ಒಟ್ಟು 4540 ಕಡೆಗಳಲ್ಲಿ , 127 ದಾಸರು , 2949 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೇವಕಗೆ ದಯಮಾಡಲೊ ಹರಿ ದೇವ ನಿಮ್ಮ ಪಾವನಪಾದ ಭಾವದಿಂ ನಮಿಸಿ ಪಾವನನಾಗ್ವೆ ಪ ಕಲ್ಲನು ನಲ್ಲೆಯ ಮಾಡಿದ ಪಾದ ಕಳ್ಳನ ರಿಸಿಯೆಂದೆನಿಸಿದ ಪಾದ ನಲ್ಲೆಯ ಬೆಂಬಲ ನಿಂತಿರ್ದ ಪಾದ ಖುಲ್ಲ ಪೂತನಿಯ ಮೆಟ್ಟಿದ ಪಾದ1 ಮಂಕು ಕಾಳಿಂಗನ ತುಳಿದ ಪಾದ ಶಂಖಾಸುರನ ಒದೆದ ಪಾದ ಜಿಂಕೆಯನು ಹಿಂಬಾಲಿಸಿದ ಪಾದ ಪಾದ 2 ಭೂಮಿ ಓರಡಿ ಮಾಡಿದ ಪಾದ ಭಾಮೆ ದೃಢದಿ ಪೂಜಿಸಿದ ಪಾದ ಪ್ರೇಮದಿಂ ಭಕುತರನುದ್ಧರಿಪ ಪಾದ ಸ್ವಾಮಿ ಶ್ರೀರಾಮ ತವ ಕೋಮಲಪಾದ 3
--------------
ರಾಮದಾಸರು
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಸೇವಿಸುವೆ ನಿನ್ನನು ಶ್ರೀಪಾದರಾಯ ಪ ಭಾವವಿರತಿ ಕೊಡು ಭಾಗವತಗೇಯಾ ಅ.ಪ ದಾಸಕೂಟವೆಂಬುದ ಧರೆಯೊಳು ನಿಲಿಸಿದೆ 1 ಸುವರ್ಣವರ್ಣತೀರ್ಥಸುತ ಸುಜನಾಪ್ತ ಶ್ರೀವರ ನಾಮಾಮೃತದಾತ ಸುಮಿತ್ರ 2 ಪತಿ ಗುರುರಾಮವಿಠಲಗೆ ಪ್ರಿಯದಾಸ 3
--------------
ಗುರುರಾಮವಿಠಲ
ಸೇವೆ ಸುಖವೋ ಶ್ರೀ ಹರಿಸೇವೆ ಸುಖವೊ ಸೇವೆ ಗಿಂದಧಿಕ ಸುಖ ಸಾಯೋಜ್ಯಮುಕುತಿಪದದೊಳಿಲ್ಲ ಧ್ರುವ ಇಂದುಕುಲದೀಪಕನ ಎಂದೆಂದು ಬಿಡದೆ ಭಾವಲಿಟ್ಟು ಮೂರ್ತಿ ಸ್ಮರಿಸುವ 1 ದಾಸನಾಗಿ ವಾಸುದೇವನ ಪಾದಕಮಲಾರಾಧಿಸುವ 2 ವಿಹಿತಕಿಂತ ವಿಹಿತದೋರಿ ಕುಡುವ ಸ್ವಹಿತವೆಂದು ಕೀರ್ತಿಯನೆ ಕೊಂಡಾಡುತಿಹ್ಯ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೋತುಹೋದೆ ನಾನು ಶ್ರೀಹರಿ ಸೋತುಹೋದೆ ನಾನು ಪ ಪತಿತ ಪಾವನ ಮೂರ್ತಿಯ ಪ್ರೀತಿಯ ಸತತ ಪಡೆಯಲು ಕೆಲಸವ ಮಾಡಿ ಅ.ಪ. ನಿತ್ಯದಿ ಭಜಿಸುತ ಹರಿನಾಮವನು ಸತ್ಯಧರ್ಮದಿ ನಡೆಯುತಲೀ ಭ್ಯತ್ಯರಂದದಿ ಸೇವೆಯ ಮಾಡುತ ನಿತ್ಯನೆನಾ ಧನ್ಯಾತ್ಮನಾಗದೆ 1 ಪರಮಾತ್ಮನ ಕೀರ್ತನೆಯನು ಮಾಡುತ ಹರುಷದಿ ದಾಸನಾಗುತಲೀ ಹರಿಯ ಸಾಸಿರ ನಾಮವ ಸ್ಮರಿಸುತ ಶರಣಾಗತ ಪರಿಪಾಲನ ನೋಡಿದೆ 2 ಹೊನ್ನು ಹÉಣ್ಣು ಮಣ್ಣಿಗೋಸುಗ ಜನ್ಮವ ಮೋಹದಿ ನವಿಸದಲೇ ಚಿನ್ಮಯ ರೂಪನ ಪೂಜೆಯ ಮಾಡುತ ಚನ್ನಕೇಶವ ಪಾದವ ಸೇರದೆ 3
--------------
ಕರ್ಕಿ ಕೇಶವದಾಸ
ಸೋಮ ಸುರ್ಯೋಪರಾಗದಲಿ ಗೋಸಹಸ್ರಗಳ ಭೂಮಿದೇವರಿಗೆ ಸುರನದಿಯ ತಟದಿ ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು ಈ ಮಧ್ವನಾಮ ಬರೆದೋದಿದವರಿಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರು ಸ ರ್ವತ್ರದಲಿ ದಿಗ್ವ್ವಿಜಯವಹುದು ಸಕಳ ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು ಸೂತ್ರನಾಮಕನ ಸಂಸ್ತುತಿ ಮಾತ್ರದೀ 2 ಶ್ರೀ ಪಾದರಾಯರು ಪೇಳಿದ ಮಧ್ವ ನಾಮ ಸಂ ತಾಪ ಕಳೆದಖಿಳ ಸೌಖ್ಯನೀವುದೂ ಶ್ರೀಪತಿ ಜಗನ್ನಾಥವಿಠಲನ ತೋರಿ ಭವ ಕೂಪಾರದಿಂದ ಕಡೆಹಾಯಿಸುವುದು 3
--------------
ಜಗನ್ನಾಥದಾಸರು
ಸೌಪರ್ಣಿ ಪತಿ ಪಕ್ಷಿಪದ | ಪದ್ಮಕ್ಕೆ ಶರಣೆಂಬೆ | ಸದ್ಮದೊಳಗೆ ಹರಿಪದ್ಮಪದವ ತೋರು || ಕರುಣವ ನೀ ಬೀರು ಪ ನಿತ್ಯ ಹರಿಯ ಸ್ಮøತಿಯಿತ್ತು ಕಾವುದೆನ್ನ | ಬಂದ ಪ್ರಪನ್ನನ ಅ.ಪ. ಮೋದ ಪಾದ ತೋರಿಸು 1 ಯೋನಿ ಬರೆ ಭಯ | ವೇನು ಹರಿಸ್ಮøತಿ | ಸಾನು ಕೂಲಿಸಮ್ಮ 9 ಪಾಪಕಂಜೆ ದ | ಯಾ ಪಯೋನಿಧಿ | ಗೋಪ ಗುರು ಗೋ | ವಿಂದ ವಿಠಲನರೂ¥5Éೂೀರೆ ಹೃ | ತ್ಕೂಪದೊಳು ಭವ ಕೂಪ ದಾಟ5 ಸೌಪರ್ಣಿದೇವಿ 3
--------------
ಗುರುಗೋವಿಂದವಿಠಲರು
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ. ತರಣಿಕೋಟಿಭಾಸುರ ಶ್ರೀನಾರಾಯಣನ 1 ಕಾಲನವರ ಕಂಡು ಬಾಲನ ಕರೆದಗೆ ಸಾಲೋಕ್ಯವಿತ್ತ ಶ್ರೀನಾರಾಯಣನ 2 ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು ನರಮೃಗೇಂದ್ರನಾಗಿ ಪೊರೆದ ನಾರಾಯಣನ 3 ಮಾತೆಯ ಸವತಿಯ ಮಾತಿಗಾಗಿ ಬಂ- ದಾತನ ಕಾಯ್ದ ಶ್ರೀನಾಥ ನಾರಾಯಣನ 4 ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ ಬಸವಳಿದಿಹನ ರಕ್ಷಿಸಿದ ನಾರಾಯಣನ 5 ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ- ಗಾದರಿಸಿ ರಕ್ಷಿಸಿದಾದಿನಾರಾಯಣನ 6 ಮಾರಜನಕ ರಮಾರಮಣ ಲಕ್ಷ್ಮೀ- ನಾರಾಯಣನ ಪಾದಾರವಿಂದಯುಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ಸ್ಮರಿಸಿ ಬದುಕಿ ಸಾರ್ಥಕೆನಿಸಿ | ವ್ಯರ್ಥ ಆಯು ಕಳೆಯದಂತೆಕರುಣಿಯಿಂದ ಶರಣರನ್ನ | ಪೊರೆವ ಹರಿಯನು ಪ ಪಾದ | ದ್ವಿಜ ಸುಧಾಮಗೊಲಿದ ಪಾದಭಜನೆ ಮಾಳ್ಪ ಸಾಧು ಜನರ | ನಿಜದಿ ಪೊರೆಯುವಾ 1 ಭೂಮಿಯಳೆದು ಬಲಿಯ ತುಳಿದ | ಸುಮನದಿಂದ ಬಾಗಿಲಕಾಯ್ದಭೂಮಿರಮಣನಾದ ಹರಿಯ | ಭೂಮಗುಣನ ಭವ್ಯ ಪಾದವಾ 2 ಸತಿ ಪಾದ | ವನ್ನೂ ಬಿಡದೆ ಸತತಾ 3 ರಕ್ಕಸಾರ ಸೊಕ್ಕ ಮುರಿದ | ತರ್ಕಕೆ ಗೋಚರಿಸಲೊಲ್ಲಪಕ್ಷಿವಾಹ ಪನ್ನಗಶಯನ | ಮಕ್ಕಳ ಮಾಣಿಕ್ಯ ಪಾದವ 4 ಸುರರು ತಮ್ಮ ಹೃದಯದಲ್ಲಿಹರುಷದಿಂದ ಪೂಜಿಪಾ | ಗುರು ಗೋವಿಂದ ವಿಠಲನಾ 5
--------------
ಗುರುಗೋವಿಂದವಿಠಲರು
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ ನಿರುತದಿಂದ ಇಷ್ಟಫಲವ ನೀಡೋ ವರಗಳ ಬೇಡಿ ಪ ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತ ಶ್ರೀದೇವಿರಮಣನ ಮುದ್ದು ಪಾದಾಂಬುಜವ ಪೂಜಿಸುವರ 1 ಉತ್ತಮವಾಗಿದ್ದ ದಿವ್ಯ ಛತ್ರ ವಿಜಯತೀರ್ಥ ನಿರ್ಮಿಸಿ ನಿತ್ಯದಲಿ ಮೃಷ್ಟಾನ್ನದಾನ ವಿಸ್ತಾರವನೆ ಪೇಳಲೊಶವೆ 2 ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿ(?) ಭಯಭೀತಿಗಳನ್ನೆಲ್ಲ ಬಿಟ್ಟೋಡಿಸಿ ತೀರ್ಥ ಅಂಗಾರದಲಿ ಸಮಸ್ತರ ಮಹಿ(ಮೆ)ಯ ನೋಡಿ 3 ಸಂತಾನ ಸಯುತದ ಫಲವ ನಿಂತು ಕೊಡುತ ಮಂತ್ರಾಕ್ಷತೆಯ ಗ್ರಂಥ ಪದಸುಳಾದಿಯ ಲಕ್ಷ್ಮೀಕಾಂತಗೆ ಮಾಡರ್ಪಿಸುವರ 4 ಹರಿಯ ದಿವ್ಹ್ಯಾಸಿಕÉಯ ನಾಮ ಗುರು ವಿಜಯರಾ- ಬಿಡದೆ ಭಜನೆ ಮಾಡುವವರ5
--------------
ಹರಪನಹಳ್ಳಿಭೀಮವ್ವ
