ಒಟ್ಟು 284 ಕಡೆಗಳಲ್ಲಿ , 57 ದಾಸರು , 267 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಸ ನಯನ ಶ್ರೀರಾಮಚಂದ್ರನ ಚರಿತೆ ಸಾರ ಹೃದಯ ಶ್ರೀ ಪ ಭವ ಮುಖರರ ಮೊರೆಯ ಕೇಳಿ ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ. ದಶರಥ ಸುತನೆನಿಸಿ ವಸುಧೆಯೊಳವತರಿಸಿ ಕುಶಿಕಸುತನ ಯಜ್ಞವ ನೆರೆಪಾಲಿಸಿ ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ ವಸುಧೀಶ ಜನಕನಾಸ್ಥಾನ ಪ್ರವೇಶಿಸಿ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯನೊಲಿಸಿ ಅಸಮ ಭಾರ್ಗವನೊಡನೆ ಸರಸವ ನೆಸಗಿ ಜಗದೊಳು ಲೀಲೆ ತೋರಿದ 1 ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ ಅನುಜನೊಡನೆ ಹೊರಟು ವನವಾಸಕೆ ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು ದುರುಳ ವಿರಾಧಮುಖರನು ಹನನಗೈದಾ ಬಳಿಕ ಶರಭಂಗ ಮುನಿಗೆ ಸದ್ಗತಿಯಿತ್ತಗಸ್ತ್ಯನ ವಿನುತ ಅಸ್ತ್ರಗಳನು ಪಡೆದನಾ 2 ಪಂಚವಟಿಯೊಳಗೆ ಸಂಚುಗೈಯುತ ಬಂದ ಕಾಂಚನಮೃಗವನು ಪಂಚಕಗೊಳಿಸಿ ಕುಂಚಿತ ಮತಿಯ ದ್ವಿಪಂಚಶಿರನು ಬರಲು ವಂಚನೆಯಿಂದಪರಿಹರಿಸಲು ಸೀತೆಯ ಸಂಚುಕಾಣದೆ ವನವನದೊಳು ಸಂಚರಿಸುತಲಿ ಶೋಕ ತೋರುತ ಪಂಚಶರಹತನಂತೆ ಬಳಲುತ ಪಂಚಶರ ಪಿತ ಬಂದ ಪಂಪೆಗೆ 3 ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ ತರಣಿಸುತನ ಕೂಡೆ ಸಖ್ಯವ ಬೆಳೆಸಿ ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ ಪರಮ ವಜ್ರಶರೀರಿ ಪವನಜ ಶರಧಿಯ ಲಂಘಿಸಿ ಧರಣಿತನಯಳಿ ಗರುಹಿ ಕುಶಲವ ಮುದ್ರಿಕೆಯನಿತ್ತು ಉರುಹಿ ಲಂಕೆಯ ಬರಲು ಒಲಿದನು 4 ಭಕ್ತ ವಿಭೀಷಣನಿಗೆ ಇತ್ತು ಅಭಯವನು ಶರಧಿ ಬಂಧಿಸಿ ದಾಟಿ ಹತ್ತು ತಲೆಯವನ ಪುರವ ಪ್ರವೇಶಿಸಿ ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ ಮತ್ತೆ ಕುಂಭಕರ್ಣೇಂದ್ರಜಿತ್ ಮುಖ ದೈತ್ಯರನು ಸಂಹರಿಸಿ ರಣದೊಳು ಶತ್ರು ಭಯಂಕರನಾಗಿ ಮೆರೆದನು ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು 5
--------------
ವರಾವಾಣಿರಾಮರಾಯದಾಸರು
ಸಾರಸದಳ ನಯನೆ-ಸಲಹೆಮ್ಮನು ತೋರುವ ಜಗದಯನೆ ಪ ಶರಧಿ ಸುಕುಮಾರಿಣಿ ಹರಿ ಸಹ ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ. ಮಂದಹಾಸ ವಿಜಿತೇಂದು ಕಿರಣಿ ಗಜ ಮಂದಗಮನೆ ಸಂಕ್ರಂದನ ವಂದಿತೆ 1 ನೀರಜಸಮಪಾಣಿ ನೀ ಲಾಲಿಸು ಕೀರಮಧುರ ವಾಣಿ ತಾರಹಾರ ಶೃಂಗಾರತರಂಗಿಣಿ- ಮಾರಜನನಿ ಕಂಸಾರಿಯ ರಾಣಿ 2 ನೀಲಭುಜಗವೇಣಿ-ನೀನೇಗತಿ ಪಾಲಿಸು ಕಲ್ಯಾಣಿ ಬಾಲೆ ವರದ ವಿಠಲ ರಮಣಿ 3
--------------
ಸರಗೂರು ವೆಂಕಟವರದಾರ್ಯರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಸಾರಸಭವ ಮೋಹಿತೆ ದೇವಿ ಜಗನ್ಮಾತೆ ಪ ಚಾರುಕೀರ್ತಿ ಪರಿಶೋಭಿತೆ ಲಾವಣ್ಯಾಂಬರಭೂಷಿತೆ ಅ.ಪ ಸುರನುತೆ ಶಾರದೆ ಬುಧಗಣಸೇವಿತೆ ಮಯೂರರಂಜಿತೆ ವರ ಮಾಂಗಿರಿವರ ಭಾವಿತೆ ಪಾಹಿಮಾಂ ಲೋಕವಂದಿತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರಸಾಕ್ಷ ಘೋರದುರಿತ ದೂರಮಾಡೈ ಪ ಮಾರಜನಕಪಾರ ಮಹಿಮ ದೂರ ನೋಡದೆ ಬಾರೊ ಬೇಗ ಬಾರಿಬಾರಿಗೆ ನಿನ್ನ ನಂಬಿ ಸಾರಿಕೂಗಿ ಬೇಡುವೆನು 1 ಮೂಢತನದಿ ನಾಡ ತಿರುಗಿ ಖೋಡಿಯಾದೆ ಗಾಢಭಕುತಿಲಿ ಗಾಢ ನಿಮ್ಮ ಪಾವನ ಚರಿತ ರೂಢಿಯೊಳು ಧನ್ಯವಾಗದೆ 2 ಸಿರಿಯರಮಣ ಚರಣನಳಿನ ಮರೆಯಹೊಕ್ಕೆ ಕರುಣದೆನ್ನ ಮೊರೆಯ ಕೇಳಿ ದುರಿತದಿಂದ ಸೆರೆಯ ಬಿಡಿಸೆನ್ನ ಸಿರಿಯರಾಮ 3
--------------
ರಾಮದಾಸರು
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ. ಭೇರಿತಮ್ಮಟಾದಿ ಭಾರಿವಾದ್ಯಂಗಳು ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ. ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ ದೇವದೇವನ ರಾಣೀ ಶ್ರೀಮತೀ ಪದ್ಮಿನೀ 1 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ 2 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೇ ವಸುಮತೀ ತನಯೇ3
--------------
ನಂಜನಗೂಡು ತಿರುಮಲಾಂಬಾ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ
ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ ಧೀರ ಪಾಂಡವರ ಕೋರಿಕೆ ಸಲ್ಲಿಸಲು ಸಾರಸ ನಯನನು ಅ.ಪ. ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ ಹೇಮ ಮಕುಟೋತ್ತಮಾಂಗದಿ ಧರಿಸಿ ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ ರುತಿ ಬೆಳಗಲು ತಾ ಸುಮುಹೂರ್ತದಿ 1 ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ ಮಾರ್ತಾಂಡನಂತೆ ಮೆರೆಸಿ ಹಿಂಡುಬಳಗಗಳ ಕಂಡಾದರಿಸುತ ಪಾಂಡುಸುತರ ಬೀಳ್ಕೊಂಡು ಭರದಲಿ 2 ಸುಖದಿ ಪ್ರಯಾಣ ಬೆಳಸಿ ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3
--------------
ವರಾವಾಣಿರಾಮರಾಯದಾಸರು
ಸಾರಿಭಜಿಸಿರೋ 'ಜಯರಾಯರಂಘ್ರಿಯಪಾರುಮಾಳ್ಪರಾ ಸಂಸಾರಸಾಗರಾ ಪದೇಶ ದೇಶವಾ ಪರದೇಶಿಯಂದದಿಬ್ಯಾಸರಿಲ್ಲದೆ ತಿರುಗಿ ಕಾಶಿಗ್ಹೋದರು 1ಸಪ್ನದಲ್ಲಿ ಶ್ರೀ ಪುರಂದರದಾಸರಾಯರುವ್ಯಾಸಕಾಶಿಯಲ್ಲಿ ದಾಸ ದೀಕ್ಷೆಕೊಟ್ಟರು2ಬಾು ತೆರೆುತು ನಾಲಿಗೆ ಮೇಲೆ ದಾಸರು'ಜಯ'ಠ್ಠಲಾ ಎಂದು ಬರೆದು ಬಿಟ್ಟರು 3ಎಚ್ಚರಾುತು ದಿವ್ಯ ಜ್ಞಾನ ಹುಟ್ಟಿತು ಧೈನ್ಯ ಓಡಿತು ಹರಿಯ ಧ್ಯಾನ ಹತ್ತಿತು 4ದಾಸರಾದರು ಹರಿಯ ದಾಸರಾದರು ಕೂಸೀಮಗ ದಾಸ 'ಜಯದಾಸರಾದರು 5ಹರಿಯ ಶ್ರೇಷ್ಠತೆ 'ಂದೆ ಒರೆಗೆ ಹಚ್ಚಿದಾಭೃಗುಮರ್ಹಯೇ ನಮ್ಮ 'ಜಯದಾಸರು6ಪಾಪಕಳೆವರು ಭಕ್ತರ ತಾಪಕಳೆವರುಭೂಪತಿ'ಠ್ಠಲನ ಅಪರೋಕ್ಷ ಮಾಳ್ಪರು 7
--------------
ಭೂಪತಿ ವಿಠಲರು
ಸೀತೆ ಸದ್ಗುಣ ಗಣಗಳ ವ್ರಾತೇ ಪರಿಪಾಲಿಸು ಮಾತೇ ಪ ವಾತ ಜನನಿ ನಿರ್ಧೂತ ಕಲ್ಮಷೇ ಅ.ಪ. ನೀರೋಳು ಓಲ್ಯಾಡುತ ಹರಿ ಬರಲೂ | ವೇದಾಭಿಧೆ ಇರಲೂವಾರಿಜಾಕ್ಷನು ಭಾರವನ್ಹೊರಲೂ | ವೇದವತಿ ನೀನಿರಲುಭೂರಿ ವರಹ ರೂಪವ ಕೊಳ್ಳಲು | ಧಾತ್ರಿ ರೂಪಿ ಇರಲುಸಾರಸಾಕ್ಷಿ ನೀ ಲಕುಮಿ ರೂಪದಲಿ | ನಾರಸಿಂಹನನ ಆರಾಧಿಸಿದೇ 1 ಬಲಿಯನ್ನು ವಂಚಿಸಿ ಹರಿ ಬಂದೂ | ಸುಖಾಭಿಧೆಯಂದೂತಲೆಯ ಗಡಿಕಾನು ಅವನೆಂದು | ಹರಿಣಿಯಾದೆ ಅಂದೂತಲೆ ಹತ್ತರವನ ಅಳಿಯಲು ಬಂದು | ಜನಕಾತ್ಮಜೆ ಅಂದೂಕಳುವಿನಿಂದಪಾಲ್ ಬೆಣ್ಣೆಯಮೆಲ್ಲುವ |ಗೊಲ್ಲನ ವಲಿಸಿದಿ ಚೆಲ್ವ ರುಕ್ಮಣೀ 2 ತ್ರಿಪುರರ ವ್ರತವನಳಿದವಗೇ | ವಲ್ಲಭೆ ದೇವತಿಯಾಗೇಸುಫಲಾ ರಾವುತನಾದವನಿಗೇ | ರಾಣಿ ಪ್ರಭಾ ಆಗೇವಿಪುಳ ರೂಪಗಳ ತೋರ್ದವಗೇ | ವಿಪುಳ ರೂಪಿಯಾಗೇಚಪಲಾಕ್ಷಿಯೆ ಗುರು ಗೋವಿಂದ ವಿಠಲನ | ಸಫಲಗೈಸು ಮಮ ಹೃತ್ಕಮಲದಲಿ 3
--------------
ಗುರುಗೋವಿಂದವಿಠಲರು
ಸುಶರಣ ಸುರಪಾದಪ ಸುಶೀಲೇಂದ್ರ ಸನ್ಮುನಿಪ ಪ ಚಾರು ತುಳಸಿ ಸಾರಸಾಕ್ಷಮಣಿ ಚಾಪ 1 ಸಲೆ ಮಂತ್ರಾಲಯ ನಿಲಯರ ಒಲಿಸಿದ ಅಲವ ಬೋಧಮತ ಜಲಧಿಗೆ ಉಡುಪ 2 ಕ್ಷಿತಿದೇವ ತತಿನುತ ವರದಾತಟ ಪತಿ ಪದ ವೃತತಿಜ ಮಧುಪ 3 ಕೋವಿದ ಜನ ಸಂಸೇವಿತ ವರ ವೃಂ ದಾವನ ಮಂದಿರ ಪಾವನ ರೂಪ 4 ವರದ ಶಾಮಸುಂದರ ರಘುರಾಮನ ದುರಿತ ನಿರ್ಭೀತ 5
--------------
ಶಾಮಸುಂದರ ವಿಠಲ
ಸುಶೀಲೇಂದ್ರ ಸುಶೀಲೇಂದ್ರ ಅಸುನಾಯಕ ಮತ | ಬಿಸರುಹ ಭಾಸ್ಕರ ಪ ಕದಂಬ ವಿನುತ | ಜಿತ ಶಂಬರಾರಿ ಕರುಣಾಂಬುಧಿ ಗುರುವರ 1 ತುಂಗ ಮಹಿಮಯತಿ ಪುಂಗವರದ | ತ ರಂಗಿಣಿ ನಿಲಯ ಸುಮಂಗಳ ಚರಿತ 2 ಭಾಗವತ ಪ್ರಿಯ ರಾಘವೇಂದ್ರರರಮ ರಾಗಪಾತ್ರ ಮಧ್ವಾಗಮಜ್ಞ ಗುರು 3 ಸಾರಿದೆ ಸಂತತ ಸೊರಿವರ್ಯ | ಗುರು ಸಾರಸ ಮಧಕರ 4 ಶ್ರೀಮನೋವಲ್ಲಭ | ಶಾಮಸುಂದರನ ಪ್ರೇಮಾನ್ವಿತ ನಿಸ್ಸೀಮ ಮಹಿಮ 5
--------------
ಶಾಮಸುಂದರ ವಿಠಲ
ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ 1 ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು 2 ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು3 ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ4 ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ 5
--------------
ವಿದ್ಯಾಪ್ರಸನ್ನತೀರ್ಥರು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸೆಲವೋ ಸ್ಮರಿಸೆಲವೋ ಮನವೇ | ನಿರುತದಿ ಗುರುಮಹೀಪತಿ ಪಾದಾ ಪ ಆದ್ಯಾತ್ಮದಘನ ವಿದ್ಯೆಯ ಸಾಧಿಸಿ | ಸಿದ್ಧರ ನಡುವೆ ಪ್ರಸಿದ್ಧರಾದವರ 1 ನೆಟ್ಟನೆ ಶರಣರ ಪುಟ್ಟಿಸಿರಧಿಕಾ | ಬಿಟ್ಟುಪದೇಶವ ಕೊಟ್ಟು ಸಾಕುವರಾ 2 ಧಾರುಣಿಯೊಳು ಸಂಸಾರ ಮಾಡಿದರ | ಸಾರಸಜಲದಂತೆ ರಚಿಸಿದರಾ 3 ಯೋಗಧಾರುಣದಿ ಸಾಗಿಪದಿನಗಳು | ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4 ವಿತ್ತಜನರು ತಂದಿತ್ತರೆ ಹಿಡಿಯದೆ | ನಿತ್ಯವ್ಯಯವ ಪವಡಿಸುತಿಹರವರಾ5 ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6 ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ ಮಸ್ತರಲಿ ನಿಜ ವಸ್ತು ಕಂಡವರಾ7 ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ ರಾಕರಿಸದೆ ಅಂಗೀಕರಿಸಿದರಾ 8 ಎಂದೆಂದಿಗೂ ಹೊರಗೊಂದಿನ ಹೋಗದೆ | ಮಂದಿರದೊಳಗಾನಂದದಲಿಹರಾ9 ತಾಪತೃಯದಾ ಭವಪರಿಹರಿಸುತ | ತಾಪೋರೆದನು ಗುರು ಶ್ರೀಪತಿಗುರುಪಾದಾ 10 ಅಂಕಿತ-ಗುರುಶ್ರೀಪತಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು