ಒಟ್ಟು 3955 ಕಡೆಗಳಲ್ಲಿ , 115 ದಾಸರು , 2389 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಗನೇನೇ ಗೋಪಿ-ಗೋಪಮ್ಮ |ನಿನ್ನ ಮಗನೇನೆ ಗೋಪಿ? ಪಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪಿ? ಅ.ಪಕಟವಾಯ ಬೆಣ್ಣೆ ಕಾಡಿಗೆಗಣ್ಣುಕಟಿಸೂತ್ರ|ಪಟವಾಳಿಕೈಪಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ 3
--------------
ಪುರಂದರದಾಸರು
ನಿನ್ನ ಸೇರಿದೆ ಮಹಾಲಿಂಗ ಎನ-ಗಿನ್ಯಾರುಗತಿಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗಪ.ನಿನ್ನಂತೆ ಕೊಡುವ ಉದಾರ ತ್ರಿಭು-ವನ್ನದೊಳಿಲ್ಲದಕ್ಯಾವ ವಿಚಾರಮುನ್ನ ಮಾರ್ಕಾಂಡೇಯ ಮುನಿಯ ಭಯವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1ಸರ್ವಾಪರಾಧವ ಕ್ಷಮಿಸು ಮಹಾ-ಗರ್ವಿತರಾಶ್ರಯಕ್ಕೊಲ್ಲದು ಮನಸುಶರ್ವರೀಶಭೂಷ ನಿನ್ನ ಹೊರ-ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2ಅಂತರಂಗದ ದಯದಿಂದ ಯುದ್ಧ-ಮಂ ತೊಡಗಿದೆ ಪಾರ್ಥನೊಳತಿಚಂದಪಂಥದ ನೆಲೆಯನ್ನು ತಿಳಿದು ಸರ್ವ-ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದುದೊಡ್ಡದು ನಿನ್ನ ಬಿರುದು 3ಸಿದ್ಧಿಸು ಸರ್ವಸಂಕಲ್ಪ ಅಡ್ಡ-ಬಿದ್ದು ಬೇಡುವೆ ನಿನಗ್ಯಾವದನಲ್ಪಬುದ್ಧಿಯ ನಿರ್ಮಲಮಾಡು ನಿನ್ನಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು 4ಅಂಜಿಕೆ ಬಿಡಿಸಯ್ಯ ಹರನೆ ಪಾ-ವಂಜಾಖ್ಯವರಸುಕ್ಷೇತ್ರಮಂದಿರನೆಸಂಜೀವನ ತ್ರಿಯಂಬಕನೆ ನವ-ಕಂಜಾಕ್ಷ ಲಕ್ಷುಮಿನಾರಾಯಣಸಖನೆಸಲಹೊ ಪಂಚಮುಖನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿನ್ನವ ನಾನಲ್ಲೇನೊ ರಂಗ ನಿರ್ಜರೋತ್ತುಂಗ ಪ.ಹುಚ್ಚ ಮಗನ ತಾಯಿತಂದೆ ಹಚ್ಚ ಬಲ್ಲರೆ ಸಾಕದೆನಿಚ್ಚನಿನ್ನ ನಾಮ ಕಾಯೋ ನಿಶ್ಚಯಬುದ್ಧಿ ನೀಡೀಗೆ1ಹಣವಳ್ಹೇವಲ್ಲದಿರೆ ಹೀನೈಸಿ ಚೆಲ್ಲುವರೆಜನಿತದುರ್ಗುಣರಾಶಿ ಜನಕ ನೀ ನಿವಾರಿಸೊ 2ಶರಣು ಹೊಕ್ಕವರವಸರಕೊದಗುವ ದೇವಸೇರಿದೆ ಶ್ರೀ ಪಾದಾಬ್ಜವಸಿರಿಪ್ರಸನ್ವೆಂಕಟದೇವ3
