ಒಟ್ಟು 5630 ಕಡೆಗಳಲ್ಲಿ , 130 ದಾಸರು , 3590 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಪೆ ಹರಿಹರನೇ | ನಿನಗೆ ನಾ ವೃಂದಾರಕನುತನೇ ಪ. ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ ಮೂರ್ತಿ ಅ.ಪ. ಚತುರ ಹಸ್ತದಿಂದಾ | ಶೋಭಿಸೆ ಅತಿ ಕೌತುಕದಿಂದಾ ಪಾದ ಕಮಲಜನ ತತಿಗೆ ತೋರದಂತೆ ಕ್ಷಿತಿಯಲಡಗಿದೇ 1 ಸೋಮಶೇಖರವಂದ್ಯಾ | ಆರ್ಧದ ಲಾಮಹ ಹರನಿಂದಾ ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ ನೀಮೋಹಕ ತೋರುವ ಜಗದ್ವಂದ್ಯಾ 2 ಪಾಪಿಗುಹನವರವಾ| ಕೆಡಿಸಲು ರೂಪಧರಿಸಿ ತಾಮಸರಿಗಂಧಮತಮ ಕೂಪದಿ ಕೆಡಹುವೆ ಶ್ರೀ ಮೋಹಿತ 3 ಅರ್ಧಹರನ ರೂಪಾ| ಕೃತಿಯಲಿ ಶುದ್ಧ ವಿಷ್ಣು ರೂಪಾ ಮುದ್ದು ಸುರಿವ ಭವ್ಯಾಂಗ ಸ್ವರೂಪ ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4 ಶಂಖಚಕ್ರ ಅಭಯಾ| ತ್ರಿಶೂಲವ ಬಿಂಕದಿ ಧರಿಸಿದೆಯಾ ಪಂಕಹೋದ್ಭವೆ ಪಾರ್ವತಿಯ ಉಭ ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5 ಅರ್ಧಶಿರದಿ ಮಕುಟಾ| ಆರ್ಧದಿ ಶುದ್ಧಗಂಗೆ ತ್ರಿಜಟಾ ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ ಅದ್ಭುತ ಅಚ್ಚರಿ ರೂಪಧಾರಕ 6 ಪಣೆಯ ತಿಲಕ ಢಾಳಾ | ಕಂಠಾಭ ರಣಗಳು ಪೂಮಾಲಾ ಮಿನುಗುವವಲ್ಲಿ ಪೀತಾಂಬರನುಟ್ಟಿಹ ಗುಣಗಣ ಪೂರ್ಣನೆ ಹನುಮನಯ್ಯ ಹರಿ7 ಮಾಯಾ | ಕವಿಸದೆ ಇನ್ನು ಕಾಯೊ ಜೀಯಾ ಘನ್ನ ಭಕ್ತಿ ಸುಜ್ಞಾನ ವೈರಾಗ್ಯವ ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8 ಹರನೊಳು ಹರ ಶಬ್ದಾ | ವಾಚ್ಯನೆ ಸಿರಿವರ ನಿರವದ್ಯಾ ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9 ತುಂಗಭದ್ರ ತೀರಾ | ವಾಸನೆ ರಂಗ ಪಾಪ ದೂರಾ ಮಂಗಳ ಗೋಪಾಲಕೃಷ್ಣವಿಠಲ ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
--------------
ಅಂಬಾಬಾಯಿ
ವಂದಿಸಿ ಬದುಕಿ ತಂದೆ ಮುದ್ದು ಮೋಹನ ಗುರುಗಳ ಪ ಇಂದಿರೆ ಅರಸ ಅಂದ ತಲ್ಪರಂಶರೆಂಬರಾ ಅ.ಪ. ತರಳತನಾರಭ್ಯ ಹರಿಯ | ಪರಮ ಅನುರಾಗದಿಂದ ಪರಿಸರಾನಂದ ತೀರ್ಥ | ಪರಮಮತ ವಿಚಾರದಲ್ಲಿ |ಅರೆಕ್ಷಣವು ಬಿಡದೆ ನಿರತರಾ | ಆತ್ಮ ಜ್ಞಾನದರ್ಶನಾನುಷ್ಠಾನ ಚರಿಸುತಾ | ಭಕ್ತಿಯೇ ಸುಪ್ರಚುರ ಪಂಥವನ್ನೆ ಮಾಡುತಾ | ಯುಕ್ತಿಯಿಂದಚರಿಪ ಸರ್ವವೂ ಶ್ರೀಹರಿಯ | ಪರವು ಎಂದ ಕಡಿದ ಬಂಧ 1 ವ್ಯಾಸ ಗ್ರಂಥ ಸದಾಭ್ಯಾಸಿ | ದಾಸಕೂಟವೆಂಬ ವರಜಲಾಶಯಕೆ ಪರಮ ಅರ್ಥ ತಾ | ರೇಶನ್ನುದಿಸಿ ಭೂಸುರ ಮನೋಲ್ಲಾಸ ಮಾಡಿ ಲೇಸಾಗಿ ಬೆಳಗುತ | ಜ್ಞಾನ ಕಿರಣಸೂಸ್ಯನೇಕಾಂಕಿತಾಗಳ | ಇತ್ತು ಕರ್ಮಹ್ರಾಸ ಮಾಳ್ವ ಬಗೆಯ ತಿಳುಹುತ | ಕವನದಿಂದಸಾಸಿರ ಪುಷ್ಪಮಾಲೆ ಹರಿಗಿತ್ತ ದಯವ ಪೊತ್ತ2 ಕ್ಲೇಶ ಸಂಶಯಾ | ಹರಿಸಿ ಪವನ ಮತದಿ ದೀಕ್ಷೆಯಾನಿರತಿಶಯದ ದಾಸದೀಕ್ಷೆಯ | ಇತ್ತು ಹೃದಯದಲ್ಲಿಹರಿಯ ಮೂರ್ತಿಯನ್ನೆ ನೋಡುವ | ಶಾಸ್ತ್ರ ಸಮ್ಮತಿಕೀರ್ತನೆಗಳ ನುಡಿಸಿದಾ | ಗುರು ಗೋವಿಂದ ವಿಠಲ ಪದಸರೋಜ ರಜವ ಶಿರದೊಳ್ ಧೃತರ | ಕೃಪಾಕರರ 3
--------------
ಗುರುಗೋವಿಂದವಿಠಲರು
ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು
ವಂದಿಸುವೆ ಗುರು ರಾಘವೇಂದ್ರಾರ್ಯರ ವೃಂದಾವನಕೆ ಪ್ರತಿ ಪ್ರತಿ ದಿನಗಳಲ್ಲಿ ಪ ಶ್ರಾವಣ ಪರ ದ್ವಿತೀಯ ಕವಿವಾರ ತುಂಗಭದ್ರಾ ತೀರದಾ ನವ ಸುಮಂತ್ರಾಲಯದಿ ದೇಹವನು ಬಿಟ್ಟು ಮಾ ಧವನ ಪುರವೈದಿದ ಮಹಾತ್ಮರಿವರಹುದೆಂದು 1 ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ ಉಪದೇಶಗೈದು ಕಾಶ್ಯಸುರರನಾ ಅಪವರ್ಗ ದಾಸರೊ ಳುಪಮರಿಲ್ಲೆಂದರುಪಿದುಪಕಾರಿಗಳ ಕಂಡು2 ದೇವತೆಗಳಿವರು ಸಂದೇಹ ಬಡಸಲ್ಲ ವೃಂ ದಾವನದೆ ರಚಿಸಿ ಪೂಜಿಪ ಭಕ್ತರ ಸೇವೆ ಕೈ ಕೊಂಡವರ ಮನೋರಥವ ಸಲಿ ಸುವರು ಜಗನ್ನಾಥ ವಿಠಲಗೆ ಪ್ರಿಯರೆಂದು 3
--------------
ಜಗನ್ನಾಥದಾಸರು
ವಂದಿಸುವೆ ಗುರುವರಾ ವಂದಿಸುವೆ ಗುರುವರಾವಂದಿಸುವೆ ಗುರುವರಾ ಮಂದಮತಿಯ ಪಾಲಿಸೆಂದು ಪ. ತ್ರಿವಿಧ ಫಲವ ಕೊಡಿಸುವವನೇ 1 ಜಲಧಿ ದಾಟಿಮಾತೆಗುಂಗುರವಿತ್ತು ಪ್ರೇಮ ವಾರ್ತೆಯನ್ನು ಪೇಳಿದವಗೆ 2 ಭೀಮನಾಮದಿಂದ ಕರೆಸಿ ಭೂವಿಯಲ್ಲಿ ಮೆರೆವ ಖಳರಧಾಮವನ್ನೆ ಸೀಳಿ ಸಾರ್ವಭೌಮಕೃಷ್ಣಗರ್ಪಿಸಿದಗೆ 3 ಅದ್ವೈತ ಮತವನ್ನೆಲ್ಲ ಕೆಡಹಿಶುದ್ಧಮತವ ಸ್ಥಾಪಿಸಿದ ಮಧ್ವಮುನಿರಾಯನಿಗೆ 4 ತಂದೆವರದವಿಠಲನ್ನ ಒಂದೆ ಮನದಿ ಜಪಿಸುತಿರುವಇಂದುಶೇಖರಾದಿ ಸುರವೃಂದ ವಂದ್ಯನಾಥವಹಗೆ 5
--------------
ಸಿರಿಗುರುತಂದೆವರದವಿಠಲರು
ವಂದಿಸುವೆ ನಂದಪುತ್ರ ಇಂದಿರಾಮನೋಹರ ಇಂದಿರಾ ಮನೋಹರ ಪೂರ್ಣೇಂದು ಕೋಟಿ ಸುಂದರ ಪ ನೀಲವಾರಿವಾಹಗಾತ್ರ ಲೋಲಚೇಲ ಭಾಸುರ ಲೋಲ ಚೇಲಭಾಸುರ ವಿಲೋಲ ನೀಲಕುಂತಲ 1 ದೇವ ದೇವಾಧೀಶ ಶೂರ ದೇವಕೀ ಪ್ರಿಯಂಕರ ದೇವಕೀ ಪ್ರಿಯಂಕರ ವಿಭಾವನೈಕ ಗೋಚರ 2 ಧೇನುಪುರ ವರವಿಹಾರಿ ಸೂನಭಾಣ ಜನಕನೆ ಸೂನ ಭಾಣ ಜನಕನೆ ವಿನೋದ ವೇಂಕಟೇಶನೆ 3
--------------
ಬೇಟೆರಾಯ ದೀಕ್ಷಿತರು
ವಂದಿಸುವೆನು ನಾ ನರನಾರಯಣ ಭಕ್ತ ಪ- ರಾಧೀನ ನಾನಾರೂಪಿಯೆ ಪ ಈ ಜಗವನೆ ಎತ್ತಿದೆ ವರಾಹನಾಗಿ ಮೂಜಗವನೆ ಅಳೆದ ವಾಮನಮೂರ್ತಿ ಯಾಜಿಪರನು ಕಾಯೋ ಪ್ರಹ್ಲಾದ ಧ್ರುವರೊಲು ಹೇ ಜಗದೋದ್ಧಾರ ಭಕ್ತವತ್ಸಲ 1 ದೇವ ಶ್ರೀಪತಿಯಾಗಿ ಅಸುರರ ಕೊಂದೆ ದೇವಕಿಸುತನಾಗಿ ಕಂಸನ ವಧಿಸಿದೆ ದೇವಜರ ಮೈದುನನಾಗಿ ದೌರ್ಜನ್ಯ ಮುರಿದೆ ದೇವ ಜಾಜಿಪುರೀಶ ದಾಸೋತ್ತಮನೇ 2
--------------
ನಾರಾಯಣಶರ್ಮರು
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ವಂದಿಸೋ ಎಲೆ ಮಾನವಾ ಮಾಣದೆ ಸದಾ ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ ಧರಣಿಯಂದದಿ ಕ್ಷಮಾಭರಿತ ಮಂಗಲದಾತ | ಶರಧಿಯಂದದಿ ದಯಾಗುಣಶೀಲರೋ | ಸುರ ನದಿಯಂದದಿ ದುರಿತಪರಿಹಾರಕರು | ತರಣಿ ಭಾರ ತಿಮಿರನೋಡಿಸುವರೋ 1 ಈಶನಂದದಿ ಜಿತಪೂಶರವರ | ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು | ಸಾಸಿರ ಮುಖನಂತೆ ಯೋಗಸುಸಾಧಕರು ಭೇಶನಂದದಿ ಸುಧಾಕರರಾಗಿ ತೋರ್ಪರೋ 2 ಶಾಮಸುಂದರವಿಠಲಸ್ವಾಮಿ ಉಪಾಸನೆ | ನೇಮದಿಂದಲಿ ಸತತಗೈಯುತಲಿ ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು 3
--------------
ಶಾಮಸುಂದರ ವಿಠಲ
ವಂದೇ ಗೋಪಾಲಂ ಕೃಷ್ಣಾನಂದ ಜಲಪಾಲಂ ಮಂದಹಾಸ ಮುನಿವೃಂದ ವಿಶಾಲಂ ಇಂದಿರೇಶ ಯದುನಂದನ ಬಾಲಂ ಪ ಸಾರಿದನು ಸಾರಂ ಕೃಷ್ಣ ಚಾರು ಮೋಹನಾ ಕಾರಂ ಸಾರೋದ್ದಾರಂ ಸುಜನಮಂದಾರಂ ಶ್ರೀರಮಣೀ ಮುಖ ಚಂದ್ರ ಚಕೋರಂ 1 ಕಾಂಚೀ ಮಣಿಹಾರಂ ಕೃಷ್ಣ ವಾಂಛಿತದನುಸಾರಂ ಪಂಚಭೂತ ಪಂಚಸ್ಯಾಕಾರಂ ಪಾಂಚ ಜನ್ಯ ಭೃಗುಲಾಂಛನ ಧಾರಂ 2 ಚಾಪಲ ಗುಣಧಾಮಂ ಕೃಷ್ಣ ಗೋಪೀಜನ ಕಾಮಂ ನೀ ಪರಮಾತ್ಮ ಸ್ವರೂಪ ಸುನಾಮಂ ಶ್ರೀಪತಿ ಯದು ಕುಲದೀಪ ನಿಸ್ಸೀಮಂ 3 ಪಾಂಡವ ಸಾಕಾರಂ ಕೃಷ್ಣ ಪಂಡಿತನುಸಾರಂ ಚಂಡ ಕಿರಣ ಮಣಿಕುಂಡಲ ಧಾರಂ ಮಂಡಲದೊಡೆಯ ಉದ್ದಂಡತಿ ಶೂರಂ 4 ಶರಣರ ಭವದೂರಂ ಕೃಷ್ಣ ಸುರಜನ ಸಾಕಾರಂ ಹರಿಸೂನು ಕೋಣೆ ಲಕ್ಷ್ಮೀಶ ಶೃಂಗಾರಂ ಪರಮಾತ್ಮಕ ಸದ್ಗುರು ಮಂದಾರಂ 5
--------------
ಕವಿ ಪರಮದೇವದಾಸರು
ವಂದೇ ಮುಕುಂದ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಪ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ 1 ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ 2 ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ ಮೊಗನೆ ಆನಂದ ಮಗನೇ || ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ | ವಿಜಯವಿಠ್ಠಲ ವರದಾತೀರ ನರಸಿಂಹ 3
--------------
ವಿಜಯದಾಸ
ವಂದೇ ಶ್ರೀ ಗೌರಿನಂದನ ಸುರನರ ವೃಂದವಂದಿತಚರಣ ಗಜಾನನ ಪ. ಶಂಕರೋಲ್ಲಾಸ ಪಾಶಾಂಕುಶಧರ ಕರ ಪಂಕಜ ಸುವಿರಾಜ ರವಿತೇಜ 1 ಜಂಭಾರಿಸಂನುತ ಜಾಹ್ನವೀಧರಸುತ ಲಂಬೋದರ ಸುಂದರ ಕೃಪಾಕರ 2 ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನ ಪಕ್ಷೈಕಪಾವನ ಸುಧೀಷಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಂದೇ ಹಂ ಶ್ರೀವರ ಕರಿವರದಂ ವೃಂದಾರಕನುತ ಸುಂದರಪಾದಂ ಪ ಈಶ ಭಕ್ತ ಭವಪಾಶನಾಶ ವಾಗೀಶ ಜನಕ ಲಕ್ಷ್ಮೀಶ ಪರೇಶ 1 ರಾಮತ್ರಿಜಗದಭಿರಾಮ ನೀರದ ಶ್ಯಾಮ ಸುರಾರಿಸ್ತೋಮ ವಿರಾಮ 2 ವಿಹಂಗ ಗಮನಯದು ಪುಂಗವ `ಹೆನ್ನೆರಂಗ ' ಕೃಪಾಂಗ 3
--------------
ಹೆನ್ನೆರಂಗದಾಸರು