ಒಟ್ಟು 7503 ಕಡೆಗಳಲ್ಲಿ , 128 ದಾಸರು , 4808 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾನಂದ ಕರುಣಾಸಿಂಧು ವರವ ನೀಡಲು ಭಕುತಬಂಧು ಪ ಪರಮಚರಿತ ದುರಿತರಹಿತ ಪೊರೆಯೊ ಪ್ರಥಮಜನರ ಪ್ರೀತ ಸ್ಮರಿಪೆ ನಿರುತ ಸುರಗಣನುತ ಮೊರೆಯೊ ಕೇಳೆಲೊ ವರಪ್ರದಾತ 1 ಉರಗಭೂಷ ಭಜಕಪೋಷ ದುರಿತನಾಶ ಸುಜನವಾಸ ವರಮಹೇಶ ತ್ರಿ ಜಗದೀಶ ಪೊರೆ ಪ್ರಕಾಶ ತ್ರಿಪುರನಾಶ 2 ನಿಗಮವಿನುತ ಭಗವದ್ಭಕ್ತ ಸುಗುಣವಿಖ್ಯಾತ ಜಗನ್ನಾಥ ಜಗಜೀವಿತ ಶ್ರೀರಾಮ ಪ್ರೀತ ಈಗೆನ್ನಂತರಂಗ ಪಾಲಿಸೊ 3
--------------
ರಾಮದಾಸರು
ಪರಮಾನಂದ ಪರಿಪೂರ್ಣಾ ನೀ ಗುರುವರಾ ಜ್ಞಾನಾದಾತಾ ಮಾನಿತಾ ನೀ ದೇಹಾದಿಸಂಘಾತವಾ ಮೀರಿರ್ದ ಸ್ವರೂಪವಾ ಮಹಾಗೂಢವಾ ಬೋಧಿಸೀ ಮುಕುತಿ ನೀಡುತಿರುವಾ ನೀ ಸ್ವರೂಪಾಜ್ಞಾನಾ ಮಹಾಸಾಧನಾ ಪೇಳಿದ ನೀನೇ ದಯಾಘನಾ ಮಾನಿತನೇ ಪರಾತ್ಪರಾ ನಿರಾಮಯಾ ನೀನೇ ಸ್ವರೂಪಾತ್ಮನೈ ನೀನೇ ನಾನಾದೆ ದೇವಾಗುರುವೇ ಶಂಕರಾರ್ಯ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಮಾನಂದದೊಳಿರುವ ಪರಿಯನರಿ ಗರುವ ಬೇಡ ಹೇ ಮನಸಾ ಪ ಸಿರಿವರ ನಾರಾಯಣ ನಾಮಾಮೃತ ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ ಇಂದಿರೆಯರಸನ ಸುಂದರ ಚರಣಗ ಳಂದದ ಶ್ರೀ ತುಳಸಿಯ ದಳದಿ ಚಂದದೊಳರ್ಚಿಸಿ ಕುಂದದ ಭಕುತಿಯೊಳಾ ನಂದದೊಳಿರು ಹೇ ಮನಸಾ 1 ಸಿರಿ ರಾಮನ ಮಂಗಳ ಮೂರ್ತಿಯ ಘನ ಕೊರಳೊಳು ಹಾರಗಳರ್ಪಿಸುತ ಪರಿಪರಿ ಪರಿಮಳ ಪುಷ್ಪಗಳಿಂದಲಿ ಕರುಣಾಕರನನರ್ಚಿಸು ಮನಸಾ2 ಸರ್ವಾಂತರ್ಗತ ಜಗದುದರನ ನೀ ನಿರ್ಮಲ ಪೀಠದಿ ಕುಳ್ಳಿರಿಸಿ ಸರ್ವಷಡ್ರಸೋಪೇತ ಸುಭೋಜನ ಸರ್ವಾತ್ಮನಿಗರ್ಪಿಸು ಮನಸಾ 3 ಸುಫಲ ಕ್ಷೀರ ತಾಂಬೂಲಗಳರ್ಪಿಸಿ ಸಫಲಗೊಳಿಸು ಜನ್ಮವ ಮನಸಾ ಅಪಾರಮಹಿಮನ ಗುಣಗಳ ಕೀರ್ತಿಸಿ ಕೃಪಾನಿಧಿಯ ನಮಿಸೆಲೊ ಮನಸಾ 4 ಅಗಣಿತ ಮಹಿಮನಿಗಾರ್ತಿಗಳರ್ಪಿಸಿ ಮಿಗೆ ಭಕ್ತಿಲಿ ನಮಿಸೆಲೊ ಮನಸಾ ಸುಗುಣಮಣಿಯು ರಘುರಾಮವಿಠಲ ನಿ ನ್ನಗಲದೆ ಹೃದಯದಲಿಹ ಮನಸಾ5
