ಒಟ್ಟು 1360 ಕಡೆಗಳಲ್ಲಿ , 103 ದಾಸರು , 1202 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಕಳೆಯುವಿ ನಮ್ಮ ಐಕೂರಾರ್ಯರ ಸುವಾಕು ಕೇಳದೆ ಜೀವಿ ಪ ಮರುತಾಗಮ ಮರ್ಮವರಿಯದವರಿಗೆಲ್ಲಾ | ವರ ಭಾಗವತ ಗೀತಾ ಹರಿಕಥಾ ಮೃತ ತತ್ವ | ಯರಡೊಂದು ಕಾಲ ಕೃಪೆ ನೆಳಲಾಶ್ರಯಿಸದೆ 1 ಹರಿಮೂರ್ತಿ ಹರಿವ್ಯಾಪ್ತಿ ಹರಿಸತ್ಯ ಸುಚರಿತ್ರೆ | ಹರಿದಾಸರುಕ್ತಿ | ಹಿರಿದು ಕಿರಿದು ಭೇದ ನೆರೆ | ಸುರಹಸ್ಯವನರುಹಿ ಕಗ್ಗತ್ತಲೆ ಹರಿಸುವರಿವರೆ ನರ ನೀನಂಬದೆ2 ಮದಡ ಜನರಿಗೆಲ್ಲ ಪದಸುಳಾದಿಗಳನು | ಚತುರತನದಲಿಂದ | ವಿಧ ವಿಧ ವಿವರಿಸಿ | ಸದಮಲ ಸುಜ್ಞಾನ | ವದಗಿಸುವಂಥ ಈ ಬುಧರುಪದೇಶ ಮುದದಿ ಪಡೆಯದೆ 3 ಆಶೆ ಕ್ರೋಧಂಗಳ ಜಯಿಸುತ ಮನದಿಂದ ಕ್ಲೇಶಮೋದ ಸಮ ತಿಳಿದಿಹರೋ | ಯೇಸೇಸು ಕಾಲಕ್ಕೆ ಭೂಸುರೋತ್ತಮ ರಾದ | ಈ ಸುಗುಣರ ಸಹವಾಸ ದೊರೆವುದೆ 4 ಶ್ರೀ ಮುಖವಾಣಿಯು ಸಾಮಾನ್ಯವಲ್ಲವೋ ನೇಮದಿಂ ಕೇಳ್ವರ | ಶಾಮಸುಂದರ ಸುಧಾಮನಿಗೊಲಿದಂತೆ | ಪ್ರೇಮದಿಂ ಸಲಹುವ ನೀ ಮನದಲಿ ತಿಳಿ 5
--------------
ಶಾಮಸುಂದರ ವಿಠಲ
ಕಾಲ ಭುಜಗವೇಣಿಯೆ ಪೊರೆಯೆ ಲೋಲೆ ಶ್ರೀ ವರಲಕ್ಷ್ಮಿಯೆ ಪ ಫಾಲ ವಿರಾಜಿತೆ ಅ.ಪ ಇಂದು ಸುಂದರ ಭಾಸಿತೆ ವಿನುತೆ ಬಂಧುರಾಲಕ ಭೂಷಿತೆ ಇಂದಿರೆ ವಿಮಲೆ 1 ಅಂಬುಜಾನನೆ ಕಾಮಿನಿ ವಿಮಲೆ ಬಿಂಬರದನ ವಾಸೆಯೆ ಶಂಬರವೈರಿ ಶುಭಂಕರಿ ಮಹಿತೆ 2 ಪೊಳೆವ ಲೋಚನ ಥಳಕು ದೇವಿ ಬೆಳೆವ ಮಿಂಚಿನ ಬೆಳಕು ದಳಿತ ಕುಸುಮಾವಳಿ ಕಲಿತ ಮುಖಾಮಲೆ 3 ಭೃಂಗವೇಣಿಯೆ ಭಜಿಪೆ ತಾಯೆ ಶೃಂಗಾರ ಭೂಷೆ ಮಂಗಳೆ ಮಾಧವ ಮಂಗಳರೂಪೆ 4 ಮಾನಿನಿ ಗುಣಭೂಷಿತೆ ಸತತಂ ಸಾನುರಾಗದೆ ಸಲಹು ಸರ್ವಸುಖ ಸಂಪದೆ ವರದೆ5
--------------
ಬೇಟೆರಾಯ ದೀಕ್ಷಿತರು
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1 ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2 ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
--------------
ಚಿದಾನಂದ ಅವಧೂತರು
ಕುಂದಣದ ಹಸೆಗೆ ಛಂದದಿಂದ ಬಾರೆ | ಸಿಂಧು ಕುಮಾರೆ | ಶೃಂಗಾರಮಯವಾದ ಕಂಗೊಳಿಸುವ ಬಹು ಸಹೋದರಿ 1 ಸಿಂಧುರಮಂದಗಮನೆ ಕುಂದಕುಟ್ಮಲರದನೆ ಇಂದು ಧರೆಯಲಿ ಸುರವೃಂದವಂದಿತ ಜನನಿ 2 ಕಾಮನ ಜನನಿ ಕಾಮಿತದಾಯಿನಿ ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ 3
--------------
ಶಾಮಸುಂದರ ವಿಠಲ
ಕುಂದಣದಾರುತಿ ತಾರೆ ಕುಂದಣದಾರುತಿ | ಸುಂದರವದನ ಕಮಲನಾಭನಿಗೀಗ ಪ ಶೌರಿ ಸುರವಂದ್ಯಗೆ ವಾರಿಧಿಶಯನಗೆ | ಮುರವೈರಿ ಮದನಪಿತನಿಗೀಗ 1 ಮುಕ್ತಿ ಶುಭದಾತಗೆ | ಭಕ್ತರ ಪರಿಪಾಲಗೆ | ಲಕುಮೀಶಗೆ ಶುಭದಿ ಪೋಷಗೆ 2 ಶಾಮಸುಂದರಾಂಗಗೆ ಸಾಮಜೇಂದ್ರ ಪಾಲಗೆ ಸುಮನಯನ ಶಮಲದೂರಗೀಗ 3
--------------
ಶಾಮಸುಂದರ ವಿಠಲ
ಕುಂದಣಾರುತಿ ತಾರೆ ಸಖಿ | ಸಿಂಧುನಂದನೆಗಿಂದು ಮುಖಿ ಪ ವಿಧಿ ಮಾತೆಗೆ ವರದಾತೆಗೆ | ಕೃತಿಲೀಲೆ ನುತಿನೀಲೆ ರುಕ್ಮಿಣಿಗೆ 1 ಜಂಭಾರಿ ವಂದಿತೆ ಶ್ರೀರಂಬೆಗೆ ಜಗದಂಬೆಗೆ | ಸುನೀತಾಂಬೆಗೆ | ಅಂಬುಜ ಮಂದಿರ ಅಂಭ್ರಣಿಗೆ 2 ಶ್ರೀ ಶಾಮಸುಂದರನರ್ಧಾಂಗಿಗೆ ಶುಭಾಂಗಿಗೆ | ದಯಾಪಾಂಗೆಗೆ | ಭೂಸುರ ಸುಚರಿತ ಭಾರ್ಗವಿಗೆ 3
--------------
ಶಾಮಸುಂದರ ವಿಠಲ
ಕುಂದದೆಮ್ಮನು ಕರುಣದಿಂದ ಪೊರೆವರ ಪ ನಂಬಿ ತುತಿಸುವಾ ಜನ ಕದಂಬಕಿಷ್ಟವ ತುಂಬಿ ಕೊಡುವರೋ ಅನ್ಯ ಹಂಬಲೀಯರು 1 ವಿನುತ | ಮೂಲ ರಾಮನಾ ಶೀಲ ಸದ್ಗುಣ ನುತಿಪ ಮೇಲು ಭರತನಾ 2 ಜಲಧಿ ಚಂದಿರಾ ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ 3 ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ 4 ಭೂತ ಭಾವನಾ ಜಗನ್ನಾಥ ವಿಠಲನಾ ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ 5
--------------
ಜಗನ್ನಾಥದಾಸರು
