ಒಟ್ಟು 387 ಕಡೆಗಳಲ್ಲಿ , 68 ದಾಸರು , 329 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾತವ್ಯ - ಲಾತವ್ಯ ಪ ಖ್ಯಾತಾಗ್ರೇಸರ | ಭೂತರಾಜನುತ ಅ.ಪ. ಸ್ವಪ್ನದ್ರಷ್ಟ್ರುವು | ವಿಪ್ರನ ಮುಖದಿಂಸ್ವಾಪ್ನಾಖ್ಯಾನವ | ಸುಪ್ರಕಟಿಸಿದೆ 1 ವ್ಯಾಸರ ಸಮ್ಮುಖ | ವಾಸಿಸುತಿಹ ಸುವಿಶೇಷ ಮಹಿಮ ಗುರು | ದೈಶಿಕರೊಡೆಯನೆ2 ಆಖಂಡಲ ಮುಖ | ಮಂಡಿತ ಚರಣನೆಪಾಖಂಡರ ಮತ | ಖಂಡಿಸಿ ಮೆರೆದಾ 3 ಭಯವಿದೂರ ತವ | ದಯವನು ಪ್ರಾರ್ಥಿಪೆಹಯವದನನ ಪದ ಪ್ರಿಯ ಭಜಕಾಗ್ರಣಿ4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಾಣಿಸು | ಭಾವಿ ಮರುತ ಗುರು 5
--------------
ಗುರುಗೋವಿಂದವಿಠಲರು
ಲಾಲಿಮನುಕುಲತಿಲಕ ಮದನಾರಿವಿನುತ ಲಾಲಿಜನಕಜಾಮಾತ ಜಾನಕೀ ಸಮೇತ ಪ. ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ ಕೌಶಿಕಕ್ರತುಪಾಲ ಕರುಣಾಲವಾಲ ಪೋಷಿತಾಮರಜಾಲ ಬಾಲೇಂದು ನಿಭಫಾಲ ದಶಕಂಠಮುಖಕಾಲ ಜಾನಕೀಲೋಲ 1 ನಾಕೇಶನುತಚರಣ ನಕ್ತಂಚರಶಮನ ಶ್ರೀಕಾಮಿನೀಸದನ ರಾಜೀವನಯನ ಲೋಕನಾಯಕ ಸರ್ವ ಲೋಕಪಾಲಕ ದಿವ್ಯ ಸಾಕೇತಪುರನಿಲಯ ಸನಕಾದಿಗೇಯ 2 ಈಶಸನ್ನುತ ನಾಮ ನೀಲಮೇಘಶ್ಯಾಮ ಶೇಷಾದ್ರಿಶಿಖರಧಾಮ ಶ್ರೀರಾಮನಾಮ ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ ಕೋಸಲಾಧಿಪರಾಮ ಪರಿಪೂರ್ಣಕಾಮ 3
--------------
ನಂಜನಗೂಡು ತಿರುಮಲಾಂಬಾ
ವಂದಿಸಿ ಬದುಕಿ ತಂದೆ ಮುದ್ದು ಮೋಹನ ಗುರುಗಳ ಪ ಇಂದಿರೆ ಅರಸ ಅಂದ ತಲ್ಪರಂಶರೆಂಬರಾ ಅ.ಪ. ತರಳತನಾರಭ್ಯ ಹರಿಯ | ಪರಮ ಅನುರಾಗದಿಂದ ಪರಿಸರಾನಂದ ತೀರ್ಥ | ಪರಮಮತ ವಿಚಾರದಲ್ಲಿ |ಅರೆಕ್ಷಣವು ಬಿಡದೆ ನಿರತರಾ | ಆತ್ಮ ಜ್ಞಾನದರ್ಶನಾನುಷ್ಠಾನ ಚರಿಸುತಾ | ಭಕ್ತಿಯೇ ಸುಪ್ರಚುರ ಪಂಥವನ್ನೆ ಮಾಡುತಾ | ಯುಕ್ತಿಯಿಂದಚರಿಪ ಸರ್ವವೂ ಶ್ರೀಹರಿಯ | ಪರವು ಎಂದ ಕಡಿದ ಬಂಧ 1 ವ್ಯಾಸ ಗ್ರಂಥ ಸದಾಭ್ಯಾಸಿ | ದಾಸಕೂಟವೆಂಬ ವರಜಲಾಶಯಕೆ ಪರಮ ಅರ್ಥ ತಾ | ರೇಶನ್ನುದಿಸಿ ಭೂಸುರ ಮನೋಲ್ಲಾಸ ಮಾಡಿ ಲೇಸಾಗಿ ಬೆಳಗುತ | ಜ್ಞಾನ ಕಿರಣಸೂಸ್ಯನೇಕಾಂಕಿತಾಗಳ | ಇತ್ತು ಕರ್ಮಹ್ರಾಸ ಮಾಳ್ವ ಬಗೆಯ ತಿಳುಹುತ | ಕವನದಿಂದಸಾಸಿರ ಪುಷ್ಪಮಾಲೆ ಹರಿಗಿತ್ತ ದಯವ ಪೊತ್ತ2 ಕ್ಲೇಶ ಸಂಶಯಾ | ಹರಿಸಿ ಪವನ ಮತದಿ ದೀಕ್ಷೆಯಾನಿರತಿಶಯದ ದಾಸದೀಕ್ಷೆಯ | ಇತ್ತು ಹೃದಯದಲ್ಲಿಹರಿಯ ಮೂರ್ತಿಯನ್ನೆ ನೋಡುವ | ಶಾಸ್ತ್ರ ಸಮ್ಮತಿಕೀರ್ತನೆಗಳ ನುಡಿಸಿದಾ | ಗುರು ಗೋವಿಂದ ವಿಠಲ ಪದಸರೋಜ ರಜವ ಶಿರದೊಳ್ ಧೃತರ | ಕೃಪಾಕರರ 3
--------------
ಗುರುಗೋವಿಂದವಿಠಲರು
ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ ಗೋವಿಂದ ನಂದ ಮೂರುತಿ ಹರೆ ಪ ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ ದೇವಕೀ ವಸುದೇವ ಭಾವನಾ ಗೋಚರ 1 ಹಾರಕುಂಡಲ ಮನ ಮಾಲಾವಿರಾಜಿತ ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ2 ಧೇನುನಗರ ಪರಿಪಾಲಕ ವೇಂಕಟೇಶ ಸಾನುರಾಗದಿ ಪೊರೆ ಗಾನವಿನೋದ ಹರೆ 3
--------------
ಬೇಟೆರಾಯ ದೀಕ್ಷಿತರು
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ವೆಂಕಟ ಬಾರೋ ರಿಪುಸಂಕಟ ಬಾರೊ ಕಿಂಕರಿಗೊಲಿದ ನಿಶ್ಶಂಕ ಬಾರೋ ಪ ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ ಚೆಂದದಿಂದಲೊಪ್ಪುತಿಹ ಇಂದುವದÀನ ಮಂದರೋದ್ಧಾರನೆ ಮಹಾನಂದ ಮೂರುತಿ ಪಾದ ವಂದಿಪನೆಂದು 1 ಲೌಕೀಕ ವಿಲಕ್ಷಣ ಅನೇಕ ಏಕ ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ಪ್ರಾಕೃತ ರಹಿತಗಾತ್ರ ಲೋಕಪಾವನ ಶೋಕ ಮೂಲ ನಾಶನ ವಿಶೋಕ ಜನಕ 2 ಅಂಗ ಅಂಗೀ ಭಾವದಿಂದ ಅಂಗದೊಳಿದ್ದು ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ ಭೃಂಗ ಜಗದಂತೆ- ರಂಗ ರಂಗರಾಜ ಸುಖಸಂಗ ಅನಂಗ 3 ಆಪ್ತಕಾಮ ಅಮೃತಾಂಗ ಗುಪ್ತಮಹಿಮ ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತವಾಸ ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ 4 ಅಗಣಿತ ಬಂಧು ಅಗನಾಗ ಧಾರಕನೆ ನಾಗ ಭಂಜನ ಆಗಸದಂಗಾಂಗುಷ್ಟದಿಂದ ಪೆತ್ತನೆ ಆಗಲೀಗಲೆನ್ನದಲೆ ಸಾಗಿ ಬೇಗದಿ5 ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡೆ ಪೊದ್ದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು ಭದ್ರ ಫಲದಾಯಕ ಸಮುದ್ರಶಯನ ಮಧ್ಯಜೀವಿ ವಂದ್ಯ ಸುಪ್ರಸನ್ನ ಮೋಹನ್ನ 6 ಜೀವಾಭಿಮಾನಿ ಗಿರೀಶ ದೇವ ದೇವೇಶ ಜೀವರಾಶಿಗಳ ಸ್ವಾಭಾವ ಪ್ರೇರಕ ಜೀವನನಾಗಿ ನಮ್ಮ ಕಾವುತಲಿಪ್ಪ ರಾ- ಜೀವ ನಯನ ವಿಜಯ ವಿಠ್ಠಲ ಪೂರ್ಣ 7
--------------