ಸ್ಮರಿಸಿ ಬೇಡುವೆ ಗುರುವರರ ಪಾದ- ಸರಸಿಜ ಸ್ಮರಿಪರಘುಪರಿಹರಿಸುವರಪ ಇಂದಿರೇಶನ ಮಹಿಮೆ ಬಲ್ಲ ಭಕ್ತ ಸಂದಣಿಯೊಳು ಇವರಿಗೆ ಸಮರಿಲ್ಲ ತಂದೆ ವೆಂಕಟೇಶ ವಿಠ್ಠಲನೆಂದು ಸಂಭ್ರಮ ಪಡುವ ಶಿಷ್ಯರಿಗೆಣೆಯಿಲ್ಲ 1 ಸಿರಿವೆಂಕಟೇಶನ್ನ ಸ್ಮರಿಸಿ ಬಹು ಪರಿಯಿಂದ ಪಾಡಿ ಕೊಂಡಾಡಿ ಸ್ತುತಿಸಿ ಗಿರಿಯ ವೆಂಕಟನನ್ನು ಭಜಿಸಿ ನಮ್ಮ ಉರಗಾದ್ರಿವಾಸ ವಿಠ್ಠಲದಾಸರೆನಿಸಿ2 ಸದ್ವೈಷ್ಣವರ ಸುರಧೇನು ಸರ್ವ ರುದ್ಧಾರವಾಗಲು ಜನಿಸಿದರಿನ್ನು ಬುದ್ಧಿ ಶಿಷ್ಯರಿಗೊರೆದರಿನ್ನು ತಂದೆ ಮುದ್ದು ಮೋಹನ್ನ ವಿಠ್ಠಲದಾಸರನ್ನು 3 ಸುಂದರ ಮೂರ್ತಿಯ ತಂದು ದುರ್ಗ ಮಂದಿರದಲಿ ಸ್ಥಾಪಿಸಿದರೊ ಅಂದು ಛಂದದಿ ಸೇವಿಸಿರೆಂದು ಶಿಷ್ಯ ಮಂಡಲಿಗಳಿಗೆ ಬೋಧಿಸಿದರೆಂತೆಂದು 4 ಕಳವಳ ಪಡುತಿಹೆನಲ್ಲ ಕಾಲ ಕಳೆದು ಹೋಗುತಲಿದೆ ಅರಿವು ಬರಲಿಲ್ಲ ಪರಮ ಭಕ್ತರ ಪರಿಯನೆಲ್ಲ ತಿಳಿವಕಮಲನಾಭ ವಿಠ್ಠಲನಲ್ಲದಿಲ್ಲ 5
--------------
ನಿಡಗುರುಕಿ ಜೀವೂಬಾಯಿ
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು
ಸ್ಮರಿಸಿರೊ ನಮ್ಮ ನರನ ಸಾರಥಿಯ ಪರಿಹರಿಸುವನು ತಾಪತ್ರಯ ವ್ಯಥೆಯ ಪ. ರಣಮಂಡಲದಲ್ಲಿ ಗುಣಗುವ ಕುಂತಿಯ ತನುಜನ ನೋಡುತ ವಿನಯದಿಂದ ಘನತತ್ವವನು ಪೇಳಿ ಅಣುಮಹದ್ಗತ ವಿಶ್ವ- ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ 1 ಸುರನದೀ ತನುಜನ ಶರದಿಂದ ರಕ್ತವ ಸುರಿವಂದ ತೋರಿ ಶ್ರೀಕರ ಚಕ್ರವ ಧರಿಸಿ ಓಡುತ ತನ್ನ ಚರಣ ಸೇವಕನೆಂಬ ಹರುಷ ತಾಳಿ ಬೇಗ ತಿರುಗಿ ಬಂದವನ 2 ವಿಜಯ ಸಾರಥಿಯಂದು ಭಜಿಸುವ ದಾಸರ ವಿಜಯ ಪೊಂದಿಸುವನಂಡಜ ರಾಜಗಮನ ಅಜ ಭವವರದ ಕಂಬುಜನಾಭ ಕಮಲೇಶ ಭುಜಗ ಧರಾಧೀಶ ಭಜನೀಯಪಾದನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1 ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2 ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು