ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೆನ್ನೊಳು ದೀನಬಂಧು ಪ. ಕರುಣಿಸೆನ್ನೊಳಿರುವ ಸಕಲದುರಿತಜಾತ ರೋಗಗಳನು ಪರಿಹರಿಸಿ ಪಾದಾರವಿಂದ ಸಿರದೊಳಿರಿಸಿ ಸಲಹು ಬೇಗ ಅ.ಪ. ಮೂರು ವಿಧದಲಿ ಸುತ್ತಿಕೊಂಡ ಘೋರ ತಾಪದಿ ಸೂರೆಗೊಳುವ ಗಹನ ಸಂಸಾರ ಕೂಪದಲ್ಲಿ ಬಿದ್ದು ಚೀರುತಿಹೆನು ಚಿತ್ತದಲ್ಲಿ ತಾರೊ ತರಳಗೊಲಿದ ದೇವ 1 ಆದಿ ಭೌತಿಕಾದೇಹಜನಿತಾಗಾಧ ಮೋಹ ತಾ ಬಾಧೆ ಸಹಿಸಲಾರೆ ಮುನಿಸಮಾಧಿಗಮ್ಯ ನಿನ್ನ ಮರವ ವೇಧೆ ವದಗಿ ಬರುವ ಮೊದಲೆ ಮಾಧವನೆ ಮದೀಯನೆಂದು 2 ಮಂದನಾದೆನು ಮಮತೆಯಿಂದ ಕುಂದಿಹೋದೆನು ಮುಂದುಗಾಣವಂದ ಕಾಣದಿಂದು ನಿನ್ನ ಬೇಡಿಕೊಂಬೆ ಇಂದಿರೇಶ ವೆಂಕಟೇಶ ಎಂದು ನಿನ್ನ ಪದವ ಕಾಂಬೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ1 ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ2 ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ 3 ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ ವಿದ್ಯೆನಿಧಿ ಗುರುರಾಯ ಬಾಳ್ದ ಚರಣ 4 ಧರಣಿಯನು ಬಲವಂದು ದಣಿದು ಬಂದಿಹ ಚರಣ ಕೈವಲ್ಯ ಪಡೆದ ಚರಣ ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ ಸ್ಥಿರವಾಗಿ ಉಡುಪಿಯೊಳು ನಿಂದ ಚರಣ 5
--------------
ವರಹತಿಮ್ಮಪ್ಪ
ಕರುಣಿಸೈ ಶ್ರೀ ರಾಮ ಕೌಸಲ್ಯ ಪ್ರೇಮ ಶರಣ ಜನಕನು ಪೊರೆವ ಕಾರುಣ್ಯಧಾಮ ಪ. ದಶರಥಾತ್ಮಜ ಯಜ್ಞ ಕಾಯ್ದು ಸೀತೆಯ ವರಿಸಿ ಕುಶಲದಿಂದಲಿ ಬಂದು ನಗರದಲ್ಲಿರಲೂ ಸತಿ ಅನುಜಸಹ ವನದಿ ನಸುನಗುತ ಚರಿಸಿ ರಕ್ಕಸರ ಸದೆಬಡಿದೆ 1 ಸತಿಯೆ ಕಳೆದಿರೆ ಹನುಮ ಹಿತವಾರ್ತೆ ಬಿನೈಸೆ ಹತಗೈದು ರಾವಣಾದಿಗಳನೆಲ್ಲ ಹಿತದ ರಾಜ್ಯದ ವಿಭೀಷಣ ರವಿಜರಿಗೆ ಇತ್ತು ವ್ರತ ಬಿಡಿಸಿ ಭರತನಿಗೆ ಧರಣಿಯಾಳಿದನೇ 2 ಪಟ್ಟಾಭಿರಾಮ ಮಂಗಳ ನಾಮ ಕೃಪೆಯಿಂದ ಇಷ್ಟಾರ್ಥವೀಯೊ ಸನ್ಮಂಗಳವನೂ ದಿಟ್ಟ ಶ್ರೀ ಹನುಮ ವಂದಿತ ಚರಣ ನಮಿಸುವೆನು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೇ 3
--------------
ಅಂಬಾಬಾಯಿ
ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ಎನಗೆ ಅರಘಳಿಗಿ ನೀ ಎನ್ನ ಹೃದಯದಿಂದಲಗದ್ಹಾಂಗೆ ಧ್ರುವ ಕಣ್ಣಿನೊಳಗ ನಿನ್ನ ಕಾಣದಿದ್ದರೆ ಪೂರ್ಣ ಪ್ರಾಣನಿಲ್ಲದೊ ನಿಮಿಷಾರ್ಧದಲಿ ಕ್ಷಣಕ್ಷಣಕ್ಕೊದಗಿ ನೀ ಖೂನದೋರದಿದ್ದರೆ ತನು ವಿಕಳಿತವಾಗಿ ಕ್ಷೀಣಹೊಂದುವದೊ 1 ಬೇಡುವದೊಂದೆ ನಾ ಬಿಡದೆ ನಿಜರೂಪ ಪೊಡವಿಯೊಳಗೆ ದೃಢ ನಿಶ್ಚಯಲಿ ಎಡಬಲವು ನೋಡದೆ ಒಡಲ ಹೊಕ್ಕಿದೆ ನಿನ್ನ ಕಡೆಗಾಣಿಸುವದೆನ್ನೊಡೆಯನೆ ಪಿಡಿದು ಕೈಯ 2 ಸುತ್ತಸೂಸುತಲಿನ್ನು ಚಿತ್ತದಿಂದಗಲದೆ ನಿತ್ಯವಾಗಿರೊ ನೀ ಹೃತ್ಕಮಲದಲಿ ಹೆತ್ತ ತಾಯಿಯೋಪಾದಿ ತುತ್ತುತುತ್ತಿಗೆ ಒಮ್ಮೆ ಹತ್ತಿಲಿದ್ದು ಸಂತತ ಸಲಹೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1 ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2 ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಗುರುವೆ ಚರಣ ಸ್ಮರಣೆಯು ನಿಮ್ಮ ಧ್ರುವ ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವದು ದಯ ತರಣೋಪಾಯದ 1 ಒಲಿಸಿಕೊಳ್ಳಲು ನಿಮ್ಮ ಫÀಲ್ಗುಣನಂಥವನಲ್ಲ ಗೆಲಿಸುವದೊ ನೀ ಸುಪಥ ನೆಲೆನಿಭದೋರಿ 2 ಮೊರೆ ಇಡಲು ನಾ ನಿಮ್ಮ ಕರಿರಾಜನÀಂಥವನಲ್ಲ ಕರುಣಿಸುವದೊ ಎನಗೆ ಕರವಿಡಿತು ಪೂರ್ಣ 3 ಶರಣ ಹೋಗಲು ನಿಮ್ಮ ಧೀರ ವಿಭೀಷಣನಲ್ಲ ಪಾರ ಗೆಲಿಸುವದೊ ನಿಮ್ಮ ವರಕೃಪೆಯಿಂದ 4 ಭಕ್ತಿ ಮಾಡಲು ನಿಮ್ಮ ಶಕ್ತಸಮಥನಲ್ಲ ಯುಕ್ತಿದೋರುವದೊ ನಿಮ್ಮ ಮುಕ್ತಿಮಾರ್ಗದ 5 ಸ್ತುತಿಯ ಮಾಡಲು ನಿಮ್ಮ ಅತಿಶಯ ಭಕ್ತ ನಾನಲ್ಲ ಗತಿಸುಖದೋರುದೆನಗೆ ಪತಿತಪಾವನ 6 ದಾಸರ ದಾಸನೆಂದು ಲೇಸಾಗಿ ಮಹಿಪತಿಗೆ ವಾಸನೆ ಪೂರಿಸೊ ಪೂರ್ಣ ದೇಸಿಗರ ದೇವ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೊ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ಪ ದಯಮಾಡೊ ಶ್ರೀ ಗುರುರಾಜ ಹಯವದನನಿಗತಿ ಪ್ರಿಯ ಅ.ಪ ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1 ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2 ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3 ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4 ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
