ಒಟ್ಟು 264 ಕಡೆಗಳಲ್ಲಿ , 63 ದಾಸರು , 231 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೇವಕತನದ ರುಚಿಯೇನಳೆದೆಯೋ |ದೇವ ಹನುಮರಾಯ ನೀ ವೈರಾಗ್ಯ ಬೇಡಿ ಪಉದಧಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನಬಾರದಿತ್ತೆ ||ಪದದಿ ಪಾಷಾಣವ ಪೆಣ್ಣ ಮಾಡಿದನಿಗೆಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ 1ಕ್ಷಣದೊಳು ಸಂಜೀವನ ಗಿರಿ ತಂದಾಗಧನವನು ಬೇಡಲು ಕೊಡದಿಹನೇ ||ವಿನಯದ ವಿಭೀಷಣಗೆ ರಾಜ್ಯಪದವನಿತ್ತವನಿಗೆನಾಶ್ಚರ್ಯವೊ ಹನುಮ ನೀನೊಲ್ಲದೆ 2ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆಉರ್ಪಿಯ ಬೇಡಲು ಕೊಡದಿಹನೇಸರ್ವವ ತೊರೆದು ಶ್ರೀ ಪುರಂದರವಿಠಲನನಿವ್ರ್ಯಾಜ ಭಕುತಿಯ ಬೇಡಿಕೊಂಡೆಯಲ್ಲದೆ 3
--------------
ಪುರಂದರದಾಸರು
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿಮಿಕ್ಕು ಮೀರಿ ಮೂರಕ್ಕರಗಳಕಂಡುನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನಪಮೂರಕಟ್ಟಿಮೂರನು ಅರಶೀರಗುಟ್ಟಿಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿತೋರುವ ಎರಡು ನಾಲ್ಕನು ತೊಲಗಿಸಿದಾತನ1ಲೋಕದ ಕೂಡ ಕೂಡಿಯೆ ವಿವೇಕ ಬೇಡಏಕವೆಂಬುದು ಬಿಡ ಅನೇಕವೆಂಬುದ ನಾಡಮೂಕ ಪದಗಳೆಂದು ನಿರಾಕರಿಸುತಲಿಹನು2ಅಕ್ಷಯಮುಚ್ಚಿ ತೆರದು ತೆರದಕ್ಷಯ ಮುಚ್ಚಿರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ3ಮತಗಳ ನೆನೆದು ಶಾಸ್ತ್ರಗಳ ಗೆಲಿದುಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಸತತ ಕಾಲದಿ ತನ್ನ ಮತಿ ಹಿಡಿಯೆಂಬನ4ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯತಾನಾಗದಗುರುಚಿದಾನಂದನ ತಾ ಕಂಡುತಾನೆ ತಾನಾಗಿ ತೋರುವ ನಿಜ ಯೋಗಿಯ5
--------------
ಚಿದಾನಂದ ಅವಧೂತರು
ಹರಿಕಥಾಮೃತ ಸವಿಯ ಹರಿದಾಸರಲ್ಲದೆದುರುಳಮಾನವರದರಪರಿಬಲ್ಲಿರೇನಯ್ಯಪ.ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆಅಣಿಮಾಡಿಕೊಡುವ ಆಕರಬಲ್ಲುದೇನಯ್ಯ1ನವನೀರದಾರ್ಭಟಕೆ ನವಿಲುಗಳು ನಲಿವಂತೆಕಾವು ಕಾವೆಂಬ ಕಾಕವು ಬಲ್ಲುದೆ ? ||ದಿವಸಕರನುದಯಿಸಲು ಅರಳುವಬ್ಜಗಳಂತೆದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆಭಲ್ಲೂಕಗಳು ಅದರ ಬಗೆ ಬಲ್ಲುವೆ ?ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನುಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3
--------------
ಪುರಂದರದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು
ಹರಿಯೆಂಬ ನಾಮಮೃತ ರುಚಿಕರವೆಲ್ಲಪರಮಭಕ್ತರಿಗಲ್ಲದೆ - ಮಿಕ್ಕ -|ಅರಿಯದ ಕಡುಮೂರ್ಖ ಮನುಜರಿಗೆಲ್ಲತಾಹರುಷವಾಗಬಲ್ಲದೆ? ಪಅಂದುಗೆಅರಳೆಲೆಯಿಟ್ಟರೆಕೋಡಗಕಂದನಾಗಬಲ್ಲದೆ? |ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-ಜೇಂದ್ರನಾಗಬಲ್ಲದೆ? ||ಇಂದುಪೂರ್ಣಕಳೆಯೊಳು ತಾನು ತೋರಲುಪರಿಪರಿ ಬಂಗಾರವಿಟ್ಟರೆ ದಾಸಿ ತಾಅರಸಿಯಾಗಬಲ್ಲಳೆ? |ಭರದಿಂದ ಶ್ವಾನನ ಬಾಲವ ತಿದ್ದಲುಸರಳವಾಗಬಲ್ಲದೆ? ||ಉರಗಗೆ ಕ್ಷೀರವನೆರೆಯಲು ಅದು ತನ್ನಗರಳವ ಬಿಡಬಲ್ಲದೆ? ||ಭರದಿಂದ ನೀಲಿಯ ಕರದಿಂದ ತೊಳೆಯಲುಕರಿದು ಹೋಗಬಲ್ಲದೆ? | 2ಮೋಡಕೆ ಮಯೂರ ಕುಣಿವಂತೆ ಕುಕ್ಕುಟನೋಡಿ ಕುಣಿಯಬಲ್ಲದೆ? |ಗೋಡೆಗೆ ಎದುರಾಗಿ ನಾಟ್ಯವಾಡಲುನೋಡಿ ಸುಖಿಸಬಲ್ಲದೆ? ||ಹಾಡಿನ ಕುಶಲತೆ ಬಧಿರನು ತಾ ಸವಿ-ಮಾಡಿ ಕೇಳಬಲ್ಲನೆ? |ರೂಢಿಗೊಡೆಯ ನಮ್ಮಪುರಂದರವಿಠಲಮೂಢಜಾÕನಿ ಬಲ್ಲನೆ3
--------------
ಪುರಂದರದಾಸರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು