ನ ನೋಡಬೇಕೆನುತಲಿ ಗಾಡಿಕಾರದೇವ ತ್ವರೆಯಿಂದ ದೂಡಬ್ಯಾಡೊ ನನ್ನ ಪಾದ ಮುಕುಂದಾ 1 ಅಭಯವ ನೀಡಯ್ಯಾ ಇಭರಾಜವರದನೆ ಉಭಯ ಸುಖಪ್ರದ ನೀನೆಂದು ಅಭಿನಮಿಸುವೆನಯ್ಯ ಶಬರಿಯಂಜಲನುಂಡು ಬುಜೆಗಧವಕೊಂಡಿ ವಿಬುಧವಂದಿತನೆ2 ಮೆರೆಯುವಿ ನೀ ಬಲು ಉರಗರಾಜಶಾಯಿ ವರವಿಪ್ರನಿಕರದಿಂ ಪೂಜೆಗೊಂಡು ಥರಥರದಲಿ ನೀ ಪೊರಹಿದೆ ಭಕ್ತರ ಮರೆಯಬ್ಯಾಡ ನನ್ನ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕೋಟಿ ಪೂಜೆಗೆ ಸಮವು ಸ್ತೋತ್ರವು ಸಾಟಿಯಿಲ್ಲ ಮನಾಲಯಕ್ಕೆ ಭ ವಾಟವಿಯ ದಾಟುವರು ಸುಲಭದಿ ಪರಮ ವೈಷ್ಣವರು 1 ಕರಿ ಕನಕಕಶಿಪುಸುತಜಾಮಿಳ ನರಪ ರುಕ್ಮಾಂಗದನು ದ್ರೌಪದಿ ದುರುಳ ರಾವಣನನುಜ ಮನು ಪೌತ್ರನು ವಶಿಷ್ಠ ಮುನಿ ಸುರನದೀಸುತ ಶುಕನು ಶೌನುಕ ಬಲಿ ಕಿರೀಟಿಗಳು 2 ಇವರು ಮೊದಲಾದವರು ಭಕ್ತ ತವಕದಲಿ ಸಂಪಾದಿಸಿದರಿವರಂಘ್ರಿಯ ಸ್ಮರಣೆ ತವತವಗೆ ಕೊಡುತಿಹುದು ನಿತ್ಯದಿ ಕವಿವಿನುತ ಗುರುರಾಮ ವಿಠಲನ ದಯೆ ಪಡೆಯಬಹುದು 3
--------------
ಗುರುರಾಮವಿಠಲ
ಕೋದಂಡ ಖಂಡನ ಸುದೀಕ್ಷಾ ಕಮಲ ಪರಶುರಾಮ ಬಲವಿದಳನ ಚರಿತ್ರಾ 1 ಕೈಕೆಯೀವರ ಯುಗಳ ಸಾರ್ಥಕ ಸುಕೀರ್ತೆ ಮುಖ್ಯನುತವರ ಸುಪ್ರತಾಪ ಲಾಲಿ 2 ವೈರಿ ದುಷ್ಟ ಜನಜಾಲ ಪುಂಡರೀಕಾಕ್ಷ ಮುನಿ ಮಂಡಲಾ ಭಯದ 3 ಶಿರೋರತ್ನ ದರ್ಶನ ಸುತೋಷ ಭೀತ ಸಾಗರ ಸೇತುಬಂಧನ ಸುಯತ್ನ ಧೂರ್ತ ಗಾರುಡ ಸುರತ್ನಾ 4 ವೈರಿ ಮೈಥಿಲೀನಯನ ವೀಕ್ಷಣ ವಿನೋದ ಮಣಿ ತಾಮರಸ ಮಿಹಿರ5 ದೇವ ಲೋಕಾಭಿರಾಮ ದೇವಮಾಂ ಪಾಹಿ ಶ್ರೀರಾಮ 6 ಮಂಗಳಂ ರಾಮ ಲೋಕಾಭಿರಾಮ ಜಯ ಮಂಗಳಂ ರಾಮ ಶ್ರೀರಾಮ ರಾಮ ಜಯ ಮಂಗಳಂ ರಾಮ ಧೇನುಪುರ ರಾಮ 7
--------------
ಬೇಟೆರಾಯ ದೀಕ್ಷಿತರು
ಕೋನೇರಿ ವಾಸ ವಿಠಲ | ನೀನೆ ಪೊರೆ ಇವನ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿ ಹರಿಯೆ0ಜ್ಞಾನಗಮ್ಯನೆ ಸಲಹೊ | ಮಾಣದಲೆ ಇವನಾ ಅ.ಪ. ಸುಕೃತ | ರಾಶಿ ಫಲಿಸಿತೊ ಇವಗೆ ದಾಸ ದೀಕ್ಷೆಯಲಿ ಬಹು | ಆಶೆ ತೋರುವನೋವಾಸವಾನುಜ ನಿನ್ನ | ದಾಸತ್ವ ಪಾಲಿಸುತಪೊಷಿಸೂವುದು ಬಿಡವೆ | ಶೇಷಾದ್ರಿವಾಸಾ 1 ತೈಜಸನು ಗುರುವಾದಿ | ರಾಜಾಖ್ಯ ರೂಪದಲಿಮಾಜದಲೆ ಪೇಳ್ವ ವಿ | ಭ್ರಾಜದಂಕಿತವಾವಾಜರೂಪಯು ಹರಿಯೇ | ಯೋಜಿಸಿಹೆ ಇವಗೆನಿವ್ರ್ಯಾಜ ಕರುಣಿಯೆ ಪೂರ್ಣ | ತೇಜೌಜ ನಿಧಿಯೇ 2 ಮಧ್ವ ಸಮಯದ ಜ್ಞಾನ | ವೃದ್ಧಿ ಗೈಸಿವನಲ್ಲಿಅದ್ವೈತ ತ್ರಯದರಿವು | ಬುದ್ಧಿಗೇ ನಿಲುಕೀಅಧ್ವಯನು ಹರಿಯೆಂಬ | ಸಿದ್ಧಾಂತ ಮನಸಿನಲಿಬದ್ಧವಾಗುವ ತೆರದಿ | ಸಿದ್ಧಿಸೋ ಹರಿಯೇ 3 ಕಂಸಾರಿ ತವನಾಮ | ಶಂಸನ ಪ್ಲವದಿಂದಸಂಸಾರ ನಿಧಿ ತರಣ | ಸಂಶಯವು ರಹಿತಾಅಂಶ ಅವತಾರ ಆ | ವೇಶ ವಿಷಯಗಳ ನಿಸ್ಸಂಶಯದಿ ತಿಳಿಸಿ ಪದ | ಪಾಂಸು ಸೇವೆ ಈಯೋ 4 ಸರ್ವಜ್ಞ ಸರ್ವೇಶ ಸರ್ವಮೂಲನೆ ದೇವದುರ್ವಿಭಾವ್ಯದೆ ಹರಿಯೆ | ಶರ್ವವಂದ್ಯಾಸರ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಕೋಪ ಮಾಡುವರೆ - ಕೃಪಾಳು ನೀನು ಕೋಪ ಮಾಡುವರೆ ಪ ಕೋಪ ಮಾಡುವರೇನೋ ಸಂಸøತಿ ಕೂಪದೊಳು ಬಿದ್ದ್ಹೊರಳುತಿಹನ ನೀ ಪರಾಮರಿಸಿನ್ನು ಕೀರ್ತಿ ಕ- ಲಾಪವನು ಕಾಪಾಡಿಕೊಳ್ಳದೆ ಅ.ಪ. ನಾಥನು ನೀನು ಎಂದೆಂದಿಗೂ ದೂತನು ನಾನು ಸಿದ್ಧಾಂತವು | ನೀತವಿದಿನ್ನು ಕೋತಿ ಕುಣಿವುದು ಕೊರವ ಕುಣಿಸಿದ ರೀತಿಯಲಿ ಜಗತೀತಳದಿ - ವಿ ಖ್ಯಾತಿಯಲ್ಲವೆ ಮಾತು ಪುಸಿಯೇ ನೀ ತಿಳಿದು ಕರುಣಿಸದೆ ಬರಿದೆ 1 ಅರಿತವ ನೀನು - ಷಡ್ವರ್ಗದಿ ಬೆರತವ ನಾನು - ಚರಣಂಗಳಿಗೆರಗುವೆನಿನ್ನು ಅರಿತು ನೆನೆಯೆ ಪ್ರಪನ್ನರೊಮ್ಮೆಗೆ ಎರವು ಮಾಡದೆ ಪೊರೆವೆನೆಂಬುವ ಬಿರುದನುಳಿದು ಕರುಣವಿಲ್ಲದೆ ಮರೆಯ ಹೊಕ್ಕವರೊಡನೆ ಕೆರಳಿ 2 ಏನಾದರೇನು - ನೀನಲ್ಲದೆ ಪ್ರಾಣ ಸತಿಸುತ ದ್ರವ್ಯ ಮಾನಪ- ಮಾನ ಅಭಿಮಾನಗಳು ನಿನ್ನವು ದೀನ ಜನ ಮಂದಾರ ಗುಣಗಳ ಪೂರ್ಣ ಲಕ್ಷ್ಮೀಕಾಂತ ಪ್ರಭುವೆ 3
--------------
ಲಕ್ಷ್ಮೀನಾರಯಣರಾಯರು
