ಕಪ್ಪುಗೊರಳ ಬಿಂಬ ಅಪ್ಪ ಸಲಹೋ ಪ
ಕ್ಷಿಪ್ರ ಕೃಪೆ ಪುಟ್ಟಿಸೈ ಅಪ್ರತಿಮ ದಯವನಧಿ ಅ.ಪ.
ದಿವಿಜ ದಾನವ ಗಣವ ತೃಣ ಮಾಡಿ ಆಳುವ
ಪವನಾಂಶ ಪಾವನ್ನ ಜ್ಞಾನ ಶರಧಿ
ನವವಿಧಾ ಹರಿಭಕ್ತಿ ರಸಸಿಂಧು ವೈರಾಗ್ಯ
ಸೌಭಾಗ್ಯನಿಧಿ ಮನದಿ ನೆಲೆಯಾಗಿ ನಿಲ್ಲಯ್ಯ 1
ಶೌರಿ ಮೂರ್ತಿಯನು
ನಿತ್ಯೋತ್ಸವದಿ ಹೃದಯ ಕಮಲದಲ್ಲಿ
ಭೃತ್ಯ ಮಸ್ತಕ ಮಣಿಯೆ
ಚಿತ್ತದಲಿ ಕೂತೆನ್ನ ಹರಿಯ ತೋರಿಸು ಸ್ವಾಮಿ 2
ಸಾರತಮ ಹರಿಯೆಂದು ಜಗಕೆ ತೋರಿದ ಗುರುವೆ
ಭಾರ ನಿನ್ನದೊ ಸ್ವಾಮಿ ಕಾಯೊ ಎನ್ನ
ಮಾರಪಿತ ಜಯೇಶವಿಠಲನ ಪೂರ್ಣೊಲಿಮೆ
ವಾರಿಧಿ ವಿಹಾರ ತವ ಎಡಬಿಡದೆ ಇರಿಸೆನ್ನ 3