ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ ಸುಮನಸರ ಜನನಿ ನಿನ್ನಮಲಪದ ತೋರೆ ಪ. ಲೋಕಸುಂದರಿ ಎನ್ನ ಶೋಕಗಳ ತರಿದು ಅವ ಏಕಮನಸು ನೀಡೆ ಶ್ರೀ ಕಳತ್ರನ ಪದದಿ ನೀ ಕರುಣಿಸಿದನೆ ನನಗನೇಕ ಜನ್ಮದಲಿ 1 ಪತಿ ಎಂದೆಂದಿಗೆ ತೊಲಗದಂದದಲಿ ನೀಡೆ ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ ನಂದಕಂದನ ತೋರಿ ಕುಂದು ಪರಿಹರಿಸೆ 2 ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ಕಾಪಾಡೆ ಸತತದಲಿ ಕಾರುಣ್ಯಶಾಲಿ ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ ರೂಪ ರೂಪಾಂತರದ ವ್ಯಾಪಾರ ತಿಳಿಸೆ 3
--------------
ಅಂಬಾಬಾಯಿ
ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ಕರ ಪ ಸೂರಿನಿವಾಸ ಭೋಗಾಪುರ ಮಂದಿರ ಮಾಮುದ್ಧರ ಅ.ಪ ಶ್ರೀರಘುವರನಾಜ್ಞೆಯಿಂದಲಿ ವಾರಿಧಿಯಕ್ಷಣದಲಿ ಹಾರಿ ಭೂಮಿಸುತೆ ಗೆರಗುತಲಿ ಮುದ್ರಿಕೆಯ ಕೊಡುತಲಿ ಶ್ರೀರಾಮಗೊಂದಿಸಿದಿ ಕ್ಷೇಮದಲಿ ಇಹಳೆಂದು ಪೇಳಿ 1 ಇಂದು ಕುಲದಿ ಪಾಂಡು ನೃಪತಿಯ ಎನಿಸಿದೆಯೊ ತನಯ ಬಂಥ ಕೌರವ ವೃಂದ ಮಥಿಸಿದೆಯಾರಣದೊಳಗೆ ವಿಜಯ ನಂದಸುತನ ನೊಲಿಮೆ ಪಡದಿಯಾ ಭೀಮಶೈನರಾಯ 2 ಮೇದಿನಿ ಸುರಗೃಹದಿ ಜನಿಸಿದ ವೇದಾರ್ಥ ತಿಳಿಸಿದ ವಾದಿಗಳ ನಿರ್ವಾದಗೈಸಿದ ದಿಗ್ವಲಯ ಚರಿಸಿದ ಭೇದ ಭೋದಕ ಶಾಸ್ತ್ರವಿರಚಿಸಿದ ಶ್ರೀ ಪೂರ್ಣಬೋಧ 3 ಕಾಲಕಾಲಗಳಲ್ಲಿ ದ್ವಿಜಜನ ಬರುತಿಹರು ನಿನ್ನ ಧೂಳಿ ದರುಶನಾಬಿಷೇಚನ ಶೇವಿಪರು ಘನ್ನ ಪಾಲಿಸಬೇಕಯ್ಯ ಭಕುತರನಾ ಪಾಂಚಾಲಿರಮಣ 4 ನೀರಜಾಸನಾದಿ ಸುರಗಣ ವಂದಿತ ಸುಚರಣ ಕಾರ್ಪರ ಶಿರಿನಾರಸಿಂಹನ ಒಲಿಸಿರುವ ನಿನ್ನ ಹರಣ 5
--------------
ಕಾರ್ಪರ ನರಹರಿದಾಸರು
ಕರ ಜೋಡಿಸುತ ನಿನ್ನಾ | ಗಣಾಧಿಪತಿ ನಾ ಪ ಶಂಭುಕುವರನೆ ಲಂಬೋದರನೆ ಬೇಡುವೆನು 1 ಯೋಗಮೂರುತಿ ಯೋಗಿವಂದಿತ ಬೇಡುವೆನು 2 ದಾಸಜನರನು ಪೋಷಿಸೆನ್ನುತ ಬೇಡುವೆನು 3
--------------
ಬೆಳ್ಳೆ ದಾಸಪ್ಪಯ್ಯ
ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ಕರಗತನಾಗಿರಲು ಶ್ರೀಕೃಷ್ಣನು ಪ ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ ಪರಮದಯದಿ ತನ್ನ ನೆರಳಿನೊಳೆಲ್ಲರ ಪೊರೆಯುತಿರುವ ನಮ್ಮ ಸಿರಿವಲ್ಲಭನು 1 ನಾಡಿನ ಭಕುತರ ಕೂಡಿಸಿ ಮುದದಲಿ ಬೇಡಿದ ವರಗಳ ನೀಡುವ ದೊರೆಯು 2 ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು ಗಡಗಡ ದುಂದುಭಿ ಹೊಡೆಸುವ ಧೀರನು 3 ಪತಿತ ಪಾವನೆಂದು ಪ್ರಥೆಯನು ಪೊಂದಿಹ ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ 4 ಎನ್ನನು ಸೇವಿಸಿ ಧನ್ಯರಾಗಿ ಎಂದು ಸನ್ನೆಯನೀವ ಪ್ರಸನ್ನ ಶ್ರೀಮಾಧವ 5
--------------
ವಿದ್ಯಾಪ್ರಸನ್ನತೀರ್ಥರು
ಕರದಿಂದ ಅಲುಗಿಸುತರುಹುವಳೂ ಪ ನರರು ತವ ದ್ವಾರದಲಿ ತಮ್ಮಯ | ಭರದಿ ನಿದ್ದೆಯ ತ್ಯಜಿಸುತೇಳೆಂದು ಅ ನೇಕೆ ಮಲಗಿಹೆ ಏಳು ಎನ್ನುತ 1 ಸಡಗರ ನೀ ನೋಡು ಎನ್ನುತ2 ಬಾತುರದಿ ಚಿಲಿಪಿಲಿಯ ಗುಟ್ಟುತ್ತಾ ತಿನಿಸನ್ನು ತಹೆವೆಂದು | ಪ್ರೀತಿಯಿಂದಲಿ ಅರುಹಿ ಪಕ್ಕವ ರ್ಭೀತ ಪಾವಂಜೇಶ ಎನ್ನುತ 3
--------------
ಬೆಳ್ಳೆ ದಾಸಪ್ಪಯ್ಯ
ಕರದೊಳಿನ ಮಣಿಗೆ ಕನ್ನಡಿಯೇತಕೆ ಪ ಸಿರಿ ರಮಣನಲತಿ ಸಂಶಯವೇತಕೆ ಅ.ಪ ಶರಧಿಯ ಜಲವನ್ನು ಪರಿಪರಿ ದೇಶಕೆ ಬಿರುಗಾಳಿಗಳಿಂದ ದೊರಕಿಸುವನು ಯಾರು ಧರೆಯೊಳು ನವನಾಗರಿಕರೆಂದರಿಯುವ ಪರಿ ತರವೆ ಯೋಚಿಸೆಲೊ 1 ಎಲ್ಲಾ ದೇಶಗಳ ವಿಚಾರ ನೋಟಗಳನ್ನು ಇಲ್ಲೇ ತೋರಿಸುವಂಥ ನಲ್ಲರು ಇರುವರು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು ಬಲ್ಲರೇ ಇವರು ತಲ್ಲಣಿಸುತಿಹರು 2 ಘಾಸಿಯ ಮಾಡದೆ ಪೋಷಿಸುವನು ಯಾರು ಈಶನ ಕರುಣವು ಲೇಶ ತಪ್ಪಿದರೆ ಆ ಶಿಶುವಿನ ಜೀವದಾಶೆ ಎಂತಿಹುದೊ 3 ಎಲ್ಲಾ ನಾರಿಯರು ಗರ್ಭ ಧರಿಸುವರೆ ಎಲ್ಲಾ ಬೀಜಗಳಿಂದ ತರುಗಳು ಬರುವುದೆ ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ ಪರಿ 4 ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ ಭಿನ್ನ ಕಾಲಗಳಲ್ಲಿ ಅನ್ನವನೀಯಲು ಅನ್ಯರಿಗಳವೆ ಪ್ರಸನ್ನನಿಗಲ್ಲದೆ 5
--------------
ವಿದ್ಯಾಪ್ರಸನ್ನತೀರ್ಥರು
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಕರವ ಜೋಡಿಸಿ ಎಲ್ಲರಿಗೊಂದಿಸಿ ಪ. ಎಲ್ಲರಿಗೊಂದಿಸಿ ಫುಲ್ಲನಾ¨sನÀ ಮುಖ್ಯವಲ್ಲಭೆಯರುನಾವು ಗೆಲ್ಲಬೇಕೆಂದುಅ.ಪ. ಮಡದಿ ಇಂದಿರಾದೇವಿ ಕಡೆಗಣ್ಣನೋಟದಿ ಪಡೆದಾಳು ಲೋಕಬ್ರಹ್ಮರುದ್ರಾದಿ ಪಾದಂಗಳಿಗೆ ನೀವೆ ಮಹಾಲಕ್ಷ್ಮಿಪಾದಂಗಳೆಗೆ ನೀವೆ ಮಹಾಲಕ್ಷ್ಮಿ ದೇವಿಯಶುಭಾಂಗಿಯ ಮೊದಲೆ ಬಲಗೊಂಬೆ 1 ಪರಮೇಷ್ಠಿ ಪರಮೇಷ್ಠಿ ಪಾದ ಪದ್ಮವನೆ ಮೊದಲೆ ಬಲಗೊಂಬೆ2 ವಾಣಿ ಅಜನ ಪಟ್ಟದರಾಣಿ ಪನ್ನಂಗ ವೇಣಿಜಾಣಿ ಕೊಡು ಎಮಗೆ ಮತಿಗಳಜಾಣಿ ಕೊಡು ಎಮಗೆ ಮತಿಗಳ ನಿನ್ನಪಾದರೇಣುವ ಮೊದಲೆ ಬಲಗೊಂಬೆ 3 ಪಾದ ವನಜವ ಮೊದಲೆ ಬಲಗೊಂಬೆ4 ಭಾರತಿ ನಿನ್ನ ಪಾದವಾರಿಜ ಚರಣವ ಬಾರಿ ಬಾರಿಗೆ ಸ್ಮರಿಸುವೆಬಾರಿ ಬಾರಿಗೆ ಸ್ಮರಿಸುವೆ ನಮಗಿನ್ನುತೋರೆ ಬೇಗ ಮತಿಗಳು5 ಇಂದ್ರನ ಗೆದ್ದು ಸುಧೆಯ ತಂದ ಮಾತೆಯ ಬಂಧನ ಕಡೆದ ಬಲು ಧೀರಬಂಧನ ಕಡೆದ ಬಲುಧೀರನಾದ ಖಗೇಂದ್ರನ ಮೊದಲೆ ಬಲಗೊಂಬೆ6 ಸಾಸಿರ ಮುಖದಿಂದ ಶ್ರೀಶನ ಸ್ತುತಿಸಿದವಾಸುದೇವಗೆ ಹಾಸಿಗೆವಾಸುದೇವಗೆ ಹಾಸಿಗೆ ಯಾದಶೇಷಗೆ ಮೊದಲೆ ಬಲಗೊಂಬೆ7 ಅಪಾರ ಮಹಿಮನೆ ತ್ರಿಪುರಸಂಹಾರಕಚಂದ್ರ ಶೇಖರನೆ ಸರ್ವೇಶ ಚಂದ್ರ ಶೇಖರನೆ ಸರ್ವೇಶ ನಿನ್ನಪಾದದ್ವಂದ್ವವ ಮೊದಲೆ ಬಲಗೊಂಬೆ 8 ವಾರುಣಿ ಅಪರ್ಣಾದೇವಿಯರು ಕರುಣಿಸಿನಮಗೆ ಕಾಲಕಾಲಕರುಣಿಸಿನಮಗೆ ಕಾಲಕಾಲಕೆರಾಮೇಶನ ತರುಣಿಯರೆ ಗೆದ್ದು ಬರಬೇಕ9
--------------
ಗಲಗಲಿಅವ್ವನವರು
ಕರವ ಪಿಡಿದು ರಕ್ಷಿಸೈ ಪ ಸಿರಿ ಅ.ಪ ಉರಿವಕಿಚ್ಚಿನೊಳುನಿಂದು ಸ್ಮರಿಸಬಾರದಕೆಟ್ಟಪಾಪದಿ ಬೆರತುಸತಿಸುತಬಂಧುಮೋಹದಿ ಮರತು ವಿಷಯದಿ ಮುಳುಗಿಪೋದೆನು 1 ಇಂದು ನತಪಾಲ ನೀನೆ ಎಂದು ನುತಿಸಿ ಬೇಡುವೆ ಕರವಜೋಡಿಸಿ ಮತಿಯ ನೀನೆನಗಿತ್ತು ಬೇಗದಿ 2 ಬಾಧೆ ಘನವಾಗಿ ಇರುವದಯ್ಯ ಹರಡಿ ವೈಷ್ಣವರನ್ನು ದುಃಖದೊ ನಿರಂತರ ವ್ಯಾಪಿಸಿರ್ಪುದ 3 ಶ್ರೀಶನೀಕೋಪಬಿಟ್ಟುಸಂತತರಂಗ ದಾಸನೋಳ್ಮನವನಿಟ್ಟೂ ನಾಶಮಾಡದೆ ಬಿಟ್ಟರಿಳೆಯೊಳು ಪೋಷ ಯದುಗಿರಿವಾಸಪರಮನೆ4
--------------
ರಂಗದಾಸರು
ಕರವ ಪಿಡಿಯೋ |ಮಾ ಕಮಲಭವ ವಂದ್ಯ | ಭಕ್ತರುದ್ಧರಿಸೋ ಪ ನಿನ್ನ ನಾಮಾಮೃತವು ಜಿಂಹ್ವೆಗೆಪೊದಗಲೀ |ನಿನ್ನ ಕಥಾಶ್ರವಣ ಕಿವಿಗಾಗಲೀ ||ನಿನ್ನ ಚಾರಿತ್ರಗಳ ನಿರುತಕೊಂಡಾಡಲಿ |ನಿನ್ನ ದಾಸರು ಕೇಳಿ ಶಿರದೊಗಲೀ 1 ಪಂಚಭೇದ ಜ್ಞಾನವೇ ತಿಳಿಯಲಿ |ಮಾರುತಾ ಮತವನ್ನು ಅನುಸರಿಸಲಿ ||ಆರೆರಡು ನಾಮ ಊಧ್ರ್ವಪುಂಡ್ರವನೆ ಧರಿಸಲಿ |ಧೀರ ಗುರು ಮಧ್ವರಾಯರೇ ಮುಖ್ಯರೆನಲಿ 2 ಏಸುಪರಿ ತುತಿಸಿ ವಾಣೀಶಗಸದಳವೋ ಶ್ರೀ |ವಾಸುದೇವನನು ತುತಿಸಲೊಶವೇ |ಶ್ರೀಶ ಪ್ರಾಣೇಶ ವಿಠ್ಠಲರಾಯ ದಯದಿನ್ನು |ದಾಸರ ದಾಸನೆಂದೆನಿಸಿ ಪೊರಿಯೊ 3