--------------
ರಘುರಾಮವಿಠಲದಾಸರು
ಪರಮಾನುಗ್ರಹ ಮಾಡು -ಈ ತರಳನ ದಯದಿಂ ನೋಡು ಪ ನರಹರಿ ನೀನಲ್ಲವೆ ಕರುಣಾಳು ಅ.ಪ ಅನ್ನ ಸೇರಲಿಲ್ಲವಂತೆ -ಮಲಗಿ ನಿನ್ನಿಂದಲಿ ಹೀಗಿಹನಂತೆ ಘನ್ನಮಹಿಮ ನಿನ್ನವರಿಗೆಲ್ಲ -ಈ ಬನ್ನ ನ್ಯಾಯವೆ ಪ್ರಸನ್ನ ನೃಸಿಂಹ 1 ತುಡುಗಾಟಗಳಾಡಿ ಬಳಲಿ -ಈ ಹುಡುಗ ಮನೆ ಮನೆಯ ತೊಳಲಿ ಕಡುಭೀತಿಯ ಹೊಂದಿರುವ ನಾವು ನಿ- ನ್ನೊಡವೆಯಲ್ಲವೆ ಒಡೆಯ ನರಹರಿಯೆ 2 ಔಷಧ ಪಥ್ಯಗಳೇಕೆ -ನಿ ರ್ದೋಷ ನೀನೊಳಗಿರಲಿಕ್ಕೆ ಶೇಷಶಯನ ಗುರುರಾಮವಿಠಲ ಪÉೂೀಷಿಸುವನು ನೀನೆ ನೀನೆ ನಿಜ3
--------------
ಗುರುರಾಮವಿಠಲ
ಪರಮೇಶ್ವರಾ ಸೋಮಶೇಖರಾ ಪ ಗಿರಿಜಾವರಾ ಕರುಣಾಕರಾ ಅ.ಪ ಆದಿಮೂಲಾ ದೇವಾದಿದೇವಾ ಶಿವ ನಾದರೂಪ ಜೀವಾದಿಜೀವ ಶಿವ ವೇದವಿದಿತ ವೇದಾಂತರೂಪ ಶಿವ ವಾದವಾಕ್ಯ ಮಹಾಹ್ಲಾದ ವೈಭವಾ 1 ಅಂಗಜಾರಿ ಚರ್ಮಾಂಬರಧಾರಿ ರಂಗನಾಥ ಮಾಂಗಿರಿ ಸಂಚಾರಿ ಪಾತಕ ಪರಿಹಾರಿ ಲಿಂಗರೂಪ ಶುಭಕಾರಕ ಶೌರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮೇಷ್ಠಿ ನಿರುತನಿಷ್ಠಿ ಮಾಣದೆ ಕೊಡು ಮನಮುಟ್ಟಿ ಪ ನಾನಾ ನಾಡಿನೊಳು ನೀನೆ ಪಿರಿಯನೆಂದು ಆನಂದ ಮತಿಯಿಂದ ಗಾನವ ಮಾಡುವೆ ಅ.ಪ. ಪುರುಷನಾಮಕ ವಿಧಾತ ಹಂಸವರೂಥ ಸರಸಿಜ ಗರ್ಭ ಶಿವತಾತ ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ ತಾರತಮ್ಯದೊಳುನ್ನತ ಸಿರಿ ಪರಮಾಣು ಪ್ರದೇಶ ವರ ಶಬ್ದ ಪಿಡಿದು ಪರಿ ಪರಿಯಿಂದಲಿ ಶತಾನಂದ 1 ಜಗವÀ ಪುಟ್ಟಿಸುವ ಮಹಾಧೀರ ತತ್ವಶರೀರ ಮಗುಳೆ ಅನಿರುದ್ಧಕುಮಾರ ಝಗಿಝಗಿಪ ಮಕುಟಧರ ಜೀವನೋದ್ಧಾರ ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ ಅಗಣಿತ ವಾಕ್ಯನೆ ಹಗಲಿರುಳು ಮನಸಿಗೆ ಸುಖವಾಗುವ ಬಗೆ ಕರುಣಿಸು ನಮ್ಹಗೆಗಳ ಕಳೆದು 2 ವಾರಿಜಾಸನ ಲೋಕೇಶ ಭಕುತಿವಿಲಾಸ ಚಾರುಸತ್ಯ ಲೋಕಾಧೀಶ ಸಾರಹೃದಯ ವಿಶೇಷ ಮಹಿಮನೆ ದೋಷ ದೂರ ನಿರ್ಮಲ ಪ್ರಕಾಶ ಧಾರುಣಿಯೊಳಗವತಾರ ಮಾಡದ ದೇವ ಸಾರಿದೆ ನಿನ್ನಂಘ್ರಿವಾರಿಜಯುಗಳವ ಸಾರಿಸಾರಿ ವಿಜಯವಿಠ್ಠಲನ್ನ ಆರಾಧಿಪುದಕೆ ಚಾರುಮತಿಯ ಕೊಡು 3
--------------
ವಿಜಯದಾಸ
ಪರಶುರಾಮ ದೇವರು ಬೆಳಗಿರಾರುತಿಯನು ಜಲಜ ನೇತ್ರರೆ ನೀವುಛಲವ ಸಾಧಿಸಿದಂಥ ಚೆಲುವರಾಯನಿಗೆ ಪ ರೇಣುಕಾಸುತ ಕ್ಷೋಣಿಪಾಲಕರ ಕೊಂದುಕಾಮಧೇನುವಿನ ಆಶ್ರಮ ಸ್ಥಾನದಿ ತಂದಾ 1 ಹತ್ತೇಳು ಒಂದು ಅಕ್ಷೋಹಿಣೀ ಸೈನ್ಯಹತ್ಯೆ ಮಾಡುತ್ತ ರಕ್ತದ ನದಿಯನು ಸುತ್ತಹರಿಸಿದವಗೆ 2 ವಂದ್ಯ ಮಹಿಮನೆ ಇಪ್ಪತ್ತೊಂದು ಬಾರಿಲೆ ಕ್ಷಾತ್ರವೃಂದವನಳುಹಿದ ಇಂದಿರೇಶನಿಗೆ 3
--------------
ಇಂದಿರೇಶರು
ಪರಸುಖದಿರವನು ಕರುಣಿಸು ಎನಗೆ ಪರಮಪಾವನ ತವಚರಣಸೇವೆಯೆಂಬ ಪ ಅರಿಷಡ್ವರ್ಗದ ಉರುಬಾಧೆ ತಪ್ಪಿಸಿ ಮೆರೆವೆಂಟುಕೋಣಗಳು ಶಿರತರಿದ್ಹಾರಿಸಿ ಜರೆಮರಣೆಂದೆಂಬ ಉರುಲನು ಜೈಸಿದ ಹರಿಶರಣರ ಮಹ ಕರುಣಕಟಾಕ್ಷವೆಂಬ 1 ಹತ್ತು ಇಂದ್ರಿಯಗಳು ಒತ್ತಿ ಮುರಿದು ನೂಕಿ ಸುತ್ತಿಸುಳಿವ ಕಪಿನ್ಹತ್ತಿರ ಬಂಧಿಸಿ ಭವ ಕತ್ತರಿಸೊಗೆದ ಚಿತ್ತಜತಾತನ ಭೃತ್ಯಂ ನಡೆಯೆಂಬ 2 ಹರಣಪೋದರು ನಿನ್ನ ಚರಣಸ್ಮರಣೆಯನ್ನು ನೆರೆನಂಬಿ ಬಿಡದಂಥ ಪರಮದಟವ ನೀಡೋ ಶಿರದಿ ಹಸ್ತವನಿತ್ತು ವರದ ಶ್ರೀರಾಮ3
--------------
ರಾಮದಾಸರು
ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿಪ. ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ ಚಾರು ಪದಾಬ್ಜದ್ವಯ ದನು- ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ ದೂರನು ಲಾಲಿಸು ಚಿನ್ಮಯ ಜಯ1 ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ- ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ ಕಷ್ಟವು ಪದಕರ್ಪಣ ಪರಾಯಣ 2 ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು ಧುರೀಣರ್ಸಂತಾಪಿಪರು ಮುರಾರಿ ನಮ್ಮ ಶೌರಿ ಜಗ- ದಂತ ವಿಹಾರಿ ನಿರಂತ ಪರಂತಪ3 ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ ಸನ್ನುತ ಶುಭಾಂಗ ಸ- ತಿಮಿರ ಪತಂಗ ಸುಪ್ರ ವಿಹಂಗ ತುರಂಗ4 ಕಾಲನಿಯಾಮಕ ಪ್ರಾಣ ನಿ ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ- ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪರಾಕು ಹೇಳುವನ ನಿರಾಕರಿಸುವದು ಹೊಕ್ಕ ನಿನ್ನ ಸೇವೆಯೊಳಗೆ ಬಹು 1 ಮಲಾದು(?0 ಇರುವಂ-------ಳಗೆ ಇರುವ ಅಲಾದಿ ಅಂಗಗಳು ಅವತರಿಸಿದ ದೇವಾ 2 ನೆಲಾನ ಘೂರಿಸಿದ ಭಲಾಶೆ ಮಾಡಿ ದುರುಳಾದ ಕರುಳ ತೆಗೆದು ಕೊರಾಳಲ್ಲಿಟ್ಟ ಸ್ವಾಮಿ 3 ಧರಾನÉ ದಾನ ಬೇಡಿ ಸರಾನ ಕೋಪದಿಂದ ಶರ---------ಸಿದ ಶ್ರೀಹರಿ ಎಂದು ಬಹು 4 ಬಲಾನೆ ಕುಟ್ಟಿ ಖಳನ ಬಲಾನೆಲ್ಲವ ಮುರಿದು ಲಲಾನೆಯನು ತಂದು ರಘುರಾಮನೆಂದು ಬಹು 5 ದುಷ್ಟ ಕಂಸಾನ ಕೊಂದಾ ಸೃಷ್ಟಿಕರ್ತಾನು ನೀನು ಕೃಷ್ಣಾ ಕರುಣಿಸೂ ಎಂದು ಪ್ರಾಯದಲಿ ಮೊರೆಯಿಟ್ಟು 6 ಅಂಬಾರವನು ಬಿಟ್ಟು ಸಂಚಾರದಲಿ ನೀ---- ---ಂ ಬೇರಿದಂಥ ಶ್ರೀ ಮಹಾನುಭಾವನೆನುತಾ 7 ಶರಾಣು ಎಂದು ಬಂದವರಾನ ಪೊರೆದ ಶ್ರೀಧರಾನೆ ರಕ್ಷಿಸೆಂದು ಕರಾವು ಮುಗಿದಿಂದೂ8 ನಿರಾಮಯಾನಾದ ಶ್ರೀ ರಾಮದೇವರೆನ್ನ ಪತಿ `ಹೊನ್ನ ವಿಠ್ಠಲಾ’ 9
