ಒಟ್ಟು 1547 ಕಡೆಗಳಲ್ಲಿ , 102 ದಾಸರು , 1282 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಅನುದಿನ ಅ.ಪ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ 1 ಭಾಗವತಸು ತಿಳಿಸೆನ್ನ ಮನಕೆ ಜಿತ ಮನೋಜಾತ 2 ಪರಿಪಾಲಿಸಲು ಶಿವನೆ ರಾಜಿಸುವ ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ಪಾದ ಸುವಿಶಾಲ ಮಹಿಮನೇ 3 ನೀಡಿದೆಯೊ ಗೌತುಮ ಮನಮಂದಿರದಿ ಗೋ- ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ4 ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ5
--------------
ಕಾರ್ಪರ ನರಹರಿದಾಸರು
ಕರುಣಿಸು ಕಮಲಾಸನ ಮಾತಯೆ ನೀಂ ಕರಧೃತ ವರ ಕಮಲೆ ಪ ಶರಣವ ಪÉÇಂದಿಹೆ ಕರುಣದೊಳೀಕ್ಷಿಸು ವರದೆ ವರಲಕ್ಷ್ಮಿ ಅ.ಪ. ಕುಸುಮ ಧೂಪಾವಳಿಯಿಂದಲಿ ಸುಂದರಿ ಪೂಜಿಪೆನು ಬಂಧುರಗಾತ್ರಿಯೆ ಅಂದದೊಳೆನ್ನಯ ಮಂದಿರದೊಳಗಿಹುದು 1 ಶ್ರಾವಣ ಮಾಸದಿ ಭಾವಕಿ ನಿನ್ನನು ಭಾವದಿ ಭಾವಿಸುತ ತಾವಕ ಪಾದವ ಪ್ರೇಮದಿ ಪೂಜಿಪೆ ದೇವಿಯೆ ಒಲಿಯುವುದು 2 ಚಂದನಭೂಷಿತೆ ಸುಂದರ ಗಾತ್ರೆಯ ಮಂದಹಾಸಮೊಲಿಯೆ ಚಂದದ ಕಿಂಕಿಣಿಯಂದದರವದೊಳ್ ಬಂದು ದಯಂಗೆಯ್ಯೆ3 ಹರಿಮಾನಸ ಮೋಹದ ಪ್ರಾಣೇಶ್ವರಿ ಹರಸುತ ವರಗಳಿಂದ ವರಧೇನುನಗರ ವರಜನ ಪೋಷಿಣಿ ಕರುಣಾಕರೆ ವರದೆ4
--------------
ಬೇಟೆರಾಯ ದೀಕ್ಷಿತರು
ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರೆ ಕರೆ ಭವದೊಳು ಮುಳುಗಿರುವೆ ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ ಅಗಣಿತ ಮಹಿಮನೆ ಸುಗುಣಗಳನುದಿನ ಬಗೆ ಬಗೆ ಸ್ಮರಿಸುವ ಬಗೆ ಮರೆದು ಹಗಲಿರುಳೆನ್ನದೆ ನಿಗಮವೇದ್ಯನ ನಾಮ ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ 1 ಜನುಮ ಜನುಮದಲಿ ಜನಿಸಿ ಬರುವ ದು:ಖ ಕೊನೆಗಾಣದಾಗಿದೆ ಕರುಣಾನಿಧೆ ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ2 ನಾನು ನನ್ನದು ಎಂಬ ಹೀನವೃತ್ತಿಗಳಿಂದ ಹಾನಿಯಾಯಿತು ಆಯು ಶ್ರೀನಿಧಿಯೆ ಜ್ಞಾನಿಗಳೊಡನಾಡಿ ಮೌನದಿಂದಿರದಲೆ ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ 3 ರಂಗನ ಮೂರ್ತಿಯ ಕಂಗಳಿಂದಲಿ ನೋಡಿ ಭಂಗಗಳಳಿಯುವ ಹರಿದಾಸರ ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು- ಭವ ಭಂಗ ಬಿಡಿಸೆನ್ನದೆ4 ಪಾದ ಪೊಂದಿ ಭವದಘ ವೃಂದವ ಕಳೆಯುವನೆಂದೆನ್ನುತ ಬಂಧಕ ಮೋಚಕನೆಂದರಿಯದೆ ಭವ ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ5 ಪರಿ ಮೋಹ ಮಾತುಳಾಂತಕ ಕೃಷ್ಣ ಮಾತು ಮಾತಿಗೆ ಹರಿ ಹರಿ ಎನ್ನದೆ ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ 6 ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ ಕಮಲನಾಭ ವಿಠ್ಠಲ ವಿಠ್ಠಲ ಹರೇ ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು 7
--------------
ನಿಡಗುರುಕಿ ಜೀವೂಬಾಯಿ
ಕರೆವರು ಬಾ ಮನೆಗೆ ಶ್ರೀ ಕೃಷ್ಣ ಮೂರ್ಜಗಂಗಳಿಗೆ ರಾಜಾಧಿರಾಜ ಪ ರಾಜಿಸುವ ಸೋಜಿಗದ ಬಲು ಸೋಜಿಗದ ಮನೆಗೆ ಶ್ರೀ ಕೃಷ್ಣ ಅ.ಪ ಸಾರಸಲೋಚನೆ ಭೀಷ್ಮಕ ಕುವರಿ ನೂರು ವಿಧದ ಬಲು ಪರಿಮಳದ ಚಾರು ಕುಸುಮಗಳ ಹಾರವ ಪಿಡಿದು ಮಾರಜನಕ ನಿನ್ನ ಕೋರುವಳು 1 ಚಿತ್ತಜನಯ್ಯನ ಚಿತ್ತದ ರಾಣಿ ಯತ್ನದಿ ನಿನ್ನನು ಕರೆಸಿದಳು ಚಿತ್ರವಿಚಿತ್ರದ ಮುತ್ತುರತ್ನಗಳ ಉತ್ತಮ ಪೀಠಕೆ ದಯಮಾಡೊ 2 ಯದುಕುಲ ನಂದನ ನೀ ಬಾರೋ ಮಧುರಾನಾಥಾ ನೀ ಬಾರೋ ಮದಗಜಗಮನದಿ ಬಾರೊ ಪ್ರಸನ್ನ ವದನೆಯರಾರತಿ ಬೆಳಗುವರು3
--------------
ವಿದ್ಯಾಪ್ರಸನ್ನತೀರ್ಥರು
ಕಲಯಾಮಿ ಶ್ರೀನಿವಾಸಂ-ಕಲಭಾಷ ಮಿಂದುಹಾಸಂ ಪ ಕಮನೀಯಹೇಮ ಚೇಲಂ-ಕಮಲಾಲಯಾನುಕೂಲಂ ಕಮಲಾಭಿರಾಮ ಮಾಲಂ 1 ಸುಮಬಾಣ ಸುಂದರಾಂಗಂ-ಸುಮನನಾರ್ಪಿತಾಂತರಂಗಂ ನಮದಾರ್ತಿ ಸಂಗ ಭಂಗಂ 2 ಜಲಜಾಪ್ತ ಪತ್ರನೇತ್ರಂ-ಜಲದೋಪಮಾನ ಗಾತ್ರಂ ಜಲಜಾಪ್ತ ಪುತ್ರ ಮಿತ್ರಂ 3 ಕುಂದೋಪಮಾನ ರದನಂ-ಚಂದ್ರೋಪಮಾನ ವದನಂ ಬೃಂದಾರಕಾರಿ ದಮನಂ 4 ಅಜವಂದ್ಯ ಚರಣಕಮಲಂ-ನಿಜ ಸೌಖ್ಯ ಕರಣ ಕುಶಲಂ ಭಜನೀಯ ವರದ ವಿಠಲ-ಕಲಯಾಮಿ ಶ್ರೀನಿವಾಸ 5
--------------
ಸರಗೂರು ವೆಂಕಟವರದಾರ್ಯರು