--------------
ಶ್ರೀಶಪ್ರಾಣೇಶವಿಠಲರು
ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ 1 ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಿತ್ಯ 2 ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ ನಾದಿದೈವವೆಂದು ಎಣಿಸುವ ಜಪಶೀಲ 3
--------------
ವಿಜಯದಾಸ
ಕರವ ಮುಗಿಪರಘವ ತೆಗೆವ ಗುರು ವಿಜಯದಾಸರಿಗಿನ್ನು ಪ ಭೇದವಿಲ್ಲಯೆಂಬ ಮಾಯವಾದಿ ರಾಮಶಾಸ್ತ್ರಿ ಬಂದುಪಾದಕೆರಗೆ ಅವನ ತಮವ ಛೇದಿಸಿ ಸುಜ್ಞಾನವಿತ್ತೆ 1 ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮು-ದ್ರಾಧಾರಣಿಯ ಕೊಡಿಸಿ ಪರಮ ಆದರದಿಂದ ಅವನ ಕಾಯ್ದೆ2 ಭಸುಮವನ್ನೆ ತೆಗಸಿ ಅವನ ನೊಸಲಲೂಧ್ರ್ವ ತಿಲಕ ಪಚ್ಚಿಸಿಎಸವ ಪಂಚಮುದ್ರಿ ದ್ವಾದಶ ನಾಮ ಧರಿಪಂತೆ ಮಾಡಿದೆ 3 ಸುರರು ಆತನತಾಮರಸ ಪದ ಧೂಳಿಗಯೆಂದು ಈ ಮರಿಯಾದಿಗಳ ಪೇಳಿದೆ 4 ಧರೆಯೊಳಿದ್ದ ಭಕ್ತ ಜನರ ಪೊರೆವನೆಂಬ ಬಿರಿದು ವೊಹಿಸಿಸಿರಿ ಮೋಹನ್ನ ವಿಠಲನಂಘ್ರಿ ಸರಸಿರುಹವ ಎನಗೆ ತೊರ್ದೆ 5
--------------
ಮೋಹನದಾಸರು
ಕರವ ಮುಗಿವೆ ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ ಮಾನವ ಕಾಯ್ದೆಯೊ ಹೀನರ ಮದಗರ್ವವನೆಲ್ಲ ಅಳಿದೆಯೊ ಧ್ಯಾನ ಮಾಡುವ ಸ್ವಾನುಭವಿಗಳ ಸ್ಥಾನ ಹೃದಯವಾಸ ಶ್ರೀ 1 ಧ್ಯಾನಿಸಿವಂಥಾ ಗಜರಾಜನ ಕಾಯ್ದೆ ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ ದೀನರಕ್ಷಕ ಬಿರುದ ಪೊತ್ತ ವಿ ಜ್ಞಾನದೊಳಗಿರಿಸೆನ್ನಾ 2 ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ ಬದರಿಯ ಹಣ್ಣನೆ ಸವಿಸವಿ ದುಂಡೆಯೊ ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3 ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ ಮನ್ನಿಸಿ ಪಾಂಡವರೈವರ ಸಲಹುವಾ ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4
--------------
ಶಾಂತಿಬಾಯಿ