ವಿಜಯದಾಸ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ | ಕಿಂಕರರಿಗೊಲಿದ ನಿಃಶಂಕ ಬಾರೊ ಪ ಇಂದಿರೆ ಕೂಡ | ಚಂದದಿಂದಲೊಪ್ಪುತಿಹ ಇಂದುವದನಾ || ಮಂದರೋದ್ಧಾರನೆ ಮಹನಂದ ಮೂರುತಿ | ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1 ಲೌಕಿಕ ವಿಲಕ್ಷಣ ಅನೇಕ ಏಕಾ | ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ || ಪ್ರಾಕೃತ ರಹಿತಗಾತ್ರ ಲೋಕಪಾವನ | ಶೋಕ ಮೂಲನಾಶನ ಅಶೋಕ ಜನಕಾ 2 ಮಣಿ ಅಗಣಿತ ಬಂಧು | ಆಗನಾಗಧಾರಕನೆ ನಾಗ ಭಂಜನಾ || ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ | ಆಗಲೀಗಲೆನ್ನದಲೆ ಸಾಗಿ ವೇಗದಿ 3 ಅಂಗ ಅಂಗಿ ಭಾವದಿಂದ ಅಂಗದೊಳಿದ್ದು | ಸಂಗಡ ತಿರುಗುವ ನೀಲಾಂಗ ನಿಃಸಂಗಾ || ಭೃಂಗ ಜಗದಂತ | ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4 ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ | ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ || ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ | ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5 ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ | ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ || ಭದ್ರ ಫಲದಾಯಕ ಸಮುದ್ರಶಯನಾ | ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6 ಜೀವಾಭಿಮಾನಿ ಗಿರೀಶ ದೇವ ದೇವೇಶಾ | ಜೀವ ರಾಶಿಗಳ ಸ್ವಭಾವ ಪ್ರೇರಕಾ || ಜೀವನವಾಗಿ ನಮ್ಮನು ಕಾವುತಿಪ್ಪ | ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
--------------
ವಿಜಯದಾಸ
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ-ಕಿಂಕರ ಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ ಪರ ಸಿರಿಯ ಬಯಸುವನೆ 1 ತಿರುಕೆಯಬೇಡುವನೆ ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ 2 ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ 3 ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ ಯೊಳುನೆನೆಯುವುದೆ ಬಲುಹುಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗೆಮಗುವತಿ ಘನವಹುದೆ ದುರ್ಘಟವಹುದೆ 8 ಮೊರೆಹೊಕ್ಕೆ ಕಾಯೊ ಯನ್ನ ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ 9
--------------
ಸರಗೂರು ವೆಂಕಟವರದಾರ್ಯರು
ಶರಣು ಶಾರದೆ ವಾಣಿ ಪಡರಮಾನಂದದ ಕೇಣಿ ಸುರಸಕಲ ಕೀರ್ವಾಣಿ ಕಲ್ಯಾಣಿ 1 ವಿದಿತ ಸುವಿದ್ಯದಾನಿ ಸದಮಲ ಸುಪ್ರವೀಣಿ ಮದಮತ್ತಗಜಗಾಮಿನಿ ಕಲ್ಯಾಣಿ 2 ಸ್ಪಹಿತ ಸುಖಕಾರಿಣೀ ಸಹಕಾರಿ ನಿರಂಜನ ಮಹಿಪತಿಸುತ ಸ್ವಾಮಿನೀ ಕಲ್ಯಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ. ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ 1 ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ 2 ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಶಾಮ ಸುಂದರ ಪ್ರೇಮವÀ ತೋರೆಲೊ ಪ ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ ಹಿಂದೆ ಅಜಮಿಳ ಒಂದನರಿಯದೆ ಕಂದನನ್ನು ನಾರಾ ಎಂದು ಕರೆಯಲು ಬಂಧುವೆಂದರಿತು ಮಂದಹಾಸದಿಂದ ಬಂದು ರಕ್ಷಿಸಿದೆ ಎಂದು ಕೇಳಿರುವೆ 1 ಕ್ರೂರ ಶಾಸನ ನಾರಿ ದ್ರೌಪದಿಯ ಸೀರೆ ಸೆಳೆದು ಮಾನ ಸೂರೆಗೊಳುತಿರೆ ಸಾರಿ ಕೂಗಲು ಭೂರಿದಯವನು ತೋರಿರುವೆ ಎಂದು ಕೋರಿರುವೆ ನಿನ್ನ 2 ಮುನ್ನ ಮಾಡಿದ ಎನ್ನ ಪಾಪಗಳಿಗೆ ಖಿನ್ನನಾಗಿರುವೆ ಎನ್ನ ಮನದಲಿ ಮನ್ನಿಸುತ್ತ ಸುಪ್ರಸನ್ನನಾಗಿ ಸದಾ ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ 3
--------------
ವಿದ್ಯಾಪ್ರಸನ್ನತೀರ್ಥರು
ಶಾರದೇಂದು ಸನ್ನಿಭಾನನೇ ಸರಸಿಜಲೋಚನೆ ಪ. ಶಾರದೇ ಸುವಿಶಾರದೇ ದಯೆಬಾರದೇ ನತಕಾಮದೆ ಭೂರಿಹರ್ಷದೆ ಬೀರಿ ನಲ್ಮೆಯಾಪಾರ ಸೌಖ್ಯವ ತೋರು ಕೀರ್ತಿಯ 1 ವಾಣಿ ವೀಣಾಪಾಣಿ ಮಂಜಳವಾಣಿ ಪುಸ್ತಕಧಾರಿಣಿ ವೇಣುನಾದ ವಿನೋದಿನಿ ಸುಜ್ಞಾನದಾಯಿನಿ ಪಾಹಿ ಜನನೀ 2 ಮಾತೆ ಮಂಗಳ ಗೀತೆ ಕವಿಸುಪ್ರೀತೆ ಪದ್ಮಜದಯಿತೆ ಖ್ಯಾತೆ ಶೇಷಗಿರೀಶ ಭಕ್ತಿಪ್ರದಾತೆ ಸದ್ಗುಣಪೂತೆ ಮಹಿತೆ 3
--------------
ನಂಜನಗೂಡು ತಿರುಮಲಾಂಬಾ
ಶುಕ್ಕುರವಾರದಿ ಭಕ್ತಿಲಿ ಭಜಿಸುವೆ ಲಕ್ಕುಮಿ ದೇವಿಯನುರುಕ್ಮಾಭರಣ ವಿಲಕ್ಷಣ ಶೋಭಿಪ ಸುಲಕ್ಷಣ ಮೂರ್ತಿಯನುರಕ್ಕಸರಿಪು ಬಲಪಕ್ಕದಿ ಕೂತಿಹ ರುಕ್ಮಿಣಿ ದೇವಿಯನು ಪ ಸಂತತ ಭಜಿಸುವ ಸಂತರ ಹತ್ತಿರ ನಿಂತು ರಕ್ಷಿಸುತಿಹಳುಶಾಂತಳು ಸದ್ಗುಣವಂತಳು ಕಮಲಾಕಾಂತನ ಸುಪ್ರಿಯಳೂ ಕರವೀರಪ್ರಾಂತ್ಯದೊಳಿರುತಿಹಳು ಹೃತ್ಕಮಲಂಚಳ ಸಂಸ್ಥಿತಳು 1 ಮಾಧವ ಭೂಮಿಯ ಮಂಗಳ ಮೂರ್ತಿಯು ಸುಖರಾಶಿ2 ಆಸ್ಯಾಂಬುಜತನು ಹಾಸಸುಕುಂತಳೆ ಭೂಷಿತ ಬಿಂಬೋಷ್ಠೀಕೂಸಿಗೆ ಕೊಡು ಇಂದಿರೇಶನ ಸಹಜಗದೀಶಳೆ ತವ ಭೆಟ್ಟಿ3 ಅಗಣಿತ ಮಹಿಮನಸುಗುಣದೊಳಾಡುವ ಮಿಗೆ ಹರುಷವ ಕೊಡುನಗೆಮುಖದವಳೇ 4 ಸಂದರವದನೆ ಸಿಂಧುರಗಮನೆ ಕುಂದದ ಅಸುರರನೆಮಂದರಮಾಲಾ ಭೂಷಿತವೇಣಿ ಇಂದಿರೇಶನ ಪಾದದ್ವಂದ್ವತೋರಿಸು ನಿನಗೊಂದಿಸುವೆನು ಶರದಿಂದು ಸುಮನಸೆ 5
--------------
ಇಂದಿರೇಶರು