--------------
ಹೆನ್ನೆರಂಗದಾಸರು
ಪರಾತ್ಪರ ಪರಮ ಪಾವನನೆ ಪರಾಕು ಫಣಿಶಯನ ಪಾಪಘ್ನ ಪ. ಸುರಾಸುರಾರ್ಚಿತ ಪುರಾಣಪುರುಷೇ- ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ. ನಯವೀತಭಯ ಪಾರ್ಥಪ್ರಿಯ ಸರ್ವ ನಿಯಾಮಕ ಚಿನ್ಮಯ ದಯಾವಂತ ಜಯಾಕಾಂತ ಹಯಾಸ್ಯ ಪಯೋಬ್ಧಿಶಯನ ವಿಯಾನ 1 ರಮಾರಮಣ ನಮಸ್ತೇ ನಿರುಪಮ ಮಹಿಮ ಮಮಾಪರಾಧ ಕ್ಷಮಾ ಕುರು ವಿ- ರಾಮ ನಿಯಮ ಪದುಮದಳನಯನ 2 ಗುಣಾರ್ಣವ ಶರಣಾಗತಭರಣ ನಿ- ರ್ಗುಣ ಶ್ರೀ ಲಕ್ಷ್ಮೀನಾರಾಯಣ ಪ್ರಾಣ ಸುತ್ರಾಣ ದೇವ ಗಣಾಗ್ರಣಿಯಾನಂದ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಾತ್ಮಾ ಶ್ರೀಶಿವಾನಂದಾ ಪ ನಮಿಸುವೇ ಪುಣ್ಯ ವಿಚಿತಾತ್ಮಾ ಮಹಾತ್ಮಾ ಸತ್ಯ ಸರ್ವಾತ್ಮಾ ಸ್ವರೂಪಾನಂದವಾ ಪಡೆವಾ ಸನ್ಮತಿಯಾ ನೀಡು ಗುರುದೇವಾ ಚರಣಕೆ ಎರಗುವೆನು ದೇವಾ 1 ಸದಾನಂದಾ ಮನೋಹರಾ ಹೃದಯದಾವಾಸ ನಿಜಸಾರಾ ಗುರುವರಾ ಶಂಕರಸ್ವರೂಪಾ ಕರುಣಿಸೈ ಬೋಧದಾನಂದಾ ಪರಾತ್ಮಾ ಶ್ರೀಶಿವಾನಂದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ಪರಿ ಪೋಷಕ ತ್ವಂ ಪ ಮಾ ಕಮಲಾಸ ದಿವೌಕಸ ಪ್ರೇರಕ ಏಕಮೇವ ಜಗದಾಧಾರಕಾ 1 ಅನಿರುದ್ಧ ಮುಕುಂದಾ 2 ನಾಭಿ ಪದ್ಮ ಸುನಿಕೇತನ ಪ್ರದ್ಯುಮ್ನಾಭಿಧ ಷಣ್ಮಹಿಷಿಯರರಸಾ 3 ಅಷ್ಠ ದಳಗಳಲಿ ವಸುದಿಕ್ಷತಗಳಅಷ್ಟ ನಿಯಂತ ಸಂಕರುಷಣನೇ 4 ಎರಡು ದಶವು ದಳ ಸರಸಿವಾಸನೆಎರಡಾರರ್ಕರ ನಿಯಾಮಕ ಹರಿಯೆ 5 ಎರಡೆಂಟರ ದಳ ಇಂದ್ರ ಯೋನಿಯಲಿಉರಗೇಶಣ ನಾರಾಯಣನೇ 6 ಖಗ ವಾಹನನೇ 7 ಪದುಮ ಸಾಸಿರ ದಳ ವಸನೆ ಈಶಾಪದುಮಜ ಪೋಷಕ ವಾಸುದೇವಾ 8 ಸಪುತ ಚಕ್ರದಲಿ ವ್ಯಾಪಿಸಿ ಪೊರೆಯುವಖಪತಿಗಮನ ಗುರು ಗೋವಿಂದ ವಿಠಲಾ 9
--------------
ಗುರುಗೋವಿಂದವಿಠಲರು