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥಚರಣಂ ಕಲಿಕಲಹಾಪಹ ಕಮನೀಯ ಚರಣಂ ಅ.ಪ ಮಸ್ತಕ ನಿಹಿತ ಮಹಾರ್ಹ ಕಿರೀಟಂ ಕಸ್ತೂರೀ ತಿಲಕಿತ ದಿವ್ಯಲಲಾಟಂ ನಿಸ್ತುಲ ಮದಮಾಂಚಿತ ಜೂಟಂ ಕೌಸ್ತುಭ ಶೋಭಿತ ಮಣಿಸರ ಕೂಟಂ 1 ಸುಮಶರಕೋಟಿ ಮನೋಹರ ವೇಷಂ ಕಮಲಾಸಖ ಭಾ ಭರಣ ವಿಭೂಷಂ ಸುಮಹಿತಭಣಿತ ಸದೃಶ ಮಂಜುಭಾಷಂ ವಿಮಲಹೃದಯ ಸೇವಕ ಪೋಷಂ 2 ಶ್ರೀರಮಣೀಪರಿಶೋಭಿತಗಾತ್ರಂ ವಾರಿಜಭವಕೃತ ವಿವಿಧ ಸ್ತೋತ್ರಂ ಸಾರಸದಳ ವಿಸ್ತಾರ ಸುನೇತ್ರಂ ನಾರದಮುನಿಕೃತ ಪೂಜಾಪಾತ್ರಂ 3 ಶರದಿಂದುಮಂಡಲ ಸುಂದರವದನಂ ವರಕುಂದಕುಟ್ಮಲ ಸನ್ನಿಭ ರದನಂ ಕರಸಂದರ್ಶಿತ ವೈಕುಂಠಸದನಂ ತರಣಿ ಘೃಣಿ ರುಚಿದಂತ ಹಸನಂ 4 ತುರುಣ ಶ್ರೀತುಳಸೀ ಶೋಭಿತಮಾಲಂ ಸರಸಿಜಗರ್ಭರುಚಿರ ದಿವ್ಯಚೇಲಂ ವರವ್ಯಾಘ್ರಭೂಧರ ವಿಹರಣಶೀಲಂ ವರವಿಠಲಮಖಿಲಾಗಮ ಪಾಲಂ 5
--------------
ವೆಂಕಟವರದಾರ್ಯರು
ಕಲುಷಗಳ ಪರಿಹರಿಸು ಕಲುಷಕಂಠಾ ಪ ಸುಮ ಶರಗಳಿಂದಲಿ ಬೆಂದು ನೊಂದು ತವ ದ್ವಂದ್ವಗಳಿಗಭಿವಂದಿಸುವೆನೊ ರಾಜ ಅ.ಪ. ತಾಪಗಳಿಗೊಳಗಾಗಿ ಪರರ ತಾಪವನು ಕಾಣದೆ ಆಲಾಪನೆಯ ಮಾಡುತಲಿ ಕೂಪದೊಳು ಪೋಪ ನೋಡುವೆನಯ್ಯ ಜೀಯ್ಯಾ 1 ಬರುವದೆಂತೆಂದು ಬಯಸಬಾರದ ವಿಷಯಗಳ ಬಯಸಿ ಭವದೊಳಗೆ ಬವಣೆ ಬಡುವೆನು ಪರಿಹರಿಸು ಭವಕೆ ಭೀಮಾ 2 ಕಾಮನಯ್ಯನೆ ಕೇಳು ಕಾಮಗಳ ಪೂರೈಸು ಕಾಮಿನಿಯರಾ ಕಂಡು ಮೋಹಿಸಿದ ಕಾರಣದಿ ಪೂರೈಸು ಮನಾಧಿಪ ತಂದೆವರದಗೋಪಾಲವಿಠಲನ ದೂತಾ 3
--------------
ತಂದೆವರದಗೋಪಾಲವಿಠಲರು
ಕಲೆಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥ ಚರಣಂ ಕಲಿಕಲುಹಾಪಹ ಕಮನೀಯ ಚರಣಂ ತಿಲಕಿತ ದಿವ್ಯಲಲಾಟಂ ಕೌಸ್ತುಭ ಶೋಭಿತ ಮಣಿಸರಕೂಟಂ 1 ಸುಮಶರಕೋಟಿ ಮನೋಹರವೇಷಂ ಕಮಲಾಸಖಭಾಭರಣ ವಿಭೂಷಂ ಸುಮಹಿತಭಣಿತ ಸದೃಶಮಂಜು ಭಾಷಂ ವಿಮಲ ಹೃದಯ ಸೇವಕ ಪೋಷಂ2 ವಾರಿಜ ಭವಕೃತವಿವಿಧ ಸ್ತೋತ್ರಂ ಸಾರಸದಳ ವಿಸ್ತಾರಸುನೇತ್ರಂ ನಾರದ ಮುನಿಕೃತ ಪೂಜಾಪಾತ್ರಂ 3 ಶರದಿಂದು ಮಂಡಲ ಸುಂದರ ವದನಂ ವರಕುಂದ ಕುಟ್ಮಲ ಸನ್ನಿಭರದನಂ ಕರಸಂದರ್ಶಿತ ವೈಕುಂಠ ಸದನಂ ತರುಣ ತರಣಿಘೃಣಿ ರುಚಿದಂತ ಹಸನಂ 4 ತರುಣ ಶ್ರೀ ತುಳಸೀ ಶೋಭಿತ ಮಾಲಂ ಸರಸಿಜಗರ್ಭ ರುಚಿರ ದಿವ್ಯ ಚೇಲಂ ವರವ್ಯಾಘ್ರಭೂಧರ ವಿಹರಣ ಶೀಲಂ ವರದ ವಿಠಲ ಮಖಿಲಾಗಮಪಾಲಂ 5
--------------
ಸರಗೂರು ವೆಂಕಟವರದಾರ್ಯರು
