ಒಟ್ಟು 2020 ಕಡೆಗಳಲ್ಲಿ , 113 ದಾಸರು , 1581 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಾ ರಮಣ ಹರಿ ವಿಠಲ | ಕಾಪಾಡೊ ಇವಳಾ ಪ ವಿಮಲ ಮತಿ ಕರುಣಿಸುತ ಮಮತೆಯನೆ ಕಳೆದೂ ಅ.ಪ. ಗುರುರೂಪಿ ತೈಜಸನೆ | ಪರಮನುಗ್ರಹ ಪೊಂದಿಗುರುವಿನಿಂದ ಶಿಷ್ಯನ | ಪಡೆಯುತಲಿ ಮತ್ತೇಪರ್ವತವ ಅಡಿಯಲ್ಲಿ | ಪರಮ ಗುರು ತದ್ಗುರುವವರ ಅಂಕಿತಗಳ ಕಂಡು | ಮರಮಾಶ್ಚರ್ಯ ಪೊಂದೀ1 ಹರ ವಿರಿಂಚಾದಿಗಳು | ಹರಿಯ ಸೇವಕರೆಂಬವರಮತಿಯ ಪೊಂದುತ್ತ | ಚರಾಚರಗಳಲ್ಲಿಹರಿಯಧಿಷ್ಠಿತನೆಂಬ | ವರ ಜ್ಞಾನದಿಂದಲ್ಲಿಹರುಷದಿಂ ಸೇವಿಸುವ | ಸಾಧನವ ಗೈಸೋ 2 ಹರಿ ಗುರೂ ಸದ್ಭಕ್ತಿ | ಹಿರಿಯರ ಸತ್ಸೇವೆಕರುಣಿಸುತಲೀ ಕಾಯೋ | ಕಮಲಾಕ್ಷ ಹರಿಯೇಕರುಣ ನಿಧಿ ನೀನೆಂದು | ಒರಲುತಿದೆ ವೇದಗಳುಪರಿಪಾಲಿಸಿವಳ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಕಮಲಾಲಯ ಕೈಹಿಡಿದೆನ್ನ ಪಾಲಿಸುಮುನ್ನ ಕರುಣ ಕಟಾಕ್ಷದಿ ಎನ್ನಕಮಲಾಲಯ ಪ ಸ್ವಾಮಿ ಭೃತ್ಯನ್ಯಾಯ ಅರಿಯದೆ ನಾ ನಿನ್ನಪರವÀು ಪಾಮರನೆಂದು ನುಡಿದೆನು ಪರಮ ಪಾಮರನೆಂದು ನುಡಿದ ಅಪರಾಧವ ಸ್ವಾಮಿ ಚಿತ್ತದಲೆ ಹಿಡಿಬ್ಯಾಡ 1 ಗುಣನಿಧಿ ನೀ ಎಂದು ಗುಣಕೆ ಕೀರ್ತನೆ ಗೈದೆಎಣಿಸದಿರೆನ್ನ ಅಪರಾಧಎಣಿಸದಿರೆನ್ನ ಅಪರಾಧ ಎನುತಲೆ ಮಣಿದು ಸಾಷ್ಟಾಂಗ ಕ್ಕೆರಗಿದಳು2 ನಿನ್ನವರ ಅಪರಾಧ ಇನ್ನೇನು ನೋಡದೆಮನ್ನಿಸ ಬೇಕೊ ಕಮಲಾಕ್ಷಮನ್ನಿಸ ಬೇಕೊ ಕಮಲಾಕ್ಷ ಎನುತಲಿ ಕನಿದ್ರೌಪತಿ ನುಡಿದಳು3 ಬಡನಡ ಬಳಕುತ ಕುಚಗಳಲ್ಲಾ ಡುತ ಮುಡಿದಿದ್ದ ಪುಷ್ಪ ಉದುರುತಮುಡಿದಿದ್ದ ಪುಷ್ಪ ಉದುರುತ ಸುಭದ್ರೆಅಣ್ಣನ ಅಡಿಗೆರಗಿದಳು4 ಹೆಣ್ಣು ಕೊಟ್ಟ ಮ್ಯಾಲೆ ಹಿತವ ಚಿಂತಿಸಬೇಕು ಇನ್ನು ನುಡಿದಲ್ಲಿ ಫಲವೇನೊಇನ್ನು ನುಡಿದಲ್ಲಿ ಫಲವೇನೊ ಅಣ್ಣಯ್ಯಎನ್ನ ಮುಖವ ನೋಡಿ ಕರುಣಿಸೊ 5 ಎನ್ನವ್ವ ಸುಭದ್ರಾ ಈ ನುಡಿನಿನಗ್ಯಾಕೆ ನೀನು ನಿಮ್ಮಿಂದ ನಿಮ್ಮವರುನೀನು ನಿಮ್ಮಿಂದ ನಿಮ್ಮವರಿಗೆ ಪ್ರಾಣವ ನಾನು ಕೊಡುವೆನು 6 ಮೊದಲೆ ಅತ್ತೆಯ ಮಗ ಆದರದಿಂದ ನಿನ್ನ ಕೊಟ್ಟೆ ಹೆದರೋನೆ ಅವನು ನಮಗಿನ್ನುಹೆದರೋನೆ ಅವನು ನಮಗಿನ್ನು ಎನುತಲೆಮುದದಿ ರಾಮೇಶ ನುಡಿದನು7
--------------
ಗಲಗಲಿಅವ್ವನವರು
ಕರ ಪ ಸೂರಿನಿವಾಸ ಭೋಗಾಪುರ ಮಂದಿರ ಮಾಮುದ್ಧರ ಅ.ಪ ಶ್ರೀರಘುವರನಾಜ್ಞೆಯಿಂದಲಿ ವಾರಿಧಿಯಕ್ಷಣದಲಿ ಹಾರಿ ಭೂಮಿಸುತೆ ಗೆರಗುತಲಿ ಮುದ್ರಿಕೆಯ ಕೊಡುತಲಿ ಶ್ರೀರಾಮಗೊಂದಿಸಿದಿ ಕ್ಷೇಮದಲಿ ಇಹಳೆಂದು ಪೇಳಿ 1 ಇಂದು ಕುಲದಿ ಪಾಂಡು ನೃಪತಿಯ ಎನಿಸಿದೆಯೊ ತನಯ ಬಂಥ ಕೌರವ ವೃಂದ ಮಥಿಸಿದೆಯಾರಣದೊಳಗೆ ವಿಜಯ ನಂದಸುತನ ನೊಲಿಮೆ ಪಡದಿಯಾ ಭೀಮಶೈನರಾಯ 2 ಮೇದಿನಿ ಸುರಗೃಹದಿ ಜನಿಸಿದ ವೇದಾರ್ಥ ತಿಳಿಸಿದ ವಾದಿಗಳ ನಿರ್ವಾದಗೈಸಿದ ದಿಗ್ವಲಯ ಚರಿಸಿದ ಭೇದ ಭೋದಕ ಶಾಸ್ತ್ರವಿರಚಿಸಿದ ಶ್ರೀ ಪೂರ್ಣಬೋಧ 3 ಕಾಲಕಾಲಗಳಲ್ಲಿ ದ್ವಿಜಜನ ಬರುತಿಹರು ನಿನ್ನ ಧೂಳಿ ದರುಶನಾಬಿಷೇಚನ ಶೇವಿಪರು ಘನ್ನ ಪಾಲಿಸಬೇಕಯ್ಯ ಭಕುತರನಾ ಪಾಂಚಾಲಿರಮಣ 4 ನೀರಜಾಸನಾದಿ ಸುರಗಣ ವಂದಿತ ಸುಚರಣ ಕಾರ್ಪರ ಶಿರಿನಾರಸಿಂಹನ ಒಲಿಸಿರುವ ನಿನ್ನ ಹರಣ 5
--------------
ಕಾರ್ಪರ ನರಹರಿದಾಸರು
ಕರಿ ಕಮಲೇಶ ಪ ಗರುಡಾರೂಢನು ಗಜವರದ ವೈಕುಂಠ ಕೊಡುವ ಪಾಲಿಸಿ ಪಾಂಡವರ ಮನೆ ಭಂಟ1 ಪಕ್ಷಿವಾಹನ ರಾಕ್ಷಸಾರಿ ರಾವಣನ ಶಿಕ್ಷಿಸಿ ವಿಭೀಷಣನ ರಕ್ಷಿಸಿದ ರಾಮ 2 ವಿನತೆಸುತನ ಏರಿ ಘನತರುತ್ಸವದಿ ಸವರಿದಿ ಸುರವಂದ್ಯ ಸುಜನಕ್ಕಾನಂದ 3 ಹಕ್ಕಿಯ ಪಕ್ಕದಲ್ಲ್ಯರ್ಕಕೋಟಿತೇಜ ಜಾ- ನಕ್ಕಿ ಸಹಿತಯೋಧ್ಯನಾಳುವ ರಾಮ 4 ನಗಧರ ಖಗನ್ಹೆಗಲೇರಿ ಉಲ್ಲಾಸ ನಗುವ ಭೀಮೇಶ ಕೃಷ್ಣÀ ಬರುವ ಜಗದೀಶ5
--------------
ಹರಪನಹಳ್ಳಿಭೀಮವ್ವ
ಕರಿಗಿರೀಶ ನಿನ್ನ ಬೇಡುವೆನೀಗ ಪರಿಪಾಲಿಸೊ ಸತತ ಪ. ನರಹರಿ ಭಕ್ತರ ಪೊರೆಯುವೆ ನೀನೆಂ- ಇಂದು ಅ.ಪ. ನಾರಸಿಂಹ ನಿನ್ನ ಸಾರಿ ಭಜಿಸುವೆನು ತೋರೊ ನಿನ್ನ ಪದವ ಬಾರಿಬಾರಿಗೆ ಸ್ತುತಿಸಲು ಬಾಲನು ಘೋರ ದೈತ್ಯನ ಸೀಳಿ ಪೊರೆದೆಯೊ 1 ಶೇಷಾಂತರ್ಗತ ನಾರಸಿಂಹ ವಿ- ಶೇಷ ಮಹಿಮೆ ತೋರೊ ಶೇಷಶಯನ ಮಹರುದ್ರಾಂತರ್ಗತ ಪೋಷಿಸೊ ಭಕ್ತರ ಶಾಂತರೂಪದಿ 2 ಲೀಲೆಯಿಂದ ಶ್ರೀ ಲಕುಮಿ ಹಿತದಿ ವ್ಯಾಳಶಯನನಾಗಿ ಪಾಲಿಸಬೇಕೆನ್ನನು ಸತತದಿ ಗೋ- ಪಾಲಕೃಷ್ಣವಿಠ್ಠಲ ನೀ ದಯದಿ 3
--------------
ಅಂಬಾಬಾಯಿ
ಕರಿಗೊರಳಾ ಪಾಲಿಸೋ ಪ ಕರಿವರದನ ದಯ | ನಿರುತ ನಿನ್ನೊಳಗಿದೆಸುರಜೇಷ್ಠಾನುಜ | ಶರಣನ ಕರಪಿಡಿಅ.ಪ. ಪಶುಪತಿ ಎನಿಸಿಹೆ 1 ಆರು ನಿನಗೆ ಸರಿ | ವೈರಾಗ್ಯಾಧಿಪಕೋರುವೆನೋ ತವ | ಕರುಣಾ ರಸವನುಭೂರಿ ದಯದಿ ಮಮ | ಕಾರವ ಹರಿಪುದುಬೇರೊಂದನೊಲ್ಲೆ | ಕಾರುಣ್ಯಾಂಬುಧಿ 2 ದೇವ ದೇವ ಹರಿ | ದಾವಾಗ್ನಿಯ ಭಯತೀವರ ಹರಿಸುತ | ಗೋವ್ಗಳನುಳುಹಿದ |ಭಾವಜ ಪಿತ ಗುರು | ಗೋವಿಂದ ವಿಠಲನಪಾವನ ಪದ ದ್ವಯ | ಭಾವದಿ ತೋರಿಸಿ 3
--------------
ಗುರುಗೋವಿಂದವಿಠಲರು
ಕರುಣ ಬರುವದೆಂದಿಗೂ ಶ್ರೀರಾಮಚಂದ್ರಾ ಪ ದುರಿತ ಶರಧಿಯೊನೊತ್ತರಿಸಿ ನಿನ್ನಯಾ ದಿವ್ಯ ಚರಣ ಸೇವೆಯೊಳಿರಿಸಿ ಪಾಲಿಸೋ ದೇವ1 ಮೋಸಗೊಳಿಸದಿರೊ ಶ್ರೀಶ ಶ್ರೀನಿವಾಸಾ 2 ಪರಮ ತತ್ವಾಧಿಕಾರಿ ಸುರಮುನಿಸುತಾ ಶೌರಿ ದೊರೆಯ ನಂಬಿದೆನೆಲ್ಲೋ ಕರುಣ 3
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣ ಬಾರದೇ ಗುರುವೇ ಕರುಣ ಬಾರದೇ ಪ ಅಕಟ ನಿನ್ನ ಚರಣ ನಂಬಿದ ಶರಣನ ಮೇಲೆ ಅ.ಪ. ಭವ ಕಷ್ಟದಿಂದ ಕಡಿಗೆ ಮಾಡಿ ಕೃಷ್ಣ ಪದ್ಮವನ್ನು ತೋರುತುತ್ಕøಷ್ಟ ಪದವಿ ಪಾಲಿಸೊ ಗುರುವೇ 1 ಸ್ಮರಣೆ ಒಂದೇ 2 ಅಖಿಳ ಸುರರ ಸಲಹುವ ಸೀಲ ತಂದೆವರದಗೋಪಾಲವಿಠ್ಠಲಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಕರುಣ ಬಾರದೇ ಸ್ವಾಮಿ ಕರುಣ ಬಾರದೆ ಪ ಶ್ರುತಿ ಪುರಾಣ ವೇದ ಶಾಸ್ತ್ರ ಪತಿತಪಾವನ ನೀನೆಯೆಂದು ನುತಿಸಿ ಸಾರಿ ಪೇಳ್ವುದ ಕೇಳಿ ಪಿತ ನೀನೆಂದು ನಂಬಿದೆನಯ್ಯಾ ಅ.ಪ ಕಡಲಿಗುರುಳಿದೆನ್ನ ಕೈಯ ಪಿಡಿವರಿಲ್ಲ ಮಾರನಯ್ಯ ದಡವ ಸೇರಿಸಿ ಪಾಲಿಸೊ ಜೀಯ ಅಡಿಯ ಪಿಡಿದು ಬೇಡುವೆನು 1 ಶತಶತಾಪರಾಧಿ ನಾನು ಸತತ ದೀನದಯಾಮಯನು ಪಿತನು ಹಿತನು ನೀನೇ ಬೇರೆಗತಿಯ ಕಾಣೆ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ 1 ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ 2 ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ 3
--------------
ಗುರುಗೋವಿಂದವಿಠಲರು
ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು
ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ ಬೇಡುವೆನು ನುತಿ ಮಾಡುವೆನು 1 ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ ನಿತ್ಯ ಭಾವಿಸಿದೆ ವಂದಾರು ಮಂದಾರ ಪಾಲಿಸೆನ್ನನು ಬೇಡಿಕೊಂಬೆನು 2 ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ ಭಾವಿಪುದು ನಿಜತೋರುವುದು ದಯೆಯಿಂದ ಬಹು ವಿಧದಿಂದ 3
--------------
ಬೇಟೆರಾಯ ದೀಕ್ಷಿತರು
ಕರುಣಾದಿ ಪೊರೆಯನ್ನ ಪಾರ್ವತೀರಮಣ ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ ಅನುದಿನ ಅ.ಪ ದುರಿತ ಗಜ ಪಂಚಾಸ್ಯ ಕರಮುಗಿವೆ ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ ಗೂಗಲ್ಲಪ್ರಭುವೆ 1 ಭಾಗವತಸು ತಿಳಿಸೆನ್ನ ಮನಕೆ ಜಿತ ಮನೋಜಾತ 2 ಪರಿಪಾಲಿಸಲು ಶಿವನೆ ರಾಜಿಸುವ ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ ಪಾದ ಸುವಿಶಾಲ ಮಹಿಮನೇ 3 ನೀಡಿದೆಯೊ ಗೌತುಮ ಮನಮಂದಿರದಿ ಗೋ- ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ4 ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ ಸಿರಿವ್ಯಾಸಕುವರನೇ5
--------------
ಕಾರ್ಪರ ನರಹರಿದಾಸರು
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ಪ. ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸದವನೆ 1 ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು ಬಲಿಯ ಕಾಯ್ವ ಭೂಮಿಜೇಶ ಘಳಿರನೆ ಬಂದೊದಗಿ ಬೇಗ 2 ನಿಖಿಳ ಭೋಗಗಳನನುಭವಿಸುತ ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