ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀರಜ ಭೃಂಗ | ಪೊರೆ ರಾಜಾಧೀರಾಜಾ ಪ ಪರ ಬೊಮ್ಮ ಸೇವಕರೆಂಬ | ಮರ್ಮವೆನಿಪ ತಾರ |ತಮ್ಯವ ನೊರೆದಂಥ | ಬ್ರಹ್ಮಣ್ಯ ಮುನಿಪೋ | ತ್ತುಮ್ಮರ ಕುವರ 1 ಪತಿ ಸೇ | ವಕ ನೆನಿಸುತ ವಿ | ರಕುತನಾಗಿ ಮೆರೆದ 2 ಬೊಮ್ಮ ಭವ | ನೋವು ಕಳೆವುದಯ್ಯನೀವೊಲಿಯದೆ ಗುರು | ಗೋವಿಂದ ವಿಠ್ಠಲ | ತಾವೊಲಿಯನು ಖರೆಯ 3
--------------
ಗುರುಗೋವಿಂದವಿಠಲರು
ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
--------------
ವೆಂಕಟವರದಾರ್ಯರು
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ತೊಳಲುವೆ ದಾರಿಯ ಕಾಣದೆ ಅ.ಪ. ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು ಲಮ್ಮಗೊಡವುಹರಿ 1 ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು ಸಾರಿ ಬಾಯಾರಿಸುತಿರ್ಪವು 2 ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ಪೋಲುತ ನಮ್ಮನು ಬಾಧಿಸುತಿರುವರು3 ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು? ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ ಜರೆಯೆಂಬುದ್ರಿಕ್ತಾಂಗನೆ4 ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ ವರದ ವಿಠಲನಿಜ ಚರಣವೆ ನಂಬಿದೆ 5
--------------
ಸರಗೂರು ವೆಂಕಟವರದಾರ್ಯರು
ನೀರಧಿಶಯನ ಮುಕುಂದ ಹರಿನಾರಾಯಣ ಗೋವಿಂದ ಪ ಪ್ರಚಲಿತ ಲಯ ಜಲ ವಿಹರಣ ಶಾಶ್ವತ ಅಚಲೋದ್ಧರಣ ಸಮರ್ಥ ಸದಾಶ್ರಿತ ಪಂಚಾನನ ಪ್ರಖ್ಯಾತ 1 ಮಂದಾಕಿನಿ ಪಿತ ದೇವ ತ್ರಿವಿಕ್ರಮ ನಂದಿತ ಗೋಕುಲ ವೃಂದ ಪರಾಕ್ರಮ ಸಿಂಧುನಿಬಂಧನ ರಾಮಾನಂದದ ಸುಂದರ ಶ್ಯಾಮ 2 ಬುದ್ಧ ಸುವೇಶ ಶ್ರೀಕರ ಕಲ್ಕಿ ಪಾಹಿ ನಿರ್ದೋಷ ಕಾಕೋದರ ಗಿರಿವಾಸ ಜಯ ಶ್ರೀಕಾಂತ ಶ್ರೀ ಶ್ರೀನಿವಾಸ 3
--------------
ಲಕ್ಷ್ಮೀನಾರಯಣರಾಯರು
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ನೀರೊಳು ಮುಳುಗಿದಡೇನು ಫಲ ಪ (ಸಾರವ)ನೋದಿದಡೇನು ಫಲ ಅ.ಪ ಧರ್ಮದಾನದಿಂದೇನು ಫಲ 1 ಹರಿ ಹರಿಯೆಂದರದೇನು ಫಲ 2 ಸ್ತುತಿ ಪೂಜೆಗಳಿಂದೇನು ಫಲ 3 ವ್ರತಗಳ ಮಾಡಲದೇನು ಫಲ 4 ತನುವನು ಪೊರೆದರದೇನು ಫಲ || ಶ್ರೀನಿವಾಸನ ಪಾದವ ಸ್ಮರಿಸದೆ ದಿನವನು ಕಳೆದರದೇನು ಫಲ 5
--------------
ಸದಾನಂದರು
ನೀಲಕಂಠ | ನೀಲಕಂಠ | ನೀಲಕಂಠ | ಪಾಲಯ ಪ ಗಾಳಿದೇವನ ಒಲಿಮೆ ಯಿಂದಕಾಲಕೂಟ ಮೆದ್ದ ಶಿವನೇ ಅ.ಪ. ಸುಕೃತ ಭೃಕುಟಿ ಭವನೆ ಕಳೆವೆ ಪಾಪ 1 ಕಾವೇರಿಕೆ ನರ್ಮದೇಗಳ್ | ಸೇರ್ವ ಸನಿಯ ಶೈಲದಲ್ಲಿ ||ಭಾವ ಜಾರಿ ನಿನ್ನ ಪ್ರಭವ | ತೋರ್ವೆ ಜ್ಯೋತಿರೂಪ ಭಾವ 2 ಸುರರು ನಗುವ ಪರಿಯು ಅಲ್ಲವೆ | ಶರಣ ಜನರ ಪೊರೆಯೆ ಸ್ವೀಕರ 3 ಚಾರು ಚರಣಘೋರ ಭವವ ತಾರಿಪ ಓಂ | ಕಾರ ಪ್ರತಿಮ ಕಾಯೊ ಎಮ್ಮ4 ಹರಿಯ ಪದದ ನೀರನೀಗ | ಹರಿಯ ದ್ವಾರದಿಂದ ತಂದೂಹರಿಯ ದ್ವಾರ ತೋರ್ಪ ಭಾವಿ | ಹರಿಂ5ಶಯ್ಯಗೆ ಎರೆವೆನಂi5 5 ಮನವ ಆಳ್ವನೆ ಮೊರೆಯ ಕೇಳಿ | ಮನದ ಮಲಿನ ತ್ವರದಿ ತಳ್ಳಿಮನದಾಭಿಧನ ಚಿಂತೆಯಲ್ಲಿ | ಮನವನಿರಿಸೊ ಕೃಷ್ಣನಲ್ಲಿ 6 `ದೂಃ` ಎಂತ ಮರುತ ನಿನ್ನ | ಶರೀರದೊಳಗೆ ಇರುವನಲ್ಲಿದೂರುವಾಸ ತೋರೊ ಶ್ರೀಪ | ಗುರು ಗೋವಿಂದ ವಿಠಲ ರೂಪ 7
--------------
ಗುರುಗೋವಿಂದವಿಠಲರು
ನೀಲಕಂಠನ ಸುತಗಭಿನಮಿಸಿ ಆದಿಬ್ರಹ್ಮನ ಸತಿಯಳ ಭಜಿಸಿ ನೀಲವರ್ಣನು ಲಕ್ಷ್ಮೀಲೋಲನ ದಯದಿಂದ ಪಾಲಿಸಿದರೆ ಪಾಡಿ ಪೊಗಳುವೆನು ಪ ಜಯ ಜಯ ಭೀಮ ಭಾರತಿಗೆ ಜಯ ಜಯ ಧರ್ಮ ಭೀಮಾರ್ಜುನರಿಗೆ ಜಯ ದ್ರೌಪದಿ ನಕುಲ ಸಾದೇವಗೆ .......... ........... ............ 1 ಉಕ್ಕುವೊಯೆಣ್ಣೆಯೊಳಗೆ ನೋಡಿ ಕೊಟ್ಟೇನೆನುತ ಪರಮುತ್ಸವದಿಂದಲಿ ಪೃಥಿವಿರಾಯರಿಗ್ವಾಲೆ ಬರೆದ ರಾಯ 2 ದಿಕ್ಕು ದಿಕ್ಕಿನ ರಾಜರು ಬರಲು ಕೃಷ್ಣ್ಣೆಸ್ವಯಂವರ ನೋಡಬೇಕೆನುತ ವಿಪ್ರವೇಷವÀ ಧರಿಸಿ ಹೆತ್ತಮ್ಮನ ಸಹಿತಾಗಿ ಸತ್ಯಪಾಂಡವರು ಬಂದರು ಬ್ಯಾಗ 3 ಬಲವಂತ ರಾಯರೆಲ್ಲರು ತಾವು ಬಲುಮೆಯಿಂದಲಿ ಧನುವೆತ್ತಿ ಬೀಳೆ ಹಲಧರನನುಜ ತಾ ಚೆಲುವ ಪಾರ್ಥನ ನೋಡಿ ಬಲವಕೊಟ್ಟನು ಭೀಮಾರ್ಜುನಗೆ 4 ಸಾದೇವನನುಜ ಸುಂದರ ಪಾರ್ಥ ಆದಿಮೂರುತಿಯ ಪಾದಕ್ಕೆ ನಮಿಸಿ ಕಾದಯೆಣ್ಣೆಯ ನೋಡಿ ಕಟ್ಟಿದ ಮೀನವ ತಾ ಧನುವೆತ್ತಿ ಹೊಡೆದನಾಗ 5 ಚೆಲ್ಲೆಗಂಗಳ ದ್ರೌಪದಿದೇವಿ ವಲ್ಲಭ ಪಾರ್ಥಗೊಲಿದು ಬ್ಯಾಗ ಮಲ್ಲಮರ್ದನಸಖನಲ್ಲಿ ನಡೆದು ಬಂದು ಮಲ್ಲಿಗೆ ಮಾಲೆ ಹಾಕಿದಳಾಗ 6 ವಿಪ್ರ ಕ್ಷತ್ರಿಯರೊ ದಾವಕುಲವೊ ನೆಲೆ ಕಾಣದಲೆ ಮಾಜದೆ ನಿಮ್ಮ ಮರ್ಮಗಳ್ಹೇಳಬೇಕೆಂದು ಕೇಳುತ್ತಿದ್ದನು ಕಂಗೆಡುತ ರಾಯ 7 ಮಚ್ಛಯೆಸೆಯಲು ಮಗಳ ನಾನು ಕೊಟ್ಟೇನೆನುತ ನಿಶ್ಚಯವ ಮಾಡಿ ಇಷ್ಟುವಿಚಾರದಿಂದೀಗೇನು ಫಲವೆಂದು ಸತ್ಯಧರ್ಮಜ ನುಡಿದನು ನಗುತ 8 ಕೇಳುತ ಕುಂತಿಸುತರುಯೆಂದು ಭಾಳ ಸಂಭ್ರಮದಿ ಪಾದವ ತೊಳೆಯೆ ಕಾಲ ನೀಡಲು ಕಂಡು ತಾ ಜಾರಿ ಹಿಂದಕ್ಕೆ ಸರಿದ ರಾಜ9 ಸತ್ಯವತಿಯ ಸುತರ್ಹೇಳುತಿರೆ ಮತ್ತಾಗೆರೆದನು ಮಗಳ ಧಾರೆ ಮುತ್ತು ಮಾಣಿಕ್ಯದ ಮಂಗಳಸೂತ್ರವ ಕಟ್ಟಿ ಕೊಟ್ಟನೈವರಿಗೆ ದ್ರೌಪದಿಯನಾಗ 10 ಲಾಜಾಹೋಮವು ಭೂಮಾನಂತರದಿ ಮೂರ್ಜಗದೊಡೆಯ ಕೃಷ್ಣನ ಸಹಿತ ರಾಜಾಧಿರಾಜರೈವರು ಕುಳಿತಿರೆ ಕೃಷ್ಣ ರಾಜ ಧರ್ಮರ ವಾಮಭಾಗದಲಿ 11 ರುಕ್ಮಿಣಿದೇವಿ ಪಾರ್ವತಿ ಗಂಗಾ ಸತ್ಯಭಾಮೇರ ಸಹಿತಾಗಿ ಬಂದು ಸತ್ಯ ಪಾಂಡವರಿಗೂಟಣಿ (ಉರುಟಣೆ?) ಮಾಡಬೇಕೆಂದು ಕೃಷ್ಣೆ ನೀಯೇಳೆಯೇಳೆನುತಿದ್ದರು 12 ಕಂಜನೈಯ್ಯನು ಕಡೆನೋಟದಲಿ ತಂಗಿ ಕೃಷ್ಣೆಯ ಮುಖವನು ನೋಡಿ ಅಂಜದಲ್ಹೇಳುತಲೈವರ ಗುಣಗಳ ಹಂಗೀಸೂಟಾಣಿ ಮಾಡಬೇಕೆಂದನು 13 ಕನ್ನೆ ದ್ರೌಪದಿ ಅರಿಷಿಣ ಪಿಡಿದು ತನ್ನ ಪತಿಗೆ ಎದುರಾಗಿ ನಿಂತು ಸುಮ್ಮನೆ ರಾಜ್ಯವ ಬಿಟ್ಟು ವನವನಾ ತಿರುಗೋ ಧsÀರ್ಮರೇ ನಿಮ್ಮ ಮುಖ ತೋರಿರೆಂದಳು 14 ಕಂಕಭಟ್ಟೆನಿಸುವೊ ದೊರೆಗಳಿಗೆ ಕುಂಕುಮ ಹಚ್ಚುವೆ ಕುಶಲದಿಂದ ಪಂಚಾಂಗ ಪಠಿಸುವ ಪಾಣಿಯ ಪಿಡಿದು ನಾ ಮುಂಚೆ ಗಂಧವ ಹಚ್ಚುವೆನೆಂದಳು 15 ಯಿಟ್ಟಸತಿಯ ಅನುಜರನೆಲ್ಲ ಗಟ್ಟಿ ಹೃದಯಕ್ಕೆ ಬುಕ್ಕಿ ್ಹಟ್ಟು ಪರಿಮಳ ಹಚ್ಚಿ ಅಚ್ಚ ಮಲ್ಲಿಗೆ ಹಾರ ಹಾಕುವೆನೆಂದಳು 16 ಶಾಂತಧರ್ಮರ ಚರಣಕ್ಕೆ ಎರಗಿ ಮಂತ್ರಿಭೀಮನ ಮುಂಭಾಗದಲಿ ಕಾಂತರ ಮುಖಕ್ಕೆ ಹಚ್ಚುವೆನೆಂದಳು 17 ಬಂದೇಕಚಕ್ರನಗರದಲ್ಲಿ ಬಂಡಿಲನ್ನವನುಂಡು ¨ಕಾಸುರನ ತುಂಡು ಮಾಡ್ಯವನ ತೋರಣ ಕಟ್ಟಿದ ತೋಳಿಗೆ ಗಂಧವ ಹಚ್ಚೇನೆಂದಳು ನಗುತ 18 ಇಟ್ಟ ವಿಷದ ಲಡ್ಡಿಗೆಯ ಮೆದ್ದು ಭಿಕ್ಷÀದನ್ನವು ಬರಿಯಾಗದಲೆ ಹುಟ್ಟುಹಿಡಿದು ಅಟ್ಟುಂಬೋ ಪುರುಷರಿಗೆ ಬು- ಕ್ಕಿ ್ಹಟ್ಟು ಪರಿಮಳ ಹಾಕುವೆನೆಂದಳು 19 ಕಪಿಗಳೊಳಗೆ ಶ್ರೇಷ್ಠರುಯೆನಿಸಿ ಅತಿ ಬ್ಯಾಗದಿಂದ ಕೌರವರ ಕುಲ ಹತವ ಮಾಡ್ಯತಿಯಾಗೋ ಪತಿಗೆ ಮಾಲೆಯ ಹಾಕಿ ಅತಿ ಭಕ್ತಿಲಿಂದೆರಗಿದಳಾಗ 20 ಸರಸಿಜಮುಖಿ ದ್ರೌಪದಿದೇವಿ ಅರಸು ಅರ್ಜುನಗೆದುರಾಗಿ ನಿಂತು ಅರಿಷಿಣ ಕುಂಕುಮ ಪಿಡಿದು ಸ್ತ್ರೀರೂಪವ ಧರಿಸುವ ನಿಮ್ಮ ಮುಖ ತೋ(ರಿ)ರೆಂದಳು 21 ತಂದು ಗಜವ ತೋ
--------------
ಹರಪನಹಳ್ಳಿಭೀಮವ್ವ
ನೀಲಮೇಘಶ್ಯಾಮ ರಾಮ ನಿಖಿಳಲೋಕ ಕ್ಷೇಮಧಾಮ ಪ. ಪಾಲಿಸೊಲಿದು ಹನುಮಪ್ರೇಮ ಪಾವನಾತ್ಮ ಸೀತಾರಾಮ ಅ.ಪ. ಸತ್ಯಸಂಕಲ್ಪಾನುಸಾರ ಚಿತ್ತಚಿನ್ಮಯಾತ್ಮ ಶ್ರೀಧರ ನಿತ್ಯಮುಕ್ತ ಪುಣ್ಯನಾಮ ಪ್ರತ್ಯಗಾತ್ಮ ಪೂರ್ಣಕಾಮ 1 ಕಮಲನಾಭ ರವಿಶತಾಭ ಸುಮನಸಾರ್ಚಿತಾಂಘ್ರಿಶೋಭ ಅಮಿತವಿಕ್ರಮ ಸಮರಭೀಮ ಶಮಲಶಮನ ಸಾರ್ವಭೌಮ 2 ಶಾರದೇಂದುಸನ್ನಿಭಾನನ ಮಾರುತಿಹೃದಯೈಕಸದನ ಧೀರಲಕ್ಷ್ಮಿನಾರಾಯಣ ಸೂರಿಜನೋದ್ಧರಣನಿಪುಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ. ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ. ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ 1 ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ 2 ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ ಬಾರೋ 3 ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ ಮಾಧವ ಬಾರೋ 4
--------------
ಸರಸ್ವತಿ ಬಾಯಿ