ಒಟ್ಟು 273 ಕಡೆಗಳಲ್ಲಿ , 61 ದಾಸರು , 243 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿದ್ಧಿ ಗಣವರ ಬುದ್ಧಿ ನೀಡೆನ್ನನುದ್ಧಾರಮಾಡು ಬೇಗನೆಬದ್ಧಗುಣಗಳ ತಿದ್ದಿ ಎನಗೆ ಶುದ್ಧಮತಿ ನೀಡು ಬೇಗನೆ ಪವಿಮಲಮನ ಸನಮಿತ ತವಪಾದಕಮಲ ಭಜಿಸುವೆನಭನೆವಿಮಲವಿದ್ಯವ ಕ್ರಮದಿಂ ಪಾಲಿಸು ಹಿಮಜೆಸುತ ಕರಿವರದನೆ 1ಸೋಮಶೇಖರ ಪ್ರೇಮದ ಸುಕುಮಾರ ಸುಮನಸಚಂದ್ರನೆಕಾಮಿತಜನ ಶಾಮಪೂರಿತ ಕೋಮಲಗುಣಸಾಂದ್ರನೆ 2ಕೋಮಲಾಂಗನೆ ಕರ್ಣಕುಂಡಲ ಹೇಮಕಂಕಣಧಾರನೆತಾಮಸದಿ ಗಹಗಹಿಸಿದಾ ಮಹ ಸೋಮನಿಗೆ ಶಾಪವಿತ್ತನೆ 3ಪಾರಬುಧ್ಧಿಲಿ ಸಾರವಿದ್ಯದಧಿಕಾರ ಕುಶಲದಿ ಪಡೆದನೆಗೌರಿಶಂಕರರ್ವಾದ ನಿವಾರಿಸಿದ ಮಹಚದುರನೆ 4ತ್ರಿಕ್ಷೆಯರೊಡಗೂಡಿಭುವನರಥಮಾಡಿಮಣಿಯದ್ಹೋಗ್ವುದು ಕಂಡನೆಘನಕೋಪಾಗ್ರಾದಿ ರಥವನಿಲ್ಲಿಸಿ ತ್ರಿಣಯರಿಂ ಪೂಜೆಗೊಂಡನೆ5ವಿಘ್ನನಾಯಕ ಪ್ರಾಜÕಮೂರುತಿ ಸೂಜÕ ಜನರಾರಾಧನೆಸಂಜೆÕದ್ಹೊಗಳುರ್ವಿಘ್ನ ಛೇದಿಸಿಪ್ರಾಜÕಪದವೀವ ಪ್ರೌಢನೆ6ವರುಷಕೊಂದುಮಾಸಧರೆಯೊಳಿಳಿಯುತಪರಮಪೂಜೆಯ ಕೈಕೊಂಬನೆನರರ ದುರ್ಮತಿ ತರಿದು ಸುಗತಿಯ ನಿರುತಪಥದೋರ್ವ ಧುರೀಣನೆ 7ತಂದೆ ನಿನ್ನನು ಹೊಂದಿ ಭಜಿಪರ ಮಂದಮತಿನಿವಾರನೆಬಂದ ದುರ್ಭವದಂದುಗಂಗಳ ಚಂದದಿಂ ಪರಿಹಾರನೆ 8ಶರಣು ಶರಣು ಶರಣು ಗಣವರ ಶರಣುಕರುಣಾಭರಣನೆಸಿರಿಯರಾಮನ ಚರಿತಪೊಗಳುವ ಪರಮಮತಿದೇ ಗಣಾರ್ಯನೆ 9
--------------
ರಾಮದಾಸರು
ಸ್ಥಳವಿಲ್ಲವೈ ಭಾಗವತರೇ - ಈಗಒಳಗೆ ಹೊರಗೆಸಂದಣಿತುಂಬಿದೆ ನೋಡಿಪ.ಆಯ್ದೊಕ್ಕಲಿದರೊಳಗುಂಟು - ಮತ್ತೆಆಯ್ಕು ಮಂದಿಯ ಬೇರೆ ಉಂಟುಆಯ್ದು ನಾಲ್ಕು ಇದರೊಳಗುಂಟು - ನೀವುಬೈದರೆ ಏನು ತೆಗೆಯಿರಿ ನಿಮ್ಮ ಗುಂಟು 1ಆರುಮಂದಿ ಕಳ್ಳರುಂಟು - ಮತ್ತಾರು ಮಂದಿಗೆ ಮತ್ತೆ ಪ್ರೇರಕರುಂಟುಪ್ರೇರಕರಿಗೆ ಕರ್ತರುಂಟು - ವಿಚಾರಿಸುವುದಕೆ ನಿಮಗೇನುಂಟು ? 2ಅತ್ತೆಯವಳು ಬಲುಖೋಡಿ - ಎನ್ನಒತ್ತಿ ಆಳುವ ಪುರುಷನು ಬುಲುಹೇಡಿಮತ್ತೆ ಮಾವನು ಅಡನಾಡಿ - ಸರಿಹೊತ್ತಿಗೆಬರುವ ಮೈದುನ ಬಲುಕೇಡಿ3ನಗೆಹೆಣ್ಣು ಎಂಬುವಳು ಕೋಪಿ - ಮಲಮಗಳು ಕಂಡರೆ ಸೇರಳು ಬಲು ಪಾಪಿಹಗೆಗಾತಿಅತ್ತಿಗೆ ಶಾಪಿ - ಸುತ್ತಬೊಗಳುವಳು ತಾಳೆನು ನಾನು ಮುಂಗೋಪಿ 4ಎಷ್ಟು ಹೇಳಲಿ ನಿಮಗೆಲ್ಲ - ಈಕಷ್ಟ ಸಂಸಾರದೊಳಗೆ ಸುಖವಿಲ್ಲಸ್ಪಷ್ಟವಾಗಿ ಪೇಳ್ಪೆ ಸೊಲ್ಲ - ದೇವಸೃಷ್ಟೀಶ ಪುರಂದರವಿಠಲ ಬಲ್ಲ 5
--------------
ಪುರಂದರದಾಸರು
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
--------------
ಪುರಂದರದಾಸರು