--------------
ಪ್ರಸನ್ನವೆಂಕಟದಾಸರು
ನಿಲ್ಲು ರಂಗ ನಿಲ್ಲು ರಂಗ ನಿಲ್ಲೆಲೊ ರಂಗನಿಲ್ಲು ಮಜ್ಜಿಗೆಯನೆಲ್ಲ ಚೆಲ್ಲಿ ಬೆಣ್ಣೆ ಮೆದ್ದ ಕಳ್ಳ ಪ.ಜಾವ ಜಾವಕೆ ಕಾಡುವೆ ನಾವು ಕಟ್ಟಿದರೋಡುವೆಹಾವಳಿಗಾರೆವೊ ನಿನ್ನ ದೇವಕಿ ಚಿನ್ನಗೋವಳೆಗಾರ್ತಿರ ಚಿತ್ತವ ಆವಾಗೆ ಗೆದ್ಯೊಮಾಧವದೇವಿ ಗೋಪಿಗೆ ಹೇಳುತೈದೆವೊ ನಡೆ ಯಾಕೊ ಪಿಂತೆ 1ಬಾಲ ಬಾಲ ಬಾಲನೆಂದು ತಾಳಬೇಕೆಷ್ಟು ದಿನೆಂದುಮೇಲೆ ಬಲ್ಲಿದರ ಮಗ ನೀಲಮೇಘಾಂಗಕಾಲಿಗೆರಗುವೆವಿನ್ನು ಪಾಲಿಸೊ ನಮ್ಮನು ನೀನುನಾಲಿಗೇಲಿ ನಿಮ್ಮ ಗುಣಂಗಳ ಹೇಳೋದು ಕಠಿಣ 2ಬಿಟ್ಟು ಕೆಟ್ಟೆವೊ ಪಾದವ ಕಟ್ಟೆವೊ ಬಾರೊ ದೇವಸಿಟ್ಟಲಿ ಯಶೋದೆ ಮೇಲೆ ಅಟ್ಟಿ ಬಿಡಲುಗಟ್ಟಿ ಮೊಸರು ಹಾಲನು ಅಷ್ಟು ಕುಡಿದಧಿಕನೊದಿಟ್ಟ ಪ್ರಸನ್ನವೆಂಕಟ ಕೃಷ್ಣ ನಿಮ್ಮಮ್ಮನಾಣಿಟ್ಟೆ 3
--------------
ಪ್ರಸನ್ನವೆಂಕಟದಾಸರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀ ಸಾಕದಿದ್ದರೆ ಸಾಕುವರಾರೊದಾಸಾಭಿಮಾನಿ ನೀನಲ್ಲದಾರೊ ಕೃಷ್ಣಾ ಪ.ನಿನ್ನವರನು ಬಾಧಿಸ ಬಂದ ಮೂರ್ಖರುಮುನ್ನೆ ದುರ್ಭಾಗ್ಯರಾಗಿ ಹೋದರುಕುನ್ನಿ ಕಚ್ಚಿದರಾನೆ ಅಳುಕುವುದೆ ರಂಗಎನ್ನ ನಂಬಿಕೆಯ ಮೂರುತಿ ಶ್ರೀನಿವಾಸ 1ಹಸಿದು ಮಳಲ ಮೆದ್ದವನಂತೆ ಕಂಗೆಟ್ಟುತೃಷೆಯಾಗಿ ಬಿಸಿಲ್ದೊರೆಗೋಡುವನಂತೆವಿಷಮ ಮಾನಿಸರನುಸರಿಸುವುದುಚಿತಲ್ಲಬಿಸಜದೇವಿಯರಸ ಸುದಾಮಘಭಂಗ2ಬಂಟರ ಮಾತ ಕೇಳದೆಭಾರತಾಳದೇನುಂಟು ಕಾರ್ಯವು ನಿನಗೆಲೆ ದಯಾಳುಕಂಟಕಜನಕಪಕಾರಿ ದೀನೇಶ ವೈಕುಂಠವಲ್ಲಭ ಪ್ರಸನ್ವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ನೀನೆ ದಯಾಸಂಪನ್ನನೊ - ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
--------------
ಪುರಂದರದಾಸರು
ನೀನೆ ಸ್ವತಂತ್ರ ಸರ್ವೇಶಧ್ಯಾನಮಾಳ್ಪದಾಸರ ಪ್ರಾಣ ಪಭುವನತ್ರಯದಿ ಬಿಡದೆ ಒಂದೇಸಮದೆ ದೃಢದಿ ವೇದಸ್ಮøತಿಭಯನಿವಾರಣನೆಂಬ ಬಿರುದುಜಯಭೇರಿ ನುಡಿಸುತಿಹ್ಯವು 1ರಂಗ ನಿನ್ನ ದಾಸಜನಕೆಭಂಗವೇನು ಭುವನತ್ರಯದಿಮಂಗಲಮಹಿಮ ಭಕುತಾಂತರಂಗ ಭಜಿಪೆಭಂಗಗೆಲಿಸು2ಮಾಯ ನಾಟಕವಾಡುವ ಮಹಮಾಯಾಮಹಿಮ ಶ್ರೀರಾಮ ತಂದೆಮಾಯಮೋಹಿಗಳಿಂದುಳಿಸಿ ಎನ್ನಕಾಯೊ ಕೈಯ ಪಿಡಿದು ಸತತ 3
--------------
ರಾಮದಾಸರು
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜಜನಕನೆ ದೋಷನಗ ಕುಲಿಶ 1ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು 2ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ 3ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||ಪೊರೆವನೆಂಬ ನಿನ ಬಿರುದುಕೇಳಿಪದ |ಸರಸಿಜಕೆರಗಿದೆ ಕರುಣಿಸೋ ಮಾಧವ 4ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ 5
--------------
ಪ್ರಾಣೇಶದಾಸರು
ನೀನೋಡುವುದುಚಿತಲ್ಲೊ ಕೃಷ್ಣಯ್ಯನಾನಾ ದುಃಖವನುಂಡು ದಣಿದೆ ನಮ್ಮಯ್ಯ ಪ.ಮಜ್ಜ ಮಾಂಸರುಧಿರಮಲಮೂತ್ರಮಜ್ಜನಮಾಡುತ ಬಸಿರೊಳಗೆಜರ್ಜರಿತನಾದೆ ಲೆಕ್ಕವಿಲ್ಲದಕೆ ಪಾದಾಬ್ಜವನೆಂದು ತೋರಿಸುವಿಯೊ ರಂಗ 1ಎರವುತಂದಿರುವ ಸಂಸಾರದ ಸುಖದೊಳುಉರಿ ಮೂರು ಬೆರಸಾಡಿ ದಹಿಸುತಿದೆತರಳಯೌವನ ಮುಪ್ಪಿಲ್ಯಾರೊಮ್ಮೆ ಚಿತ್ತವುಸ್ಥಿರವಾಗದಿನ್ನೇನುಗತಿಚಿಂತಿಸೈದೆ2ಯಮಭಂಟರುಪಟಳ ನಿನ್ನವರಾದರೆಕ್ರಮವಲ್ಲ ಆನತ ಜನರ ದಾತಾರಭ್ರಮಿಸಲಾರೆನು ಕರುಣಿಸು ಕರುಣಾಂಬುಧಿರಮೆಯ ರಮಣ ಪ್ರಸನ್ವೆಂಕಟ ಧೀರ 3
--------------
ಪ್ರಸನ್ನವೆಂಕಟದಾಸರು
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡಅಚ್ಯುತಾನಂತನ ಪಾದದಿಂಬು ಬೇಡಿರೊ ಪ.ದಿನಪನುದಯದಲೆದ್ದು ನಿತ್ಯಕರ್ಮವಜರಿದುದೀನ ವೃತ್ತಿಯಲಿ ಧನವನೊದಗಿಸಿದಿರೊವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗಮನಸಿನ ಹವಣು ಸಂಗಡ ಬಾಹದೆ 1ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರಪರಕಿಂದಧಿಕರೆಂದು ಬಗೆವರೇನೊಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗತರುಣಿ ಸಂಪದವಾಗ ಸಹಾಯವಾಹದೆ 2ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರಸನ್ನವೆಂಕಟನ ಪದವಿಡಿಯಲಿಲ್ಲಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮಮನ್ನಿಸಿ ಗತಿಗೊಡದಿಹನೆ ರಂಗ ನೋಡಿ 3
--------------
ಪ್ರಸನ್ನವೆಂಕಟದಾಸರು
ನೋಡಿರೆ ಯಶೋದೆಯ ಪುಣ್ಯಪಡೆದಿಹ್ಯಳೆಂಥ ಮಾನ್ಯ ಪಪೊಡವಿ ಈರೇಳನ್ನು ಒಡಲೊಳಿಟ್ಟವನನ್ನುತೊಡೆಮೇಲಾಡಿಸುವಳು ಅ.ಪವಿಲಸಿತಮಹಿಮನ ಕಳೆಯ ತಿಳಿಯಲು ವೇದಬಲುವಿಧ ಪೊಗಳುತ ನೆಲೆಯುಗಾಣದಘನಕಳವಳಗೊಳುತಿಹ್ಯವಭವನ ದೆಸೆಯಿಂಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ 1ಭುಜಗಭೂಷನು ತನ್ನ ನಿಜಪದವನುದಿನಭಜಿಸಿ ಬೇಡಲು ಕಾಣರಜಸುರಮುನಿಗಣಸುಜನಗುಣಾಂತರಂಗ ತ್ರಿಜಗವ್ಯಾಪಕನನಿಜವನು ಮನದಣಿ ಕಂಡು ಹಿಗ್ಗಿದಳೀಕೆ 2ಸೀಮರಹಿತಮಹಿಮ ನಾಮರೂಪಿಲ್ಲದ ನಿಸ್ಸೀಮ ಸುಗುಣಸುಖಧಾಮ ಭೂಮಿಜೆಪತಿಸ್ವಾಮಿ ಶ್ರೀರಾಮನ ವಿಮಲದಾಟದಲಿಭೂಮಿಯೊಳ್ಮಿಗಿಲಾದಾನಂದೊಳಿಹÀಳೀಕೆ 3
--------------
ರಾಮದಾಸರು
ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ನೋಡೆ ಗೋಪೀ ಗೋಕುಲದೊಳುಹರಿ|ಮಾಡುವ ಲೀಲೆಗಳ ಪ್ರತಿಯಮ್ಮ ಪರಂಗನೆತ್ತಿ ಸಂಭ್ರಮದಿಂದಲಿ |ಅಂಗಣದೊಳಗೆ ನಿಂದಾಡಿಸಲು ||ತಿಂಗಳ ಬಿಂಬವ ಕಂಡಾಕ್ಷಣ ತ-|ನ್ನಂಗೈಯೊಳಗೇ ನಿಲಿಸಿಕೊಡೆಂಬ 1ಚಿನ್ನನು ನೋಡಲಿ ಎಂದಕ್ಕರದಲಿ |ಕನ್ನಡಿಯನು ತಂದು ಕೈಯಲಿ ಕೊಡಲು ||ತನ್ನ ಮುಖದ ಪ್ರತಿಬಿಂಬವ ಕಂಡು ಅ-|ದನ್ನು ಕರೆದು ಬಳಿಯಿರಿಸಿರಿಯೆಂಬ 2ಅರಿಯದೆ ದೀಪವ ಕೆಂಪಗೆ ಕಂಡು |ಸೆರಗಿನಲ್ಲಿ ಕೊಡು ಆಡುವೆನೆಂಬ ||ಕರುವಿನಂತೆ ತನ್ನನು ಕೊಂಡೊಯ್ದು |ತುರುಗಳ ಮೊಲೆಯನು ಉಣಿಸಿರಿಯೆಂಬ 3ಪರಿಪರಿಯಿಂದಲಿ ಗೋಡೆಯ ಮೇಲೆ |ಬರೆದಿಹ ಚಿತ್ರದ ಗೊಂಬೆಯ ನೋಡಿ ||ಕರವಪಿಡಿದು ಎಳೆತಂದು ತನ್ನಯನೆರೆಯಲ್ಲಿಯೆ ನೀವಿರಿಸಿರಿಯೆಂಬ 4ತರುಣಿ ನಿನ್ನಯ ಸುಕೃತದ ಫಲವು |ಹರುಷವೆಮಗೆ ಅಭಿವೃದ್ಧಿಯಾಗಿಹುದು ||ಪುರಂದರವಿಠಲನ ಚರಿಯವ ನೋಡಲು |ಧರೆಯೊಳಗಿನ ಬಾಲಕರಂತಲ್ಲವೆ 5
--------------
ಪುರಂದರದಾಸರು