ಕೋಪದೊಳು ಜಮದಗ್ನಿ ತಾಪದೊಳು ಮಾರ್ತಾಂಡ ಭೂಪರೊಳು ರಘುನಾಥನೆನ್ನ ನಾಥ ದ್ವೇಷದೊಳು ಭಾರ್ಗವನು ರೋಷದೊಳು ದೂರ್ವಾಸ ಮೋಸದೊಳ್ ಶ್ರೀಕೃಷ್ಣ ಮುದ್ದು ಕೃಷ್ಣ ಭೋಗದೊಳು ದೇವೇಶ ರಾಗದೊಳು ಗಿರಿಜೇಶ ತ್ಯಾಗದೊಳು ಶಿಬಿರಾಯ ಮದನಕಾಯ ಜ್ಞಾನದೊಳು ಜನಕನು ಧ್ಯಾನದಲಿ ದತ್ತರ್ಷಿ ಸೂನೃತದಿ ಹರಿಶ್ಚಂದ್ರ ಮಾನನಿಧಿಯು ಧನಿಕನೆಂದೆನಲಷ್ಟಸಿದ್ಧಿದಾತಂದೆ ಘನವಂತನೆನೆ ಪ್ರಣವಸ್ವರೂಪಗೆ ಧಣಿಯೆನಲು ಮೂಜಗಕ್ಕೊಡೆಯನಿವÀನೆ ಎಣೆಯುಂಟೆ ಶೇಷಾದ್ರಿವಾಸನಿವಗೆ
--------------
ನಂಜನಗೂಡು ತಿರುಮಲಾಂಬಾ
ಕೋಪವೇನೋ ಕೃಷ್ಣ ಕೋಪವೇನೊ ಪಾಪಿ ಜನಗಳಿಗೆ ನಿನ್ನ ರೂಪವÀ ತೋರಿದೆನೆಂದು ಪ ಪೇಳು ಕೃಷ್ಣ ನಿನ್ನ ಕೇಳುವೆನೊ ಗಾಳಿ ಚಳಿಮಳೆಗಳಲಿ ನಿನ್ನ ಧಾಳಿಯ ಮಾಡಿದೆನೆಂದು 1 ಸುಳ್ಳಿದಲ್ಲ ಕೃಷ್ಣ ಒಲ್ಲೆನೆಲ್ಲ ಹಳ್ಳ ಕೊಳ್ಳಗಳಲಿ ನುಗ್ಗಿ ಹಳ್ಳಿ ಹಳ್ಳಿಗೆ ತೋರಿದೆನೆಂದು 2 ಗುಟ್ಟಿದಲ್ಲ ಕೃಷ್ಣ ಬಿಟ್ಟಿದ್ದಲ್ಲ ಹೊಟ್ಟೆಪಾಡಿಗಾಗಿ ನಿನ್ನ ರಟ್ಟುಮಾಡಿ ದಣಿಸಿದೆನೆಂದು 3 ನಿನ್ನ ತ್ಯಾಗ ಕೃಷ್ಣ ಎನ್ನ ಯೋಗ ಮನ್ನಿಸಲಾರೆಯ ದಯದಿ ಚಿನ್ಮಯ ಪ್ರಸನ್ನ ಕೃಷ್ಣ 4
--------------
ವಿದ್ಯಾಪ್ರಸನ್ನತೀರ್ಥರು
ಕೋಪವ್ಯಾತಕೊ ಕರುಣಾನಿಧೆ ಭೂಪನೆಂದು ನಿನ್ನ ನಂಬಿದೆ ಶ್ರೀಪತೇ ಶರಣಾಗತ ಮೇಲಾಪದ್ಗಣ ತರಬಾರದು ಬರಿದೆ ಪ. ಆವ ಕಾಲಕು ನಿನ್ನ ಸೇವೆ ಮಾಡುವುದೆನ್ನ ಪಾವನವಂತಿರಲು ನೋವನು ಪೊಂದಿಪುದ್ಯಾವ ಘನತೆ ಭದ್ರನಾವನೆ ನಿನಗೆ 1 ಹಸ್ತಪಾದಾದಿಗಳನಿತ್ತುದೆ ಸೇವನಗೆಂದುತ್ತಮ ಭಾವವಿಡ- ಪರಿ ಚಿತ್ತಜ ಜನಕ 2 ನಿತ್ಯ ನೇಮಂಗಳನು ತಕ್ಕಕಾಲದಿ ನಡೆಸುತ ಶಕ್ತಿಯನಿತ್ತು ಸಲಹು ಪುರುಷೋತ್ತಮ ನಿರುಪದಿ 3 ಮುನ್ನಿನ ಭವಗಳನೆಲ್ಲ ಕಳೆದ ಮ- ಹೋನ್ನತಿಯನು ತವ ಕರುಣದಿ ಸೇರಿದೆ4 ತಪ್ಪುಗಳೆಷ್ಟಿದ್ದರೂ ಒಪ್ಪಿಕೊ ಮುನಿಸದಿರು ಅಪ್ಪ ನೀನೆಂಬುವಶ್ರುತಿ ಕೃತ ಬಿರುದನು ತಪ್ಪಿಸಿಕೊಳದಿರು ಸರ್ಪ ಗಿರೀಶನೆ 5
--------------
ತುಪಾಕಿ ವೆಂಕಟರಮಣಾಚಾರ್ಯ