ಒಟ್ಟು 12179 ಕಡೆಗಳಲ್ಲಿ , 134 ದಾಸರು , 5885 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡು ಕರುಣದಿಂದ ಸರಸ್ವತಿ ನೀಡೆನಗೆ ಸುಮತಿಪ ಮತಿಯ ಕಳೆದು ಮನದಿ ಪಾಡಿಪೊಗಳುವಂತೆ ಯನ್ನ ಅ.ಪ ನಿಮ್ಮಡಿಗಳಿಗೆರಗುವೆನು ಮಾತೆ ಭಕುತಿಯ ಪಡೆಯುವಂತೆ 1 ಶೃತಿಗಳಿಗಭಿಮಾನಿ ನಿಮ್ಮನು ಮಹಿಮೆ ತುತಿಸುವಂತೆ 2 ಜನನಿ ಶರಣು ಸಿರಿನರಹರಿಯ ಸೊಸೆಯೆ 3
--------------
ಕಾರ್ಪರ ನರಹರಿದಾಸರು
ನೋಡು ನೋಡು ಗರುಡಗಮನನೆ ಮಾಡು ದಯವನು ವೇಗದಿ ಪ ಪಾಡುವೆ ಆನಂದದಲಿ ನಿನ್ನನು ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ ಮಂಗಳಾಂಗನೆ ಮನ್ಮಥನ ಪಿತ ಸಂಗೀತ ಸುರಲೋಲನೆ ಕಂಗಳಬ್ಬರ ತೀರುವಂತೆ ಚರಣಂಗಳನೆ ತೋರೋ ವಿನಯದಿ1 ಪರಮ ಪುರುಷನೆ ಪುಣ್ಯ ಶ್ಲೋಕನೆ ದುರುಳ ದೈತ್ಯರ ದಲ್ಲಣ ಮರಿಯಲೀಸದೆ ನಿನ್ನ ಚರಣ ಸ್ಮರಣೆ ಒದಗಿಸೊ ವದನಕೆ 2 ವಂದನೆಯು ಗೋವಿಂದ ಗೋಪಾಲಾ ಮಂದರಧರ ಮಾಧವಾ ಇಂದು ವಿಜಯವಿಠ್ಠಲ ನಿನ್ನ ಸಂದರ್ಶನವ ಕೋರುತಾ 3
--------------
ವಿಜಯದಾಸ
ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ 1 ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ 2 ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ 3 ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನೋಡು ನೋಡು ಬ್ರಹ್ಮವ ಮುಕ್ತನೆನೋಡು ನೋಡು ಬ್ರಹ್ಮವನೋಡು ನೋಡು ಬ್ರಹ್ಮವನ್ನುಗೂಢವಲ್ಲ ಎದುರಿಲ್ಲದೆಆಡಲಿಕ್ಕೆ ನಾಲಗಿಲ್ಲ ಸರ್ವರೂಪದಲ್ಲಿದೆ ಪ ಸ್ತ್ರೀಯ ರೂಪಾಗಿದೆ ಪುರುಷ ರೂಪಾಗಿ ಇದೆಸ್ತ್ರೀಯು ಅಲ್ಲ ಪುರುಷನಲ್ಲ ಅಹುದು ಅಹುದು ಅಹುದು ಅಲ್ಲ 1 ಸತಿಯು ಪತಿಯು ಆಗಿ ಇದೆಸುತರು ಸೊಸೆಯು ಆಗಿ ಇದೆಅತಿ ಬಳಗವಾಗಿ ಇದೆ ಎಲ್ಲ ವೇಷ ಹಾಕಿ ಇದೆ2 ಎಲ್ಲವಾಗಿ ಆಡುತಿದೆಎಲ್ಲವಾಗಿ ಪಾಡುತಿದೆಎಲ್ಲವಾಗಿ ಚಿದಾನಂದ ಬ್ರಹ್ಮವೀ ಪರಿಯಲಿದೆ 3
--------------
ಚಿದಾನಂದ ಅವಧೂತರು