ಕವಿ ಅಭಯ ಬೇಡೋ ಸುಮನ ಸುಂದರ ಶ್ರೀ ಹರಿಯ ಪ್ರಿಯ | ಅಭಯ ಬೇಡೋ ಸುಮನ ಸುಂದರ ಪ ಅಭಯ ಬೇಡೋ ಪ್ರಿಯ ರಮಾವಿಭು ಜಗನ್ನಿವಾಸನೊಡನೆ ಉಭಯ ಸುಖವ ನೀವ ಚೆಲ್ವ ಅಂಬುಜನೇತ್ರ ಸೊಬಗನೆಂದು ಅ.ಪ ಚಾರು ಮಾರ ಪಿತನ 1 ನೊಂದು ವಾರಣೇಂದ್ರ ತನ್ನ ದಂದುಗದಲಿ ನುತಿಸಲು | ಬಂದು ರಕ್ಷಿಸಿದ ಮುಕುಂದ ಸಿಂಧುಶಾಯಿಯೆಂದು ಹರಿಯ 2 ಪರಾಕು ಎನುತ 3 ಕಿಂಕರೌಘ ಸುಪ್ರಸನ್ನ ಸಂಕಟೌಘಧ್ವಂಸನ ವೆಂಕಟೇಶವರದ ಒಳಲಂಕೆಯಧಿಪ ಗುರು ನೃಹರಿಯ 4
--------------
ಅನ್ಯದಾಸರು
ಕವಿಗಳು ಪೊಗಳುವ ವಿವರವ ಪೇಳುವೆ ಪ ಅವನಿಯೊಳ್ ಕೃಷ್ಣನು ಅವತರಿಸುವ ಕಥೆ ಅ.ಪ ಸುರರೊಡೆಯನ ದಿವ್ಯ ತರುವನು ಬಲದಲಿ ಸರಸಿಜನಾಭನು ಧರೆಗೆ ತರುವನೆಂದು ಅರಿಯುತ ವರ ಸುಮನಸರೆಲ್ಲ ಕರಗಳಿಂದಲಿ ಸುಮ ಸುರಿದರೆಂದೆನುತಲಿ 1 ಅಂಬುಜನಾಭನು ಶಿಶುವಾಗಿರಲವನ ಸಂಭ್ರಮದಲಿ ತನ್ನ ವಶಗೊಳುವುದಕೆ ತುಂಬುರು ಗಂಧರ್ವರು ಪಾಡಿದರು ರಂಭೆ ಊರ್ವಶಿಯರು ನೃತ್ಯ ಮಾಡಿದರೆಂದು2 ವಾಸುದೇವನು ತನ್ನ ಶಿಶುವೆಂದರಿಯುತ ವಸುದೇವನ ಬಲು ಆಸೆಗೆ ನಗುತಲಿ ವಸುಗಳು ದೇವರು ವಾಸುದೇವನು ತಮ್ಮ ಕೂಸು ಏಕಲ್ಲವೆಂದು ಹರುಷ ಪೊಂದಿದರೆಂದು 3 ಇಂದುವದನನ ಅಂದವ ನೋಡುತ ಚಂದ್ರಕಲೆಯರ್ಧ ಕುಂದಿದನೆನ್ನುತ ಸುಂದರಕೃಷ್ಣನು ಅಂದು ತನ್ನಯ ಕುಲ ದಿಂದ ಬಂದಿರೆ ಬಲು ನಂದ ಪೊಂದಿದನೆಂದು 4 ಪನ್ನಗಶಯನನು ಸಣ್ಣ ಕೂಸಾಗಿರೆ ತನ್ನ ವಿಭುತನಕೆ ಇನ್ನು ಕುಂದಿಲ್ಲವೆಂದು ಉನ್ನತ ಗಗನ ಪ್ರಸನ್ನನಾಗಿ ದಿವ್ಯ ಸಣ್ಣ ತಾರೆಗಳಿಂದ ಬೆಡಗು ತೋರಿದ ಕಥೆ 5
--------------
ವಿದ್ಯಾಪ್ರಸನ್ನತೀರ್ಥರು
ಕಂಸಾರಿ ನಿನ್ನ ಪದ ತೋಯಜಕೆರಗುವೆ | ಕಾಯಜ ಜನಕ ಪ ಪಾಥÀಜ ಭವವಿಧಾತ ಸುಮನಸ ಪ್ರಾತವಿನುತ ಮಾನಾಥನೆ ನಿರುತ 1 ಭದ್ರಮೂರುತಿ ಬಲಭದ್ರಾನುಜ ಮಂದ ರಾದ್ರಿಪಾಣಿ ಸಮುದ್ರ ಶಯನ2 ಖೇಟವರೂಧ ಕಿರೀಟಸೂತ ಶತ | ಕೋಟಿದಿನಪ ನಿಭ ಘೋಟಕವದನ 3 ಕಂತು ಜನಕ ಮಾವಾಂತಕ ಮಾನವ ದಂತಿವೈರಿ ಜಗದಂತರಿಯಾಮಿ 4 ಸಾಮಗಾನಪ್ರೀಯ ಶಾಮಸುಂದರ ವ್ಯೊಮ ನೃಪನ ಜಾಮಾತನೆ ಜವದಿ 5
--------------
ಶಾಮಸುಂದರ ವಿಠಲ
ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ ನಳಿನಸಂಭÀವ ಲಿಖಿತವೇನಿಹುದೊ ಸಖಿಯೆ ಅ.ಪ. ಪೋದ ವಿಪ್ರನು ಬರದಿರಲು ಏನು ಕಾರಣವೊ ಹಾದಿಯಲಿ ವಿಘ್ನ ತಾನೊದಗಿತೊ ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ 1 ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು ಭಿನ್ನವಿಸಿಕೊಂಡಿದ್ದೇನಾಯಿತೆ ಕರ್ಮ ಬಲವಂತವಾಗಿರಲು ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ 2 ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್ ಅಸುರರನು ಸಂಹಾರ ಮಾಡಿದವಗೆ ಶಿಶುಪಾಲನಾಕಾಲದ ವಶಮಾಡಲಸದಳವೆ ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ 3
--------------
ವರಾವಾಣಿರಾಮರಾಯದಾಸರು
ಕಾಯೋ ತೋಯಜ ನೇತ್ರ ಪ ಸುಮಿತ್ರ ಪವಿತ್ರ ಚರಿತ್ರ ಅ.ಪ. ಮಾನವ ಜನುಮದಿ ನೀ ತಂದೆಯೊಎನ್ನ ಗ್ಲಾನಿಯ ಕಳೆದು ಸುಜ್ಞಾನವನಿತ್ತು 1 ಕಠಿಣ ಸಂಸಾರದ ಕಟು ಅನುಭವವ ಸೈಸೆಸಟಿಯಲ್ಲೋ ಇದ ಸಂಕಟವ ಪರಿಹರಿಸಿ 2 ಹೃದಯದಿ ನೆಲಿಸಿ ನೀ ಸದಾವಕಾಲದೊಳುಗದುಗಿನೊಳ್ಮೆರೆಯುವ ವೀರನಾರಾಯಣ 3
--------------
ವೀರನಾರಾಯಣ
ಕಾಯೋ ಪರಮಾನಂದಾ ನಾರಾಯಣಾ | ತೋಯಜಾದಳ ನಯನ ಗರುಡ ಗಮನಾ ಪ ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ | ಭರದಿಂದ ನಿನ್ನ ಸ್ಮರಣೆಯಾ ಮಾಡಲು | ತ್ವರಿತದಿಂದಲಿ ದೇವ ಬಂದು ಆತನ ಮಹಾ | ದುರಿತವನು ಪರಿಹರಿಸಿ ಕಾಯಿದೆ ಹರಿಯೇ1 ಅರಗಿನಾ ಮನಿಯೊಳುಪಾಂಡವರುಸಿಲುಕಿರಲು | ಹರಿ ನೀನೇ ಗತಿಯೆಂದು ಸುಮ್ಮನಿರಲು | ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ | ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ2 ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು | ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ | ಕರುಳ ಬಗೆದುಕಾಯಿದೆ ಹರಿಯೇ | ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ3 ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ | ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು | ಕಪಟನಾಟಕ ದಯಾನಂದ ಹರಿಯೆ 4 ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ | ಮುರಹರಿ ಧ್ಯಾನ ಸ್ಮರಣೆ ಯಂಬನದನು | ದಾರಿಯನು ಅರಿಯದ ಅಜ್ಞಾನಿಯ ಪರಾಧವನು ಸೈ ರಿಸುದು ಮಹಿಪತಿ ಸುತ ಪ್ರಿಯನೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು