ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ದಯದಿಂದಲಿ ನೋಡೊ ಎನ್ನಾ ಹಯವದನ್ನಾ ಶ್ರೀಹರಿ ಪ ವರಗಳ ನೀಡಿ ಅ.ಪ. ಭಕುತದಿ ಕೂಡಿ ಆಡುವೆ ನೀ ನಿತ್ಯ ಸುಜನರಿಗೆ ಕಾಡಿ ಕೆಣಕುವ ಈ ಖೋಡಿ ಅನುದಿನ ಸಾಮಗಾನ ಪ್ರೇಮಾ ಬ್ರಹ್ಮಾದಿಗಳಿಗೆ ಕಾಮಿತಪ್ರದ ರಾಮಾ ಪರಿಪೂರ್ಣ ರಾಮಾ 1 ಶಾಮಸುಂದರ ಶಕಟಾಸುರಮರ್ದನ ಸಾಮಜವರದನೆ ಮಾತುಳಾಂತಕ ಮದನ ಜ£ಕÀನೆ ಕರುಣಿಸಿ ಎನ್ನನು 2 ಏನು ಬಲ್ಲೆನು ನಾನು ನಿನ್ನ ಮಹಿಮೆಯನ್ನು ದೀನ ಸುರಧೇನು ಬಣ್ಣಿಸಲಳವೆ ನಿನ್ನ ಮಹತ್ತನ್ನು ಮುನಿಮೌನಿವರರಿಂದ ಅನಘನೆನಿನ್ನಮಿತ ಗುಣಗಣನ ಕಾಣದೆ ಲಕುಮಿ ಮನದಲ್ಲಿ ಅನುವು ತಪ್ಪೆ ನಿತ್ಯ 3 ಹಾಟಕಾಂಬರಧರ ಶ್ರೀವತ್ಸಲಾಂಛನ ಜಟಾಮಕುಟ ಕುಂqಲ ಕೈಟಭಾಂತಕನೆ ಕಡಲಮಂದಿರ ಕುಟಿಲ ಕಟುಮತಿ ಖಳರನು ಶಿಕ್ಷಿಸಿ ಕೈಯ್ಯ ಬಿಡದೆ ಎನ್ನಾ ಮಾನಿಧಿವಿಠಲ ಕಾಲಿಗೆ ಬೀಳುವೆ 4
--------------
ಮಹಾನಿಥಿವಿಠಲ
ದಯದೋರು| ದಯದೋರು | ದಯದೋರು | ಜನನಿ ಪ ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ ಆದಿ ನಾರಾಯಣಿ | ಮಾಧವಭಗಿನಿ || ಸಾಧುಸುಪ್ರೀತೆ ನೀ| ವೇದವಂದಿತೆ ನೀ 1 ಭುವನಪಾಲಿನಿ ದೇವಿ | ಭುವನವಂದಿತೆ ನೀ || ಭವಭಯಹಾರಿಣಿ | ಭುವನೇಶ್ವರಿ ನೀ 2 ಶಂಖಚಕ್ರಾಂಕಿತೆ | ಶಂಕರಿ ಸುಗುಣಿ | ವೆಂಕಟರಮಣನ | ಪ್ರೇಮದ ಭಗಿನಿ 3
--------------
ವೆಂಕಟ್‍ರಾವ್
ದಯಪಾಲಿಸೆಲೊ ರಂಗ ಭ್ರಮಿಪ ಮನಕೆ ಶಾಂತಿ ಪ ತನುಮನಧನಮೋಹವನು ಪರಿಹರ ಮಾಡಿ ಅನುದಿನ ತವಧ್ಯಾನ ಆನಂದ ಕರುಣಿಸೊ 1 ಸ್ಮರಿಸಬಾರದ ಸ್ಮರಿಸಿ ದುರಿತಕ್ಕೆ ಗುರಿಯಾಗಿ ಪರಿಪರಿ ಮರುಗುವ ದುರ್ಮನ ದೂರಮಾಡೊ 2 ನೀನೆ ಎನ್ನಯ ಮಹಪ್ರಾಣೇಶ ಶ್ರೀರಾಮ ನಾನಾಕಾಮಿತ ಬಿಡಿಸಿ ಜ್ಞಾನಪದವಿ ನೀಡೊ 3
--------------
ರಾಮದಾಸರು
ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ ಧರೆಯೊಳು ಸುಜನರಾ ಪೊರೆಯಲೋಸುಗ ನೀನು ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1 ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ ದೇಶ ದೇಶದಿ ಜನರು ಬಂದು ಕಾದಿಹರೋ2 ಕರೆದಾರೆ ಬರುವಂಥ ಕರುಣಸಾಗರ ನೀನು ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3 ಬೇಡಿದಳಾ ವರಗಳ ಕೊಡುವ ನೀನೆನುತಲಿ ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4 ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5
--------------
ರಾಧಾಬಾಯಿ
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ. ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ 1 ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ 2 ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ದಯಮಾಡು ದಯಮಾಡು ಶಾರದಾಂಬೇ ನಯ ನೀತಿ ಕಲೆ ಭಾಗ್ಯ ಘನ ಕುಟುಂಬೇ ಪ ಜಯ ವಿಜಯ ಯಶಭೋಗ ಶ್ರೀಕರಾಂಬೇ ಭಯ ಭೀತಿ ಪರಿಹಾರೆ ವರಕದಂಬೆ ಅ.ಪ ಫಣಿ ಕಲ್ಯಾಣಿ ಸರಸಗುಣಿ ಗೀರ್ವಾಣಿ ವೀಣಾಪಾಣಿ 1 ಸಾರತರ ಶುಕವಾಣಿ ನೀರೇಜ ಮೃದುಪಾಣಿ ಭೂರಿದಯೆ ಸುಶ್ರೋಣಿ ದೇವಿ ಶುಭವಾಣಿ 2 ಸಕಲ ಲೋಕಖ್ಯಾತೆ ಸಕಲ ಜಗಸನ್ನುತೇ ಸಕಲ ಜಗವಂದಿತೇ ಸಕಲ ಶುಭಗೀತೇ ಸಕಲ ವೈಭವದಾತೇ ಸಕಲ ಸದ್ಗುಣ ಲಸಿತೇ ಸಕಲ ಸನ್ನುತೇ ಮಾಂಗಿರೀಶ ವಿನುತೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು 1 ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ 2 ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ 3
--------------
ಶ್ರೀಶಪ್ರಾಣೇಶವಿಠಲರು
ದಯಮಾಡೋ ರಂಗ ಹೇ ಕೃಪಾಂಗ ಪ ದಯಮಾಡಿ ನೀಯೆನ್ನ ಭಯವ ಪರಿಹರಿಸು ಚಿ- ನ್ಮಯ ಮೂರುತಿ ಸುಖಮಯ ಮಂದರಧರ ಅ.ಪ. ಪತಿತ ಪಾವನ ನೀನು ಪತಿತಾಗ್ರೇಸರ ನಾನು ಜತನದಿ ಭಕುತಿಯ ಪಥವ ತೋರಿ ನೀನು 1 ಮುಕ್ತಿ ಫಲಪ್ರದ ಶಕ್ತಿಯು ನಿನ್ನ ವ್ಯತಿರಿಕ್ತವಲ್ಲವೆಂದು ಭಕ್ತಿಯುವರವಳು...[?] 2 ಕಾಮಧೇನು ನೀನು ಕಾಮನಯ್ಯನು ನೀನು ಕಾಮಿತಫಲದಾತ ಮಾಮನೋಹಕ ತ್ರಾತ 3 ಸೃಷ್ಟಿಪಾಲಕ ನಿನ್ನ ಯಷ್ಟೆಂತವರ್ಣಿಪೆ ಅಷ್ಟು ಕರ್ತೃತ್ವಕ್ಕೆ ಶಿಷ್ಟಮೂರುತಿ ನೀನೆ 4 ಭಾರಿಭಾರಿಗೆ ನಿನ್ನ ಆರಾಧಿಸುವರ ಚಾರುಚರಣವನು ತೋರೊ ಮಾರಜನಕ 5 ಸಕಲಕ್ಕು ನೀ ಮುಖ್ಯ ಶಕಟಭಂಜನ ಕೇಳು ಪ್ರಕಟನಾಗಿಯೆನಗೆ ಶಕ್ತಿಯ ನೀಡೋ6 ಭೂವಲಯದೊಳು ನಾ ಆವಲ್ಯಪೋಗಲು ಕಾವಲು ನೀನೇ ಶ್ರೀವತ್ಸಾಂಕಿತನೇ 7
--------------
ಸಿರಿವತ್ಸಾಂಕಿತರು
ದಯಮಾಡೋ ಹನುಮಾ ದಯಮಾಡೋ ಪ ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ. ಅಂಜಾನಿಯ ಕಂದನೆ ಸಂಜೀವನ ತಂದನೆ ಅಂಜಾದೆ ರಕ್ಕಸರ ಕೊಂದಾನೆ 1 ಕೀಟಕಾಂತಕನೆ ಕಿರೀಟ ಸಖನೆ ಪಾಂಚಾಲಿ ಹೃತ್ಕುಮುದ ಚಂದ್ರನೆ 2 ಆನಂದತೀರ್ಥನೆ ಅಮ್ನಾಯಸ್ತುತನೆ ಮಾನಿಧಿವಿಠಲನ ದೂತನೆ 3
--------------
ಮಹಾನಿಥಿವಿಠಲ
ದಯವ ತೋರೆ ತುಳಸಿ ಹರುಷವೆರಸಿ ಪರಾಂಬರಿಸಿ ಹರಿಯ ಸ್ಮರಿಸಿ ಪ. ಭವ ದಯಾವೆರೆದು ಪ್ರೇಮಗರೆದು ತಾಯೆ ನೀ 1 ಮಲ್ಲೆ ಮಲ್ಲಿಗೆ ಜಾಜಿ ಮರುಗ ಸೇವಂತಿಕೆ ಎಲ್ಲ ಪೂಜೆ ಮಾಡೆ ಸಲ್ಲಲಿತದಲಿ ನೀನಿಲ್ಲದ ಪೂಜೆಯ ವಲ್ಲನು ಶ್ರೀ ಹರಿಯು ಎಲ್ಲರಿಗಧಿಕಳೆಂದು ಪೂಜೆಗೊಂಡು ದಯಾಸಿಂಧು ತಾಯೆ ನೀ 2 ಶ್ರೀ ಶ್ರೀನಿವಾಸನೊಳು ವಾಸಿಪೆ ಸರ್ವದಾ ಪೋಷಿಪೆ ಭಕ್ತರನು ವಾಸುದೇವನ ತೋರಿ ಪೋಷಿಸೆ ಬಾರಮ್ಮ ವಾಸವಾಗಲು ಮನೆಗೆ ಸೂಸಿ ಭಕುತಿಯಿಂದ ಪೂಜಿಪೆ ನಿಮ್ಮ ಚರಣವಮ್ಮಾ ತಾಯೆ ನೀ 3
--------------
ಸರಸ್ವತಿ ಬಾಯಿ
ದಯವ ಮಾಡೋರಂಗ ನಯದಿ ನೋಡೊ ದಯವು ನಯವು ನಿನಗಿರದಿದ್ದರೆ ಎನಗೆ ಕೇಳೊ ಪ ಭಯವು ಲಯವು ನಿನಗಿದೆಯೆಂಬುದು ನನ್ನ ಹಾಡೊ ಭಯ ಭೀತಿಗಳನು ಬಿಡಿಸುವುದೊಂದೇ ನಿನ್ನ ಪಾಡೊ ಅ.ಪ ಜನನ ಮರಣ ಮತ್ತಿರಲೆಂಬುದು ನೀನು ಬಲ್ಲೆ ಮನಸು ನೆನಸು ನಿನ್ನೆಡೆಗಿರೆ ವೈಕುಂಠವಲ್ಲೆ ರಂಗ ದಿನವು ಸ್ಮರಣೆಯ ಗೈಸುವ ರೀತಿಯ ನೀನೇ ಬಲ್ಲೆ 1 ಹಿಂದಿನ ಜನ್ಮದ ಪಾಪಗಳೆಲ್ಲವನಳಿಸೋ ರಾಮ ಇಂದಿನ ಜನ್ಮದ ನಾಮಸ್ಮರಣೆಯ ನುಡಿಸೋ ರಾಮ ಮುಂದಿನ ಭವಗಳ ನೀಗಿಸಿ ಕಾಯೋ ಸೀತಾರಾಮ ಇಂದಿರೆಯರಸ ಮುಕುಂದ ನೀ ಮಾಂಗಿರಿ ರಂಗಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು
ದಯವಾಗು ದೀನ ಬಂಧು ನಿಜ ಭಕ್ತ ಭಯ ಹರ ಸ್ಮಯ ಮುಖೇಂದು ಸಿಂಧು ನಿನ್ನಡಿಯ ಬಯಸುವೆನು ಭಕ್ತನೆಂದು ಪ. ಶ್ರೀ ಭೂಮಿಯರಸ ನೀನು ದಯವಾಗೆ ಭಾಗವತರುದಯವಹುದು ಯೋಗ ಭೋಗಗಳೆಂಬುದು ಮಿತಿರಹಿತ- ವಾಗಿ ತಾನೇರಿ ಬಹುದು 1 ತಾಪಾಗ್ನಿ ಶಮನಕಾರಿಯೆ ನಿ:ಶೇಷ ಭೂಪಾಲ ಮೌಳಿಸಿರಿಯೆ ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ ಕೋಪಿಸದೆ ಸಲಹು ದೊರೆಯೆ 2 ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ ಸರ್ವ ದುರಿತೌಘವನ್ನ ಪರ್ವತ ಶೃಂಗವನ್ನು ನಿಶಿತ ಶತ- ಪರ್ವದೊಲ್ ತರಿವರನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಯವಾಗೋ ದಯವಾಗೋ ಪ ಹಯಮುಖ ಭಯಕೃದ್ಭಯನಾಶನ ಹರಿ ಅ ದ್ರೌಪದಿ ಮೊರೆ ಕೇಳ್ಯಾಪದ್ಬಾಂಧವ ನೀ ಪೊರೆದಯ್ ರಮಾಪತಿ ನಿರುತ 1 ಖರಮುರ ನರಕಾದ್ಯರ ಸಂಹರಿಸಿದೆ ಪರಮ ಪುರುಷ ಸಂಹರಭವಹರನೆ 2 ಶತ್ರುತಾಪಕ ಜಗತ್ರಯ ವ್ಯಾಪ್ತ ಪ ವಿತ್ರ ಪಾಣಿ ಸರ್ವತ್ರದಿ ಎಮಗೆ 3 ಎಷ್ಟೆಂದುಸುರಲಿ ದುಷ್ಟಜನರು ಬಲು ಕಷ್ಟ ಬಡಿಪ ಬಗೆ ಜಿಷ್ಣು ಸಾರಥಿಯೆ 4 ಗೋಭೂಸುರರಿಗೆ ಭೂಭುಜರ ಭಯ ಪ ರಾಭವಗೈಪುದು ಶ್ರೀ ಭೂರಮಣನೆ 5 ಅಪ್ರಮೇಯ ನೀ ಕ್ಷಿಪ್ರದಿ ಒಲಿದು ಜ ಯಪ್ರದನಾಗು ಸುಪ್ರಹ್ಲಾದವರದನೆ 6 ಯಾತಕೆ ಎಮ್ಮನು ಭೀತಿಗೊಳಿಪೆ ಪುರು ಹೂತವಿನುತ ಜನಗನ್ನಾಥವಿಠ್ಠಲಾ 7
--------------
ಜಗನ್ನಾಥದಾಸರು