ನೋಡು ಮನವೆ ನಿನ್ನೊಳಾಡುವ ಹಂಸ ಇಡಾಪಿಂಗಳ ಮಧ್ಯನಾಡಿವಿಡಿದು ಧ್ರುವ ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ ಅನಾಹತ ಹೃದಯಸ್ಥಾನವ ಸಾಧಿಸಿ ನೋಡುವದು ವಿಶುದ್ಧವ 1 ಭೇದಿಸಿ ನೋಡುವದಾಜ್ಞಾಚಕ್ರ ದ್ವಿದಳ ಸಾಧಿಸುವದು ಸುಖ ಸಾಧುಜನ ಅಧರದಲಿಹ್ಯ ತಾ ಆಧಿಷ್ಠಾನವ ನೋಡು ಆಧಿಪತಿ ಆಗಿಹಾಧೀನ ದೈವವ 2 ಮ್ಯಾಲಿಹ್ಯ ಬ್ರಹ್ಮಾಂಡ ಸಹಸ್ರದಳ ಕಮಲ ಹೊಳೆಯುತಿಹ ಭಾಸ್ಕರ ಪ್ರಭೆಯ ಕೂಡಿ ಮೂಲಸ್ಥಾನದ ನಿಜ ನೆಲೆ ನಿಭವ ನೋಡುವ ಬಾಲಕನೊಡೆಯ ಮಹಿಪತಿ ಸ್ವಾಮಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡು ಮನವೆ ನಿನ್ನೊಳಾತ್ಮನ ನೋಡು ಮನವೆ ಧ್ರುವ ಸಾಧುಸಂಗವ ನೀ ಮಾಡಿ ಭೇದ ಬುದ್ಧಿಯ ಹೋಗಾಡಿ ಆದಿತತ್ವವ ನೀ ನೋಡಿ ಸದಮಲಾನಂದ ಕೂಡಿ1 ಕಾಮಕ್ರೋಧವ ಕಳೆದು ಮಮತಾ ಮಾಯವನಳಿದು ತಾಪ ತೊಳೆದು ಶಮದಮಾದಿ ತಿಳಿದು 2 ನಾನು ನೀನೆಂಬುದು ನೀಗಿ ಜ್ಞಾನದಿಂದ ಗುಪ್ತನಾಗಿ ಭಾನುಕೋಟಿತೇಜನಂಘ್ರಿ ಬೆರೆದು ನಿಶ್ಚಿಂತನಾಗಿ 3 ಅವಿದ್ಯುಪಾಧಿಯ ಜರಿದು ಮೂವಿಧ ಮದ ಮುರಿದು ಪವಿತ್ರ ಪ್ರಣವರಿದು ಸುವಿದ್ಯ ಸುಖಬೆರೆದು 4 ಬಾಹ್ಯಾಂತ್ರದೊಳಿಹ ಪೂರ್ಣ ಮಹಾಗುರುನಿರಂಜನ ಇಹ ಪರತ್ರ ಸಾಧನ ಮಹಿಪತಿ ಅಂತರಾತ್ಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ | ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ | ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1 ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ | ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2 ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು ಅವಗು ಸುವಾಸನೆಯು ಪರಿಮಳ ಲಿಂಗಗ 3 ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡುವ ಬನ್ನಿ ಮುರಳೀಧರನ್ನ ಪ ಪಾಡುತ ಕುಣಿ ಕುಣಿದಾಡಿ ಕೊಂಡಾಡುತ ಅ.ಪ ಮನೆಕೆಲಸಗಳಿಗೆ ಕೊನೆ ಮೊದಲಿಲ್ಲವು ನೆನೆದರೆ ಬೇಸರ ಮನೆಗಳಂತಿರಲಿ 1 ಪತಿಗಳ ಸೇವೆ ಶ್ರೀಪತಿಯನೆ ಒಲಿಸಲು ಅತಿ ಸುಲಭದಲಿರೆ ಪತಿಗಳಂತರಲಿ 2 ಬಾಲೆಯರಾದರೆ ಲಾಲಿಸುವನು ಬಲು ಏಳಿರೇ ಎಮ್ಮಯ ಬಾಲರಂತಿರಲಿ 3 ಪರಪುರುಷನ ಕೂಡಿ ದುರಿತಗಳೆಲ್ಲವ ತೊರೆಯುತ ಮೈಗಳ ಮರೆಯುವ ಮುದದಿ 4 ಬಂಧುಗಳೆಂದೆಮ್ಮ ಬಂಧನ ಸಾಕಮ್ಮ ಚಂದದಿ ಪ್ರಸನ್ನ ನಂದಕುಮಾರನ 5
--------------
ವಿದ್ಯಾಪ್ರಸನ್ನತೀರ್ಥರು
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ. ಬೇಡಿಕೊಳ್ಳುವ ನಾವು ಅ.ಪ. ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ 1 ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ 2 ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ 3 ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] 4 ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ 5 ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ 6 ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ 7
--------------
ಯದುಗಿರಿಯಮ್ಮ
ನೋಡೆ ಕಣ್‍ದಣಿಯಾ ಪ ಪಾಡುವೆ ಪೊಗಳುವೆ ನೋಡುತ ನಲಿಯುವೆ ನೋಡೆ ಕಣ್‍ದಣಿಯಾ ಅ.ಪ ನೋಡೆ ಕಣ್‍ದಣಿಯಾ ನೋಡೆ ಕಣ್‍ದಣಿಯಾ 1 ನೋಡೆ ಕಣ್ ದಣಿಯಾ ನೋಡೆ ಕಣ್ ದಣಿಯಾ 2 ನೋಡೆ ಕಣ್ ದಣಿಯಾ ನೋಡೇ ಕಣ್ ದಣಿಯಾ 3 ನೋಡೆ ಕಣ್‍ದಣಿಯಾ ನೋಡೇ ಕಣ್ ದಣಿಯಾ 4 ನಾರದವಂದ್ಯನ ನೀರಜಪಾದಕೆ ಮಾಡೆ ವಂದನೆಯ ನೀರಜನೇತ್ರ ಮಾಂಗಿರಿಯ ರಂಗಯ್ಯನ ಪಾಡೆ | ಮನದಣಿಯಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೋಡೆ ದಯದಿ ಶಿರಿ ನಿನ್ನ ಮಡದಿ ಪ ನೋಡಿ ನೀ ದಯದಿ ನೀಡು ಕರುಣ ದಯ- ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ. ಮಾಮನೋಹರ ನೀ ಪ್ರೇಮದಿಂದಲಿ ಬಂದ- ಜಾಮೀಳನ ಪೊರದಾ ಶಾಮಸುಂದರನೇ1 ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ ತಾರಿಸಬೇಕೆಂದು ಶೇರಿದೆ ನಿನ್ನನ್ನು 2 ಮರೆಯುವುದುಚಿತವೆ ಶಿರಿಯ ರಮಣ ನೀನು ತರಳ ಧ್ರುವನನ್ನ ಪೊರೆದಂಥ ದೇವ ನೀ 3 ಆರ್ತರಕ್ಷಕ ನೀನು ಪಾರ್ಥನಾ ಸೂತನು ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ 4 ಸರಸಿಜನಾಭನಾದ ಸಿರಿವತ್ಸಾಂಕಿತ ನೀನು ಮರೆಯಬ್ಯಾಡೆನ್ನಯ ಮೊರೆಯನು 5
--------------
ಸಿರಿವತ್ಸಾಂಕಿತರು
ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತÀ ಲ್ರೇವ ಲೇಶನ ? ಪಾಡುತಿರೆ ಕೃಷ್ಣಾತೀರದ್ವಾಸನ ಮಾಡೊ ಮಹಾತ್ಮರೆಂದೆನಿಸೊ ದಾಸರ ಜೋಡು ಪಾದಂಗಳಿಗೆ ವಂದನೆ ಪ ಅಂಜನೆಯಲ್ಲುದಿಸಿ ಕೌಸಲ್ಯಾ- ಕಂದನಂಘ್ರಿಕಮಲ ಸೇವೆಗೆ ಅಂಗದ ಮೊದಲಾದ ಕಪಿಗಳ ಸಂಗ ಬಿಟ್ವಾರಿಧಿಯನ್ಹಾರುತ ಭಂಗ ಬಡಿಸುತ ರಾವಣನ ಪುರ ಮಂಗಳಾರತಿ ಮಾಡಿ ಜಾನಕಿ ಗುಂಗುರವನಿಟ್ಟೆರಗಿ ರಾಮರಿ ಗಂಗನೆಯ ವಾರ್ತೆಗಳನರುಹಿದೆ1 ಕುಂತಿಸುತನಾಗ್ಯುದಿಸಿ ಬ್ಯಾಗನೆ ಪಂಥಮಾಡುತ ಕೌರವರ ಕುಲ- ಕಂತಕನು ನಾನೆಂದು ರಣದೊಳು ನಿಂತು ಗದೆ ಹಾಕವರ ಸವರುತ ಅಂತರಂಗದಿ ಹರಿಯ ದಿವ್ಯಾ- ನಂತ ಗುಣಗಳ ತಿಳಿದು ದ್ರೌಪದೀ- ಕಾಂತನೆನಿಸಿ ತಾ ಕರುಣನಿಧಿಗೇ- ಕಾಂತ ಭಕ್ತನೆಂದಿನಿಸಿದಾತನು 2 ಮಧ್ಯಗೇಹಭಟ್ಟರಲ್ಲಿ ಮಗನಾ- ಗಿದ್ದ ಸುಜನರಭೀಷ್ಟದಾಯಕ ಗೆದ್ದು ಮಾಯಾವಾದಿಗಳನೆ ಪ್ರ ಸಿದ್ಧಿನೆನಿಸಿದೆ ಸರ್ವಲೋಕದಿ ಶುದ್ಧ ಜ್ಞಾನಾನಂದತೀರ್ಥರು ಮಧ್ವಮತದ ಬಿರುದನೆತ್ತಿದ ಪದ್ಮಪತಿ ಭೀಮೇಶಕೃಷ್ಣಗೆ ಪರಮಭಕ್ತನೆಂದೆನಿಸಿದಾತನು 3
--------------
ಹರಪನಹಳ್ಳಿಭೀಮವ್ವ
ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ಪ ಆ ಲಂಕೆಯ ಬೆಂಕಿಗೆ ಆಹುತಿ ಇತ್ತ 1 ಹೃದಯವ ಹರಿಸಿದನವ ಮಾಡಿದ ಹದನವ ತೋರಿಸೋ ಬುಧಜನ ನಮಿತನೆ 2 ದ್ವಾಪರ ಯುಗದಲಿ ಪರಮಾತ್ಮನ ಪೂಜಿಸಿ ತೋರಿಸಿದಂಥ ಅಪಾರ ಮಹಿಮನೆ 3 ಕಲಿಯುಗದೊಳು ಮಹಾ ಖಳಮತಗಳನೆಲ್ಲಾ ನಿನ್ನ ಸರಳಿಗಳಿಂದೊರಿಸಿದೆ ಅಕಳಂಕ ಮಹಿಮನೆ 4 ತಂದೆ ಹಸನ್ಮುಖವಿಠಲನ ಚಂದದಿಂದಲಿ ಪಾಡುವ ಸುಂದರಮೂರುತಿಯೆ 5
--------------
ಮಹಾನಿಥಿವಿಠಲ
ನೋಡೋರು ಕೃಷ್ಣನ ನಾಡಿನ ಪ್ರಜರೆಲ್ಲಮೂಡಲಗಿರಿವಾಸನ ಬೇಡಿದವರಗಳ ನೀಡುವ ದಯದಿಕೊಂಡಾಡುವರು ವೆಂಕಟರಾಯನ ಪ. ಶ್ರೀನಿವಾಸನ ಕೋಟಿ ಆನೆ ಶೃಂಗರಿಸ್ಯಾವ ನಾನಾರತ್ನಗಳಿಂದ ಭಾನು ಕೋಟಿ ತೇಜ ತಾನು ನಿರ್ಮಿಸಿದನು ಏನೆಂಬೆÉನು ಛಂದ 1 ಚಿತ್ರ ವಿಚಿತ್ರದ ಮುತ್ತಿನ ಪಲ್ಲಕ್ಕಿ ರತ್ನ ಮಾಣಿಕ ಹಚ್ಚಿಚಿತ್ತ ಜನೈಯನ ಪ್ರತ್ಯೇಕ ವಿವರಿಸಿ ಅರ್ಥಿಹೇಳುವೆನಂದ2 ಎಂಟು ದಿಕ್ಕಿಗೆ ಒಪ್ಪೊಒಂಟಿ ಸಾಲಗಳು ವೈಕುಂಠಪತಿಯ ಮುಂದೆ ಕಂಠಿ ಚಿತ್ರವÀ ಬರೆಸಿ ಕರುಣಿ ವೆಂಕಟದಿವ್ಯಗಿಲೀಟು ವಸ್ತ್ರಗಳ ಹೊಚ್ಚಿ 3 ಹೇಳಲು ವಶವಲ್ಲ ಕಾಲೊಳುಆಭರಣವ ಭಾಳ ಮುತ್ತಿನ ಕುಚ್ಚುವ್ಯಾಳಾಶಯನನು ಅವರಿಗೆ ಹೇಳಿನೇಮಿಸಿದನು ಆಳುಮಂದಿಯು ಮೆಚ್ಚ4 ವಾಹನ ಸುತ ಸತಿಯರಿಗಿತ್ತು ಅತಿ ಸೇವ್ಯರು ಮೆಚ್ಚಿ5 ಕೆಂಚೆ ಕೃಷ್ಣನ ರಥಕೆ ಗೊಂಚಲ ಮುತ್ತುಗಳೆಷ್ಟಮಿಂಚುವ ಸೂರ್ಯನಂತೆ ಮುಂದೆ ನೊಡುಣು ಬಾರೇಚಂಚಲಾಕ್ಷಿ ಕೇಳೇ ವಿರಂಚಿ ಬೆರಗಾಗೋನಂತೆ6 ಚದುರ ರಾಮೇಶನ ಕುದುರೆ ಸಾಲುಗಳಿಗೆ ಅದ್ಬುತ ರತ್ನಗಳೆ ಮದನಜನಯ್ಯನುಮುದದಿ ನಿರ್ಮಿಸಿದನು ಸುದತೆ ಹೇಳುವೆ ಕೇಳೆ 7
--------------
ಗಲಗಲಿಅವ್ವನವರು