ಕುರುಣಾವಾರುಧೀಶ ಭಾರತೀಶ ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ ಪ ಸುಜನರೆನ್ನಗೆ ಹಿಂದೆ ಸೂಚಿಸಿದ್ದರೊ ದ್ವಿಜ ಕುಲಾರ್ಚಿತ ಇಂದು ನಿನ್ನ ಭಕುತರಲ್ಲಿಡು ಎನ್ನ 1 ದಂತಿಪುರಪತಿಗೆ ಕೃತಾಂತನೆನಿಸಿದ ಧೀರ | ವಿಂತು ಪೊಗಳಲಿ ನಿನ್ನ ಮಹಿಮೆಯನು ಕುಂತಿಜನೆ ತವನಾಮ ಚಿಂತಿಯನು ಸಂತತದಲಿ ಸಲಹೋ ಧೀಮಂತ ನಂಬಿದೆ ಪರಮಾ 2 ಕಾಮಾರಿಸುತ ನಮೊ ಸೋಮಕುಲಭವ ಭೀಮ | ಶ್ರೀಮಧ್ವಮುನಿನಾಥವರ ಪ್ರದಾತ ಭೂಮಿಜಾತೆಯ ಪ್ರವೀತ ಶಾಮಸುಂದರದೂತ ಸ್ವಾಮಿಗುರು ತವನಾಮ ಸ್ಮರಿಪೆ ಘುನ್ನ 3
--------------
ಶಾಮಸುಂದರ ವಿಠಲ
ಕೂಗಿದರು ಧ್ವನಿ ಕೇಳದೆ ಶಿರ | ಬಾಗಿದರು ದಯ ಬಾರದೆ ಪ ಭೋಗಿಶಯನ ಭುವನಾಧಿಪತೇ ನಿನ್ನ | ಆಗಮನವೆಂದಿಗೆ ಆಗುವುದು ಪ್ರಭೊಅ.ಪ ಖರೆ ಎ| ನ್ನತ್ತ ನೋಡುವುದು ದೊರೆ || ಪರಾಕು ಮಹಾಪ್ರಭು | ಎತ್ತಣ ರಥವನು ಎತ್ತಿ ಬಾ ನೀಡು ದೊರೆ1 ಸಿರಿ | ಮಂದಿರ ಭಕ್ತ ಕುಟುಂಬಧರ || ಸುಂದರ ಮೂರುತಿ ಒಂದಿನ ಸ್ವಪ್ನದಿ | ಬಂದು ಪದದ್ವಯ ಚಂದದಿ ತೋರಿಸೊ2 ಕರುಣಾ ಶರಧಿಯು ನೀನಲ್ಲವೇ ಕೃಷ್ಣ | ಶರಣಾಗತರಿಗೆ ದೊರೆಯಲ್ಲವೆ || ಮೊರೆಹೊಕ್ಕವರಿಗೆ ಮರೆಯಾಗುವರೆ | ಸರಿಯೆ ಜಗದೊಳು ವಿಜಯವಿಠ್ಠಲರೇಯಾ 3
--------------
ವಿಜಯದಾಸ
ಕೃತಿ 5 ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೊ ಮುಕುಂದ ಪ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳೆಣಿಸದೆ ಕಂದರ್ಪ ಜನಕನೆ 1 ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2 ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3
--------------
ವಿಜಯೀಂದ್ರತೀರ್ಥರು
ಕೃತ್ತಿವಾಸ ಪೂಜ್ಯ ಚರಣೇ | ಮಹತತ್ವಮಾನಿ ಸತಿಯೆ ಸುಗುಣೆ ||ಅ|| ನಿತ್ಯ ನೀಡೆ ಹರಿಯ ಸ್ಮರಣೆ ಅ.ಪ. ವಿಧ್ಯುದ್ವಾಕ್ ದಿಙËಮಾನಿಯೆ | ಹೇದ್ಯುಪೃಥಿವಿ ಭಾರತೀಯೇಪ್ರದ್ಯುಮ್ನ ಕೃತಿಗೆ ಕುಮಾರಿಯೆ | ಬುಧ್ಯಾಭಿಮಾನಿಯೇ ಕಾಯೆವಿದ್ಯುತಿಸ್ಥಿತಿ | ಬುಧ್ಯಾಬ್ದಿಯೆ | ವಿಧ್ಯೇತರ | ಅವಿಧ್ಯೆಯ ಕಳೆಸದ್ಯೋಜನ | ಶ್ರದ್ದಾಂಬಾ | ಮದ್ದೇಹದಿ | ಸಿದ್ಧಿಸು ಹರಿ 1 ಮಂದ ಪತಿ | ಸುಂದರ ಪದ | ಸಂಧಿಸು ಮನ | ಮಂದಿರದಲಿ 2 ಭಿಕ್ಷೆ ನೀಡೆ ತಾಯೇ | ಯುಕುತಿ ಶಾಸ್ತ್ರ ಒಂದನರಿಯೇಸೌಖ್ಯ ತೀರ್ಥ ಮತವನ್ವೊರೆಯೇ ಮುಕುತಿ ಮಾರ್ಗ ತೋರಿ ಪೊರೆಯೇ ||ತೋಕನು ಎನೆ | ಸ್ವೀಕರಿಸುತ | ಲೋಕರುಗಳ | ವಾಕನು ದೂ-ರೀಕರಿಸು ಪ | ರಾಕೆನ್ನುವೆ | ಭೀಕರಭವ | ನೀ ಕರಗಿಸು 3 ಕಡಗ ಕಂಕಣ ದ್ವಾರ ಧಾರೆ | ಜಡಿತ ದುಂಗುರ ದೋಷ ದೂರೆಮುಡಿದ ಮಲ್ಲಿಗೆ ಕುಂಚುಕಧಾರೆ | ಉಡುಗೆ ಬಿಳುಪಿನಂಬರೆ ನೀರೇ || ಒಡ ನಡುವು | ನಿಡಿತೋಳೂ | ತೊಡೆಕದಳೀ | ಬಡುವು ಪರೀ |ಅಡಿಗೆರಗುವೆ | ಪೊಡ ವೀಶನ | ಧೃಡ ಭಕುತಿ | ತಡೆಯದೆ ಕೊಡು4 ಶರಣು ಮುಂದಣ ವಾಣಿ ಕರುಣ | ಗುರು ಗೋವಿಂದ ವಿಠಲ ಚರಣಾ |ಭರಣವೆನಿಪ ಸುಗುಣ ಗಣಾ | ಒರೆದು ಕಳೆಯೆ ಭವದ ಬಂಧನ |ಮಾರಯ್ಯನ | ಆರಾಧನೆ | ಚಾರೀಸದೆ | ಧಾರಾಣಿಗೆಭಾರಾದೆನು | ಕಾರುಣ್ಯವ | ತೋರೂವುದು ಭಾರತಿಯೇ 5
--------------
ಗುರುಗೋವಿಂದವಿಠಲರು
ಕೃಪಾಳೊ ಗುರುವರ ಶ್ರೀಪವಮಾನ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ ಕಾವಕರುಣಿ ಜೀವವರೇಣ್ಯ ವಿನುತ ಜಯಶೀಲಾ ವಿಧಿ ದುರಿತೌಷ ಹಾರಿ 1 ಆದಿಪುರದಿ ಮೆರೆವನಾಥಾ ಸದಯ ಭಕ್ತ ಜನಕೆ ಶುಭದಾತ ಬುಧರಾರಿ ಸಜಾತ ಭ್ರಾತಾ ಸದಯ ಧರ್ಮಾನು ಜಾತಾ 2 ಪ್ರೇಮಶರಧಿ ವಾನರೇಶಾ ಅಮಿತ ಸತ್ವಯತಿ ಮಹಿಮಯತಿರಾಜಾ ರೋರೋಮ ವ್ಯೋಮಕೇಶಾ ಶಾಮಸುಂದರನ ಮೋಹದ ದಾಸಾ 3
--------------
ಶಾಮಸುಂದರ ವಿಠಲ
ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ ದ್ವಿಪÀವರವರದನೇ ಬಾರಯ್ಯ ದೊರೆಯೆ ಪ ದುರಿತಹರÀ ವರ ಚರಣಕಮಲನೆ ಧರಣಿಧರವನು ಕರಸರೋಜದಿ ಧರಿಸಿ ಸುಜನರ ಪೊರೆದ ಮುರಳೀ- ಧರನೇ ಮೋದವಪಡಿಸಿದಂತೆ ಅ.ಪ ನಂದನಂದನ ನಿನ್ನ ಚರಣ ಒಂದೇ ಶರಣ ಎನಗೆಂದು ನಂಬಿರುವುದೇ ಒಳ್ಳೇ ಆಭರಣ ಇಂದಿರೇಶನೆ ಮಾಡೋ ಕರುಣ ಸಿಂಧುಶಯನ ಸುಂದರೀಮಣಿ ಸಹಿತದಲಿ ನೀ ಬಂದು ಎನ್ನಯ ಮಂದಿರದಲಿ ನಿಂದು ಎನ್ನವನೆಂದು ಭಾವಿಸಿ ನಂದಪಡಿಸೈ ನಂದಬಾಲನೆ 1 ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ ಸೂನಶರನಪಿತ ವಿಗತವಿಕಾರ ಶ್ರೀನಾಥ ಸುಜನಮಂದಾರ ಮೀನಾಕಾರ ನಾನು ನಿನ್ನವನಯ್ಯ ಎನ್ನಯ ಮಾನ ಮತ್ತಪಮಾನ ನಿನ್ನದು ಹೀನಮತಿ ಇವನೆಂದು ತಿಳಿದುದಾ- ಸೀನಮಾಡದೆ ಸಾನುರಾಗದಿ 2 ಸೋಮ ಕುಲಾಂಬುಧಿಸೋಮರಾರಾಮ ಬಲರಾಮ ಸಹಜನೇ ಸುರರಿಪು ಭೀಮ ವಾಮಲೋಚನೇರಿಗೆ ಕಾಮ ಪ್ರೇಮಧಾಮ ಕಾಮಜನಕನೆ ಸಾಮಗಪ್ರಿಯ ನಾಮಗಿರಿ ಶ್ರೀ ರಾಮ ನರಹರೆ ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3
--------------
ವಿದ್ಯಾರತ್ನಾಕರತೀರ್ಥರು
ಕೃಷ್ಣ ಗೋಪಿ ಬಾಲನೆ ಬಹುಗುಣಶೀಲನೆಗೋವಳಪಾಲನೆ ನೋಡುವೆ ಬಾ ಬಾ ಬಾ ಪ ಗೋಪ ರೂಪನೆ ಪಾಪ ದೂರನೆನೀಪದೊಳು ಕುಳಿತು ಗೋಪೇರ ವಸ್ತ್ರವಶ್ರೀಪತಿ ನೀಡಿದಿ ಬಾ ಬಾ ಬಾ 1 ಸಿಂಧು ಮಂದಿರ ಸುಂದರಾಂಬರಮಂದಹಾಸವ ಮಾಡಿ ವಂದಾರುಗಳ ಮಾಡಿಆನಂದದಿ ನೋಡುವೆ ಬಾ ಬಾ ಬಾ 2 ದೋಷದೂರನೆ ವಾಸುದೇವನೆಶೇಷಗಿರಿಯಲಿ ನಿಂತು ದಾಸ ಜನರಿಗೆಲ್ಲಇಂದಿರೇಶನೆ ಕಾಯುವಿ ಬಾ ಬಾ ಬಾ3
--------------
ಇಂದಿರೇಶರು
ಕೃಷ್ಣನ್ನ ಶ್ರೀ ಕೃಷ್ಣನ್ನ ಕೊಳಲಿನ ಧ್ವನಿಯ ಕೇಳಿ ನಾ ಸತಿ ಪ. ಮಧುರ ಮಧುರ ಸ್ವರ ಸುದತಿಯೆ ಕೇಳೆ ಚದುರನು ಊದುತÀಲಿಹನೆ ಸದನದಿ ನಿಲ್ಲಲು ಹೃದಯವು ಒಲ್ಲದು ಚದುರೆಯೆ ಕರೆದೊಯ್ ಎನ್ನಾ ಮನಮೋಹನ ಮದಸೂದನ ಕೃಷ್ಣನ್ನೆಡೆಗೆ ಪೋಗದೆ ನಿಲ್ಲಲು ತಾಳಲಾರೆನೆ ಕೇಳ್ ಸಖಿ ಪೋಗುವ ಬಾರೆ ಚಂದ್ರಮುಖಿ 1 ಕಂದ ಕರುಗಳ ಆನಂದದಿ ಕಾಯ್ವ ಆನಂದವ ನೋಡುವ ಬಾರೆ ಸುಂದರ ಕೊಳಲಿಗೆ ಚೆÉಂದದಿ ಸರ್ಪಾ ನಂದದಿ ತÀಲೆತೂಗುವುದೆ ಮೃಗ ಜಡತೆಯಿಂ ನಿಂತು ಕೇಳುವ ಗಾನ ನೋಡುವ ಬಾರೆ ಎನ ಮನಸೆಲ್ಲಿಹುದೆ ಕೇಳ್ ಸಖಿ ಶ್ರೀ ಶ್ರೀನಿವಾಸನೊಳ್ ಚಂದ್ರಮುಖಿ 2
--------------
ಸರಸ್ವತಿ ಬಾಯಿ