--------------
ಪ್ರದ್ಯುಮ್ನತೀರ್ಥರು
ಕರುಣಿಸೋ ಗುರು ತಾರಿಸೋ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ಭವ ಜನ್ಮದಲಿ ಬಂದು ಬಹು ಬಳಲಿದೆ ನಾನು ಮೂವಿಧ ಬಲೆಯಲಿ ಸಿಲುಕಿ ಜೀವನವು ಅವಿದ್ಯ ದಾಟಕ ಐವರು ಕೂಡಿ ತಾಂ ಜೀವನ ಮುಕ್ತಿಗಾಣಿಸಗುಡದಿಹರು 1 ಮೂರೊಂದು ಮಂದಿಯ ಸೇರುಗುಡದೆ ಪಥ ಅರುಮಂದಿಯು ಕೂಡಿ ಕಾಡುತಲಿ ಆರುಮತ್ಯೆರಡು ಮಂದಿಯ ಕಾವಲಿಗೆ ನಾನು ಆರಯ್ಯ ಶ್ರೀಗುರು ಶಿರೋಮಣಿಯ 2 ಹತ್ತು ಹೊಳೆಯ ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತವತಾರಿಸಿ ಮೂಢ ಮಹಿಪತಿಯ ಸಂತತಸದ್ಗತಿ ಸುಖ ಈವ ಘನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೋ ಗುರು ಮಾರುತಿ ಶ್ರೀಧರ ಪರನೆಂದು ಬೋಧಿಸುತಲಿ ಪರ ವಾದಿಯ ಜಯಸಿದ ಮೋದತೀರ್ಥಮುನಿ 1 ಅಬಲೆಯ ಪ್ರಾರ್ಥನೆ ಲಾಲಿಸಿ ನಿಶೆಯೊಳು ಖೂಳನುದರವನ್ನು ಸೀಳಿ ಮೆರೆದ ಘನ 2 ಸ್ಮರಿಸುವ ಜನರ ಕೋರಿಕೆ ನೀಡಲು ಕೊರವಿ ಪುರದೊಳು ನೆಲೆ ನಿಂತ ಧೀರ 3 ಸೋಮಧರಾರ್ಚಿತ ಶಾಮಸುಂದರನ ನಾಮಾಮೃತವನು ಪ್ರೇಮದಿಂದ ಕೊಡು 4
--------------
ಶಾಮಸುಂದರ ವಿಠಲ
ಕರುಣಿಸೋ ಬೇಗನೆ ಕರಿವರದ ಹರಿ ಪ ತೋಯಜನಯನ ಕಾಯಜಪಿತ ದೈ ಹರಣ ಸ್ವಶ್ರೇಯ ಸಕರಹರಿ 1 ಮಾಧವ 2 ಅಂಡಜಗಮನ ಆಖಂಡಲನುತ ಭೂ ಮಂಡಲ ಪಾಲಕ ತಾಂಡವ ಕೃಷ್ಣಾ 3 ನಘ ತ್ರಿಗುಣಾತ್ಮಕ ಹರಿ 4 ಗೋಪತನಯ ಸಂಜೀವಿತ ತ್ರಿಜಗ- ದ್ವ್ಯಾಪಕ ಘನ ಹೆನ್ನೆಪುgದÀ ಶ್ರೀಪತಿ 5
--------------
ಹೆನ್ನೆರಂಗದಾಸರು
ಕರುಣಿಸೋ ಶಾಸ್ತ್ರಾರ್ಥ ಮದ್ಗುರು ಶ್ರೀ ವಿಷ್ಣುತೀರ್ಥಾ ಪ ಭವರೋಗ ಭೇಷಜನೆ ಬಹುಬಾಧೆ ಬಡುವೆನೊ ಭಾರತೀಶನ ಮುಖ್ಯ ಪ್ರೀತಿಪಾತ್ರಾ 1 ಶ್ರೀನಾಥ ನಿನ್ನಂಥ ದಾತರನು ನಾಕಾಣೆ ಅವನಿಯೊಳಗೆಲ್ಲ ಅರಸಿ ನೋಡಲು 2 ಪರಮ ಭಾಗವತರಿಗೆ ಮುಖ್ಯ ಹಿತಕರ್ತ ನೀನೆ ಧ್ವರಿಯೇ ಧರಿಯ ರಮಣ ತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೋಜ್ವಲ ಭರಿತೇ ಶೃತಿ ಸ್ಮøತಿ ವಿಖ್ಯಾತೆ ಅತಿಶಯ ಸುಖ ಚರಿತೆ ನುತ ಗುಣ ಗಣ ಮಂಡಿತೆ ಮಹಾಪಯೋನಿಧಿಸುತೆ ಶ್ರೀ ಹರಿ ಮನೋವ್ರತೆ ಮಹಿಪತಿಸುತ ದೈವತೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು